ಪಿಎಂಇಂಡಿಯಾ
ಭಾರತ್ ಮಾತಾ ಕಿ ಜೈ.
ಭಾರತ್ ಮಾತಾ ಕಿ ಜೈ.
ರಾಜಸ್ಥಾನದ ರಾಜ್ಯಪಾಲ ಶ್ರೀ ಹರಿಭಾವು ಬಾಗ್ಡೆ ಜಿ, ಜನಪ್ರಿಯ ಮುಖ್ಯಮಂತ್ರಿ ಶ್ರೀ ಭಜನ್‌ಲಾಲ್ ಶರ್ಮಾ ಜಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಉಪಮುಖ್ಯಮಂತ್ರಿ ದಿಯಾ ಕುಮಾರಿ ಜಿ, ಪ್ರೇಮ್‌ಚಂದ್ ಬೈರ್ವಾ ಜಿ, ರಾಜಸ್ಥಾನ ಸರ್ಕಾರದ ಎಲ್ಲಾ ಸಚಿವರೆ, ಸಂಸದರೆ ಮತ್ತು ಶಾಸಕರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ,
ಇಂದು ರಾಜಸ್ಥಾನದಲ್ಲಿ 10–12 ಸಾವಿರ ಸ್ಥಳಗಳಿಂದ ಲಕ್ಷಾಂತರ ಜನರು ಈ ಕಾರ್ಯಕ್ರಮಕ್ಕಾಗಿ ಒಟ್ಟುಗೂಡಿದ್ದಾರೆ ಎಂಬುದು ನನಗೆ ತಿಳಿದಿದೆ. ಈಗಲೂ ನಾನು ಪರದೆಗಳನ್ನು ನೋಡುವಾಗ, ಎಲ್ಲೆಡೆ ಹೆಚ್ಚಿನ ಜನರನ್ನೇ ನೋಡುತ್ತಿದ್ದೇನೆ. ತಂತ್ರಜ್ಞಾನದ ಮೂಲಕ ರಾಜಸ್ಥಾನದ ಪ್ರತಿಯೊಂದು ಮೂಲೆಯಿಂದಲೂ ನನ್ನ ಸಹೋದರ ಸಹೋದರಿಯರು ಈ ಕಾರ್ಯಕ್ರಮಕ್ಕೆ ಸಂಪರ್ಕ ಹೊಂದಿದ್ದಾರೆ, ನಾನು ಅವರೆಲ್ಲರಿಗೂ ನಮಸ್ಕರಿಸುತ್ತೇನೆ.
ಸ್ನೇಹಿತರೆ,
ಈ ಸುಡುವ ಬೇಸಿಗೆಯಲ್ಲಿ ಅನೇಕ ಸ್ಥಳಗಳಲ್ಲಿ ಇಂತಹ ಬೃಹತ್ ಸಭೆಗಳಲ್ಲಿ ನಿಮ್ಮ ಉಪಸ್ಥಿತಿಯಿಂದ ನಮಗೆ ಆಶೀರ್ವಾದ ಸಿಗುತ್ತಿವೆ, ಬಿಜೆಪಿ ಸರ್ಕಾರದ ಪ್ರಯತ್ನಗಳಲ್ಲಿ ನಿಮ್ಮ ನಂಬಿಕೆ ಎಷ್ಟು ಪ್ರಬಲವಾಗಿದೆ ಎಂಬುದನ್ನು ಇದು ತೋರಿಸುತ್ತಿದೆ. ಈ ಬೆಂಬಲ ಮತ್ತು ವಾತ್ಸಲ್ಯಕ್ಕಾಗಿ ನಾನು ರಾಜಸ್ಥಾನದ ಮಣ್ಣಿಗೆ ಋಣಿಯಾಗಿದ್ದೇನೆ.
