ಪಿಎಂಇಂಡಿಯಾ
ವ್ಯಕ್ತಿಯೊಬ್ಬ ತನ್ನ ಕುಟುಂಬದೊಂದಿಗೆ ಬೆರೆತಾಗಾ ಆಗುವ ಅನುಭವ ನಿಮ್ಮೆನ್ನೆಲ್ಲಾ ಭೇಟಿಯಾದಾಗ ನನಗಾಗುತ್ತದೆ ..ಮತ್ತದು ಅಷ್ಟೆ ಸಂತೋಷ ಹಾಗೂ ಆಹ್ಲಾದಕರವಾಗಿರುತ್ತದೆ. ನಿಮ್ಮ ಜೊತೆಗಿನ ಪ್ರತಿ ಭೇಟಿಯು ನನಗೆ ಅನನ್ಯ ಉತ್ಸಾಹವನ್ನ ಮೂಡಿಸುವುದಷ್ಟೆ ಅಲ್ಲದೇ ಹೊಸ ಚೈತನ್ಯದೊಂದಿಗೆ ದೇಶಕ್ಕೆ ಹಿಂತಿರುಗಿವಂತೆ ಮಾಡುತ್ತದೆ. ಮತ್ತಿವತ್ತು ನನ್ನ ಅದೃಷ್ಟ ,, ಪುನಃ ನಿಮ್ಮನ್ನೆಲ್ಲಾ ಭೇಟಿಯಾಗುವ ಮತ್ತೊಂದು ಅವಕಾಶ ಒದಗಿಬಂದಿದೆ..
ಕಳೆದ 20 ವರ್ಷಗಳಲ್ಲಿ ನಾನು ಯುಎಸ್ಎಗೆ ಹಲವು ಬಾರಿ ಭೇಟಿ ಕೊಟ್ಟಿದ್ದೇನೆ..ಸರಿಸುಮಾರು 30 ಯುಎಸ್ಎ ನ ರಾಜ್ಯಗಳಿಗೆ ನಾನು ಭೇಟಿಕೊಟ್ಟಿದ್ದೇನೆ. ಆಗ ನಾನು ಮುಖ್ಯಮಂತ್ರಿಯು ಆಗಿರಲಿಲ್ಲ, ಪ್ರಧಾನಮಂತ್ರಿಯು ಆಗಿರಲಿಲ್ಲ.. ಆದ್ರೆ ಪ್ರತಿ ಸಾರಿ ಅಮೆರಿಕಾಕ್ಕೆ ಬಂದಾಗಲೂ ಇಲ್ಲಿನ ಭಾರತೀಯ ಸಮುದಾಯದೊಂದಿಗೆ ಭೇಟಿಯಾಗುವ ಅವಕಾಶ ಮಾತ್ರ ಮಿಸ್ ಆಗಿಲ್ಲ…
ಪ್ರಧಾನ ಮಂತ್ರಿ ಕಾರ್ಯಾಲಯದ ಕಾರ್ಯವನ್ನ ಊಹಿಸಿಕೊಂಡರೂ ನೀವಿಲ್ಲಿ ಅದೆಷ್ಟೂ ದೊಡ್ಡ ಸಮಾರಂಭವನ್ನೂ ಆಯೋಜಿಸಿದ್ದೀರಾ ಅಂದರೆ ಆ ಸಮಾರಂಭದ ಯಶಸ್ಸು ಇವತ್ತಿಗೂ ವಿಶ್ವದಾದ್ಯಂತ ಪ್ರತಿಧ್ವನಿಸುತ್ತಿದೆ.. ಯಾವಾಗೆಲ್ಲಾ ಅಮೆರಿಕಾ ನಾಯಕರು ಅಥವಾ ಬೇರೇ ದೇಶಗಳ ನಾಯಕರು ನನ್ನನ್ನ ಭೇಟಿಯಾದಾಗೆಲ್ಲಾ ಅವತ್ತು ಅಮೆರಿಕಾದಲ್ಲಿ ನಡೆದ ಮೆಗಾ ಸಮಾರಂಭದ ಬಗ್ಗೆ ಪ್ರಸ್ತಾಪಿಸುತ್ತಲೇ ಮಾತನಾಡುತ್ತಾರೆ..
ಇದೆಲ್ಲಾ ಹೇಗೆ ಸಾಧ್ಯವಾಯಿತು.. ನಿಮ್ಮಂತ ಒಳ್ಳೆ ಮನಸ್ಸಿನ ವ್ಯಕ್ತಿತ್ವದಿಂದಲೇ ಸಾದ್ಯವಾಯ್ತಷ್ಟೆ ಅಲ್ಲದೇ ಮತ್ತೇನಿಲ್ಲ. ನನಗೆ ಗೊತ್ತಿದೆ.. ಇಂಥಹ ಸಮಾರಂಭವೊಂದನ್ನ ಆಯೋಜಿಸುವುದು ಸುಲಭದ ಮಾತಲ್ಲ. ಅದಕ್ಕಾಗಿ ಎಷ್ಟೆಲ್ಲಾ ಕಷ್ಟ ಪಡಬೇಕು..ಏನೇಲ್ಲಾ ತೊಂದರೆಗಳನ್ನ ಅನುಭವಿಸಬೇಕಾಗಬಹುದು.. ಅಮೆರಿಕಾದಂತಃ ರಾಷ್ಟ್ರದಲ್ಲಿ ವಾಸವಿದ್ದು ಕೊಂಡು ಯಾವೆಲ್ಲಾ ಸವಾಲುಗಳನ್ನ ಎದುರಿಸಬೇಕಾಗಬಹುದು ಅನ್ನೋದೆಲ್ಲವೂ ನನ್ನ ಅರಿವಿಗೂ ಇದೆ.. ಅಂತಹಾ ಎಷ್ಟೊಂದು ಸಮಸ್ಯೆ ಸವಾಲು ತೊಂದರೆಗಳ ಹೊರತಾಗಿಯು ನೀವೆಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಾ…
ಪ್ರಸ್ತುತ ಈ ಭಾರೀಯ ನನ್ನ ಭೇಟಿ ಹಲವರ ಮನಸ್ಸುಗಳಿಗೆ ಬೇಸರ ಮೂಡಿಸಿರುತ್ತದೆ. ಯಾಕೆಂದ್ರೆ ಎಂದಿನಂತೆ ಈ ಸಲವೂ ಮೆಗಾ ಸಮಾರಂಭ ನಡೆಸುವ ಸಲಹೆಗಳು ಕೇಳಿಬಂದಿದ್ದವು.. ಆದ್ರೆ , ಅವರ ಸಲಹೆಗಳಿಗೆ ಪ್ರತೀಕ್ರಿಯಿಸುತ್ತಲೇ ನಾನು ಒಂದು ಮಾತನ್ನು ಸ್ಪಷ್ಟಪಡಿಸಿದ್ದೆ. ಈ ಸಲದ ನನ್ನ ಭೇಟಿ ಕಳೆದ ಸಲ ನನ್ನ ಕಾರ್ಯಕ್ರಮಕ್ಕಾಗಿ ದುಡಿದ ಇಲ್ಲಿನ ನೂರಾರು ಭಾರತೀಯರಿಗಾಗಿ. ಅವ್ರು ನನಗಾಗಿ ಸಮಯವನ್ನು ಮೀಸಲಿಸಿರಿದ್ದರು. ಅವರ ಹಣವನ್ನು ಖರ್ಚುಮಾಡಿದ್ದರು, ಅವರ ಕಾರ್ಯಕಲಾಪಗಳನ್ನು ನನಗಾಗಿಯೇಂದೇ ಬದಲಾಯಿಸಿಕೊಂಡಿದ್ದರು.. ಅಲ್ಲದೇ ನನ್ನ ಸಮಾರಂಭಕ್ಕಾಗಿ ಪೂರ್ವಭಾವಿಯಾಗಿ ಅವಿರತವಾಗಿ ದುಡಿದಿದ್ರು.. ಹಾಗಾಗಿ ಈ ಸಲ ನಾನು ಅವತ್ತು ನನಗಾಗಿ ದುಡಿದವರನ್ನೂ ಭೇಟಿಯಾಗುತ್ತೇನೆ ಎಂದಿದ್ದೆ.. ನನ್ನ ಅದೃಷ್ಟ.. ನಾನು ಅವರೆನ್ನೆಲ್ಲಾ ಭೇಟಿಯಾಗುವ ಅವಕಾಶ ನನಗಿವತ್ತು ಸಿಕ್ಕಿದೆ.. ಸ್ನೇಹಿತರೇ ನಾನಿವತ್ತು ಇಲ್ಲಿ ಮಿನಿ ಯುಎಸ್ಎಯ ಜೊತೆಜೊತೆಗೆ ಮಿನಿ ಇಂಡಿಯಾವನ್ನು ಕೂಡ ನೋಡುತ್ತಿದ್ದೇನೆ..
ಬಹುತೇಕ ಭಾರತದ ಎಲ್ಲಾ ರಾಜ್ಯಗಳ ಪ್ರಜೆಗಳು ಇಲ್ಲಿದ್ದೀರಾ.. ಹಾಗೇ ಅಮೆರಿಕಾದ ಬಹುತೇಕ ಎಲ್ಲಾ ರಾಜ್ಯಗಳ ಪ್ರಜೆಗಳು ಕೂಡ ನೀವು….ಯಾವಾಗ್ಲೇ ಆಗಲಿ, ಏಂತಹುದೇ ಸ್ಥಿತಿಯಲ್ಲಿರಲಿ, ಅದೆಂತಹುದೇ ಕೆಲಸದಲ್ಲಿ ನೀವು ತೊಡಗಿಕೊಂಡಿರಲಿ ಯಾರೊಬ್ಬರೂ ಕೇಳೋದಿಲ್ಲಾ ಯಾವ ಸ್ಥಿತಿಯಲ್ಲಿ ನೀವು ದೇಶ ಬಿಟ್ಟು ಬರುವಂತಾಯ್ತು ಅನ್ನೋದನ್ನು ಅಲ್ಲವೇ.. ಆದ್ರೇ, ಮಾನ್ಯರೆ,, ಭಾರತದಲ್ಲಿ ಏನಾದ್ರೂ ಒಳ್ಳೆಯ ಕಾರ್ಯಗಳು ನಡೆದ್ರೇ ಮೊದ್ಲು ನೀವು ಸಂತೋಷ ಪಡುತ್ತೀರಾ.. ಮತ್ತು ನಿಮ್ಮ ಆ ಸಂತೋಷಕ್ಕೆ ಪಾರವೇ ಇರೋದಿಲ್ಲ.
ಅದೇ , ಎಲ್ಲಾದ್ರೂ ಏನಾದ್ರೂ ಕೆಟ್ಟದಾದ್ರೂ ನಿಮ್ಮ ಕಾಳಜಿ ಯಾವ ಮಟ್ಟಿಗೆ ಇರುತ್ತದೆ ಅಂದರೆ ಅಂತಾ ಘಟನೆಗಳಿಂದ ನೀವು ನಿದ್ರೆಯನ್ನೂ ಕಳೆದುಕೊಳ್ಳುತ್ತೀರಾ…ಇದಕ್ಕೆ ಕಾರಣ ಏನು ಗೊತ್ತಾ.. ನಿಮ್ಮಮ್ಮ ಹೃದಯಗಳು ಭಾರತ ಮುಂದುವರಿಯಲಿ, ಭಾರತ ಅಭಿವೃದ್ಧಿಯಾಗಲಿ ಅನ್ನೋದನ್ನು ಹೃದಯಂತಾರಳದಿಂದ ಹಂಬಲಿಸುತ್ತಿದೆ. ಮತ್ತದಕ್ಕಾಗಿ ನಿರೀಕ್ಷಿಸುತ್ತಲೇ ಇರುತ್ತದೆ
ನಾನು ನಿಮಗೆ ಭರವಸೆಯನ್ನೂ ನೀಡುತ್ತೇನೆ.. ನೀವು ಕಂಡಂತ ಕನಸುಗಳು ನಿಮ್ಮ ಕಣ್ಣ ಮುಂದೆಯೇ ನನಸಾಗಲಿವೆ…ಮತ್ತದಕ್ಕೆ ಕಾರಣವೂ ಸುಲಭವಾಗಿದೆ.. ಭಾರತದಲ್ಲಿರುವಂತಃ ಜನರೇ ಈ ಅಮೆರಿಕಾದಲ್ಲೂ ಇರುವುದು… ಆದ್ರೆ ಯಾವಾಗ ಭಾರತೀಯರ ಶಕ್ತಿ ಸಾಮರ್ಥ್ಯಗಳು ಸರಿಯಾದ ಸುಶಕ್ತವಾದ ವಾತಾವರಣವನ್ನೂ ಪಡೆದುಕೊಳ್ಳುತ್ತದೋ ,, ಕೇವಲ ನೀವಷ್ಟೆ ಅಭಿವೃದ್ಧಿ ಹೊಂದೋದಿಲ್ಲ.. ಬದಲಾಗಿ ಈ ಪ್ರಕ್ರೀಯೆಗಳ ಮೂಲಕ ಯುಎಸ್ಎ ರಾಷ್ಟ್ರವನ್ನು ಮತ್ತಷ್ಟು ಶ್ರೀಮಂತಗೊಳಿಸುವಲ್ಲಿ ನಿಮ್ಮದೇ ವಿಶೇಷ ಪಾತ್ರವನ್ನೂ ನೀವು ಹೊಂದುತ್ತೀರಾ..
