ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಮ್ಯಾನ್ಮಾರ್ ನಡುವೆ ಮ್ಯಾನ್ಮಾರ್ ನ ಯಮೇಥಿನ್ ಮಹಿಳಾ ಪೊಲೀಸ್ ತರಬೇತಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಸೆಪ್ಟೆಂಬರ್ 6ರಂದು ಅಂಕಿತ ಹಾಕಲಾಗಿತ್ತು.
ಈ ಎಂ.ಓ.ಯು. ಮ್ಯಾನ್ಮಾರ್ ಸರ್ಕಾರದ ಪೊಲೀಸ್ ಪಡೆಗಳ ಸಾಮರ್ಥ್ಯವನ್ನು ಭಾರತ ಸರ್ಕಾರದ ತಾಂತ್ರಿಕ ಮತ್ತು ಆರ್ಥಿಕ ನೆರವಿನೊಂದಿಗೆ ಮತ್ತಷ್ಟು ಬಲಪಡಿಸುವುದನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಯಮೇಥಿನ್ ನ ಮಹಿಳಾ ಪೊಲೀಸ್ ತರಬೇತಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದನ್ನೂ ಒಳಗೊಂಡಿದೆ.