ಪಿಎಂಇಂಡಿಯಾ
ಸೋದರ ಸೋದರಿಯರೇ,
ನನ್ನ ಹೃದಯಕ್ಕೆ ಹತ್ತಿರವಾದ ಯೋಜನೆಯೊಂದರ ಜತೆ ಅತ್ಯಂತ ಚುರುಕಿನಿಂದ ಭಾಗಿಯಾಗಿ ಅನುಕೂಲ ಪಡೆದ ಫಲಾನುಭವಿಗಳ ಜತೆ ಮನಸ್ಸು ಬಿಚ್ಚಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನಾನಿಂದು ತುಂಬಾ ಅದೃಷಟವಂತ ಎಂದು ಎನಿಸುತ್ತಿದೆ. ಸಂಪ್ರದಾಯವನ್ನು ಮೀರಿ ಹೊರಬಂದ ಯುವಕರು ಮತ್ತು ಯುವ ಸೋದರಿಯರನ್ನು ಸ್ವ ಉದ್ಯೋಗಶೀಲರನ್ನಾಗಿ ಮಾಡುವುದು ನನಗೆ ಸಂತೋಷದ ವಿಚಾರ. ಯಾವುದೇ ಸಾಂಪ್ರದಾಯಿಕ ಹಾದಿಯನ್ನು ಅನುಸರಿಸದೇ ನೀವು ನಿಮ್ಮ ಕಾಲ ಮೇಲೆ ನಿಂತುಕೊಳ್ಳಲು ಪ್ರಯತ್ನ ಪಟ್ಟಿದ್ದೀರಿ. ನಿಮ್ಮದೇ ಪಥವನ್ನು ಸೃಷ್ಟಿಸಿಕೊಂಡಿದ್ದೀರಿ. ಅತ್ಯಂತ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಈ ಪಥವನ್ನು ನೀವು ತುಳಿದಿದ್ದೀರಿ ದೇಶದ ಸಮೃದ್ಧಿ ಮತ್ತು ಸಂತಸಕ್ಕೆ ನೀವು ನಿಮ್ಮದೇ ಆದ ದೊಡ್ಡ ಕೊಡುಗೆಯನ್ನೇ ಕೊಟ್ಟಿದ್ದೀರಿ.
ಇವತ್ತು ನಿಮ್ಮ ಧೈರ್ಯದ ಯಶೋ ಗಾಥೆಯನ್ನು ಕೇಳಲು ಇವತ್ತು ನನ್ನ ಜತೆ ಇಡೀ ದೇಶವೇ ಕಾಯುತ್ತಿದೆ ನೀವು ಕೈಗೊಂಡ ನಿರ್ಧಾರ, ನೀವು ಕೈಗೊಂಡ ಆಸಕ್ತಿಗಳನ್ನು ಈ ವೀಡಿಯೋ ಕಾನ್ಫರೆನ್ಸ್ ಮೂಲಕ ನೋಡಲು ಹಲವರು ಕಾತರರಾಗಿದ್ದಾರೆ.
ಪ್ರಧಾನಮಂತ್ರಿಗಳ ನಿವಾಸದಲ್ಲಿ ಮುದ್ರಾ ಯೋಜನೆಯನ್ನು ಇನ್ನಷ್ಟು ವೇಗಗತಿಯಲ್ಲಿ ಒಯ್ಯಲು ಅವಕಾಶವು ಸಿಕ್ಕಿತ್ತು ಅವರ ಅನುಭವ, ಅವರ ಪರಿಶ್ರಮ, ಅವರ ಯಶೋಗಾಥೆಗಳು ನನಗೆ ಅತ್ಯಂತ ಸಂತೃಪ್ತಿಯನ್ನು ನೀಡಿದ್ದಲ್ಲದೆ ನನ್ನ ಹೃದಯ ಹೆಮ್ಮೆಯಿಂದ ತುಂಬಿ ಬರುವಂತೆ ಮಾಡಿತ್ತು. ಅಂದೇ ನಾನು ಇನ್ನೊಂದು ಅವಕಾಶ ಪಡೆಯುತ್ತೇನೆ ಎಂದು ಅಂದುಕೊಂಡಿದ್ದೆ. ನಾನು ಮುದ್ರಾ ಫಲಾನುವಿಗಳ ಜತೆ ಮಾತನಾಡುತ್ತೇನೆ. ಅವರೊಂದಿಗೆ ಪ್ರಶ್ನೋತ್ತರ ಮಾಡುತ್ತೇನೆ ಎಂದು ಅಂದುಕೊಂಡಿದ್ದೆ. ತಂತ್ರಜ್ಞಾನದ ಕಾರಣದಿಂದಾಗಿ
ನಿಮ್ಮ ಮತ್ತು ನನ್ನ ಇಬ್ಬರ ಸಮಯವೂ ಇಂದು ಉಳಿತಾಯವಾಗಿದೆ. ನಾನು ನಿಮ್ಮ ಅನುಭವ, ಅನಿಸಿಕೆ, ನಿಮ್ಮೊಳಗಿನ ಭಾವನೆಗಳನ್ನು ಹಂಚಿಕೊಳ್ಳಲು ಮತ್ತು ಸಂವಾದಿಸಲು ಬಯಸುತ್ತೇನೆ. ನಮ್ಮ ನಡುವೆ ಪರಸ್ಪರ ಸಂವಾದ ನಡೆಯಲಿ.