ಭಾರತೀಯ ಬುದ್ದಿಶಕ್ತಿ ಯಾವಾಗ ಸ್ಪೂರ್ತಿದಾಯಕ ವಾತಾವರಣನ್ನೂ ಯುಎಸ್ಎ ನಲ್ಲಿ ಸಾಧಿಸಿತ್ತೋ ಅವತ್ತಿಂದ್ನಲೇ ಇಲ್ಲಿನ ಭಾರತೀಯರು ಎಲ್ಲರಂತೇ ಬೆಳದರು ಮತ್ತು ತಮ್ಮೊಂದಿಗೆ ಯುಎಸ್ಎ ಯನ್ನು ಕೂಡ ಶ್ರೀಮಂತಗೊಳಿಸಿದರು…ನಿಮ್ಮಂತೆ 125 ಕೋಟಿ ಬುದ್ದಿವಂತ ಹಾಗೂ ಶಕ್ತ ಭಾರತೀಯರು ಭಾರತದಲ್ಲಿದ್ಧಾರೆ.. ಅವರು ಸ್ಪೂರ್ತಿದಾಯಕ ಅವಕಾಶಗಳ ಸನ್ನಿವೇಶದಿಂದಲೇ ನಿಮ್ಮ ಪ್ರಪಂಚ ಹೇಗೆಲ್ಲಾ ಬದಲಾಯಿಯತೋ ಹಾಗೇ ಭಾರತದಲ್ಲಿ ಹಿಂದುಳಿದಿರುವ ಭಾರತೀಯರು ಸ್ಪೂರ್ತಿದಾಯಕ ಹಾಗೂ ಪೂರಕವಾದವಾದ ವಾತಾವರಣವನ್ನ ಪಡೆದುಕೊಳ್ಳುತ್ತಿದ್ಧಾರೆ. ಮತ್ತು ನೀಮಗೆ ಸ್ಪಷ್ಟವಾಗಿ ಕಾಣಿಸಿಯೇ ಕಾಣಿಸುತ್ತದೆ.. ಎಷ್ಟು ಬೇಗ 125 ಕೋಟಿ ಭಾರತೀಯರು ಭಾರತವನ್ನ ಹೇಗೆಲ್ಲಾ ಬದಲಾಯಿಸುತ್ತಾರೆ ಅನ್ನೋದು..
ನನಗೆ ನನ್ನ ದೇಶದಲ್ಲಿ ಒಂದು ವಿಚಾರ ತುಂಬಾ ಸ್ಪಷ್ಟವಾಗಿ ಅನುಭವಕ್ಕೆ ಬಂದಿದೆ. ಅದೇನಂದ್ರೆ, ಪ್ರತಿಯೊಬ್ಬ ಭಾರತೀಯನೂ ತನ್ನ ದೇಶಕ್ಕಾಗಿ ಏನನ್ನಾದ್ರೂ ಮಾಡಲು ಅಥವಾ ದೇಶದ ಅಭಿವೃದ್ಧಿಗಾಗಿ ಏನನ್ನಾದ್ದರೂ ಕೊಡುಗೆ ನೀಡಲು ಬಯಸುತ್ತಾನೆ..ಅಲ್ಲದೇ ಏನನ್ನಾದ್ರೂ ಮಾಡಬೇಕು ಅಥವಾ ಮತ್ತೊಬ್ಬರ ಜೊತೆಯಾಗಿ ಕೈ ಜೋಡಿಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾನೆ.. ಮತ್ತು ಯಾರೋ ಒಬ್ಬ ಈ ಪರಿಹಾರ, ಅಟಕ್ ನಿಂದ ಕಟಕ್ ನವರೆಗೂ ಕಾಶ್ಮೀರದಿಂದ ಕನ್ಯಾಕುಮಾರಿವೆರೆಗೂ ನೆಲಸಿರುವ 125 ಕೋಟಿ ಭಾರತೀಯರಿಗೆ ಪರಿಹಾರ ಆಗುತ್ತದೆ ಅಂತಾ ಯೋಚಿಸುತ್ತಾನೆ ಅಂತಾದರೇ,, ಸ್ನೇಹಿತರೇ , ನಿಮಗೆ ನಾನು ಭರವಸೆಯನ್ನೂ ನೀಡುತ್ತೇ ನೆ…ನಮ್ಮ ರಾಷ್ಟ್ರ ಈ ಮೊದಲು ಹಿಂದೆಂದೂ ಕಂಡು ಕೇಳಿರದಂತ ಹಂತದೆಡೆಗೆ ಹೆಜ್ಜೆ ಇಡುತ್ತಾ ಸಾಗುತ್ತದೆ….
ಹಿಂದಿನ ಸರ್ಕಾರ ಅಧಿಕಾರದಿಂದ ಕಳೆದುಕೊಂಡಿದ್ದು , ಜನರು ಆ ಸರ್ಕಾರವನ್ನು ಬದಲಾವಣೆ ಮಾಡಿದ್ದು ತಮಗೆ ಬೇಕಾಗಿದ್ದನ್ನೂ ಆ ಸರ್ಕಾರಗಳು ಕೊಡಲಿಲ್ಲ ಅನ್ನೋ ಕಾರಣಕ್ಕಲ್ಲ.. ಮುಖ್ಯ ಕಾರಣ ಜನರ ಅತೃಪ್ತಿಯಾಗಿರಲಿಲ್ಲ..ಯಾಕೆಂಧ್ರೆ ಭಾರತೀಯರು ವಸ್ತುಸ್ತಿತಿಯ ಸದ್ಗುಣಗಳನ್ನ ಅಂರ್ತಗತವಾಗಿಯೇ ನಂಬಿರುತ್ತಾರೆ.. ಒಳ್ಳಯತನದ ಹಾಗೂ ಒಳ್ಳಯ ವಿಷಯಗಳನ್ನ ನಂಬಿರುತ್ತಾರೆ.. ಬೇಕಾದ್ರೆ ನೋಡಿ ಯಾರಾದ್ದಾದ್ರೂ ಮನೆಯಲ್ಲಿ ಹಿರಿಮಗ ಯಾವುದೋ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.. ಏನ್ ಹೇಳುತ್ತಾರೆ ಹೇಳಿ …ದೇವರ ಇಚ್ಛೆ ..ಇದು ನಮ್ಮ ಚಿಂತನೆ ಮೂಲ ಮಟ್ಟವಾಗಿದೆ..
ಭಾರತದಲ್ಲಿ ಸರ್ಕಾರಗಳು ಬದಲಾವಣೆ ಆಗುತ್ತವೇ ಅಂದರೇ ಅದಕ್ಕೆ ಕೇವಲ ಒಂದೇ ಕಾರಣ .. ಭಷ್ಟ್ರಚಾರ ಮತ್ತು ಅಪ್ರಾಮಾಣಿಕತೆ… ನನ್ನ ದೇಶದ ನಾಗರಿಕ ಇದನ್ನು ದ್ವೇ಼ಷಿಸುತ್ತಾನೆ.. ಮತ್ತು ಪ್ರಶ್ನಿಸುತ್ತಾನೆ.. ಸ್ಬೇಹಿತರೇ , ನನಗೆ ಹೆಮ್ಮೆ ಏನಿಸುತ್ತದೆ ನಿಮಗೆ ಈ ವಿಷಯ ತಿಳಿಸಲು ..ಕಳೇದ ಮೂರು ವರ್ಷಗಳಲ್ಲಿ ಒಂದೇ ಒಂದು ಸಣ್ಣ ಆರೋಪ ಕೂಡ ನಮ್ಮ ಸರ್ಕಾರದ ಮೇಲಾಗಲಿ ನನ್ನ ಮೇಲಾಗಲಿ ಕೇಳಿಬಂದಿಲ್ಲ… ಮತ್ತು ಸರ್ಕಾರದ ಒಳ ವ್ಯವಸ್ಥೆಯನ್ನೇ ಸರಿಪಡಿಸುವತ್ತ ಹೆಜ್ಜೆ ಹಾಕಿದ್ಧೇವೆ.. ಈ ಮೂಲಕ ಪ್ರಾಮಾಣಿಕತೆ ಅನ್ನೋ ಸರ್ವೆ ಸಾಮಾನ್ಯ ಪ್ರಕ್ರೀಯೆ ಆಗಬಲ್ಲದಿಉ.. ಮತ್ತು ಭ್ರಷ್ಟಾಚಾರವನ್ನು ತಡೆಯಲೂ ಎಲ್ಲಾ ಸಮಯದಲ್ಲೂ ನಾವು ವ್ಯವಸ್ಥೆಯೊಂದನ್ನೂ ರೂಪುಗೊಳಿಸಬೇಕಾದ ಅವಶ್ಯಕತೆಯೇ ನಮಗೆ ಬಾರದು..ವಿಶೇಷ ಅಂದ್ರೆ ಪಾರದರ್ಶಕತೆಯನ್ನು ತರುವಲ್ಲಿ ತಂತ್ರಜ್ಞಾನ ಬಹುಮುಖ್ಯ ಪಾತ್ರವಹಿಸುತ್ತಿದೆ.. ಮತ್ತು ನಾಯಕತ್ವದ ಸಿದ್ಧಾಂತಗಳಲ್ಲಿ ಸಮಗ್ರತೆಯನ್ನು ಮೂಡಿಸುತ್ತಿದೆ. ಹಾಗೂ ಜನಸಾಮಾನ್ಯನಿಂದ ಹಿಡಿದು ಪ್ರತಿಯೊಬ್ಬರು ಪ್ರಾಮಾಣಿಕ ದಾರಿಯಲ್ಲಿ ನಡೆಯುವಂತೆ ಪ್ರೇರಪಿಸುತ್ತದೆ..
ಯಾವೆಲ್ಲಾ ಲಾಭಾಂಶಗಳನ್ನು ಜನರು ಸರ್ಕಾರದಿಂದ ಪಡೆದುಕೊಳ್ತಿದ್ದಾರೋ ನಾವದನ್ನೂ ನೇರ ಪ್ರತಿಫಲ ವರ್ಗಾವಣೆಯ ಯೋಜನೆಯಡಿಯಲ್ಲಿ ತಂದಿದ್ದೇವೆ.. ಇದು ಸಾಧ್ಯವಾಗಲು ಕಾರಣವಾಗಿದ್ದು ತಂತ್ರಜ್ಞಾನದ ಸಹಾಯದಿಂದಾಗಿ.. ಈ ದೇಶದ ನಾಗರಿಕರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಜನಸಾಮಾನ್ಯರಿಗಾಗಿಯೇ ಎಂದು ಎಲ್ ಪಿಜಿ ಸಿಲಿಂಢರ್ ಮೇಲೆ ನಾವು ಸಬ್ಸಿಡಿಯನ್ನೂ ಒದಗಿಸುತ್ತಿದ್ದೇವೆ. ಇದರ ಮೂಲಕ ಆಥನ ಆರ್ಥಿಕ ವೆಚ್ಚ ಕಡಿಮೆಯಾಗಲಿ ಅನ್ನುವುದು ನಮ್ಮ ಉದ್ದೇಶವಾಗಿದೆ. ಅಲ್ಲದೇ ಇದ್ರಿಂದ ಉಳಿತಾಯವಾದ ಹಣವನ್ನು ಆತ ಆರೋಗ್ಯ , ಶಿಕ್ಷಣ ದಂತಃ ಕಾರಣಕ್ಕಾಗಿ ಬಳಕೆ ಮಾಡಿಕೊಳ್ಳಲಿ ಅನ್ನೋದು ಗುರಿಯಾಗಿದೆ/..ಆದರೆ ಈ ಸಬ್ಸಿಡಿಯನ್ನೂ ಈ ದೇಶದಲ್ಲಿ ಎಲ್ಲರಿಗೂ ನೀಡಲಾಗುತ್ತಿತ್ತು.. ಬಡವರಲ್ಲೇ ಕಡು ಬಡತನದಲ್ಲಿ ಬದುಕುತ್ತಿರುವುವರಿಂದ ಹಿಡಿದು ಶ್ರೀಮಂತರಲ್ಲೇ ಅತಿ ಶ್ರೀಮಂತರವರೆಗೂ ಪ್ರತಿಯೊಬ್ಬರಿಗೂ ಸಬ್ಸಿಡಿ ಸಹಿತ ಸಿಲಿಂಡರ್ ಸಿಗುತ್ತಿತ್ತು.. ಕೋಟಿ ಕೋಟಿ ರೂಪಾಯಿ ಸಂಪಾಧಿಸಿಸುವ ವ್ಯಕ್ತಿಯೊಬ್ಬ ಸಬ್ಸಿಡಿ ಸಹಿತ ಸಿಲಿಂಡರ್ ನ್ನು ಪಡೆದುಕೊಳ್ತಿದ್ದ..
