Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮುಂಬೈ ನ ಗ್ಲೋಬಲ್ ಸಿಟಿಜನ್ ಉತ್ಸವ ದಲ್ಲಿ ಪ್ರಧಾನ ಮಂತ್ರಿ ಯವರು ಮಾಡಿದ ಭಾಷಣ (ವಿಡಿಯೋ ಕಾನ್ಫರೆನ್ಸ್ ಮೂಲಕ )


ಹಲೋ ನನ್ನ ಪ್ರೀತಿಯ ಯುವ ಸ್ನೇಹಿತರೆ,
 
ಸಮಯ ಸದುಪಯೋಗ ಆಗುತ್ತಿರೋದನ್ನು  ನೋಡುತ್ತಾ ಇದ್ದೀನಿ .
 
ನನಗೆ ಗೊತ್ತಿದೆ. ನಿಮ್ಮ ಮತ್ತು ಕೋಲ್ಡ ಪ್ಲೇ ನಡುವೆ ಇದ್ದೀನಿ ಎಂದು . ಹೀಗಾಗಿ ಚುಟುಕಾಗಿ  ಎರಡು ಮಾತಾನಾಡುತ್ತೇನೆ.
 
2014 ರಲ್ಲಿ ನ್ಯೂಯರ್ಕ್ ನ ಸುಂದರವಾದ ಸೆಂಟ್ರಲ್  ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಗ್ಲೋಬಲ್ ಸಿಟಿಜನ್ ಉತ್ಸವದಲ್ಲಿ ಭಾಗವಹಿಸಿ ಆನಂದಿಸಿದ್ದೇನೆ. ಆದರೆ ಈ ಬಾರಿ ಸಮಯಾಭಾವದಿಂದ ಸಾಧ್ಯವಾಗುತ್ತಿಲ್ಲ. ಆದರೆ ಈ ಉತ್ಸವ  ಭಾರತದಲ್ಲಿ ಮೊದಲಬಾರಿ ನಡೆಯುತ್ತಿರುವುದರಿಂದ ಭಾಗವಹಿಸದೆ ಇರಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ವಿಡಿಯೊ ಕಾನ್ಫರೆನ್ಸಿಂಗ್  ಮುಖಾಂತರ ಮಾತಾನಾಡುತ್ತಿದ್ದೇನೆ.
 
ಮೊಬೈಲ್ ಆಪ್ ಮೂಲಕ ನನ್ನನ್ನು ಆಗಲೇ ನಿಮ್ಮಲ್ಲನೇಕರು ಸಂಪರ್ಕಿಸಿದ್ದಾರೆ.
ನಾನು ನಿಮ್ಮೀಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಎದುರು ನೋಡುತ್ತೇನೆ.
ನಾನು ಯಾವಾಗಲು ನಿಮ್ಮಗಳ ಮಧ್ಯೆ ಇರಬಯಸುತ್ತೇನೆ.
ಅದು ನನಗೆ ತಾಜಾತನದಿಂದ ಮತ್ತು ಲವಲವಿಕೆಯಿಂದ ಇರುವಂತೆ ಮಾಡುತ್ತದೆ.
ನೀವು ಅದಮ್ಯ ಚೇತನ ಮತ್ತು ತತ್ವಸಿದ್ದಾಂತಗಳಿಗೆ ಕಟ್ಟುಬೀಳುವಂತೆ ಮಾಡಿದ್ದೀರಿ.
ನಾನು ನಿಮ್ಮಿಂದ ನೂರಾರು ಕಿ.ಮಿ. ದೂರವಿದ್ದರು ನಿಮ್ಮೊಂದಿಗಿನ  ಇರುವಿಕೆಯನ್ನು ಅನುಭವಿಸುತ್ತಿದ್ದೇನೆ .
ಇದು ಚಳಿಗಾಲದ ದಿಲ್ಲಿ ಹಾಗೂ ಹಳೇ ಕಡತ ಗಳಿಂದ  ಸ್ವಾಗತರ್ಹ ಬದಲಾವಣೆ ತಂದಿದೆ.
ನಾನು ಹಗ್ ಇವಾನ್ಸ್, ಶಿವ್ ಖೇರ್, ಗೌರಿ ಈಶ್ವರನ್ , ಪೂನಂ ಮಹಾಜನ್ ಮತ್ತು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿರುವ ಇತರೆ ಮಹಾನುಭಾವರನ್ನು ಅಭಿನಂದಿಸುತ್ತೇನೆ . 
ಸಾರ್ವಜನಿಕ ನೀತಿಯನ್ನು ಮಾಡುವುದು ಅಷ್ಟು ಸಾಧ್ಯವಲ್ಲ.
 