ದೇಶದ ಆರ್ಥಿಕ ಅಭಿವೃದ್ಧಿಕೆ ನಿಮ್ಮಂತಹ ಉದ್ಯಮಶೀಲರು ನೀಡುವಂತಹ ಕೊಡುಗೆಯೇ ಬಹುದೊಡ್ಡದು. ರಾಜಕೀಯ ಲಾಭಕ್ಕಾಗಿ 25-30 ವರ್ಷಗಳ ಹಿಂದೆಯೇ ಸಾಲ ದರಗಳನ್ನು ರೂಪಿಸಲಾಗಿತ್ತು
ನಿಮಗೆಲ್ಲಾ ಗೊತ್ತೇ ಇದೆ. ಯಾರು ರಾಜಕೀಯವಾಗಿ ಉನ್ನತಿ ಪಡೆದಿದ್ದರೂ, ಅವರ ಗುತ್ತಿಗೆದಾರರು, ಯಾರು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದರೋ ಅವರ ಪಾಲಾಗುತ್ತಿದ್ದವು. ಇಂತಹ ವ್ಯಕ್ತಿಗಳು ಬ್ಯಾಂಕ್ ಗಳಿಂದ ಹಣವನ್ನು ಪಡೆದುಕೊಳ್ಳುತ್ತಿದ್ದರು. ಎಷ್ಟು ಮೊತ್ತದ ಬ್ಯಾಂಕ್ ಸಾಲ ನೀಡಲಾಗಿದೆ ಎನ್ನುವಂತಹ ಸುದ್ದಿಗಳು ಬರುತ್ತಿದ್ದವು. ಆನಂತರ ಏನಾಗುತ್ತಿದೆ ಎಂದು ಯಾರೂ ಕೇಳುತ್ತಿರಲಿಲ್ಲ. ನಾವು ಯಾವುದೇ ಸಂಘಟಿತ ಸಾಲ ದರಗಳನ್ನು ಅಥವಾ ಯಾವುದೇ ಮಧ್ಯವರ್ತಿಗೆ ಅವಕಾಶ ನೀಡುವುದನ್ನು ಮಾಡಿರಲಿಲ್ಲ.
ದೇಶದ ಯುವಕರು, ತಾಯಂದಿರು ಮತ್ತು ಸೋದರಿಯರು ಹೀಗೆ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಎಂದು ಅಂದುಕೊಳ್ಳುತ್ತಿದ್ದವರು ಇಂದು ಬ್ಯಾಂಕ್್ಗಳಿಗೆ ನೇರವಾಗಿ ಹೋಗಿ ಅಧಿಕಾರಿಗಳನ್ನು ಕೇಳುತ್ತಿದ್ದಾರೆ. ಅಂತಹ ಮುದ್ರಾ ಯೋಜನೆ ಎನ್ನುವ ಅವಕಾಶವನ್ನು ನಾವು ಸೃಷ್ಟಿ ಮಾಡಿದ್ದೇವೆ.