ಹಾಗಾಗಿ ನಾನು ಜನರಲ್ಲಿ ಮನವಿಯೊಂದನ್ನ ಮಾಡಿದೆ… ಪ್ರಸ್ತಾಪವೊಂದನ್ನ ಇಟ್ಟೇ …ನೀವುಗಳು ಉಳ್ಳವರಾಗಿದ್ದಕೊಂಡ ಮೇಲೆ ನಿಮಗೆ ಎಲ್ ಪಿ ಜಿ ಸಿಲಿಂಡರ್ ನ ಸಬ್ಸಿಡಿಯನ್ನು ಪಡೆದುಕೊಳ್ಳುವ ಅವಶ್ಯಕತೆ ಇದೆಯಾ ಅಂತಾ ಪ್ರಶ್ನಿಸಿದೆ. ನಿಮ್ಮ ನಿತ್ಯದ ಖರ್ಚುಗಳಿಗೂ ಕಡಿಮೆಯಾಗಿರುವ , ನಿಮ್ಮ ಪಾಕೆಟ್ ಮನಿಗಿಂತಲೂ ಹೆಚ್ಚಿಲ್ಲದ ಸರಿಸುಮಾರು 1000-1500 ರಷ್ಟು ಪಡೆದುಕೊಳ್ಳುವ ಹಣದಿಂದ ಏನಾದರೂ ನಿಮಗೆ ಲಾಭ ಇದೆಯಾ..? ಪ್ರಯೋಜನ ಇದೆಯಾ ಅಂತಾ ಕೇಳಿದೆ.. ಅಷ್ಟೆ.. ಆಗಲೇ ನಾನು ಹೇಳಿದಂತೆ,, ಭಾರತವನ್ನು ಮುನ್ನಡೆಸುವಂತೆ ಭಾರತೀಯರು ಹೊಂದಿರುವ ಅಭೂತಪೂರ್ವ ವಿಶ್ವಾಸ ಎಷ್ಟರಮಟ್ಟಿಗೆ ಇದೆ ಅನ್ನೋದಕ್ಕೆ ಇದೊಂದು ಉದಾಹರಣೆಯಾಗಿತ್ತು.. ಇದೊಂದು ಉದಾಹರಣೆ ಸ್ನೇಹಿತರೇ 250 ಮಿಲಿಯನ್ ಗ್ರಾಹಕರಲ್ಲಿ ಸ್ನೇಹಿತರೇ,, 12.5 ಮಿಲಿಯನ್ ಕುಟುಂಬಗಳು ತಮ್ಮತಮ್ಮ ಎಲ್ ಪಿಜಿ ಸಬ್ಸಿಡಿಯನ್ನು ತ್ಯಜಿಸಿದರು.. ಸ್ನೇಹಿತರೇ ಮತ್ತೆ ಸಾರಿ ಸಾರಿ ಹೇಳಿದರು ಮೋದಿಜಿ ಯಾವಾಗ ನೀವು ಮನವಿ ಮಾಡಿಕೊಂಡರೋ ಅಂದಿನಿಂದಲೇ ನಾವು ಸಬ್ಸಿಡಿಯನ್ನು ಪಡೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟಿದ್ದೇವೆ ಅಂತಾ…
ಇದು ಈ ದೇಶದ ಸಾಮಾನ್ಯ ನಾಗರಿಕರನೊಬ್ಬ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸಬೇಕು ಅಂಥಾ ಹಂಬಲಿಸುತ್ತಿರುವುದಕ್ಕೇ ಸ್ಪಷ್ಟ ಸಾಕ್ಷಿಯಾಗಿದೆ. ಮತ್ತು ಮತ್ತು ಈ ಅಭಿವೃಧ್ಧಿಯ ಹಾದಿಯಲ್ಲಿ ಪಾಲ್ಗೊಳ್ಳುವುದಕ್ಕೆ ಆತ ಉತ್ಸುಕನಾಗಿದ್ದೇನೆ ಅನ್ನೋದಕ್ಕೆ ಉದಾಹರಣೆಯಾಗಿದೆ. ಇದೆಲ್ಲಾ ಒಂದ್ಕಡೆಯಾದ್ರೆ ಬಳಿಕ ನಾವೇನು ಮಾಡಿದ್ವಿ. ಗೊತ್ತಾ… ನಾವು ನಿರ್ಧರಿಸಿದೆವು.. ಅವರುಗಳು ತುಂಬು ಹೃದಯದಿಂದ ತ್ಯಜಿಸಿರುವ ಎಲ್ ಪಿಜಿ ಸಬ್ಸಿಡಿಯನ್ನು ಅವಶ್ಯಕತೆ ಇದ್ದವರಿಗೆ ,,ಇಂದಿಗೂ ಕಟ್ಟಿಗೆ ಗಳನ್ನು ಬಳಸಿ ಅಡುಗೆ ಮಾಡ್ತೀರುವ ಕಡು ಬಡವರಿಗೆ ನೀಡೋಣ ಅನ್ನೋದನ್ನು ನಿರ್ಧರಿಸಿದೆವು.. ಗೊತ್ತಾ ಆ ಕಡುಬಡವರು ಬೆಳಗ್ಗೆ ಮೂರು ನಾಲ್ಕು ಗಂಟೆ ಜಾವಕ್ಕೆ ಏಳುತ್ತಾರೆ.. ಮತ್ತು ಊರೆಲ್ಲಾ ಅಲೆದು ಕಟ್ಟಿಗಳನ್ನು ಸಂಗ್ರಹಿಸಿ ತಂದು ಬಳಿಕ ಅಡುಗೆ ಮಾಡಿ ನಂತರ ಕೆಲಸಕ್ಕೆ ಹೋಗುತ್ತಾರೆ…
ವಿಜ್ಙಾನಿಗಳು ಹೇಳುತ್ತಲೇ ಇರುತ್ತಾರೆ.. ಕಟ್ಟಿಗೆಯಿಂದ ಅಡುಗೆ ಮಾಡುವಾಗ ಏಳುವ ಹೊಗೆಯ ಸೇವನೆ ನಾನೂರು ಸಿಗರೇಟ್ಗಳ ಹೊಗೆಗೆ ಸಮನಾಗಿರುತ್ತದೆ ಅನ್ನೋದನ್ನ ಹೇಳುತ್ತಿರುತ್ತಾರೆ.. ಹಾಗಾದ್ರೆ, ಯಾವ ತಾಯಿಂದರೂ ಅಂತಹ ಕಟ್ಟಿಗೆ ಒಲೆಗಳಲ್ಲಿ ನಿತ್ಯ ಅಡುಗೆ ಮಾಡುತ್ತಾ,, ಅದ್ರ ಹೊಗೆಯನ್ನೂ ಕುಡಿಯುತ್ತಿದ್ಧಾರೋ ಅವರುಗಳು ನಿತ್ಯ ನಾನೂರು ಸಿಗರೇಟ್ನಿಂದ ಹೊರಬರುವಂತಃ ಹೊಗೆಯನ್ನು ಕುಡಿಯುತ್ತಿದ್ಧಾರೆ ಅಂತಾ ಆಯ್ತಲ್ವೇ.. ಅಷ್ಟೆ ಯಾಕೆ ಕಟ್ಟಿಗೆ ಒಲೆಗಳ ಈ ಹೊಗೆ ಮನೆಯಲ್ಲಿ ಆಡುತ್ತಿರುವ ಸಣ್ಣ ಮಕ್ಕಳ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದ.. ನೀವು ಅಂತಃ ತಾಯಿಯ ಬೌತಿಕ ಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ.. ಅಂತಃ ಮಕ್ಕಳ, ದಿನಕ್ಕೆ ನಾನೂರು ಸಿಗರೇಟ್ಗಳಷ್ಟು ಹೊಗೆಯನ್ನು ಸೇವಿಸುತ್ತಿರುವ ಅಂತಾ ಪುಟ್ಟ ಮಕ್ಕಳ ಸ್ಥಿತಿಯನ್ನು ಒಮ್ಮೆ ಒಮ್ಮೆ ಊಹಿಸಿಕೊಳ್ಳಿ
ಯಾವಾಗ ನನ್ನ ಕನಸು ಆರೋಗ್ಯಯುತ ಭಾರತವಾಗಿರುತ್ತೋ.. ಆಗ ದೇಶದ ಪ್ರತಿ ತಾಯಂದಿರು ಹಾಗೂ ಮಕ್ಕಳು ಆರೋಗ್ಯಯುತವಾಗಿರೋದು ಅಷ್ಟೆ ಮುಖ್ಯ ಹಾಗೂ ಪ್ರಾಮುಖ್ಯತೆ ಪಡೆದುಕೊಳ್ಳುವ ವಿಷಯವಾಗಿರುತ್ತದೆ.. ಹಾಗಾಗಿ ನಾನು ಒಂದು ಸವಾಲನ್ನೂ ಸ್ವೀಕರಿಸಿದೆ.. ಯಾವ 12.5 ಮಿಲಿಯನ್ ಮಂದಿ ಭಾರತೀಯ ನಾಗರಿಕರು ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ತಮ್ಮ ಎಲ್ ಪಿಜಿ ಸಬ್ಸಿಡಿಯನ್ನು ತ್ಯಜಿಸಿದರೋ ಆ ಸಬ್ಸಿಡಿಯನ್ನು ಬಡವರಿಗೆ ವರ್ಗಾವಣೆ ಮಾಡಬೇಕು ಅಂತಾ ನಿರ್ಧಾರವನ್ನು ಕೈಗೊಂಡೆ.. ಇಷ್ಟಕ್ಕೆ ಮುಗಿಯಲಿಲ್ಲ…ಯಾರು ತಮ್ಮ ಎಲ್ ಪಿಜಿ ಸಬ್ಸಿಡಿಯನ್ನು ತ್ಯಜಿಸಿದರೋ ಅವ್ರಿಗೆ ಒಂದು ಪತ್ರಗಳು ತಲುಪಿದವು..ನೀವುಗಳು ನಿಮ್ಮ ಸ್ವಇಚ್ಛಯಿಂದ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ ಎಲ್ ಪಿಜಿ ಸಬ್ಸಿಡಿಯನ್ನು ಗುಜರಾತ್ ನ ಜಿಲ್ಲೆಯಲ್ಲಿ ತ್ಯಜಿಸಿಸಿರುತ್ತಿರಾ.. ಮತ್ತು ನೀವು ತ್ಯಜಿಸಿರುವ ಸಬ್ಸಿಡಿಯನ್ನು ಅಸ್ಸಾಂನ ಇಂತಹಾ ಜಿಲ್ಲೆಯಲ್ಲಿನ ನಿವಾಸಿ ಇಂತಹಾ ವ್ಯಕ್ತಿಗೆ ನೀಡಲಾಗಿದೆ ಅನ್ನೋದನ್ನು ತಿಳಿಸುವುದುಕ್ಕೆ ಸಂತೋಷ ಪಡುತ್ತೇವೆ ಅನ್ನೋ ಸಂದೇಶವನ್ನು ಹೊಂದಿರುವ ಪತ್ರವನ್ನು ತಲುಪಿಸುತ್ತೇವೆ.. ಇದು ಸುಲಭದ ಕೆಲಸವಾಗಿರಲಿಲ್ಲ ಕಠಿಣ ಪರಿಶ್ರಮವನ್ನು ಬೇಡುವ ಕೆಲಸವಾಗಿತ್ತು./ ಆದ್ರೂ ಈ ಪಾರದರ್ಶಕತೆ ಹೊಸ ವಿಶ್ವಾಸವನ್ನೂ ಮೂಡಿಸುವಲ್ಲಿ ಸಫಲವಾಯಿತು..
ನೀವು ಭಾರತದಲ್ಲಿದ್ದಾಗ ನಿಮ್ಮ ಗಮನಕ್ಕೆ ಬಂದೇ ಬಂದಿರುತ್ತದೆ.. ಭಾರತದಲ್ಲಿ ಒಂದು ಎಲ್ ಪಿಜಿ ಸಿಲಿಂಡರ್ ನ್ನು ಪಡೆಯೋದು ಎಷ್ಟು ಕಷ್ಟ ಅನ್ನೋದು ನೀವು ಗಮನಿಸಿಯೇ ಇರುತ್ತೀರಾ.. ಸ್ಥಳೀಯ ರಾಜಕಾರಣಿಗಳ ಬಳಿ ಜನ ಸುತ್ತುತ್ತಲೇ ಇರಬೇಕಾಗಿತ್ತು ಕೇವಲ ಒಂದೇ ಒಂದು ಗ್ಯಾಸ್ ಸಂಪರ್ಕಕ್ಕಾಗಿ.. ಈ ನಿಟ್ಟಿನಲ್ಲಿ ನಾವೊಂದು ಸವಾಲನ್ನು ಕೈಗೆತ್ತಿಕೊಂಡೆವು.. ಕನಿಷ್ಟ ಮುಂಬರುವ ಮೂರು ವರ್ಷಗಳಲ್ಲಿ ಐವತ್ತು ಮಿಲಿಯನ್ ಗ್ರಾಸ್ ಸಂಪರ್ಕವನ್ನು ಬಡ ಜನರಿಗಾಗಿ ಒದಗಿಸಬೇಕು ಅಂತಾ ಸಂಕಲ್ಪ ಮಾಡಿಕೊಂಡೆವು.. ಪರಿಣಾಮ ಕಣ್ಮುಂದೆಯೇ ಇದೆ.. ಕೇವಲ 11-12 ತಿಂಗಳಲ್ಲಿ ನಾವು ಸರಿಸುಮಾರು 10 ಮಿಲಿಯನ್ ಕುಟುಂಬಗಳಿಗೆ ಗ್ಯಾಸ್ ಸಂಪರ್ಕವನ್ನು ಕಲ್ಪಿಸಿದೆವು..
