ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಸಿಂಗಾಪುರ ನಡುವೆ ನಗರ ಯೋಜನೆ ಮತ್ತು ಅಭಿವೃದ್ದಿಗೆ ಸಂಬಂಧಿಸಿ ಏರ್ಪಟ್ಟ ತಿಳುವಳಿಕಾ ಒಡಂಬಡಿಕೆಗೆ ಪೂರ್ವಾನ್ವಯಗೊಂಡಂತೆ ತನ್ನ ಅನುಮೋದನೆ ನೀಡಿತು. ಈ ಒಡಂಬಡಿಕೆಗೆ 2018ರ ಮೇ 31ರಂದು ಅಂಕಿತ ಹಾಕಲಾಗಿತ್ತು.
ಕೇಂದ್ರ ಮತ್ತು ರಾಜ್ಯಗಳಲ್ಲಿರುವ ನಗರ ಸಭೆ, ಪುರಸಭೆ ಮೊದಲಾದ ಸರಕಾರಿ ಸಂಸ್ಥೆಗಳು ನಗರಾಭಿವೃದ್ದಿ ಮತ್ತು ನಿರ್ವಹಣೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಿಂಗಾಪುರದ ಏಜೆನ್ಸಿಗಳ ಪ್ರಾವೀಣ್ಯತೆಯನ್ನು ಗಳಿಸಿಕೊಳ್ಳಲು ಅನುಕೂಲ ಒಅದಗಿಸುವುದು ಮತ್ತು ಆ ಮೂಲಕ ನಗರ ಪುನಃಶ್ಚೇತನಕ್ಕೆ ನೆರವಾಗುವುದು ಈ ತಿಳುವಳಿಕಾ ಒಡಂಬಡಿಕೆಯ ಉದ್ದೇಶ. ಇದು ’ನೀತ”ಯ (ಎನ್.ಐ.ಟಿ.ಐ.) ಸಾಮರ್ಥ್ಯವರ್ಧನೆ ಮಾಡಲಿದೆ ಮಾತ್ರವಲ್ಲದೆ ಸಾಕ್ಶ್ಯಾಧಾರ ಸಹಿತ ನೀತಿ ರಚನೆಗೆ , ಮೌಲ್ಯಮಾಪನ ಇತ್ಯಾದಿ ಕೌಶಲ್ಯಗಳನ್ನು ಒದಗಿಸಿಕೊಡಲಿದೆ. ಮತ್ತು ನೀತಿಗೆ ಹೊಸದಾಗಿ ಜೋಡಣೆಯಾದ ಚಿಂತಕರ ಕೂಟದ ಜವಾಬ್ದಾರಿಯನ್ನು ಹೆಚ್ಚು ಕ್ರಿಯಾಶೀಲವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ.
ಈ ತಿಳುವಳಿಕಾ ಒಡಂಬಡಿಕೆಯಡಿ ಯೋಜನೆ ಕ್ಷೇತ್ರ, ನಗರ ಯೋಜನೆ, ನೀರು ಮತ್ತು ತ್ಯಾಜ್ಯ ನೀರು ನಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆ, ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆ ಮತ್ತು ಸಾರ್ವಜನಿಕ ಹೂಡಿಕೆ ( ಸರಕಾರಿ-ಖಾಸಗಿ ಸಹಭಾಗಿತ್ವ ) ಗೆ ಆದ್ಯತೆ ನೀಡಲಾಗುವುದು.
ಪ್ರಮುಖ ಪರಿಣಾಮ:
ಉತ್ತಮ ಪದ್ದತಿಗಳ ಅನುಷ್ಟಾನದ ಜ್ಞಾನ , ಸಾಮರ್ಥ್ಯ ವರ್ಧನೆಗೆ ಈ ತಿಳುವಳಿಕಾ ಒಡಂಬಡಿಕೆ ಸಹಕಾರಿಯಾಗಲಿದೆಯಲ್ಲದೆ ರಾಜ್ಯ , ಕೇಂದ್ರ ಸರಕಾರ ಮಟ್ಟದಲ್ಲಿ ವಿವಿಧ ಏಜೆನ್ಸಿಗಳಿಗೆ ನಗರ ಯೋಜನೆ, ನೀರು ಮತ್ತು ತ್ಯಾಜ್ಯ ನೀರಿನ ನಿರ್ವಹಣೆ , ಘನ ತ್ಯಾಜ್ಯ ನಿರ್ವಹಣೆ, ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆ ಮತ್ತು ಸಾರ್ವಜನಿಕ ಹೂಡಿಕೆ ( ಸರಕಾರಿ- ಖಾಸಗಿ ಸಹಭಾಗಿತ್ವ ) ಇತ್ಯಾದಿ ಕ್ಷೇತ್ರಗಳಲ್ಲಿ ನಿರ್ವಹಣಾ ಬೆಂಬಲವನ್ನು ಒದಗಿಸಲಿದೆ.
ಫಲಾನುಭವಿಗಳು:
ಕೇಂದ್ರ ಸರಕಾರದ ಅಧಿಕಾರಿಗಳು , ರಾಜ್ಯ ಸರಕಾರದ ಅಧಿಕಾರಿಗಳು ಮತ್ತು ಸ್ಥಳೀಯಾಡಳಿತ ಸಂಸ್ಥೆಯ ಅಧಿಕಾರಿಗಳು ತಮ್ಮ ಜ್ಞಾನದ ಮಟ್ಟವನ್ನು ವಿಸ್ತರಿಸಿಕೊಳ್ಳುವ ಮೂಲಕ ನೇರ ಪ್ರಯೋಜನ ಪಡೆಯಲಿದ್ದಾರೆ. ಇದರಿಂದ ಅಂತಿಮವಾಗಿ ನಗರ ಸಾರ್ವಜನಿಕ ಸೌಲಭ್ಯಗಳ ಉತ್ತಮೀಕರಣ ಸಾಧ್ಯವಾಗಲಿದೆ.