ಇಂದು ಮುದ್ರಾ ಯೋಜನೆ ಏನನ್ನಾದರೂ ಸಾಧಿಸಬೇಕು ಎನ್ನುವ ದೇಶದ ಜನತೆ ಮಹತ್ತರವಾದ ಅವಕಾಶವಾಗಿದೆ.
ನಾವು ನಮ್ಮ ಸಣ್ಣ ಉದ್ಯಮಿಗಳನ್ನು ನಂಬಿದ್ದೇವೆ. ನಾವು ಅವರ ಔದ್ಯೋಗಿಕ ಕೌಶಲ್ಯವನ್ನು ನಂಬಿದ್ದೇವೆ. ಅವರ ವ್ಯವಹಾರ ಕೌಶಲ್ಯವನ್ನು ನಂಬಿ ಸಾಲ ನೀಡುವಂತಹ ಮುದ್ರಾ ಯೋಜನೆಯನ್ನು ತಂದಿದ್ದೇವೆ. ಮುದ್ರಾ ಯೋಜನೆಯ ಅಡಿಯಲ್ಲಿ ಸಾಲದ ನೆರವನ್ನು ನೀಡುತ್ತಿದ್ದು ಅವರು ಸ್ವಂತ ವ್ಯವಹಾರವನ್ನು ಮಾಡಬಹುದಾಗಿದೆ. ತಮ್ಮದೇ ಉದ್ಯಮವನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. ಮುದ್ರಾ ಯೋಜನೆ ಕೇವಲ ಸ್ವ ಉದ್ಯೋಗದ ಅವಕಾಶಗಳನ್ನು ಮಾತ್ರ ಸೃಷ್ಟಿ ಮಾಡಿಲ್ಲ. ಇದೊಂದು ಉದ್ಯೋಗ ದ್ವಿಗುಣಗೊಳಿಸುವ ಪ್ರಕ್ರಿಯೆ ಎನಿಸಿಕೊಂಡಿದೆ.
ಸ್ವಾತಂತ್ರ್ಯ ನಂತರದಿಂದಲೂ ನಮ್ಮ ದೇಶದಲ್ಲಿ ಪರವಾನಗಿ ಆಧಾರಿತ ಆಡಳಿತ ಉಳಿದುಕೊಂಡು ಬಂದಿದೆ. ಯಾರಿಗಾದರೂ ಗೊತ್ತಿದ್ದವರು ಮಾತ್ರ ಸಾಲವನ್ನು ಪಡೆದುಕೊಳ್ಳುವ ವ್ಯವಸ್ಥೆ ಇತ್ತು. ಯಾರಿಗೆ ಖಾತ್ರಿ ಕೊಡುವರು ಇದ್ದರು ಅವರಿಗೆ ಮಾತ್ರ ಸಾಲ ಸೌಲಭ್ಯ ಸಿಗುತ್ತಿತ್ತು. ಇದು ಬಡವರನ್ನು ಸಾಲ ವ್ಯವಸ್ಥೆಯಿಂದ ದೂರವೇ ಇಟ್ಟಿತ್ತು. ಏಕೆಂದರೆ ಯಾರಿಗಾದರೂ ಗೊತ್ತಿದ್ದವರು ಮಾತ್ರ ಸಾಲವನ್ನು ಪಡೆದುಕೊಳ್ಳುತ್ತಿದ್ದರು. ಯಾರು ಪರಿಚಯವನ್ನು ತೋರಿಸುತ್ತಾರೋ ಅವರಿಗೆ ಮಾತ್ರ ಕೆಲಸ ಆಗುತ್ತಿತ್ತು. ಬಡವರಿಗೆ ದೊಡ್ಡ ಹೆಸರುಗಳು ಬೆಂಬಲಕ್ಕಿಲ್ಲದೇ ಅವಕಾಶ ವಂಚಿತರಾಗುತ್ತಿದ್ದರು. ಇದೊಂದೇ ಕಾರಣಕ್ಕೆ ಸಣ್ಣ ಸಣ್ಣ ಉದ್ದಿಮೆದಾರರು ತಮ್ಮದೇ ಉದ್ಯಮವನ್ನು ಸ್ಥಾಪಿಸುವ ಮತ್ತು ವಿಸ್ತರಿಸುವ ಅವಕಾಶ ಸಿಗದೇ ಹಿಂದೆ ಬಿದ್ದಿದ್ದರು. ಅಷ್ಟೇ ಅಲ್ಲದೇ ಲೇವಾದೇವಿದಾರರ ಕಪಿ ಮುಷ್ಟಿಗೆ ಸಿಲುಕಿದ್ದರು.