ಮತ್ತು ನಾವು ಎಲ್ ಪಿಜಿ ಸಬ್ಸಿಡಿಯನ್ನೂ ನೀಡುವ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದೆವು.. ಮೊದಲೆಲ್ಲಾ ಮಾರಾಟಗಾರರು ಸಬ್ಸಿಡಿಯನ್ನು ಪಡೆದುಕೊಳ್ಳುತ್ತಿದ್ದರು. ಆದರೇ ಆ ವ್ಯವಸ್ಥೆಗೆ ನಾವು ಸಂಪೂರ್ಣವಾಗಿ ಬ್ರೇಕ್ ಹಾಕಿದೆವು.. ಮತ್ತು ಈಗ ಸಂಪೂರ್ಣವಾಗಿ ಗ್ಯಾಸ್ ಸಬ್ಸಿಡಿ ನೇರವಾಗಿ ಗ್ರಾಹಕನ ಖಾತೆಗೆ ತಲುಪವಂತಃ ವ್ಯವಸ್ಥೆಯನ್ನು ನಿರ್ಮಾಣ ಮಾಡಿದೆವು.. ಕೇವಲ ಆರು ತಿಂಗಳ ಹಿಂದೇ ನಾನು ಈ ದೇಶ ಬಡವರು ಹಾಗೂ ಸಾಮಾನ್ಯ ನಾಗರಿಕನೊಬ್ಬ ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಅಭಿಯಾನವೊಂದನ್ನೂ ಆರಂಭಿಸಿದೆ.. ದೇಶದ ಶೇಕಡಾ 40 ರಷ್ಟು ಮಂದಿ ಭಾರತೀಯರು ಯಾವುದೇ ಭ್ಯಾಂಕ್ ಖಾತೆಯನ್ನು ಹೊಂದಿರಲಿಲ್ಲ .. ಮತ್ತೀಗ ಅವರುಗಳೆಲ್ಲಾ ಬ್ಯಾಂಕ್ ಖಾತೆಯನ್ನು ತೆರೆದರು ಆದ್ರೆ ಅವರ ಖಾತೆಯಲ್ಲಿ ಒಂದೇ ಒಂದು ರೂಪಾಯಿ ಹಣ ಇರಲಿಲ್ಲ.. ಅದಕ್ಕಾಗಿ ನಮ್ಮನ್ನ ಆರೋಪಿಗಳನ್ನಾಗಿ ಕೂಡ ಮಾಡಲಾಯ್ತು ..ನಮ್ಮನ್ನೂ ದೂರಲಾಯ್ತು.. ಆದ್ರೆ ಯಾವಾಗ ನಾವು ನೇರ ಪ್ರತಿಫಲ ವರ್ಗಾವಣೆಯ ಯೋಜನೆಯನ್ನು ಜಾರಿಗೆ ತಂದವೋ ಎಲ್ ಪಿಜಿ ಸಬ್ಸಿಡಿಯನ್ನು ಅವರುಗಳು ತೆರದಿರುವ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವ ಯೋಜನೆಯನ್ನು ನಾವು ತಂದೆವೋ ..ನೀವು ಆಶ್ಚರ್ಯ ಪಡುತ್ತೀರಾ.. ಈ ನೇರ ಪ್ರತಿಫಲ ವನ್ನು ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುವ ಯೋಜನೆ ಜಾರಿಗೆ ತಂದ ಬಳಿಕ 30 ಮಿಲಿಯನ್ ನಷ್ಟು ಗ್ರಾಹಕರು ಯಾವುದೇ ಲೆಕ್ಕಪತ್ರಗಳಿಗೆ ಸಿಗುತ್ತಿರುತ್ತಿಲ್ಲ ಅನ್ನೋದನ್ನು ನಾವುಗಳು ಪತ್ತೆಹಚ್ಚಲು ಸಾಧ್ಯವಾಯಿತು.. ಅಲ್ಲಿಯವರೆಗೂ ಯಾರಿಗೂ ಗೊತ್ತಿರಲಿಲ್ಲ. ಸಾವಿರಾರು ಕೋಟಿ ರೂಪಾಯಿಗಳಷ್ಟು ಸಬ್ಸಿಡಿ ಯಾರಾ ಪಾಲಾಗ್ತಿದೆ ಅನ್ನೋದರ ಸತ್ಯ..ಒಂದೇ ಒಂದು ಸಿಂಪಲ್ ಕೆಲಸದ ಮೂಲಕ 30 ಮಿಲಿಯನ್ ಮಿಥ್ಯ ಗ್ರಾಹಕರನ್ನ ಸಬ್ಸಿಡಿಯಿಂದ ಹೊರಗಾಕಲಾಯ್ತು ಮತ್ತು ಅದರ ಮೂಲಕ ಕೇಂದ್ರ ಸರ್ಕಾರಕ್ಕೆ ಉಳಿತಾಯವಾದ ಹಣವನ್ನು ಸದ್ಯ ದೇಶದ ಹಳ್ಳಿಹಳ್ಳಿಗಳಲ್ಲಿ ಕಾಲೇಜು, ಶಾಲೆಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. ತಂತ್ರಜ್ಞಾನ ಅನ್ನೋದು ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಬಹುಮುಖ್ಯ ಕಾರ್ಯ ನಿರ್ವಹಿಸುತ್ತಿದೆ ಮತ್ತು ದೇಶದ ಯವಜನಾಂಗಕ್ಕೆ ತಂತ್ರಜ್ಞಾನದ ಶಕ್ತಿ ಎಷ್ಟು ಅನ್ನೋದು ಸ್ಪಷ್ಟವಾಗಿ ತಿಳಿದಿದೆ..
ಇವತ್ತು ಭಾರತ ತನ್ನ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತಿದೆ.. ತಂತ್ರಜ್ಞಾನದ ತಳಹದಿಯ ಮೇಲೆ ಇದು ಕಾರ್ಯಸಾದುವಾಗುತ್ತಿದೆ.
ಭಾರತದ ಬಗ್ಗೆ ತಿಳಿದುಕೊಂಡಿರುವುವರಿಗೆ ಒಂದು ಅಂಶ ಸ್ಪಷ್ಟವಾಗಿರುತ್ತಿದೆ.. ಮತ್ತದನ್ನೂ ಅವರುಗಳು ಗುರುತಿರಿಸಿರುತ್ತಾರೆ.. ಯಾವಾಗೆಲ್ಲಾ ಬಿತ್ತನೇ ಸಮಯ ಎದುರಾಗುತ್ತದೋ ಆವಾಗೆಲ್ಲಾ ರಸಗೊಬ್ಬರಗಳನ್ನು ರೈತರು ಪಡೆದುಕೊಳ್ಳುವುದು ಅತೀ ಕಷ್ಟದಲ್ಲಿ ಕಷ್ಟವಾಗುತ್ತಿತ್ತು ನಾನು ಮುಖ್ಯಮಂತ್ರಿಯಾಗಿದ್ಧಾಗ ಸ್ವತಃ ನಾನೇ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆಯುತ್ತಿದ್ದೆ, ನಮ್ಮಲ್ಲಿ ರಸಗೊಬ್ಬರಗಳ ಕೊರತೆಯಿದ್ದು ಯುರಿಯಾದ ಕೊರತೆಯ ವಿಪರೀತವಾಗಿದೆ.. ರೈತರು ರಸಗೊಬ್ಬರಗಳನ್ನು ಖರೀದಿಸಲಾಗದೇ ಪರಿತಪಿಸುತ್ತಿದ್ಧಾರೆ ಅಂತೆಲ್ಲಾ ಪತ್ರಗಳನ್ನ ಬರೆದಿದ್ದೇನೆ. ಯಾವಾಗ ನಾನು ಪ್ರಧಾನಮಂತ್ರಿಯಾದನೋ ಆಗ ನನಗೆ ದೇಶದ ಹಲವು ಮುಖ್ಯಮಂತ್ರಿಗಳು ಪತ್ರ ಬರೆಯೋಕೆ ಶುರುಮಾಡಿದರು… ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಹಲವು ಪತ್ರಗಳನ್ನು ಸ್ವೀಕರಸಬೇಕಾಗಿ ಬಂದಿತು. ಅಧಿಕಾರಕ್ಕೇ ಬಂದ ಮೊದಲ ತಿಂಗಳಲ್ಲೇ ಹಲವು ಪತ್ರಗಳು ನನ್ನ ಕೈ ಸೇರಿದವು. ನೀವು ಕೇಳಿ ಸಂತೋಷ ಪಡುತ್ತೀರಾ.. ಕಳೇದ ಎರಡು ವರ್ಷಗಳಲ್ಲಿ ಕೇವಲ ಒಬ್ಬನೇ ಒಬ್ಬ ಮುಖ್ಯಮಂತ್ರಿ ನಮಗೆ ರಸಗೊಬ್ಬರದ ಕೊರತೆ ಇದೆ.. ಯೂರಿಯಾ ಸಿಗುತ್ತಿಲ್ಲ ಪತ್ರ ಬರೆದಿಲ್ಲಾ.. ಅಷ್ಟೆಯಾಕೆ ಈಗ ದೇಶದಲ್ಲಿ ಯೂರಿಯಾದ ಕೊರತೆಯೇ ಇಲ್ಲ.. ಮೊದಲೆಲ್ಲಾ ರಾತ್ರಿಯಿಡಿ ಆಕಾಶದಡಿಯಲ್ಲಿ ಜನರು ಸರತಿಸಾಲಿನಲ್ಲಿ ಮಲಗಿದ್ದು ಬೆಳಗ್ಗೆ ಅಂಗಡಿ ತೆರೆಯುವರೆಗೂ ಕಾಯಬೇಕಾದ ಪರಿಸ್ಥಿತಿ ಇರುತ್ತಿತ್ತು ಆದರೇ ಈ ಅಂತಹಾ ಸನ್ನಿವೇಶವೇ ಮಾಯವಾಗಿದೆ
ನಾವೇನಾದ್ರೂ ಯೂರಿಯಾ ಫ್ಯಾಕ್ಟರಿಗಳನ್ನ ರಾತೋರಾತ್ರಿ ನಿರ್ಮಾಣ ಮಾಡಿದ್ವಾ.. ಖಂಡಿತ ಲ್ಲಾ.. ಹಾಗಾದ್ರೆ, ರಾತೋರಾತ್ರಿ ಯೂರಿಯಾ ಉತ್ಪಾದನೆಯನ್ನಾದರೂ ಹೆಚ್ಚಿಸಿದ್ದೇವಾ..ಅದು ಕೂಡ ಲ್ಲ.. ಹಾಗಾದ್ರೆ ಏನು ಮಾಡಿದ್ವಿ.. ಸಿಂಪಲ್.. ಯೂರಿಯಾಗೆ ಬೇವನ್ನೂ ಸೇರಿಸಿದ್ದೇವು.. ಹೇಗಿದ್ದರೂ ವ್ಯರ್ಥವಾಗುವ ಬೇವಿನ ಎಣ್ಣೆಯನ್ನು ನಾವು ಯೂರಿಯಾದೊಂದಿಗೆ ಕಲೆಸಿದವು.. ನಾವು ಮಾಡಿದ್ದು ಇಷ್ಟೆ.. ಈ ಹಿಂದೇ ಏನಾಗುತ್ತಿತ್ತು ಅಂದರೆ,, ಫ್ಯಾಕ್ಟರಿಗಳಲ್ಲಿ ಉತ್ತತ್ತಿಯಾಗ್ತಿದ್ದ ಯೂರಿಯಾ ಅತಿ ಕಡಿಮೆ ದರದಲ್ಲಿ ಫ್ಯಾಕ್ಟರಿಯಿಂದ ಹೊರಬರುತ್ತಿತ್ತು. ಆದ್ರೆ ಅದು ಕೆಮಿಕಲ್ ಫ್ಯಾಕ್ಟರಿಗಳಿಗೆ ಹೋಗುತ್ತಿತ್ತು.. ರೈತರ ಹೊಲಗಳಿಗೆ ಹೋಗುತ್ತಿರುಲಿಲ್ಲ.. ಪ್ರಸ್ತುತ ರೈತರಿಗೆ ಸಿಗುತ್ತಿರುವ ಯೂರಿಯಾ ಅತಿ ಕಡಿಮೆ ದರವನ್ನು ಹೊಂದಿದೆ. ಮತ್ತಿದು 80 ಸಾವಿರ ಕೋಟಿ ರೂಪಾಯಿ ಸಬ್ಸಿಡಿಯ ಹೊರೆಯನ್ನು ಪ್ರತಿವರ್ಷ ತಂದಿಡುತ್ತಿತ್ತು.. ಇತ್ತ ಕೆಮಿಕಲ್ ಫ್ಯಾಕ್ಟರಿಗೆ ಹೋಗುತ್ತಿದ್ದ ಸಬ್ಸಿಡಿ ಸಹಿತ ಚೀಪ್ ರೇಟ್ನನ ಯೂರಿಯಾವನ್ನು ಬಳಸಿಕೊಂಡು ಕೆಮಿಕಲ್ ಫ್ಯಾಕ್ಟರಿಗಳು ದುಬಾರಿ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದವು. ಮತ್ತದರಿಂದ ಕೊಟ್ಯಾಂತರ ರೂಪಾಯಿ ಲಾಭ ಪಡೆದುಕೊಳ್ಳುತ್ತಿದ್ದವು..ಕೇವಲ ಬೇವಿನ ಎಣ್ಣೆಯನ್ನು ಮಿಕ್ಸ್ ಮಾಡಿದ್ದರಿಂದ ಕೇವಲ ಒಂದೇ ಒಂದು ಗ್ರಾಂ ನಷ್ಟು ಯೂರಿಯಾವನ್ನು ಬೇರೆಯಾವುದೇ ಉದ್ದೇಶಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.. ಹೀಗಾಗಿ ಕೆಮಿಕಲ್ ಫ್ಯಾಕ್ಟರಿಗಳಿಗೆ ಹೋಗುತ್ತಿದ್ದ ಯೂರಿಯಾ ನೇರವಾಗಿ ರೈತನ ಹೊಲಗಳಿಗೆ ಹೋಗಲು ಪ್ರಾರಂಭಿಸಿತು.. ಅಷ್ಟೆಅಲ್ಲದೇ ಬೇವಿನ ಮಿಶ್ರಣದಿಂದಾಗಿ ಯೂರಿಯಾ ಮತ್ತಷ್ಟು ಶಕ್ತಿದಾಯಕವಾಗಿ ಕೆಲಸ ಮಾಡೋದಕ್ಕೆ ಪ್ರಾರಂಭಿಸಿತು ಮತ್ತು ಮಣ್ಣಿನ ಶಕ್ತಿಯನ್ನು ಹೆಚ್ಚಿಸಿತು..