ನನ್ನೆಲ್ಲ ಯುವ ಮಿತ್ರರಿಗೆ ವಂದನೆಗಳು. 
 
ನೀವು ಬುದ್ದಿವಂತರಿದ್ದೀರಿ ಕಾರಣ ಹಾಡಲು ಹೇಳಲಿಲ್ಲ .  ಕೇವಲ  ಭಾಷಣ ಮಾಡಲು ಕೇಳಿದ್ದೀರಿ. ಒಂದುವೇಳೆ ಅದೇನಾದರು ಆಗಿದ್ದಲ್ಲಿ   ಸಭಿಕರು ಹಣ ವಾಪಸ್ಸು ಪಡೆದು ಬಿಡುತ್ತಿದ್ದರು… ಅದೂ ಸಹ ನೂರು ರೂಪಾಯಿ ನೋಟಿನಲ್ಲಿಯೆ….
 
ಬಡತನ ಎನ್ನುವುದು ಯಾವುದೇ ಸಮಾಜಕ್ಕಾದರೂ ಒಂದು ಶಾಪವೇ ಸರಿ.
 
ಪೌಷ್ಟಿಕಾಂಶದ ಕೊರತೆಯಾಗಿರಬಹುದು, ನಿರುದ್ಯೋಗವಿರಬಹುದು, ಭ್ರಷ್ಟಾಚಾರವಿರಬಹುದು, ಕೊಳಕುತನವಿರಬಹುದು, ಇದು ಹೆಚ್ಚಾಗಿ ಬಾಧಿಸುವುದು ಬಡವರನ್ನೇ.
ಹೀಗಾಗೀ  “ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ” (ಎಲ್ಲರೊಂದಿಗೆ ಎಲ್ಲರ ಅಭ್ಯುದಯ) ಎಂಬ ಘೋಷಣೆಯೊಂದಿಗೆ ಈ ಸರ್ಕಾರವು ಬಡವರನ್ನು ಸಶಕ್ತರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಕಳೆದೆರಡು ವರುಷಗಳಿಂದ ಸ್ವಚ್ಛತಾ ಆಂದೋಳನವನ್ನು ಹಮ್ಮಿಕೊಳ್ಳಲಾಗಿದೆ.
 
ಜನರನ್ನು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಿಕೊಳ್ಳಲು ಕೇಳಿಕೊಳ್ಳುತ್ತಿದ್ದೇವೆ.
ಇಂದು ಕೋಟಿ-ಕೋಟಿ ಸಂಖ್ಯೆಯಲ್ಲಿ ಶೌಚಾಲಯಗಳ ನಿರ್ಮಾಣ ಆಗುತ್ತಿದೆ.
ನಗರ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಮೂಲ ಸೌಕರ್ಯಗಳನ್ನುಮಾಡಿಕೊಡುತ್ತಿದ್ದೇವೆ.
ಸ್ವಚ್ಛತಾ ಆಂದೋಳನದ ಬಗ್ಗೆ ಜನರ ಕಾಳಜಿಯನ್ನು ಜನಾಂದೋಳನವನ್ನಾಗಿ ಮಾಡಲು ಕ್ರಮ ಕೈಗೊಂಡಿದ್ದೇವೆ.
ಈ ಅಭಿಯಾನದಲ್ಲಿ ಯುವಕರು ದೇಶಕ್ಕೊಂದು ಮಾದರಿಯಾಗಿದ್ದಾರೆ.
ಎಲ್ಲಿಯಾದರು ಯಾರಾದರು ಕೊಳಕು  ಮಾಡುತ್ತಿದಾಗ ನೀವು ಅವರನ್ನು ತಡೆದಿದ್ದೀರಿ. ಅವರಿಗೆ ಸ್ವಚ್ಛತೆಯ ಅರಿವು ಮೂಡಿಸಿದ್ದೀರಿ.
ನೀವೆ ಸ್ವತಃ ಪರಕೆ ಹಿಡಿದು ಕಸ ಗುಡಿಸುವ ಕೆಲಸ ಮಾಡಿದ್ದೀರಿ.
 