ಸ್ವತಃ ಹಣಕಾಸು ಸಚಿವರೇ ಕರೆ ಮಾಡಿ ಉದ್ಯಮಿಗಳಿಗೆ ಸಾಲವನ್ನು ವ್ಯವಸ್ಥೆ ಮಾಡುವ ಕಾಲ ನಮ್ಮ ದೇಶದಲ್ಲಿ ಇತ್ತು. ಮತ್ತೊಂದೆಡೆ ಸಣ್ಣ ಸಣ್ಣ ಉದ್ಯಮಿಗಳು ಶೇಕಡಾ 30 ರಿಂದ 40ರಷ್ಟು ಬಡ್ಡಿಯನ್ನು ನೀಡಿ ಲೇವಾದೇವಿದಾರರಿಂದ ಸಾಲವನ್ನು ಪಡೆದು ತರಬೇಕಿತ್ತು. ಇಡೀ ಜೀವನದಲ್ಲಿ ಆ ಸಾಲದ ಋಣದಿಂದ ಅವನು ಮುಕ್ತಿ ಪಡೆಯುತ್ತಲೇ ಇರಲಿಲ್ಲ. ಈ ಅನೈತಿಕವಾದ ಚಕ್ರದಿಂದ ಅವರನ್ನು ಮುಕ್ತಿಗೊಳಿಸುವ ಅವಕಾಶ ಬರಬೇಕಿತ್ತು. ಅದನ್ನು ಯಾರಾದರೊಬ್ಬರೂ ಮುರಿಯಬೇಕಿತ್ತು. ಅದನ್ನು ನಾವು ಮಾಡಿದ್ದೇವೆ. ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿ ಯಶಸ್ಸನ್ನೂ ಕಾಣುತ್ತಿದ್ದೇವೆ. ಈ ಅನೈತಿಕ ಚಕ್ರವನ್ನು ನಿಯಂತ್ರಸಲು ಯಶಸ್ಸು ಕಾಣುತ್ತಿದ್ದೇವೆ. ಅತ್ಯಂತ ನಂಬಿಕೆ ಮತ್ತು ವಿಶ್ವಾಸದಿಂದ ಹೇಳುತ್ತೇನೆ. ಸರ್ಕಾರ ಬಡವರು, ಬಡವರ ಕನಸು ಮತ್ತು ಅವರ ಪರಿಶ್ರಮದ ಮೇಲೆ ಆಸಕ್ತಿಯಿಟ್ಟು ಕೆಲಸ ಮಾಡುತ್ತಿದೆ.
ದಶಕಗಳ ಹಿಂದೆಯೇ ಮುದ್ರಾ ಯೋಜನೆಯಂತಹ ಯೋಜನೆಯನ್ನು ಈ ದೇಶದ ಯುಕವರು ಪಡೆದುಕೊಂಡಿದ್ದರೆ ನಗರ ಪ್ರದೇಶಗಳತ್ತ ಯುವಕರು ಗುಳೇ ಹೋಗುವ ಪರಿಸ್ಥಿತಿಗಳು ನಿಯಂತ್ರಣಕ್ಕೆ ಬರುತ್ತಿದ್ದವು.