ಇದರ ಫಲವಾಗಿ ಫಸಲಿನಲ್ಲಿ ಶೇಕಡ 5-7 ರಷ್ಟು ಉತ್ಪಾದನೆ ಹೆಚ್ಚಳ ಕಂಢಿತು..ಮೇಲಾಗಿ ಈ ಮಿಶ್ರಣದಿಂದಾಗಿ ಸಬ್ಸಿಡಿ ಮೇಲಿದ್ದ ಆರ್ಥಿಕ ಹೊರೆ ಕೂಡ ಬಹಳಷ್ಟು ಕಡಿಮೆಯಾಯಿತು.. ಶೇಕಡಾ ನೂರರಷ್ಟು ಯೂರಿಯಾಗಳು ನೇರವಾಗಿ ರೈತನ ಹೊಲಗಳನ್ನು ತಲುಪುವಲ್ಲಿ ಸಾಧ್ಯವಾಯಿತು.ಇದೆಲ್ಲಾ ಹೇಗೆ ಸಾಧ್ಯವಾಯಿತು ಅಂತಿದ್ದೀರಾ.. ತಂತ್ರಜ್ಞಾನದಿಂದಲೇ ಇಷ್ಟೆಲ್ಲಾ ಕಾರ್ಯಸಾಧುವಾಗಿದ್ದು
ತಂತ್ರಜ್ಞಾನದಿಂದ ಸಾಧಿಸಲ್ಪಟ್ಟ ಇಂತಹಾ ಹತ್ತು ಹಲವು ಉದಾಹರಣೆಗಳನ್ನ ಸಾಕ್ಷಿಗಳನ್ನು ಮುಂದಿಟ್ಟು ಭಾರತ ಹೊಸ ಹೊಸ ಸಾಧನೆಗಳನ್ನು ಮಾಡುತ್ತಿದೆ ಅನ್ನೋದನ್ನೂ ನಾನು ನಿಮ್ಮುಂದೆ ಹೇಳಬಲ್ಲೆ… ಭಾರತ ವಿಶ್ವ ಬಾಹ್ಯಾಕಾಶ ರಂಗದಲ್ಲಿ ತನ್ನ ಹೆಸರನ್ನು ವಿಶಿಷ್ಟ ವಾಗಿ ಗಳಿಸಿದೆ. ಕೇವಲ ರಡು ದಿನಗಳ ಕೆಳಗಷ್ಟೆ ಭಾರತ 31 ನ್ಯಾನೋ ಉಪಗ್ರಗಳನ್ನು ಒಟ್ಟಿಗೆ ಅಂತರಿಕ್ಷಕ್ಕೇ ಏರಿಸಿತು.. ಕಳೆದ ತಿಂಗಳು ನಾವು ವಿಶ್ವದಾಖಲೆಯನ್ನು ಬರೆದಂತೆ 104 ಉಪಗ್ರಹಗಳನ್ನು ಒಂದೇ ಬಾರಿಗೆ ನಭಕ್ಕೇರಿಸಿ ಅದರದರ ಕಕ್ಷೆಗಳನ್ನು ತಲುಪುವಂತೆ ಮಾಡಿದೆವು… ಇಡೀ ವಿಶ್ವವೇ ಈ ಬಗ್ಗೆ ವಿಚಾರ ವಿಮರ್ಶೆಯನ್ನು ಮಾಡಲು ಪ್ರಾರಂಭಿಸಿತು.. ಅವರು ಹೇಗೆ 104 ಉಪಗ್ರಹಗಳನ್ನು ಒಟ್ಟಿಗೆ ಹಾರಿಸಿದರು..ಅಂತಃ ಸಾಧನೆಯ ಹಿಂದಿನ ಶಕ್ತಿ ಯಾವುದು ಅಂತಾ ಚರ್ಚಿಸಿದರು… ಇತ್ತೀಚೆಗೆ ಭಾರತದಲ್ಲಿ ಉಡಾಯಿಸಿದ ಉಪಗ್ರಹದ ತೂಕ ಕಿಲೋಗ್ರಾಮಗಳಲ್ಲಿ ಇರಲಿಲ್ಲ. ಅದರ ತೂಕವನ್ನು ಆನೆಯ ತೂಕದೊಂದಿಗೆ ಹೋಲಿಸಲಾಗಿತ್ತು.. ಹಲವು ಆನೆಗಳ ತೂಕಕ್ಕೆ ಸಮನಾದ ಉಪಗ್ರಹವನ್ನು ನಾವು ಉಡಾಯಿಸಿದ್ದೇವು.. ಇದರರ್ಥ ನಾನೇನು ಹೇಳಲು ಹೊರಟಿದ್ದೇನೆ ಅಂಧರೇ, ಅಭಿವೃದ್ಧಿಯುತ ಭವಿಷ್ಯ ಭಾರತವನ್ನು ತಂತ್ರಜ್ಞಾನ ಆಧರಿತ ಸರ್ಕಾರ ಮುಂದುವರಿಸಲಿ ಅನ್ನೋದು ನಮ್ಮ ಕನಸ್ಸಾಗಿದೆ.. ತಂತ್ರಜ್ಞಾನ ಧರತಿ ಸಮಾಜ ತಂತ್ರಜ್ಞಾನ ಪ್ರೇರಿತ ಅಭಿವೃದ್ಧಿ ಹಾಗೂ ಇವತ್ತು ಕಾಣುತ್ತಿರುವ ಫಲಿತಾಂಶವನ್ನು ನಾವು ಕನಸು ಕಾಣುತ್ತಿದ್ದೇವೆ..
ಹಾಗಂತ ಹಿಂದೇ ನಮ್ಮ ದೇಶದಲ್ಲಿ ಅಭಿವೃದ್ಧಿಯೇ ಆಗಿಲ್ಲಅಂತಲ್ಲ.. ಪ್ರತಿ ಸರ್ಕಾರಗಳು ಎನಾದರೂ ಒಂದು ಸಾಧನೆ ಮಾಡೋದಕ್ಕಾಗಿಯೇ ಶ್ರಮಿಸುತ್ತದೆ.. ಮತ್ತು ಯಾವ ಸರ್ಕಾರಗಳು ತನ್ನ ಘನತೆಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ..ಮತ್ತು ಚುನಾವಣೆಯಲ್ಲಿ ಸೋಲಲು ಬಯಸುವುದಿಲ್ಲ.. ಯಾರೂ ಕೂಡ ಇದನ್ನೂ ಬಯಸುವುದಿಲ್ಲ.. ಇದೆನೇ ಇದ್ದರೂ, ಕೆಲ ಕೆಲಸಗಳು ಬೇರೆಯದ್ದೇ ಆದ ಸ್ಥರದಲ್ಲಿ ನಿಂತು ವೇಗದ ಹಂತವನ್ನು ತಲುಪುತ್ತದೆ.. ಫಲಿತಾಂಶ ಆಧರಿತ ಕೆಲಸಗಳು ಸರಿಯಾದ ದಿಕ್ಕಿನೆಡೆಗೆ ಸಾಗುವುದಷ್ಟೆ ಅಲ್ಲದೇ ದೇಶದ ಅವಶ್ಯಕತೆ ಹಾಗೂ ನಿರೀಕ್ಷೆಯನ್ನು ತಲುಪುತ್ತದೆ.. ಇದು ಯಾವತ್ತಿದ್ದರೂ ವಿಭಿನ್ನವಾದುದಾಗಿದೆ.. ಹಾಗಾಗಿ ನಾವುಗಳು ಕ್ಷೀಪ್ರಗತಿ ಸನ್ನಿವೇಶಗಳಲ್ಲಿ ವಿಶೇಷವಾದ ನಿರ್ಧಾರಗಳನ್ನು ಕೈಗೊಂಡೆವು.. ನಿರ್ಧಿಷ್ಟ ಕಾಲಾವಧಿಯಲ್ಲಿ ಫಲಿತಾಂಶ ಆಧರಿತವಾಗಿ ನೀವುಗಳು ದೇಶದ ಅಭಿವೃದ್ಧಿಯನ್ನು ನಿರ್ದಿಷ್ಟವಾಗಿ ಅಳೆಯಬಹುದಾಗಿದೆ.
ರಸ್ತೆಗಳ ನಿರ್ಮಾಣಗಳಲ್ಲಿ ಈ ಹಿಂದಿದ್ದೆ ವೇಗವೇನಾಗಿತ್ತು ಮತ್ತು ರಸ್ತೆ ನಿರ್ಮಾಣಗಳಲ್ಲಿ ಈಗಿರುವ ವೇಗ ಏನಾಗಿದೆ.. ರೇಲ್ವೆ ಹಳಿಗಳ ನಿರ್ಮಾಣಗಳಲ್ಲಿ ಹಿಂದಿದ್ದ ವೇಗ ಏನು ಮತ್ತು ರೇಲ್ವೆ ಹಳಿ ನಿರ್ಮಾಣಗಳಲ್ಲಿ ಈಗಿರುವ ವೇಗವೇನು..ಮತ್ತು ಇವತ್ತಿನ ಅಭಿವೃದ್ಧಿ ದರ ಏನಾಗಿದೆ.. ರೇಲ್ವೆ ಮಾರ್ಗಗಳ ವಿದ್ಯುತ್ತೀಕರಣದ ಸರಾಸರಿ ಹಿಂದೇನಾಗಿತ್ತು.. ಮತ್ತು ಈಗೇನಾಗಿದೆ..? ಯಾವುದೇ ಮಾನದಂಡಗಳನ್ನು ಬಳಸಿಕೊಳ್ಳಿ ಇವತ್ತು ಸುಸ್ತಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ , ಮೂಲಸೌಕರ್ಯಗಳ ಸೃಷ್ಟಿಯಲ್ಲಿ ಅಭೂತಪೂರ್ವ ವೇಗವನ್ನು ಸಾಧಿಸಿದ್ದನ್ನು ನೀವು ಗಮನಿಸಬಹುದು.. ಇಪ್ಪೊತ್ತೊಂದನೇ ಶತಮಾನದ ವಿಶ್ವದಲ್ಲಿ, ಅಭಿವೃಧ್ಧಿ ಭಾರತದ ಸನ್ನಿವೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಸಾಧಿಸುವ ನಿಟ್ಟಿನಲ್ಲಿ ನಮ್ಮ ಯೋಚನೆಗಳು ಇದೇ ಆಗಿರುತ್ತದೆ..
ಸಾಮಾನ್ಯಗಳು ಕೆಲವು ಕೆಲ್ಸಗಳು ಅಷ್ಟು ಸುಲಭವಾಗಿ ನಡೆಯುತ್ತಿರಲಿಲ್ಲ..ಅದೊಂದು ಕಾಲವಿತ್ತು..ಯಾವುದೋ ಒಂದು ಊರಿನ ಕೆಲವೇ ಕೆಲ ಪ್ರಮುಖರು ಸರ್ಕಾರಕ್ಕೆ ಪತ್ರವನ್ನು ಬರೆಯುತ್ತಿದ್ದರು.. ಸರ್ಕಾರಗಳಿಗೆ ಬರೆಯುತ್ತಿದ್ದ ಪತ್ರದಲ್ಲಿ ವಿಶೇಷವಾಗಿ ನಮ್ಮ ಹಳ್ಳಿಯ ಸ್ಥಿತಿ ಹೀಗಿದೆ ನೋಡಿ , ಈ ರೀತಿ ನಮ್ಮ ರಸ್ತೆಗಳ ಸ್ಥಿತಿ ಇದೆ.. ನಮ್ಮೂರಿನ ಕುಂದುಕೊರೆತೆಗಳನ್ನೂ ನೀಗಿಸುವ ನಿಟ್ಟಿನಲ್ಲಿ ಹಲವು ಕಾರ್ಯಗಳು ಆಗಬೇಕಿದೆ. ದಯವಿಟ್ಟು ಮಾಡಿಕೊಡಿ ಅಂತಾ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ರು..ಅಲ್ಲದೇ ಹಾಗೆ ಬರೆದ ಪತ್ರಗಳ ನಂತರದ ಬಳಿಕವೂ ಸರ್ಕಾರದ ಉತ್ತರಕ್ಕಾಗಿ ಕಾಯಬೇಕಾಗಿತ್ತು.. ಬಳಿಕ ಸರ್ಕಾರ ಭೂಮಿಯನ್ನು ವಶಕ್ಕೆ ಪಡೆದುಕೊಂಡು ರಸ್ತೆಗಳನ್ನು ನಿರ್ಮಾಣ ಮಾಡುತ್ತಿತ್ತು. ಅಲ್ಲದೇ ಇದೇ ದೊಡ್ಡ ಸಾಧನೆ ಅಂತಾ ಸರ್ಕಾರಗಳು ಬಿಂಬಿಸಿಕೊಳ್ಳುತ್ತಿದ್ದವು.. ಅಂತಹದೊಂದು ಸಮಯ ಇತ್ತು.. ಬಳಿಕ ದು ಬದಲಾಯಿತು ಕಚ್ಚಾ ರೋಡ್ಗಗಿದ್ದ ಬೇಡಿಕೆ ಹೋಗಿ ಡಬ್ಬಲ್ ರೋಡ್ ಗೆ ಬಂತು ನಂತ್ರ ಇವತ್ತು ಅವರುಗಳು ಎಕ್ಸ್ ಪ್ರೆಸ್ ರೋಡ್ಗಳಿಗಾಗಿ ಡಿಮ್ಯಾಂಡ್ ಇಡುತ್ತಿದ್ದಾರೆ.. ಏನೂ ಇಲ್ಲದೇ ಅವರುಗಳು ಯಾವುದೇ ಒಂದಕ್ಕೂ ತೃಪ್ರರಾಗೋದಿಲ್ಲ..ಅಷ್ಟೆ ಏಕೆ ನಿರೀಕ್ಷೆಗಳು ಹೆಚ್ಚುತ್ತಲೇ ಇರುವುದು ಭಾರತದ ಅಭಿವೃದ್ಧಿಯ ನಿಟ್ಟಿನಲ್ಲಿ ಬಹುಮುಖ್ಯ ಮೂಲವಾಗಿದೆ.. ಯಾವಾಗ ದೇಶದ ಸಾಮಾನ್ಯ ನಾಗರಿಕರನ ಮಹತ್ವಾಕಾಂಕ್ಷೆ ಹೆಚ್ಚುತ್ತಲೇ ಇರುತ್ತದೆಯೋ ಆಗ ಉತ್ತಮ ನಾಯಕತ್ವವನ್ನು ಪಡೆಯಲು ಸಾಧ್ಯವಾಗುತ್ತದೆ.. ಉತ್ತಮ ಸರ್ಕಾರವನ್ನು ಪಡೆಯಲು ಸಾಧ್ಯವಾಗುತ್ತದೆ.. ಮತ್ತು ಯೋಜನೆಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ.. ಹಾಗೂ ಈ ಮಹತ್ವಾಕಾಂಕ್ಷೆಯೇ ಎಲ್ಲವನ್ನೂ ಸಾಧಿಸುತ್ತದೆ.