ವರ್ಲ್ಡ್ ಟಾಯಲೆಟ್ ಡೇ ( ವಿಶ್ವ ಶೌಚಾಲಯ ದಿನ) ದಿನವನ್ನು ಈ ಕಾರ್ಯಕ್ರಮಕ್ಕೆ ಆಯ್ದುಕೊಂಡಿರುವುದು  ಇದಕ್ಕೆ ಸಾಕ್ಷಿ, ಇದು ನಿಮಗಿರುವ ಕಾಳಜಿಯನ್ನು ತೋರಿಸುತ್ತದೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸಂದಿಗೊಂದಿಗಳನ್ನು ಗಲ್ಲಿ ಮತ್ತು ರಸ್ತೆಗಳನ್ನು,ಬಡಾವಣೆಗಳನ್ನು ಸೇರಿಸಿ ಸ್ವಚ್ಛತೆಯ ವ್ಯಾಪ್ತಿಯನ್ನು ಹೆಚ್ಚಿಸಿದ್ದೀರಿ.
ಇಂದು ಗಡಿಪ್ರದೇಶಗಳ ಸ್ವಚ್ಛತೆಯಿರಬಹುದು ಅಥವಾ ತಿಜೋರಿಯ ಸ್ವಚ್ಛತೆಯಿರಬಹುದು. ಈ ಎಲ್ಲವು ತುಂಬಾ  ಯಶ್ವಸಿಯಾಗಿ ನಡೆಯುತ್ತಿದೆ.
ಈ ಎರಡನೆ ಹಂತದ ಸ್ವಚ್ಛತಾ ಕಾರ್ಯದಲ್ಲಿಯೂ ಸಹ ನಿಮ್ಮ ಸಹಕಾರ ಹೆಚ್ಚಿನ ರೀತಿಯಲ್ಲಿ ದೊರೆಯುತ್ತಿದೆ.
 
 ನನ್ನ ನೆಚ್ಚಿನ ಯುವ ಮಿತ್ರರೆ,  ಸ್ವಚ್ಛ ಭಾರತದ ನಿರ್ಮಾಣದಲ್ಲಿ ಎಲ್ಲ ಹಂತದ ಕೊಳೆಯನ್ನು ಈ ತಲೆಮಾರಿನಲ್ಲಿಯೆ ಮುಗಿಸುವುದರ ಬಗ್ಗೆ ನನಗೆ ಸಂಪೂರ್ಣ ಭರವಸೆಯಿದೆ.
ನನಗೆ ಗೊತ್ತಿದೆ ನೀವು ನಿರ್ಧಾರ ಮಾಡಿದಲ್ಲಿ ಈ ಕೆಲಸ ಖಂಡಿತ ಸಾಧ್ಯವೆಂದು.
ಹೀಗಾಗಿ ಸ್ವಚ್ಛತೆಯ ಹೋರಾಟದಲ್ಲಿ ಹೆಗಲಿಗೆ ಹೆಗಲು ನೀಡಿ ಸಹಕರಿಸಿದ ನಿಮಗೆಲ್ಲರಿಗೂ ನಾನು ವೈಯಕ್ತಿಕ ವಾಗಿ ಋಣಿಯಾಗಿದ್ದೇನೆ ಮತ್ತು ಮುಂದೆಯೂ ಸಹ ಈ ಸಹಕಾರ ಇದೇ ರೀತಿ ಮುಂದುವರೆಯುವದೆಂಬ ಆಶಾಭಾವ ನನಗಿದೆ.
 
ನಿಮ್ಮನ್ನು ಈ ಸುಂದರ ಸಂಜೆಯನ್ನು ಆಸ್ವಾದಿಸಲು ಬಿಟ್ಟು ನನ್ನ ರಾಗಾಲಾಪವನ್ನು (ಮಾತನ್ನು) ಇಲ್ಲಿಗೆ ಮುಗಿಸುತ್ತೇನೆ.
ಕಲಾವಿದರು ಇಡೀ ಒಂದು ತಲೆಮಾರನ್ನು ಪ್ರೇರೇಪಿಸುತ್ತಾರೆ. ನನಗೆ ನನ್ನದೇ ಆದ ತತ್ವಾದರ್ಶಗಳಿವೆ. ಆದರೆ ನಿಮಗೆ ಬಹುಶಃ ಬಾಬ್ ಡೈಲಾನ್, ನೊರ್ಹ ಜೊನ್ಸ್,  ಕ್ರಿಸ್ ಮಾರ್ಟಿನ್ ಹಾಗು ಎ.ಆರ್. ರೆಹಮಾನ್  ಬಗ್ಗೆ ಹೆಚ್ಚಿನ ಒಲವಿರಬಹುದು
 
