Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿನ ಸಹಕಾರದ ಉತ್ತೇಜನಕ್ಕಾಗಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ತಿಳಿವಳಿಕೆ ಒಪ್ಪಂದದ ಅಂಕಿತಕ್ಕೆ ಸಚಿವ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ (ಐಟಿ ಮತ್ತು ಇ) ಸಹಕಾರದ ಉತ್ತೇಜನಕ್ಕಾಗಿ ಈಗಾಗಲೇ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ ಕುರಿತಂತೆ ವಿವರಿಸಲಾಯಿತು.

ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವಾಲಯ ಹಾಗೂ ಬಾಂಗ್ಲಾದೇಶದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ನಡುವೆ 2017ರ ಏಪ್ರಿಲ್ ನಲ್ಲಿ ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು. ಈ ಒಪ್ಪಂದವು ಐದು ವರ್ಷಗಳ ಅವಧಿವರೆಗೆ ಜಾರಿಯಲ್ಲಿರುತ್ತದೆ. ಆ ನಂತರ ಎರಡೂ ಪಕ್ಷಕಾರರ ಪರಸ್ಪರ ಒಪ್ಪಿಗೆಯ ಲಿಖಿತ ಸಮ್ಮತಿಯಂತೆ ಅದನ್ನು ಕಾಲಾವಧಿಯೊಳಗೆ ವಿಸ್ತರಿಸಬಹುದಾಗಿದೆ. ಯಾವುದೇ ಪಕ್ಷಕಾರರು ಆರು ತಿಂಗಳ ಮೊದಲು ಲಿಖತ ಮೂಲಕ ಮತ್ತೊಬ್ಬ ಪಕ್ಷಕಾರರಿಗೆ ನೋಟಿಸ್ ನೀಡುವ ಮೂಲಕ ಒಪ್ಪಂದ ರದ್ದುಪಡಿಸಬಹುದಾಗಿರುತ್ತದೆ. .

ಈ ತಿಳಿವಳಿಕೆ ಒಪ್ಪಂದವು ಐಟಿ ಮತ್ತು ಇ ಕ್ಷೇತ್ರದಲ್ಲಿ ತಾಂತ್ರಿಕ ಸ್ವರೂಪದ್ದಾಗಿದ್ದು, ಇ-ಆಡಳಿತ, ಎಂ- ಆಡಳಿತ, ಇ- ಸಾರ್ವಜನಿಕ ಸೇವೆ ಪೂರೈಕೆ, ಸೈಬರ್ ಭದ್ರತೆ, ಸಾಮರ್ಥ್ಯ ವರ್ಧನೆ ಇತ್ಯಾದಿಗಳ ಮೇಲೆ ಗಮನ ಹರಿಸಲಿದೆ. ಬಾಂಗ್ಲಾದೇಶದಲ್ಲಿನ ಐಟಿ ಮತ್ತು ಇ ಮಾರುಕಟ್ಟೆಯಲ್ಲಿ ಭಾರತೀಯ ಐ.ಟಿ. ಕಂಪನಿಗಳು ವಾಣಿಜ್ಯ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಭಾರತದಲ್ಲಿರುವ ಭಾರತೀಯ ವಿದ್ಯುನ್ಮಾನ ಮತ್ತು ಐ.ಟಿ. ವಲಯಕ್ಕೆ ಬಂಡವಾಳ ಆಕರ್ಷಿಸುವ ಗುರಿಯನ್ನು ದು ಹೊಂದಿದೆ. ಇದು ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

*****

AKT/VBA/SH