ನಾವುಗಳು ನಿರ್ಧಿಸಿದ್ದೇವು ನಮ್ಮ ಕಾರ್ಯ ಯೋಜನೆಗಳು ನಮ್ಮ ಪ್ರಾಮಖ್ಯತೆಗಳು ನಮ್ಮ ಕಾರ್ಯಸಾಧನೆಯ ವೇಗೆ ಜನರ ಮಹತ್ವಾಕಾಂಕ್ಷೆಗಳನ್ನು ಸಾಧನೆಯನ್ನಾಗಿ ಪರಿವರ್ತನೆಯ ನಿಟ್ಟಿನಲ್ಲಿ ಸಾಗಬೇಕು ಅಂತಾ ನಿರ್ಧರಿಸಿದ್ದೇವು. ಅಲ್ಲದೇ ಈ ಸಂಬಂಧ ಸಂಪೂರ್ಣವಾಗಿ ಬದ್ಧತೆಯಿಂದ ದುಡಿದಿದ್ದೇವೆ.. ಅದರ ಫಲವಾಗಿ ಸಕರಾತ್ಮಕ ಫಲಿತಾಂಶ ಹೊರಬಂದಿದೆ..
ಇವತ್ತು ವಿಶ್ವದಲ್ಲಿ ಭಯೋತ್ಪಾಧನೆ ಅನ್ನೋದು ಮಾರತಕವಾಗಿ ಪರಿಣಮಿಸಿದೆ. ವಿಶ್ವದ ಅತಿದೊಡ್ಡ ಶತ್ರುವಾಗಿ ಪರಿಣಮಿಸಿದೆ..ಮನುಷ್ಯ ಕುಲಕ್ಕೆ ಕಂಟಕವಾಗಿದೆ.. ಆದ್ರೆ ಇವತ್ತಿಗೆ 20 25 ವರ್ಷಗಳ ಹಿಂದೆಯೇ ಭಾರತ ಭಯೋತ್ಪಾದನೆಯ ವಿರುದ್ಧ ಧ್ವನಿಯನ್ನು ಎತ್ತಿತ್ತು… ಆಧ್ರೆ ಆಗ ವಿಶ್ವದ ಬಲಾಡ್ಯ ರಾಷ್ಟ್ರಗಳು ಭಾರತದ ಕಾಳಜಿಯನ್ನು ಹಗುರವಾಗಿ ಪರಗಣಿಸಿದ್ದರು.. ಅವರುಗಳ ಅನುಭವಕ್ಕೆ ಭಯೋತ್ಪಾದನೆಯ ಎಂಬ ಭೂತದ ಸತ್ಯದರ್ಶನ ಆಗದೇ ಹೊರತು ಭಯೋತ್ಪಾದನೆ ಅನ್ನೋದು ನಮ್ಮ ಕಾನೂನು ಸುವ್ಯವಸ್ಥೆಯಲ್ಲಿನ ನೂನ್ಯತೆ ಅಂತಲೇ ಭಾವಿಸಿದ್ದರು. ಆದರೆ ಇವತ್ತು ವಿವರಿಸಬೇಕಾದ ಅಗತ್ಯವೇ ಇಲ್ಲ.. ಭಯೋತ್ಪಾದನೆ ಅಂತಾ ಯಾರೋಬ್ಬರಿಗೂ ಹೇಳುವಂತಾ ಅನಿವಾರ್ಯತೆಯು ಇಲ್ಲ..ಖದ್ದು ಭಯೋತ್ಪಾದನೆಯೇ ತಾನೇನು ಅನ್ನೋದನ್ನ ಜಗತ್ತಿಗೆ ತಿಳಿಸಿದೆ.. ಏನೇ ಆಗಿರಲಿ.. ಯಾವಾಗ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತೋ ಆಗ ಇಡೀ ವಿಶ್ವಕ್ಕೆ ಒಂದು ವಿಷಯವನ್ನು ಅರಿತುಕೊಂಢಿತು.. ಭಾರತ ಸಾಮರ್ಥ್ಯ ಏನು ಅನ್ನೋದರ ಅರಿವು ವಿಶ್ವಕ್ಕೆ ಆಯಿತು. ಅಲ್ಲದೇ ಭಾರತ ಅವಶ್ಯಕತೆ ಬಿದ್ದರೇ ತನ್ನನ್ನು ನಿರ್ಬಂಧಿಸಿಕೊಳ್ಳಬಹುದು..ಹಾಗೇ ಪರಾಕ್ರಮವನ್ನೂ ಮೆರೆಯಬಲ್ಲದು ಅನ್ನೋದ್ರ ಸ್ಪಷ್ಟ ಅರಿವು ವಿಶ್ವಕ್ಕೆ ಮೂಡಿತು
ನಾವು ಅಂತರಾಷ್ಟ್ರೀಯ ಒಪ್ಪಂದಗಳಿಗೆ ಬದ್ಧವಾಗಿದ್ದೇವೆ.. ಮತ್ತಿದು ನಮ್ಮ ಅಂತರ್ಗತ ಸ್ವಭಾವ..ಮತ್ತು ನಮ್ಮ ಗುಣಲಕ್ಷಣ… ಇಡೀ ವಿಶ್ವವೇ ಒಂದು ಕುಟುಂಬ ಅನ್ನೋದನ್ನು ನಾವೂ ನಂಬುತ್ತೇವೆ.. ಇವೆಲ್ಲಾ ನಮ್ಮ ಪಾಲಿಗೆ ವ್ಯರ್ಥವಾದ ಪದಗಳಲ್ಲ.. ಇದು ನಮ್ಮ ಅಂತರ್ಗತ ಸ್ವಬಾವ..ಅಂತರ್ಗತ ಪ್ರಸ್ತಾವನೆ…ನಮ್ಮ ಅಧಿಕಾರ ವಿಸ್ತರಣೆಗಾಗಿ ನಾವು ವಿಶ್ವದ ಆದೇಶಗಳನ್ನು ನಾಶ ಮಾಡುವಂತಃ ರಾಷ್ಟ್ರ ನಮ್ಮದಲ್ಲ.. ನಮ್ಮ ದೇಶದ ಸಾರ್ವಭೋಮತ್ವವನ್ನು ಕಾಪಾಡುವ ನಿಟ್ಟಿನಲ್ಲಿ , ನಮ್ಮನ್ನ ನಾವು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ , ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಕಾನೂನು ಹಾಗೂ ನಿಯಮಗಳ ಅಡಿಯಲ್ಲಿ ನಮ್ಮ ದೇಶದ ನಾಗರಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ನಾವು ಶಕ್ತರಾಗಿದ್ದೇವೆ.. ಮತ್ತು ಯಾವಾಗ ಅವಶ್ಯಕತೆ ಬೀಳುತ್ತೆ ಆಗೆಲ್ಲಾ ಕಠಿಣ ನಿಯಮಗಳನ್ನು ನಾವು ತೆಗೆದುಕೊಳ್ಳುತ್ತದೆ.. ವಿಶ್ವದಲ್ಲಿ ಯಾರೊಬ್ಬರೂ ಇದನ್ನ ತಡೆಯಲು ಸಾಧ್ಯವಾಗದು..
ಈ ನಿಟ್ಟಿನಲ್ಲಿ ಸರ್ಜಿಕಲ್ ಸ್ಟ್ರೈಕ್ ಅನ್ನೋದು ಎಂತಾ ಕ್ರಮವಾಗಿತ್ತು ಅಂದರೇ ಆ ನಿರ್ಣಯವನ್ನು ವಿಶ್ವ ಒಪ್ಪುವ ಲಕ್ಷಣಗಳಿರಲಿಲ್ಲ..ಪ್ರಶ್ನಿಸುವ ಎಲ್ಲಾ ಸಾಧ್ಯತೆ ಇತ್ತು. ಟೀಕಿಸಬಹುದಾಗಿತ್ತು.. ನಮ್ಮ ಮೇಲೆ ನಿರ್ಬಂಧಗಳನ್ನು ಹೇರಬಹುದಾಗಿತ್ತು. ಏನೇ ಆಗಿದ್ರೂ ಮೊದಲ ಬಾರಿಗೆ ಯಾರೋಬ್ಬರು ಭಾರತದ ಕಠಿಣ ನಿರ್ಧಾರವನ್ನು ಪ್ರಶ್ನಿಸದೇ ಇರೋದನ್ನ ನೀವು ನೋಡಲು ಸಾಧ್ಯವಾಯಿತು.. ಭಾರತದ ಶಕ್ತಿ ಸಾಮರ್ಥ್ಯದ ಅರಿವು ಇದ್ದವರಿಗೆ ಇದು ಬೇರೆಯದ್ದೇ ಆದ ವಿಷಯವಾಗಿದೆ.. ಇನ್ನೂ ಹಾಗಾಗಿ ಇದು ಭಯೋತ್ಪಾದನೆ, ಮತ್ತಿದು ಭಾರತದ ಜನರ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಅನ್ನೋದನ್ನು ನಾವು ವಿಶ್ವಕ್ಕೆ ಅರ್ಥೈಸುವಲ್ಲಿ ಸಫಲರಾಗಿದ್ದೇವೆ.21 ನೇ ಶತಮಾನದ ರಾಷ್ಟ್ರವಾಗು ಭಾರತ ಆರ್ಥಿಕ ಕ್ಷೇತ್ರದಲ್ಲಿ ಯಶಸ್ವಿಯಾಗಿ ದಾಫುಗಾಲನ್ನೂ ಹಾಕುತ್ತಿದೆ.. ಕೇವಲ ಆರ್ಥಿಕ ಪ್ರಗತಿ ಮಾತ್ರ ದೇಶದ ಅಭಿವೃದ್ಧಿಯ ಮಾನದಂಡವಲ್ಲ..ಈ ದೇಶದ ಪ್ರಮುಖ ಬಲ ಅಂದರೇ ಮಾನವ ಸಂಪನ್ಮೂಲವಾಗಿದೆ. ಮತ್ತು ನೈಸರ್ಗಿಕ ಸಂಪನ್ಮೂಲ.. 800 ಮಿಲಿಯನ್ ನಷ್ಟು 35 ವರ್ಷ ಸರಾಸರಿ ವಯಸ್ಸಿನ ನಾಗರಿಕರನ್ನು ಹೊಂದಿರುವ ರಾಷ್ಟ್ರ.. ಬಿಸಿರಕ್ತದ ಯುವಕರ ಕನಸಿನಂತಿರುವ ಯುವ ದೇಶದ ಕನಸ್ಸುಗಳು ಯುವನಕನಾಗಿರುವಂತೆ ಮಾಡುತ್ತದೆ ಮತ್ತು ನಾವು ಅವರುಗಳ ಮುಂಧೆ ಯೋಜನೆಗಳು ನಿಯಮಗಳನ್ನು ಹಿಡಿದು ನಿಂತಿದ್ದೇವೆ.. ವಿದೇಶಿ ಬಂಡಾವಾಳ ನೇರ ಹೂಡಿಕೆಗಳನ್ನೂ ತರುವ ಮೂಲಕ ಅವಕಾಶಗಳನ್ನೂ ಒದಗಿಸುತ್ತಿದ್ದೇವೆ.. ಇವತ್ತು ಸ್ವಾತಂತ್ರ್ಯಕ್ಕಿಗಾಗಿನಿಂದಲೂ ಇಲ್ಲಿವರೆಗೂ ಸಾಧ್ಯವಾಗದಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಭಾರತ ಗಳಿಸುತ್ತಿದೆ
ವಿಶ್ವಬ್ಯಾಂಕ್ ಆಗಲಿ ಅಥವಾ ಐಎಂಎಫ್ ಆಗಲಿ ಅಥವಾ ಗ್ಲೋಬಲ್ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಭಾರತ ಉಜ್ವಲ ಅಭಿವೃದ್ಧಿ ಹೊಂದಿರುತ್ತಿರುವ ನೆಲ ಅನ್ನೋದನ್ನು ಪರಗಣಗಿಸಿವೆ.. ಪ್ರತಿಯೊಬ್ಬರು ಭಾರತದ ಪರಾಕ್ರಮವನ್ನು ಗುರುತಿಸಿದ್ದಾರೆ.. ಇಡೀ ವಿಶ್ವ ಭಾರತವನ್ನ ಬಂಡಾವಾಳ ಹೂಡಿಕೆಯಲ್ಲಿ ಅತಿದೊಡ್ಡ ಗುರಿಯನ್ನಾಗಿಸಿಕೊಂಡಿದೆ. ಅಲ್ಲದೇ ಆ ಸನ್ನಿವೇಶ ಅಲ್ಲಿದೆ ಅನ್ನೋದನ್ನೂ ಗಮನಿಸಿದೆ. ತಂತ್ರಜ್ಞಾನ ಹಾಗೂ ಬುದ್ದಿಶಕ್ತಿ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.. ಭಾರತ ಆ ಶಕ್ತಿಯನ್ನು ಹೊಂದಿದೆ.. ಇದೀಗ ಪ್ರದರ್ಶನಗೊಂಡಿದೆ ಮತ್ತದು ಸಾಧನೆ ಕೂಡ ಆಗಿದೆ.. ನೀಮಗೆ ನಿಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇದ್ದೇ ಅದರಿಂದ ನಮ್ಮ ರಾಷ್ಟ್ರಕ್ಕೆ ಏನಾದ್ರೂ ಅನುಕೂಲವಾಗುತ್ತೆ ಅನ್ನೋದು ನಿಮ್ಮ ಭಾವನೆ ಆದರೇ, ಇದಕ್ಕಿಂತ ಬೇರೆ ಯಾವ ಉತ್ತಮ ಅವಕಾಶ ಇಲ್ಲ.. ನಿಮ್ಮ ಆಕಾಂಕ್ಷೆಗಳನ್ನೂ ಈಡೇರಿಸಿಕೊಳ್ಳಲು ನಿಮ್ಮ ಯಶಸ್ವಿ ಬದುಕಿಗೆ ಸಹಾಯ ಮಾಡಿಕೊಳ್ಳಲು ಇದಕ್ಕಿಂಥ ಅತ್ಯುತ್ತಮ ಅವಕಾಶ ಇನ್ನೊಂಧಿಲ್ಲ ಅನ್ನೋದನ್ನ ಹೇಳಲು ಬಯುಸುತ್ತೇನೆ.