ಈ ಸಂದರ್ಭದಲ್ಲಿ ಡೈಲಮ್ ರವರು 1960 ರಲ್ಲಿ ಹಾಡಿದ್ದ ಉತ್ತೇಜನ ನೀಡುವ ಗೀತೆ ಇಂದಿಗೂ ಸಂದರ್ಭೋಚಿತವಾಗಿದೆ.
 “Come mother and father
Through-out the land
And don’t criticize
What you can not understand
Your sons and your daughters
Are beyond your command
Your old road is rapidly aging
Please get out of the new one
If you can’t  lend your hand
For the times they are a-changing.”
“ಬನ್ನಿರಿ  ತಾಯಿ ತಂದೆಯಿರ
ಎಲ್ಲ ನಾಡಿನಿಂದ ಬನ್ನಿ
ಟೀಕಿಸುವುದನ್ನು ಬಿಡಿ
ನಿಮಗೆ ಅರ್ಥವಾಗದನ್ನ
ನಿಮ್ಮ ಹುಡುಗರು ಮತ್ತು ಹುಡುಗಿಯರು
ನಿಮ್ಮ ಅದೇಶ ಪಾಲನೆ ದಾಟಿದ್ದಾರೆ.
ನಿಮ್ಮ ಹಳೆಯ ರಸ್ತೆ ಬದಲಾಗುತ್ತಿದೆ.
ನಿಮಗೆ ಕೈ ಜೋಡಿಸುವುದಾಗದಿದ್ದಲ್ಲಿ
ಹೊಸತ ರಿಂದ  ದೂರ ನಡೆಯಿರಿ
ಕಾಲ ಕಳೆದಂತೆ ಬದಲಾಗುತ್ತಿದ್ದಾರೆ.”
 
ಹಿರಿಯರಾದವರು ಈ  ಮೇಲಿನ ಸಾಲುಗಳಿಂದ ಕಲಿಯಬೇಕಿದೆ.
ನಾವು ಬಹುಶಃ ಸಾಗುವುದೇ ಉತ್ತಮ..ಕಾಲವನ್ನೆ ಬದಲಾಯಿಸುತ್ತಿರಬಹುದು.
 
ನಿಜ ಹೇಳ ಬೇಕಂದಲ್ಲಿ ವೈಯಕ್ತಿಕ ಬದುಕಿನಲ್ಲಿ ಯುವ ಶಕ್ತಿಯಿಂದ ಪ್ರೇರಿತನಾಗಿದ್ದೇನೆ.
ಭಾರತ ಒಂದು ಯುವ ರಾಷ್ಟ್ರ
ಮತ್ತು ನಮ್ಮ ಭವಿಷ್ಯ ನೀವು ತೆಗೆದುಕೊಳ್ಳುವ ಆಯ್ಕೆಯಿಂದ ಮತ್ತು ನೀವು ತೆಗೆದುಕೊಳ್ಳುವ ನಿರ್ಧಾರಗಳಿಂದ ನಿರ್ಮಾಣವಾಗುತ್ತದೆ.
ನೀವೂ ಸಹ ಈ ಕ್ಷಣವನ್ನು ನಿಮ್ಮದಾಗಿಸಿಕೊಂಡು ಹಾಗೂ ದೇಶವನ್ನು ಬದಲಾಯಿಸುವ ಪರಿವರ್ತನ ಗಾಳಿಯಾಗಿ ಬನ್ನಿ. ಕಾರಣ ಕ್ರಿಸ್ತ ರು ತನ್ನ ಗೀತೆಯೊಂದರಲ್ಲಿ ಹೀಗೆ ಹೇಳುತ್ತಾರೆ  –
“You can see the change you want to
Be what you want to be
Everything you want is a dream away
Under this pressure  under this weight
We are diamonds taking shape
We are diamonds taking shape “
“ನೀವು ಕಾಣಬಯಸಿದ ಬದಲಾವಣೆಯನ್ನುನೀವು ಕಾಣಿರಿ
ನೀವೇನಾಗಬೇಕೋ ಹಾಗೇ ಆಗಿರಿ
ನೀವು ಬಯಸಿದ ಕನಸು ನನಸಾಗಲಿದೆ.
ಸಾಧಿಸುವಲ್ಲಿ ಅದೇ ಒತ್ತಡ ಅದೇ ಭಾರವಿದೆ
ನಾವು ಆಕಾರ ಪಡೆಯುತ್ತಿರುವ ವಜ್ರದ ಹರಳುಗಳು
ನಾವು ಆಕಾರ ಪಡೆಯುತ್ತಿರುವ ವಜ್ರದ ಹರಳುಗಳು”
 
ವಂದನೆಗಳು. ಆನಂದಿಸಿ.
ಭಗವಂತ ನಿಮ್ಮೆಲ್ಲರಿಗೂ ಒಳ್ಳೆಯದನ್ನು ಮಾಡಲಿ.
***