Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಂಚಿಯಲ್ಲಿರುವ ಜಮೀನನ್ನು ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ (ಎಚ್.ಇ.ಸಿ.)ಯಿಂದ ಜಾರ್ಖಂಡ್ ಸರ್ಕಾರಕ್ಕೆ ವರ್ಗಾಯಿಸಲು ಸಚಿವ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಪ್ರಸ್ತುತ ರಾಂಚಿಯ ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ (ಎಚ್.ಇ.ಸಿ.) ಲಿಮಿಟೆಡ್ ಬಳಕೆ ಮಾಡದೇ ಬಿಟ್ಟಿರುವ 675.43ಎಕರೆ ಜಮೀನನ್ನು ಜಾರ್ಖಂಡ್ ಸರ್ಕಾರಕ್ಕೆ ವರ್ಗಾಯಿಸುವ ಮೂಲಕ ಹಣವಾಗಿ ಪರಿವರ್ತಿಸಲು ತನ್ನ ಅನುಮೋದನೆ ನೀಡಿದೆ. ಇದು ಎಚ್.ಇ.ಸಿ.ಗೆ 742.98 ಕೋಟಿ ರೂಪಾಯಿ ಎತ್ತುವಳಿಗೆ ನೆರವಾಗಲಿದೆ ಮತ್ತು ಈ ಹಣವನ್ನು ನೌಕರರ ಸಂಬಂಧಿತ ಶಾಸನಾತ್ಮಕ ಬಾಕಿ ಅಂದರೆ ಗ್ರಾಚ್ಯುಯಿಟಿ, ಪಿ.ಎಫ್., ರಜೆಯ ವೇತನ ಮತ್ತು ನಿವೃತ್ತ ನೌಕರರ ಇತರ ನಿವೃತ್ತಿ ಸೌಲಭ್ಯಗಳ ಬಾಕಿಯ ಸಾಲ ತೀರಿಸಲು ಬಳಸಿಕೊಳ್ಳಬೇಕಾಗಿದೆ. ಈ ಹಣವು ಎಚ್.ಇ.ಸಿ.ಗೆ ಸರ್ಕಾರದಿಂದ, ಬ್ಯಾಂಕ್ ಗಳಿಂದ ಪಡೆದ ಸಾಲ ಬಾಕಿ ಮತ್ತು ಇತರ ಜರೂರು ಹೊಣೆಗಳನ್ನು ಮರುಪಾವತಿಸಲೂ ನೆರವಾಗಲಿದೆ.

ಈ ಭೂಮಿಯ ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯದ ರಾಜಧಾನಿಯಲ್ಲಿ ಇತರ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಮತ್ತು ವರ್ಗಾವಣೆಯು ಸ್ಮಾರ್ಟ್ ಸಿಟಿ ಯೋಜನೆಯ ಅಗತ್ಯವನ್ನು ಪೂರೈಸಲಿದೆ.

AKT/VBA/SH