ಸಹೋದರ ಸಹೋದರಿಯರೆ,
ಈ ಭೂಮಿ ಅಸಂಖ್ಯಾತ ವೀರರ ಶೌರ್ಯಕ್ಕೆ ಸಾಕ್ಷಿಯಾಗಿದೆ. ಈ ಯುದ್ಧಭೂಮಿಯ ಪ್ರತಿಯೊಂದು ಕಣವು ಎಲ್ಲಕ್ಕಿಂತ ಹೆಚ್ಚಾಗಿ ಸ್ವಾಭಿಮಾನ ಕಾಪಾಡಲು ನಮಗೆ ಕಲಿಸಿದೆ. ಸ್ವಾಭಿಮಾನ – ಅದು ವ್ಯಕ್ತಿಯಾಗಿರಲಿ ಅಥವಾ ರಾಷ್ಟ್ರವಾಗಿರಲಿ – ಅದು ಸ್ವಾವಲಂಬಿಯಾಗಿದ್ದಾಗ ಮಾತ್ರ, ಸಾಧ್ಯವಾದಷ್ಟು ಇತರರ ಮೇಲೆ ಕಡಿಮೆ ಅವಲಂಬಿತವಾದಾಗ ಮಾತ್ರ ಉನ್ನತ ಸ್ಥಾನದಲ್ಲಿ ಉಳಿಯುತ್ತದೆ. ಇಂದು ರಾಜಸ್ಥಾನದ ಮಣ್ಣಿನಿಂದ ಭಾರತವು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿಯಾಗುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಇಂದು ಈ ಸಂಸ್ಕರಣಾಗಾರವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಈ ಸಂಸ್ಕರಣಾಗಾರವು ಇಲ್ಲಿನ ಸಾವಿರಾರು ಜನರಿಗೆ ಉದ್ಯೋಗ ಒದಗಿಸುತ್ತದೆ. ಈ ಸಂಸ್ಕರಣಾಗಾರಕ್ಕಾಗಿ ನಾನು ರಾಜಸ್ಥಾನದ ಯುವಕರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೆ,
ಬಿಜೆಪಿ ಸರ್ಕಾರಗಳು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವುದನ್ನು ನಿಲ್ಲಿಸುವುದಿಲ್ಲ ಎಂಬುದಕ್ಕೆ ಇಂದು ಸಾಕ್ಷಿಯಾಗಿದೆ. ಯೋಜನೆಗಳನ್ನು ಪೂರ್ಣಗೊಳಿಸಲು ನಾವು ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಕೇವಲ 2 ತಿಂಗಳ ಹಿಂದೆ ಇಲ್ಲಿ ಅಪಘಾತ ಸಂಭವಿಸಿದ ನಂತರ, ಕೆಲಸ ಪೂರ್ಣಗೊಂಡ ವೇಗವು ಅಸಾಧಾರಣ ಪ್ರಯತ್ನದ ಉದಾಹರಣೆಯಾಗಿದೆ. ಎಷ್ಟೇ ದೊಡ್ಡ ಅಥವಾ ಅನಿರೀಕ್ಷಿತ ಸವಾಲು ಬಂದರೂ, ನವ ಭಾರತ ತನ್ನ ಸಂಕಲ್ಪದಿಂದ ಹಿಂದೆ ಸರಿಯುವುದಿಲ್ಲ ಅಥವಾ ಅದರ ವೇಗವನ್ನು ನಿಧಾನಗೊಳಿಸುವುದಿಲ್ಲ ಎಂಬುದನ್ನು ನೀವೇ ತೋರಿಸಿದ್ದೀರಿ.
ಸಹೋದರ ಸಹೋದರಿಯರೆ,
ಇಂದು ರಾಜಸ್ಥಾನದಲ್ಲಿ ಅಭಿವೃದ್ಧಿಯ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಲಾಗುತ್ತಿದೆ. ಇಂದು ಜೋಧಪುರದಲ್ಲಿ ಹೊಸ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟಯಾಗಿದೆ. ಹೊಸ ಟರ್ಮಿನಲ್‌ನ ವಾಸ್ತುಶಿಲ್ಪ ಮತ್ತು ಒಳಾಂಗಣಗಳು ಎಲ್ಲೆಡೆ ಟ್ರೆಂಡಿಂಗ್ ಆಗಿರುವುದನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದೆ – ರಾಜಸ್ಥಾನ ಎಲ್ಲೆಡೆ ಗೋಚರಿಸುತ್ತಿದೆ.
ಸ್ನೇಹಿತರೆ,
ಇದು ಮಾರ್ವಾರ್‌ನಲ್ಲಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ಉದ್ಯೋಗಕ್ಕೆ ಹೊಸ ಆವೇಗ ನೀಡುತ್ತದೆ. ಜೋಧಪುರದೊಂದಿಗೆ ಸಂಪರ್ಕ ಹೊಂದಿದವರನ್ನು ನಾನು ವಿಶೇಷವಾಗಿ ಸ್ವಾಗತಿಸುತ್ತೇನೆ. ಜೋಧಪುರದಿಂದಲೇ ಉಡಾನ್ ಯೋಜನೆಯ ಹೊಸ ಹಂತವು ಇಂದು ಆರಂಭವಾಗಿದೆ. ಇದರ ಅಡಿ ಸಣ್ಣ ಪಟ್ಟಣಗಳು ಮತ್ತು ದೂರದ ಪ್ರದೇಶಗಳನ್ನು ವಾಯು ಸಂಪರ್ಕದ ಮೂಲಕ ಸಂಪರ್ಕಿಸಲಾಗುತ್ತಿದೆ. ಇದರೊಂದಿಗೆ, ಜೈಪುರದ ಮೆಟ್ರೊ ಕೂಡ ವಿಸ್ತರಿಸಲಾಗುವುದು.