ಎಲ್ಲಾ ದೇಶದ ನಾಗರಿಕರು ಯುಎಸ್ ಎ ನಲ್ಲಿ ಬಂದು ನೆಲೆಸಿದ್ದೀರಾ.. ಹೀಗೀದ್ರೂ ನನಗೆ ಸಿಕ್ಕಷ್ಟು, ಭಾರತೀಯರಿಗೆ ಸಿಕ್ಕಷ್ಟು ಗೌರವ ಆತ್ಮಿಯತೆ ಇನ್ಯಾವ ವಿಶ್ವದ ನಾಯಕನಿಗೂ ಸಿಗಲಿರಿಲಿಕ್ಕಿಲ್ಲ ಅಂಥಾ ಭಾವಿಸುತ್ತೇನೆ. ಕೆಲವೊಮ್ಮ ನಾನು ಯೋಚಿಸುತ್ತೇನೆ ,,ಮುಂದಿನ ಜನಾಂಗ ನೀವು ಹೊಂದಿರೋ ಹಾಗೇ ಇದೇ ರೀತಿಯ ಭಾವನೆಗಳನ್ನ ಹೊಂದಿರುತ್ತಾರಾ ಅಂತಾ ಚಿಂತಿಸುತ್ತಿರುತ್ತೇನೆ. ಹಾಗಾಗಿ ಇದೇ ರೀತಿಯ ಸಂಬಂಧ ಬಾಂಧವ್ಯವನ್ನು ಮುಂದುವರಿಸಿಕೊಂಢು ಹೋಗೋದು ಬಹುಮುಖ್ಯವಾಗಿರುತ್ತದೆ..
ಮುಂದಿನ ಜನಾಂಗ ಭಾರತದೊಂದಿಗೆ ಬಾಂದವ್ಯ ಉಳಿಸಿಕೊಳ್ಳುವಂತೆ ಮಾಡಲು ನೀವೆಲ್ಲರೂ ಅವಿರತವಾಗಿ ಶ್ರಮಿಸೋದು ತುಂಬಾನೇ ಅನಿವಾರ್ಯವಾಗಿದೆ. ದೇಶದ ಎಲ್ಲಾ ರಾಜ್ಯಗಳ ಒಂದಲ್ಲಾ ಒಂದು ಇಲಾಖೆಗಳು ಸಾಗರೋತ್ತರ ಭಾರತೀಯರ ಜೊತೆಗೆ ಒಂದಲ್ಲ ಒಂದು ರೀತಿಯ ಸಂಬಂಧವನ್ನು ಹೊಂದಿದೆ. ಅಲ್ಲದೇ ಭಾರತ ಸರ್ಕಾರ ದೆಹಲಿಯಲ್ಲಿ ಅದ್ಭುತವಾಗ ಪ್ರವಾಸಿ ಭಾರತೀಯ ಭವನವನ್ನು ನಿರ್ಮಿಸಿದೆ. ಈ ಮೂಲಕ ನಾನು ನಿಮ್ಮಲ್ಲಿ ಮಾಡುವ ಮನವಿ ಏನಂದರೇ , ಭಾರತಕ್ಕೆ ಯಾವಾಗೆಲ್ಲಾ ಬರುತ್ತಿರೋ ಹಾಗೆ ಬಂದಾಗೆಲ್ಲಾ ನೀವು ಭವನಕ್ಕೆ ಭೇಟಿಕೊಡಿ ..ಅದು ನಿಮಗಾಗಿಯೇ ಇರುವಂತಃ ವಿಶೇಷ ಸೌಲಭ್ಯವಾಗಿದೆ
ನನ್ನ ಸಾರ್ವಜನಿಕ ಜೀವನವನ್ನು ಬದಿಗೊತ್ತಿ ಕೇವಲ ಒಬ್ಬ ಸಾಮಾನ್ಯ ನಾಗರಿಕನಾಗಿ ವಿದೇಶಾಂಗ ಇಲಾಖೆಯನ್ನು ನೋಡುವುದಾದ್ರೆ ಅದೊಂದು ಸೂಟುಬೂಟು ಹಾಕಿರೋ ಮಂದಿ ವಿಶ್ವದಾದ್ಯಂತ ಓಡಾಡುತ್ತಾ ಪ್ರಭಾವಿಗಳೊಂದಿಗೆ ಮಾತುಕತೆ ಮಾಡೋ ಇಲಾಖೆಯ ಈ ರೀತಿಯಲ್ಲಿ ಕಾಣುತ್ತಿತ್ತು.. ಆದ್ರೆ , ನೀವು ಗಮನಿಸಿರಬಹುದು ಕಳೆದ ಮೂರುವರ್ಷಗಳಲ್ಲಿ ವಿದೇಶಾಂಗ ಇಲಾಖೆ ಹೊಸ ಎತ್ತರಕ್ಕೇ ಏರಿದೆ ಮಾನವೀಯತೆಯನ್ನು ಪ್ರದರ್ಶಿಸುವ ವಿಚಾರದಲ್ಲಿ .. ಈ ನಿಟ್ಟಿನಲ್ಲಿ ಹೇಳಬೇಕಂದರೇ ಭಾರತ ಸರ್ಕಾರ ವಿಶ್ವದ ಮೂಲೆ ಮೂಲೆಗಳಲ್ಲಿ ತೊಂದರೆಯಲ್ಲಿ ಸಿಲುಕಿದ್ದ 80 ಸಾವಿರ ಮಂದಿಯನ್ನು ರಕ್ಷಣೆ ಮಾಡಿದೆ.. ಅಲ್ಲದೇ ಅವರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸಿದೆ. 80 ಸಾವಿರ ಸಣ್ಣ ಸಂಖ್ಯೆಯಲ್ಲ ಅಂತಾ ಅಂದುಕೊಳ್ಳುತ್ತೇನೆ.
ಸರಿಸುಮಾರು ಇಪ್ಪತ್ತು ವರ್ಷಗಳ ಹಿಂದೇ ನೀವೆಲ್ಲರೂ ವಿಶ್ವದೆಲ್ಲೆಡೆ ಸುರಕ್ಷಿತವಾಗಿದ್ದೀರಿ ಅಂದುಕೊಂಡಿದ್ರಿ.. ಆದ್ರೆ ಈ ಇಪ್ಪತ್ತು ವರ್ಷಗಳಲ್ಲಿ ಆದ ಬದಲಾವಣೇಗಳು ಸಾಗರೋತ್ತರ ಭಾರತೀಯನಿಗೆ ತನಗೇನಾದರೂ ಆದರೇ ಅನ್ನುವಂತ ಭಯ ಮೂಡಿಸಿದೆ. ಆದ್ರೆ ಕಳೆದ ಮೂರುವರ್ಷಗಳಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಒಂದು ವಿಶ್ವಾಸ ಮೂಡಿಸಿದೆ. ನನ್ನ ದೇಶದ ರಾಯಭಾರಿ ಕಚೇರಿ ಇಲ್ಲಿದೆ ಹೀಗಾಗಿ ಏನೇ ಆದರೂ ನಾನದ್ದನ್ನೂ ಎದುರಿಸಬಲ್ಲೆ ಅನ್ನುವಂತಃ ವಿಶ್ವಾಸ ಆತನಲ್ಲಿ ಮೂಡಿದೆ.. ನಿಮಗೆ ಭಾರತೀಯ ಹೆಣ್ಮಗಳೊಬ್ಬಳ ಬಗ್ಗೆ ಅರಿವಿರಬಹುದು.. ಆಕೆ ಮಲೇಷಿಯಾಕ್ಕೆ ಹೋಗಿದ್ದಳು, ಅಲ್ಲಿಂದ ಆಕೆ ಕೆಲ ಸಂಪರ್ಕದ ಮೂಲಕ ಪಾಕಿಸ್ತಾನಕ್ಕೆ ಹೋಗುವಂತಾಯ್ತು ಮತ್ತು ಅಲ್ಲಿಯೇ ಬೆಳದಳು. ಬಹಳ ವಿಶ್ವಾಸದಿಂದ ಆಕೆ ಪಾಕಿಸ್ತಾನಕ್ಕೆ ಹೋಗಿದ್ದಳು..ಆದ್ರೆ ಅಲ್ಲಿ ಅವಳ ಜೀವನವೇ ನಾಶವಾಯ್ತು.. ಅವಳೊಬ್ಬಳು ಮುಸ್ಲಿಮ್ ಆಗಿದ್ದು, ಪಾಕಿಸ್ತಾನದಲ್ಲಿ ಉತ್ತಮ ಜೀವನ ಸಿಗಬಹುದು ಅಂತಾ ಬಾವಿಸಿದ್ದಳು. ಯಾವಾಗ ಆಕೆಗೆ ತಾನು ಮೋಸದ ಬಲೆಗೆ ಬಿದ್ದೀದ್ದೇನೆ ಅನ್ನೋದರ ಅರಿವಾಯ್ತೋ ತಕ್ಷಣ ಕೆ ಇದ್ರಿಂದ ಬಚಾವ್ ಆಗೋದಕ್ಕೆ ಭಾರತದ ರಾಯಭಾರಿ ಕಚೇರಿಯೇ ಸೂಕ್ತ ಮಾರ್ಗ ಅನ್ನೋ ತೀರ್ಮಾನಕ್ಕೆ ಬಂದಳು ಮತ್ತು ರಾಯಭಾರಿ ಕಚೇರಿಯನ್ನು ಸಂಪರ್ಕಿಸುವಲ್ಲಿ ಯಶಸ್ವಿಯು ಆದಳು.. ಭಾರತ ರಾಯಭಾರಿ ಕಚೇರಿಯನ್ನು ಸಚಿವೆ ಸುಷ್ಮಾಸ್ವರಾಜ್ ರನ್ನು ಸಂಪರ್ಕಿಸಿದ ಬಳಿಕವಷ್ಟೆ ಆಕೆ ಭಾರತಕ್ಕೆ ವಾಪಸ್ ಬರಲು ಸಾಧ್ಯವಾಯಿತು
ಈ ಮೊದಲು ನಾನು ಇಲ್ಲಿಗೆ ಬಂದಾಗಲೆಲ್ಲಾ ನನ್ನ ಸಹೋದರಿಂದ ಸಾಕಷ್ಟು ದೂರುಗಳುನ್ನ ಕೇಳಿದ್ದೇನೆ.. ಟ್ಯಾಕ್ಸಿ ಡ್ರೈವರ್ಸ್ಗಗಳ ಬಗ್ಗೆ ಅಬಕಾರಿ ಅಧಿಕಾರಿಗಳ ಬಗ್ಗೆ ಅಶುಚಿತ್ವದ ಬಗ್ಗೆ ದೂರುಗಳನ್ನು ನೀಡುತ್ತಿದ್ದರು.. ನಾನು ಅವರಿಗೆ ಈಗ ಭಾರತಕ್ಕೆ ವಾಪಸ್ ಬರುವಂತೆ ಆಹ್ವಾನ ನೀಡುತ್ತಿದ್ದೇನೆ. ಮತ್ತು ಯಾವೆಲ್ಲಾ ಪತ್ರಗಳನ್ನು ವಿದೇಶಗಳಿಂದ ಬಂದಿವೆಯೋ ಅವುಗಳಿನ್ನ ಕುಂದುಕೊರತೆಗಳನ್ನು ಪ್ರಾಮುಖ್ಯತೆ ವಹಿಸಿ ಆಯಾ ದೇಶಗಳ ರಾಯಭಾರಿ ಕಚೇರಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದೇವೆ. ಅಲ್ಲಿ ಬದಾಲವಣೆಗಳು ಆಗುತ್ತಿವೆ. ಅಷ್ಟೆಅಲ್ಲಾ ಭಾರತೀಯರನ್ನು ಗೌರವಿಸಲ್ಪಡುತ್ತಿದ್ದಾರೆ..ನಮ್ಮ ರಾಯಭಾರ ಕಚೇರಿಗಳು ಜನಪರ ಕಚೇರಿಗಳಾಗಿ ಮಾರ್ಪಾಡಾಗಿವೆ.. ಅನಿವಾಸಿ ಭಾರತೀಯರ ಪತ್ರಗಳು ಈ ಮಹತ್ತರ ಬದಲಾವಣೆಗೆ ನಾಂದಿ ಹಾಡಿವೆ. ಇಷ್ಟೆ ಅಲ್ಲದೇ ನಾವು ನಮ್ಮ ನೀತಿ ನಿಯಮಗಳಲ್ಲಿ ಅತಿದೊಡ್ಡ ಬದಲಾವಣೆಯನ್ನು ಮಾಡಿಕೊಂಡಿದ್ದೇವೆ.. ನಿಮಗೆ ನಿಮ್ಮ ಪಾಸ್ಪೋರ್ಟ್ ಗಳನ್ನು ಪಡೆಯುವಾಗ ಆದ ತೊಂದರೆಗಳನ್ನು ನಿಮ್ಮ ಅರಿವಿನಲ್ಲಿ ಇನ್ನೂ ಕೂಡ ಇರಬಹುದು..ಆದ್ರೆ ಇವತ್ತು ಇವತ್ತು ನಾವು ಪ್ರತೀ ಪೋಸ್ಟ್ ಆಫೀಸ್ ಗಳಲ್ಲೂ ಪಾಸ್ ಪೋರ್ಟ್ ಕಚೇರಿಗಳನ್ನು ತೆರೆದಿದ್ದೇವೆ.. ಮತ್ತು ಆರು ತಿಂಗಳಾದ್ರೂ ಸಿಗುತ್ತಿರದ ಪಾಸ್ಪೊರ್ಟ್ ಗಳು ಇದೀಗ ಕೇವಲ 15 ದಿನಗಳಲ್ಲಿ ಲಭ್ಯವಾಗುತ್ತಿದೆ..