ಯುವ ಜನರು ತಮ್ಮದೇ ಪಟ್ಟಣ, ಹಳ್ಳಿ, ನಗರಗಳಲ್ಲೇ ಉಳಿದುಕೊಂಡು ಉದ್ಯಮಗಳನ್ನು ಮಾಡುತ್ತಿದ್ದರು. ಯಾವುದೇ ಖಾತ್ರಿ ಇಲ್ಲದೇ ಬ್ಯಾಂಕ್ ಸಾಲಗಳನ್ನು ಪಡೆದುಕೊಳ್ಳುತ್ತಿದ್ದರು. ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ಈ ಯುವ ಸಮುದಾಯ ಪಡೆದುಕೊಂಡಿದ್ದರೆ ಇಲ್ಲೇ ಇರುತ್ತಿದ್ದರು. ಇವತ್ತು ಯಾವುದೇ ಮೇಲಾಧಾರ ಇಲ್ಲದೇ ದೇಶದ ಬಡವರಲ್ಲಿ ಬಡವ ವ್ಯಕ್ತಿಯು ಬ್ಯಾಂಕ್ ಸಾಲವನ್ನು ಪಡೆದುಕೊಳ್ಳುತ್ತಿದ್ದಾನೆ. ಮುದ್ರಾ ಯೋಜನೆಯ ನೆರವಿನಿಂದ ಇವತ್ತು ಸಾಮಾನ್ಯ ನಾಗರಿಕನೂ ಯಾರದ್ದೇ ಪರಿಚಯ ಇಲ್ಲದೇ, ಶೂರಿಟಿಯೂ ಇಲ್ಲದೇ ಸಾಲವನ್ನು ಪಡೆದುಕೊಳ್ಳುತ್ತಿದ್ದಾನೆ. ಸಾಲಪಡೆದುಕೊಳ್ಳಲು ಸರ್ಕಾರದಲ್ಲಿ ಸ್ನೇಹಿತ ಅಥವಾ ಸಂಬಂಧಿ ಇರಲೇಬೇಕು ಎನ್ನುವ ಪರಿಸ್ಥಿತಿ ಇವತ್ತು ಇಲ್ಲ. ನಮ್ಮ ದೇಶದಲ್ಲಿ ಪ್ರತಿಭೆಗಳ ಕೊರತೆ ಇಲ್ಲವೇ ಇಲ್ಲ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಕ್ಷೇತ್ರದಲ್ಲಿ ತಮ್ಮದೇ ಆದ ಕೌಶಲ್ಯವನ್ನು ಹೊಂದೇ ಇದ್ದಾರೆ. ಅಗತ್ಯ ಇರುವುದು ಕೌಶಲ್ಯಗಳನ್ನು ಗುರುತಿಸಿ ಅದಕ್ಕೊಂದು ವೇದಿಕೆ ಒದಗಿಸಿ ಆರ್ಥಿಕ ಬಲ ತುಂಬುವ ಕೆಲಸ ಮಾತ್ರ. ಮುದ್ರಾ ಯೋಜನೆಯು ಕೌಶಲ್ಯಯುತ ಜನರಿಗೆ, ವಿಶೇಷವಾಗಿ ಯುವ ಜನರಿಗೆ ಈ ಅವಕಾಶವನ್ನು ಮಾಡಿಕೊಡುತ್ತಿದೆ.
ಯಾವಾಗ ಕೌಶಲ್ಯಗಳನ್ನು ಉತ್ತೇಜಿಸಲಾಗುತ್ತದೋ ಆಗ ಅವುಗಳು ಹರಡಿಕೊಳ್ಳುತ್ತವೆ. ಜೀವನದಲ್ಲಿ ಬದಲಾವಣೆಗಳನ್ನು ತಂದುಕೊಳ್ಳಲು ಸಾಧ್ಯವೂ ಆಗುತ್ತದೆ. ಉದಾಹರಣೆಗೆ ಯಾರಿಗಾದರೂ ಬಟ್ಟೆಯ ಮೇಲೆ ಕುಸುರಿಗಾರಿಕೆ ಮಾಡುವ ಕೌಶಲ್ಯ ಇದ್ದರೆ ಆತ ಅಥವಾ ಆಕೆಯು ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಬಟ್ಟೆಗೆ ಎಂಬ್ರಾಯಿಡರಿ ಮಾಡುವ ಸಣ್ಣ ಉದ್ಯಮವನ್ನು ಮಾಡಬಹುದಾಗಿದೆ. ವಸ್ತ್ರ ವಿನ್ಯಾಸದ ಕೌಶಲ್ಯ ಇರುವ ಆಕೆ ಅಥವಾ ಆತ ಜವಳಿ ಉದ್ಯಮವನ್ನೂ ಸ್ಥಾಪನೆ ಮಾಡಬಹುದಾಗಿದೆ. ಸಾಮಾನ್ಯ ಮನುಷ್ಯರ ಕೌಶಲ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯಗಳನ್ನು ಪಡೆದು ಸ್ವಂತ ಕಿರು ಉದ್ದಿಮೆ ನಡೆಸುವ ಅವಕಾಶವನ್ನು ಮುದ್ರಾ ಯೋಜನೆ ಒದಗಿಸಿಕೊಟ್ಟಿದೆ. ಈ ಮೂಲಕ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕೆಲಸ ಆಗುತ್ತಿದೆ. ಮುದ್ರಾ ಯೋಜನೆಯ ಅಡಿಯಲ್ಲಿ 5.75 ಲಕ್ಷ ಕೋಟಿ ರೂಪಾಯಿಗಳನ್ನು 12 ಕೋಟಿ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ.
