ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಯು.ಎ.ಇ.ಯ– ನೆಲ ಮತ್ತು ಸಮುದ್ರ ಕುರಿತ ಫೆಡರಲ್ ಸಾರಿಗೆ ಪ್ರಾಧಿಕಾರ ಸಹಿ ಹಾಕಲಿರುವ ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಭಾರತ ನಡುವಿನ ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿನ ದ್ವಿಪಕ್ಷೀಯ ಸಹಕಾರದ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
ಈ ಉದ್ದೇಶಿತ ತಿಳಿವಳಿಕೆ ಒಪ್ಪಂದವು, ಭಾರತ ಮತ್ತು ಯುಎಇ ನಡುವೆ ಹೆಚ್ಚಿನ ಸಹಕಾರ, ವಿನಿಮಯ ಮತ್ತು ಸಹಯೋಗಕ್ಕೆ ಅವಕಾಶ ಕಲ್ಪಿಸುತ್ತದೆ, ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆಗೆ ಕೊಡುಗೆ ನೀಡುತ್ತದೆ ಮತ್ತು ದೇಶದಲ್ಲಿ ಸಾಗಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸುರಕ್ಷಿತ, ಮಿತವ್ಯಯದ, ಸಮರ್ಥ ಮತ್ತು ಪರಿಸರಾತ್ಮಕವಾಗಿ ಸದೃಢವಾದ ಸಾರಿಗೆಯ ಉತ್ತೇಜನಕ್ಕೆ ನೆರವಾಗುತ್ತದೆ. ಮತ್ತು ಈ ವಲಯದಲ್ಲಿನ ಸಹಕಾರಕ್ಕೆ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಲು ಎರಡೂ ದೇಶಗಳಿಗೆ ನೆರವಾಗುತ್ತದೆ.
ತಿಳಿವಳಿಕೆ ಒಪ್ಪಂದದ ಮುಖ್ಯಾಂಶಗಳು:
a. ಸಾರಿಗೆ ತಂತ್ರಗಾರಿಕೆ ಮತ್ತು ರಸ್ತೆಯ ಮೂಲಕ ಸರಕು ಮತ್ತು ಪ್ರಯಾಣಿಕರ ಸಾರಿಗೆ ನೀತಿಯ ವಲಯದಲ್ಲಿ ಸಹಕಾರ ಮತ್ತು ಜ್ಞಾನದ ವಿನಿಮಯ ಮತ್ತು ಹಂಚಿಕೆ;
b. ರಸ್ತೆ ಮೂಲಸೌಕರ್ಯಗಳ ಯೋಜನೆ, ಆಡಳಿತ ಮತ್ತು ನಿರ್ವಹಣೆ, ರಸ್ತೆ/ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯ ಗುಣಮಟ್ಟ ಮತ್ತು ತಂತ್ರಜ್ಞಾನ;
c. ರಸ್ತೆ ಸುರಕ್ಷತೆ ಯೋಜನೆ ಮತ್ತು ರಸ್ತೆ ಸುರಕ್ಷತೆ ಮಧ್ಯಸ್ಥಿಕೆ ಕಾರ್ಯತಂತ್ರ ಅಭಿವೃದ್ಧಿಪಡಿಸಲು, ಹಾಗೂ ರಸ್ತೆ ಅಪಘಾತಗಳ ಪರಿಣಾಮ ಉಂಟಾಗುವ ಸಾವು ಮತ್ತು ಗಾಯಯವನ್ನು ತಗ್ಗಿಸುವ ಗುರಿಯನ್ನು ಹೊಂದಿದ ಚಟುವಟಿಕೆ ಕುರಿತ ಉತ್ತಮ ಪದ್ಧತಿಗಳು ಮತ್ತು ಮಾಹಿತಿಯ ವಿನಿಮಯ:
d. ಆಧುನಿಕ ವ್ಯವಸ್ಥೆ, ತಂತ್ರಜ್ಞಾನ ಮತ್ತು ಬಳಕೆದಾರರಿಗೆ ಮುಕ್ತವಾದ ವಿಧಾನಗಳು ಮತ್ತು ವಿದ್ಯುನ್ಮಾನ ಟೋಲು ಸಂಗ್ರಹ ವ್ಯವಸ್ಥೆ ಸೇರಿದಂತೆ ಟೋಲು ಸಂಗ್ರಹ ಸೇರಿದಂತೆ ಬಳಕೆದಾರರಿಗೆ ಮುಕ್ತವಾದ (ಟೋಲ್) – ಸಂಬಂಧಿತ ವಿಷಗಳಲ್ಲಿ ಉತ್ತಮ ಪದ್ಧತಿಗಳು ಮತ್ತು ಜ್ಞಾನದ ವಿನಿಮಯ;
e. ಜಂಟಿ ಸಂಶೋಧನೆಯೂ ಸೇರಿದಂತೆ ರಸ್ತೆ ಮತ್ತು ಸೇತುವೆ ನಿರ್ಮಾಣ ಮತ್ತು ಸಾಮಗ್ರಿಗಳು ಹಾಗೂ ಸುಧಾರಿತ ತಂತ್ರಜ್ಞಾನ ಕ್ಷೇತ್ರದ ಮಾಹಿತಿಯ ವಿನಿಮಯ; ಮತ್ತು
f. ಆರ್ಥಿಕ ಪ್ರಗತಿಮತ್ತು ತಡೆರಹಿತ ಸರಕು ಸಾಗಣೆಗೆ ಒಂದು ವೇಗವರ್ಧಕವಾಗಿ, ಮೌಲ್ಯವರ್ಧಿತ ಸೇವೆಗಳು (ವಿ.ಎ.ಎಸ್.) ಮತ್ತು ಲಾಜಿಸ್ಟಿಕ್ ಪಾರ್ಕ್, ಸರಕು ಲಾಜಿಸ್ಟಿಕ್ಸ್, ಸಾಗಣೆಯ ಗೋದಾಮು ನಿರ್ಮಾಣಕ್ಕಾಗಿ ಬಂಡವಾಳ ಕ್ರೋಡೀಕರಿಸಲು ಸಹಕಾರ ಮತ್ತು ಮಾಹಿತಿಯ ವಿನಿಮಯ.
AKT/VBA/SH