ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೇಡ್ ಅಪ್ ವಲಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ರಫ್ತು ಉತ್ತೇಜಿಸುವ ಸುಧಾರಣೆಗಳಿಗೆ ತನ್ನ ಅನುಮೋದನೆ ನೀಡಿದೆ.
ಮೇಡ್ ಅಪ್ ವಲಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೊಡ್ಡಮಟ್ಟದಲ್ಲಿ 11 ಲಕ್ಷ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶದೊಂದಿಗೆ ಅನುಮೋದಿತ ಆಯವ್ಯಯದೊಳಗೆ 6,006 ಕೋಟಿ ರೂಪಾಯಿ ಉಡುಪು (ಅಪೇರಲ್) ಪ್ಯಾಕೇಜ್ ಗಾಗಿ ಕಾಲಮಿತಿಯ ಮಾದರಿಯಲ್ಲಿ ಈ ಕೆಳಗಿನ ಮಧ್ಯಸ್ಥಿಕೆಯ ಅಂಶಗಳಿಗೆ ಅನುಮೋದನೆ ನೀಡಲಾಗಿದೆ:-
1. ಹೆಚ್ಚುವರಿಯಾಗಿ ಶೇಕಡ 10ರಷ್ಟು ಸಬ್ಸಿಡಿಯನ್ನು ಹೆಚ್ಚುವರಿ ಉತ್ಪಾದನೆಗಾಗಿ ಮತ್ತು 3 ವರ್ಷದ ತರುವಾಯದ ಉದ್ಯೋಗಕ್ಕೆ ಸಿದ್ಧ ಉಡುಪು ರಂಗಕ್ಕೆ ನೀಡುತ್ತಿರುವಂತೆಯೇ ಮೇಡ್ ಅಪ್ ಗಳಿಗೂ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆ (ಟಿಯುಎಫ್.ಎಸ್) ಮೂಲಕ ಉತ್ಪಾದನೆ ಪ್ರೋತ್ಸಾಹಕ ಒದಗಿಸುವುದು.
2. ಮೇಡ್ ಅಪ್ ವಲಯಕ್ಕೆ ವಿಶೇಷ ಪ್ರೋತ್ಸಾಹಕವಾಗಿ ಮೊದಲ ಮೂರು ವರ್ಷಗಳ ಉದ್ಯೋಗದ ಅವಧಿಯಲ್ಲಿ ಇಪಿಎಫ್ಓನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲ ಹೊಸ ಉದ್ಯೋಗಿಗಳಿಗೆ ಈಗಾಗಲೇ ಪ್ರಧಾನಮಂತ್ರಿ ಉದ್ಯೋಗ ಪ್ರೋತ್ಸಾಹ ಯೋಜನೆ (ಪಿ.ಎಂ.ಆರ್.ಪಿ.ವೈ) ಅಡಿ ನೀಡಲಾಗುತ್ತಿರುವ ಶೇ.8.33ರ ಪಾಲಿನ ಜೊತೆಗೆ ಹೆಚ್ಚುವರಿ ಶೇ.3.67ರಷ್ಟು ಮಾಲೀಕರ ಪಾಲು ಪ್ರಧಾನಮಂತ್ರಿ ಪರಿಧನ್ ಉದ್ಯೋಗ ಪ್ರೋತ್ಸಾಹ ಯೋಜನೆ (ಪಿಎಂಪಿಆರ್ಪಿವೈ) ಯೋಜನೆ (ಅಪೇರಲ್ ಗೆ) ಯನ್ನು ಮೇಡ್ ಅಪ್ ವಲಯಕ್ಕೆ ವಿಸ್ತರಿಸುವುದು.
3. ಮೇಡ್ ಅಪ್ ಗಳ ರಫ್ತಿನಲ್ಲಿನ ಸುಂಕ ತೊಡಕಿನ ಹಿನ್ನೆಲೆಯಲ್ಲಿ ರಾಜ್ಯದ ಲೆವಿಯ ರಿಯಾಯಿತಿಯ (ಆರ್.ಓ.ಎಸ್.ಎಲ್) (ಉಡುಪು ಕ್ಷೇತ್ರಕ್ಕಾಗಿ) ಯೋಜನೆಯನ್ನು ಮೇಡ್ ಅಪ್ ವಲಯಕ್ಕೂ ವಿಸ್ತರಿಸುವುದು.
4. ಕಾರ್ಮಿಕ ಕಾಯಿದೆಗಳ ಸರಳೀಕರಣ:
(i) ಅಂಗೀಕಾರಾರ್ಹವಾದ ಹೆಚ್ಚುವರಿ ಅವಧಿಯ ಕೆಲಸದ ಮಿತಿಯನ್ನು ಮೇಡ್ ಅಪ್ ಉತ್ಪಾದನಾ ವಲಯದಲ್ಲಿ ಪ್ರತಿ ತ್ರೈಮಾಸಿಕಕ್ಕೆ 100 ಗಂಟೆಗಳಿಗೆ ಹೆಚ್ಚಿಸುವುದು
(ii) 15,000ಕ್ಕಿಂತ ಕಡಿಮೆ ಮಾಸಿಕ ವೇತನ ಪಡೆಯುವವರಿಗೆಇಪಿಎಫ್ ನ ನೌಕರರ ಕೊಡುಗೆಯನ್ನು ಐಚ್ಛಿಕಗೊಳಿಸುವುದು.
ಈ ಮಧ್ಯಸ್ಥಿಕೆಯ ಕ್ರಮಗಳು ಜವಳಿ ವಲಯದಲ್ಲಿ ಉದ್ಯೋಗವನ್ನು ಹೆಚ್ಚಿಸಲಿವೆ ಮತ್ತು 11 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸಲಿವೆ ಎಂದು ನಿರೀಕ್ಷಿಸಲಾಗಿದೆ. ಇದು ರಫ್ತು ಹೆಚ್ಚಳಕ್ಕೆ ಮತ್ತು ಜವಳಿ ಮತ್ತು ಅಪೇರಲ್ ವಲಯದಲ್ಲಿನ ಕಾರ್ಮಿಕರಿಗೆ ಹೆಚ್ಚಿನ ಲಾಭ ಒದಗಿಸಲಿದೆ ಎಂದೂ ನಿರೀಕ್ಷಿಸಲಾಗಿದೆ.