ಸರ್ಕಾರಿ ಯೋಜನೆಗಳಿಗೆ ಸರ್ಕಾರ ಬಳಸುವ ಅನುದಾನವು ಕೆಲವೊಮ್ಮೆ ಪೂರ್ಣ ಪ್ರಮಾಣದಲ್ಲಿ ಬಳಕೆ ಆಗುವುದಿಲ್ಲ. ಆದರೆ ನಿಮಗೆ ಅಚ್ಚರಿ ಎನಿಸುತ್ತದೆ ಮುದ್ರಾ ಯೋಜನೆಯ ಅಡಿಯಲ್ಲಿ ವಿತರಣೆ ಮಾಡಲಾದ ಸಾಲದ ಮೊತ್ತವು ಗುರಿಯನ್ನೂ ಮೀರಿ ಯಶಸ್ಸು ಕಂಡಿದೆ.
ಈ ಯೋಜನೆಯ ಅಡಿಯಲ್ಲಿ ಶೇಕಡಾ 28ರಷ್ಟು ಹಣ ಅಂದರೆ 3.25 ಲಕ್ಷ ಕೋಟಿ ರೂಪಾಯಿ ಹಣವು ಮೊದಲ ಬಾರಿ ಉದ್ಯಮವನ್ನು ಸ್ಥಾಪನೆ ಮಾಡುತ್ತಿರುವವರಿಗೆ ಸೇರಿದೆ. ನಿರುದ್ಯೋಗದ ಸುದೀರ್ಘ ಅವಧಿಯ ನಂತರ ೀ ಜನರು ಉದ್ಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ಯೋಜನೆಯಲ್ಲಿ ಅತ್ಯಂತ ತೃಪ್ತಿ ತಂದುಕೊಡುವ ವಿಚಾರ ಏನೆಂದರೆ ಯೋಜನೆಯ ಶೇಕಡಾ 74ರಷ್ಟು ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ. ಅಂದರೆ 9 ಕೋಟಿ ಫಲಾನುಭವಿಗಳು ಮಹಿಳೆಯರು. ಯಾವಾಗ ಮಹಿಳೆಯು ಪ್ರಗತಿಯನ್ನು ಕಾಣುತ್ತಾಳೋ ಮಹಿಳೆಯರು ಆರ್ಥಿಕ ಚಟುವಟಿಕೆಯ ಕೇಂದ್ರ ಬಿಂದು ಆದಾಗ ಇಡೀ ಕುಟುಂಬದ ವಿಶ್ವಾಸ ವೃದ್ದಿಯಾಗುತ್ತದೆ. ಪ್ರತಿಯೊಬ್ಬರ ಆಲೋಚನೆಗಳೂ ಧನಾತ್ಮಕವಾಗಿ ಬದಲಾವಣೆಯನ್ನು ಪಡೆದುಕೊಳ್ಳುತ್ತವೆ. ಸಮಾಜವು ಸ್ವಾವಲಂಬಿಯಾಗುವತ್ತ ಮುನ್ನುಗ್ಗುತ್ತದೆ. ಅದೇ ರೀತಿ ಮುದ್ರಾ ಯೋಜನೆಯ ಒಟ್ಟಾರೆ ಸಾಲದ ಶೇಕಡಾ 55ರಷ್ಟು ಸಾಲವನ್ನು ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ನೀಡಲಾಗಿದೆ. ಅಂದರೆ ಇದರ ಅರ್ಥ ಒಟ್ಟಾರೆ 12 ಕೋಟಿ ಫಲಾನುಭವಿಗಳಲ್ಲಿ ಶೇಕಡಾ 55 ರಷ್ಟು ಫಲಾನುಭವಿಗಳು ಎಸ್ ಸಿ/ಎಸ್ ಟಿ ಮತ್ತು ಇತರೆ ಹಿಂದುಳಿದ ವರ್ಗಗಳವರಾಗಿದ್ದಾರೆ.
