ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐ.ಸಿ.ಟಿ) ಮತ್ತು ಡಿಜಿಟಲ್ ಆರ್ಥಿಕತೆ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರವರ್ಧನೆಗಾಗಿ ಭಾರತ ಮತ್ತು ಟುನೇಷಿಯಾ ನಡುವೆ 2016ರ ಜೂನ್ 2ರಂದು ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ(ಎಂ.ಓ.ಯು.) ಕುರಿತಂತೆ ವಿವರಿಸಲಾಯಿತು.
ಈ ತಿಳಿವಳಿಕೆ ಒಪ್ಪಂದವು ಎರಡೂ ದೇಶಗಳ ನಡುವೆ ಐಸಿಟಿ ಮತ್ತು ಡಿಜಿಟಲ್ ಆರ್ಥಿಕತೆಯ ಕ್ಷೇತ್ರದಲ್ಲಿ ಖಾಸಗಿ ಕಾಯಗಳು, ಸರ್ಕಾರ ಹಾಗೂ ಸಾಮರ್ಥ್ಯವರ್ಧನೆಯಲ್ಲಿ ತೊಡಗಿರುವ ಸಂಸ್ಥೆಗಳು ಮತ್ತು ಇತರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ನಡುವಿನ ವಿನಿಮಯ ಮತ್ತು ಕ್ರೀಯಾತ್ಮಕ ಸಹಕಾರವನ್ನು ತ್ವರಿತಗೊಳಿಸುವ ಉದ್ದೇಶವನ್ನು ಹೊಂದಿದೆ.