ಈಗಿನ ಕಾಲದಲ್ಲಿ ಸೋಶಿಯಲ್ ಮಿಡಿಯಾ ಶಕ್ತಿಯುತವಾದ ಮಾಧ್ಯಮವಾಗಿ ಹೊರ ಹುಮ್ಮಿದೆ.. ಮತ್ತು ನಾನು ಸೋಶಿಯಲ್ ಮಿಡಿಯಾದಲ್ಲಿ ಸದಾ ಸಕ್ರೀಯವಾಗಿ ಇರುತ್ತೇನೆ.. ನಿಮಗೆ ನರೇಂದ್ರ ಮೋದಿ ಆಪ್ ಬಗ್ಗೆ ಗೊತ್ತಿರಬಹುದು.. ಒಂದ್ವೇಳೆ ಗೊತ್ತಿಲ್ಲದಿದ್ದರೂ ಅದನ್ನು ಡೌನ್ ಲೋಡ್ ಮಾಡಿಕೊಳ್ಳಿ.. ಸೋಶಿಯಲ್ ಮಿಡಿಯಾ ಇಲಾಖೇಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಉಪಯೋಗಕಾರಿ. ಮತ್ತು ಸರಿಯಾದ ದಿಕ್ಕಿನೆಡಗೆ ನಿರ್ವಹಣೆ ಮಾಡಲು ಇದು ಕಾರ್ಯಸಾಧುವಾಗಿದೆ. ಮತ್ತು ಈ ಕೆಲಸವನ್ನು ನಮ್ಮ ವಿದೇಶಾಂಗ ಇಲಾಖೆ ಮಾಡುತ್ತಾ ಬಂದಿದೆ.
ಇವತ್ತು ಪ್ರತಿಯೊಬ್ಬ ಭಾರತೀಯನೂ ಒಂದು ವಿಷಯವನ್ನು ಸ್ಪಷ್ಟವಾಗಿ ಗುರುತಿಸಬಲ್ಲಬಹುದು ..ಅದೇನೇಂದ್ರೇ, ಕೋಟ್ ಪ್ಯಾಂಟ್ ಟೈ ಕಟ್ಕೊಂಡಿರೋ ವಿದೇಶಾಂಗ ಇಲಾಖೆ ಕೊನೆಯ ವ್ಯಕ್ತಿಯವರೆಗೂ ಪ್ರತಿಯೊಬ್ಬರನ್ನೂ ಸಂಪರ್ಕಿಸಲು ಸಾಧ್ಯವಾಗಿದೆ. ಹಾಗೂ ಹೀಗೆ ಕೊನೆಯ ವ್ಯಕ್ತಿಯನ್ನೂ ಸಂಪರ್ಕಿಸಲು ಸಾಧ್ಯವಾಗಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ …ಯಾರೋ ಒಬ್ಬ ಸಂತ್ರಸ್ಥರು ರಾತ್ರಿ ಎರಡು ಗಂಟೆಗೆ ಟ್ವೀಟ್ಟರ್ ನಲ್ಲಿ ಸುಷ್ಮಾಸ್ವರಾಜ್ ಮಸೇಜ್ ಮಾಡಲಿ ಅವರು 15 ನಿಮಿಷದಲ್ಲಿ ಆ ಟ್ವೀಟ್ ಗೆ ರಿಪ್ಲೇ ಮಾಡುತ್ತಾರೆ.. ಮತ್ತು ಕೇಂದ್ರ ಸರ್ಕಾರ ಟ್ವೀಟ್ ಬಂದ 24 ಗಂಟೆಗಳಲ್ಲಿ ಈ ಸಂಬಂಧ ಸೂಕ್ತ ಹಾಗೂ ಸ್ಪಷ್ಟವಾದ ಕ್ರಮವನ್ನು ಕೈಗೊಳ್ಳುತ್ತದೆ. ಮತ್ತು ಫಲಿತಾಂಶ ಸಿಗುವರೆಗೂ ಪ್ರಯತ್ನವನ್ನು ಮುಂದುವರಿಸುತ್ತದೆ.. ಇದನ್ನು ಉತ್ತಮ ಆಡಳಿತ ಅಂತಾ ಕರೆಯುತ್ತಾರೆ.. ಇದನ್ನ ಜನಪರ ಆಡಳಿತ ಅಂತಾ ಕರೆಯುತ್ತಾರೆ..ಮತ್ತು ಇದನ್ನೆ ಭಾವನೆ ಅಂತಾ ಕರೆಯಬಹುದಾಗಿದೆ..
ಸ್ನೇಹಿತರೇ , ಭಾರತ ದೇಶದ ನಾಗರಿಕರು ನಮಗೆ ವಿಶೇಷವಾಗಿ ನೀಡಿರುವ ಜವಾಬ್ದಾರಿಯನ್ನು ನಾವು ಮರೆತಿಲ್ಲ.. ಮತ್ತು ಈ ವಿಶೇಷ ಜವಾಬ್ದಾರಿಯನ್ನು ಮತ್ತಷ್ಟು ಉತ್ತಮ ಉತ್ತಮವಾಗಿ ನಿರ್ವಹಿಸುವ ಸಲುವಾಗಿ ಅತ್ತುತ್ತಮ ರೀತಿಯಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ..ಮತ್ತಿದು ನಿಮ್ಮ ಅರಿವಿಗೂ ಬಂದಿರುತ್ತದೆ.. ಇನ್ನೂ ಕಳೇದ ಮೂರು ವರ್ಷಗಳ ಸಾಧನೆ ಬಗ್ಗೆ ಹೇಳುವುದಾದರೇ , ಈ ಮೂರು ವರ್ಷಗಳು ಅದ್ಬುತ ಹಾಗೂ ಸುಂದರವಾಗಿದ್ದೇವೆ.. ದೇಶದ ಅಭಿವೃದ್ಧಿಯನ್ನು ಉನ್ನತಸ್ಥರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಇನ್ನಿಲ್ಲದ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ ..ಅಷ್ಟೆಅಲ್ಲದೇ ಉನ್ನತ ಸ್ಥರಕ್ಕೆ ಕೊಂಡೊಯ್ಯುವ ಹಾದಿಯಲ್ಲಿ ಪ್ರತಿ ಕ್ಷಣವನ್ನು ಬದ್ಧತೆಯಿಂದಲೇ ವಿನಿಯೋಗಿಸಿ ಕಾರ್ಯನಿರ್ವಹಿಸಿದ್ಧೇವೆ.. ಹಾಗೇ ಈ ನಿಟ್ಟಿನಲ್ಲಿ ನಾನು ಅದೃಷ್ಟವಂತ , ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸುವ ಹಾದಿಯಲ್ಲಿ ನಿಮ್ಮ ಅಭೂತಪೂರ್ವ ಬೆಂಬಲ ಕೂಡ ನನಗೆ ದೊರಕಿದೆ.. ಅತಿದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಪಾಲ್ಗೊಂಡು ನಮ್ಮ ಸರ್ಕಾರದ ಸಾಧನೆ ನಿಟ್ಟಿನಲ್ಲಿ ಸಾಕಷ್ಟು ಪ್ರೋತ್ಸಾಹವನ್ನು ನೀಡಿದ್ದೇನೆ.. ನಿಮಗೆಲ್ಲರಿಗೂ ಮತ್ತೊಮ್ಮೆ ನನ್ನ ಅಭಿನಂಧನೆಗಳನ್ನು ವಿಶೇಷವಾಗಿ ಸಲ್ಲಿಸಲು ಇಷ್ಟಪಡುತ್ತೇನೆ.. ಮತ್ತು ಈ ಕಾರ್ಯಕ್ರಮದ ಬಳಿಕ ಫೋಟೋ ಸೇಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾನು ಕೇಳಲ್ಪಟ್ಟೆ…ಖಂಡಿತವಾಗಿಯು ನಿಮ್ಮೊಂದಿಗೆ ಅಲ್ಲಿ ಪಾಲ್ಗೊಳ್ಳುತ್ತೇನೆ.. ಯಾವ ಅನುಮಾನವೂ ಬೇಡ.. ಮತ್ತೊಮ್ಮೆ ಅನಿವಾಸಿ ಭಾರತೀಯರೇ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು…
I see immense energy in the Indian community that is based in USA: PM @narendramodi begins his speech at the community programme
— PMO India (@PMOIndia) June 25, 2017
I have travelled across USA before I became a CM or PM. And after taking over as PM, the warmth the Indian community gave is memorable: PM
— PMO India (@PMOIndia) June 25, 2017
In this programme I see both a mini-India and a mini-USA. People from all the states of both the nations are represented here today: PM
— PMO India (@PMOIndia) June 25, 2017
About the Indian diaspora, I can say that they rejoice when there is good news from India & want India to scale newer heights: PM
— PMO India (@PMOIndia) June 25, 2017
I can see that every Indian wants to contribute towards India's development. India is progressing at a record pace today: PM @narendramodi
— PMO India (@PMOIndia) June 25, 2017
The reasons Governments have been defeated in India are things like corruption and cheating. People of India do not like corruption: PM
— PMO India (@PMOIndia) June 25, 2017
Increased usage of technology brings transparency in systems: PM @narendramodi
— PMO India (@PMOIndia) June 25, 2017
When I think of a developed India, I think of a healthy India, particularly the good health of the women and children of our nation: PM pic.twitter.com/wqabi8zcrM
— PMO India (@PMOIndia) June 25, 2017
Transparent policies create an environment of trust among the people: PM @narendramodi pic.twitter.com/h8ra0PkjHt
— PMO India (@PMOIndia) June 25, 2017
The youth of India understands technology and the importance of technology very well: PM @narendramodi pic.twitter.com/eyLohoNOJG
— PMO India (@PMOIndia) June 25, 2017
Through technology driven governance we are creating an 'Adhunik Bharat' : PM @narendramodi
— PMO India (@PMOIndia) June 25, 2017
With proper policies and governance, aspirations of people of India can become achievements. We are already seeing the results of this: PM
— PMO India (@PMOIndia) June 25, 2017
India has succeeded in telling the world about the need to uproot the menace of terrorism: PM @narendramodi
— PMO India (@PMOIndia) June 25, 2017
Innovation, technology & talent are crucial in this day and age: PM @narendramodi
— PMO India (@PMOIndia) June 25, 2017
If you want to give back to India, this is the best time to do so: PM @narendramodi to the Indian community in USA
— PMO India (@PMOIndia) June 25, 2017
Keep the bridge with India. Your younger generations must continue your strong bond with India: PM to the Indian diaspora in USA
— PMO India (@PMOIndia) June 25, 2017
It is for everyone to see how MEA has, in addition to their routine work, emerged as a strong humanitarian force for Indians globally: PM pic.twitter.com/9D3TOC5j70
— PMO India (@PMOIndia) June 25, 2017
The Indian diaspora has faith that in times of trouble the local embassy is there to help: PM @narendramodi pic.twitter.com/7WpJWIgrwy
— PMO India (@PMOIndia) June 25, 2017
Our foreign ministry and in particular our foreign minister, @SushmaSwaraj has shown the way in helping people: PM @narendramodi pic.twitter.com/NtJ7ShaJDB
— PMO India (@PMOIndia) June 25, 2017
It is now well known in India- anyone in trouble tweets to Sushma Ji, she promptly replies and the Government takes prompt action: PM
— PMO India (@PMOIndia) June 25, 2017
Overwhelmed by the warmth of the Indian diaspora at the community programme in Washington DC. Sharing my speech. https://t.co/gJ5D93ZmHy pic.twitter.com/ctG5BIlUsR
— Narendra Modi (@narendramodi) June 25, 2017
I assure you, the dreams that you have for India will be fulfilled. pic.twitter.com/OtY16q5mKi
— Narendra Modi (@narendramodi) June 25, 2017
People of India detest corruption & cheating. I am proud that in the last three years, there is zero tolerance towards corruption. pic.twitter.com/l5O9THRHcd
— Narendra Modi (@narendramodi) June 25, 2017
भारत संयम रखता है, लेकिन जरूरत पड़े तो भारत अपने सामर्थ्य का परिचय भी करवा सकता है। pic.twitter.com/TuppRa68u5
— Narendra Modi (@narendramodi) June 25, 2017
Here is an example of how technology leads to transparency and furthers overall development. pic.twitter.com/OqxjyE2vFZ
— Narendra Modi (@narendramodi) June 25, 2017
India is a youthful nation with youthful dreams and aspirations. It is our constant endeavour to turn these aspirations into achievements. pic.twitter.com/lkSi6hEIMt
— Narendra Modi (@narendramodi) June 25, 2017