ಬಡತನದ ವಿಚಾರವಾಗಿ ನಾವು ದಶಕಗಳಿಂದಲೂ ಘೋಷಣೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಬಡಜನರನ್ನು ಮೇಲೆತ್ತುವ ಮಾತುಗಳನ್ನು ಕೇಳಿಕೊಂಡೇ ಬರುತ್ತಿದ್ದೇವೆ. ಆದರೆ ಮುದ್ರಾ ಯೋಜನೆಯಂತಹ ಕಾರ್ಯಕ್ರಮವು ಹಿಂದುಳಿದ ಸಮುದಾಯಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಯನ್ನು ಯಾವುದೇ ಭೇದಭಾವ ಇಲ್ಲದೇ ನೀಡುತ್ತಿದೆ. ಈ ಸಮುದಾಯಗಳನ್ನು ಸ್ವಾವಲಂಬಿ ಮಾಡುವ ಕೆಲಸವನ್ನು ಈ ಕಾರ್ಯಕ್ರಮವು ನೀಡಿದೆ.
ಅದರ ಜತೆಗೇ ಅನೇಕ ಸಂಸ್ಥೆಗಳೂ ಈ ಕಾರ್ಯದಲ್ಲಿ ಕೈಜೋಡಿಸಿವೆ. ಇವತ್ತು ಕೇವಲ 110 ಬ್ಯಾಂಕ್ ಗಳು ಮಾತ್ರವಲ್ಲ. 72 ಸಣ್ಣ ಹಣಕಾಸು ಸಂಸ್ಥೆಗಳು ಮತ್ತು 9 ಬ್ಯಾಂಕೇತರ ಹಣಕಾಸು ಸಂಸ್ಥೆ(ಎನ್ ಬಿಎಫ್ ಸಿ)ಗಳು ಮುದ್ರಾ ಲೋನ್ ಗಳನ್ನು ನೀಡುತ್ತಿವೆ. ಮುದ್ರಾ ಸಾಲಗಳನ್ನು ನೀಡುವ ಪ್ರಕ್ರಿಯೆಗಳನ್ನು ಬ್ಯಾಂಕ್ ಗಳು ಸರಳೀಕರಣ ಮಾಡಿವೆ. ಕಾಗದದ ಪ್ರಕ್ರಿಯೆಗಳನ್ನು ಕಡಿಮೆ ಮಾಡಲಾಗಿದೆ. ಇವತ್ತು ದಾಖಲೆಗಳ ಸಂಗ್ರಹ ಎನ್ನುವುದು ದೊಡ್ಡ ಮಟ್ಟದ ತಲೆನೋವು ಎನಿಸಿಕೊಂಡಿಲ್ಲ. ಇವತ್ತು ಸ್ವಾವಲಂಬಿ ಉದ್ಯೋಗವು ಜನರ ಗರ್ವದ ವಿಚಾರವಾಗಿದೆ.
ಈ ಹಿನ್ನೆಲೆಯಲ್ಲಿ ನೋಡುವುದೇ ಆದರೆ ನೀವೆಲ್ಲರೂ ಪ್ರೇರಣಾ ಶಕ್ತಿಗಳಾಗಿದ್ದೀರಿ.
During today's interaction with Mudra Yojana beneficiaries, I heard entrepreneurs from Maharashtra, Karnataka, Assam, West Bengal, Jammu and Kashmir, and Himachal Pradesh share their life journeys. Due to Mudra, the entrepreneurial potential of young Indians is being harnessed.
— Narendra Modi (@narendramodi) May 29, 2018
Mudra Yojana has emerged as a job multiplier. Entrepreneurs, particularly in smaller towns and villages who were forced to depend on middlemen or moneylenders are relieved due to Mudra Yojana. This initiative places faith on the skills and strengths of 125 crore Indians.
— Narendra Modi (@narendramodi) May 29, 2018
Thanks to Mudra Yojana there is a spirit of self-reliance, especially among women, youngsters of SC, ST and OBC communities. I urged beneficiaries to increase the use of digital payments and inspire others to do so. https://t.co/KnKY9HUjGd
— Narendra Modi (@narendramodi) May 29, 2018