ಸಹೋದರ ಸಹೋದರಿಯರೆ,
ಶೇಖಾವತಿ ಪ್ರದೇಶದಲ್ಲಿನ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ದೀರ್ಘ ಕಾಯುವಿಕೆ ಕೂಡ ಕೊನೆಗೊಳ್ಳುತ್ತಿದೆ. ಈ ಎಲ್ಲಾ ಯೋಜನೆಗಳಿಗಾಗಿ ರಾಜಸ್ಥಾನದ ನನ್ನ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಇಂದು ರಾಜಸ್ಥಾನದ ಸುಮಾರು 54,000 ಯುವಕರು ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ. ಅವರೆಲ್ಲರಿಗೂ ಉಜ್ವಲ ಭವಿಷ್ಯವನ್ನು ನಾನು ಬಯಸುತ್ತೇನೆ. ಆ ಯುವ ಶಕ್ತಿಯು ರಾಜಸ್ಥಾನದ ಉಜ್ವಲ ಭವಿಷ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.
ಸ್ನೇಹಿತರೆ,
ರಾಜಸ್ಥಾನದ ಈ ಮಣ್ಣಿನಿಂದ ನಮ್ಮ ರಾಷ್ಟ್ರದ ಮತ್ತೊಂದು ಶಕ್ತಿಯ ಬಗ್ಗೆ ಮಾತನಾಡಲು ನಾನು ಬಯಸುತ್ತೇನೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಇಡೀ ವಿಶ್ವಾದ್ಯಂತ ಹೇಗೆ ಪ್ರಕ್ಷುಬ್ಧತೆ ಸೃಷ್ಟಿಸಿದೆ ಎಂಬುದನ್ನು ನೀವು ನೋಡಬಹುದು. ಪ್ರತಿಯೊಂದು ದೇಶವೂ ಸಂಕಷ್ಟದಲ್ಲಿದೆ. ಈ ಯುದ್ಧವು 21ನೇ ಶತಮಾನದ ಅತಿದೊಡ್ಡ ಇಂಧನ ಬಿಕ್ಕಟ್ಟು ಹುಟ್ಟುಹಾಕಿದೆ. ಪ್ರಮುಖ ರಾಷ್ಟ್ರಗಳು ಇಂಧನ ಕೊರತೆಯಿಂದ ಬಳಲುತ್ತಿವೆ.
ಸ್ನೇಹಿತರೆ,
21ನೇ ಶತಮಾನದ ಅತಿದೊಡ್ಡ ಇಂಧನ ಬಿಕ್ಕಟ್ಟಿನ ನಡುವೆ 21ನೇ ಶತಮಾನದಲ್ಲಿ ನವ ಭಾರತದ ಇಚ್ಛಾಶಕ್ತಿ ಮತ್ತು ಪ್ರಯತ್ನಗಳು ಮೇಲುಗೈ ಸಾಧಿಸಿವೆ. ಭಾರತವು ಪ್ರತಿಯೊಂದು ಹಂತದಲ್ಲೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದೆ, ಸಮಯಕ್ಕೆ ಸರಿಯಾಗಿ ಬಿಕ್ಕಟ್ಟನ್ನು ನಿರ್ಣಯಿಸಿ, ಪರಿಣಾಮಕಾರಿ ತಂತ್ರಗಳನ್ನು ರೂಪಿಸಿದೆ. ಸಂಪನ್ಮೂಲಗಳನ್ನು ಸಮತೋಲಿತ ರೀತಿಯಲ್ಲಿ ಬಳಸಿದೆ, ತನ್ನ ರಾಜತಾಂತ್ರಿಕ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡಿದೆ, ಭಾರತವು ಬಿಕ್ಕಟ್ಟನ್ನು ನಿವಾರಿಸಿದ್ದು ಹೀಗೆ.
ಸ್ನೇಹಿತರೆ,
ಕೆಲವು ಶಕ್ತಿಗಳು ಸಾರ್ವಜನಿಕವಾಗಿ ವದಂತಿಗಳು ಮತ್ತು ಭೀತಿ ಹರಡುವಲ್ಲಿ ನಿರತವಾಗಿದ್ದರೂ, ಹಗಲು ರಾತ್ರಿ ಅಪಾರ ಕೆಲಸ ಮಾಡಲಾಗುತ್ತಿತ್ತು. ತಾಳ್ಮೆ, ಪ್ರಯತ್ನ, ನೀತಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ತೆಗೆದುಕೊಂಡ ಸೂಕ್ಷ್ಮ ಕ್ರಮಗಳು – ಇವೆಲ್ಲವನ್ನೂ ಇತಿಹಾಸವೇ ಒಂದು ದಿನ ಅಭೂತಪೂರ್ವವೆಂದು ದಾಖಲಿಸುತ್ತದೆ. ನಾನು ಒಂದು ಉದಾಹರಣೆ ನೀಡುತ್ತೇನೆ: ಎಲ್ ಪಿಜಿ ಅಥವಾ ಅಡುಗೆ ಅನಿಲ. ನಮ್ಮ ಎಲ್ಪಿಜಿ ಅಗತ್ಯಗಳಲ್ಲಿ ಸುಮಾರು 60 ಪ್ರತಿಶತವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅದರಲ್ಲಿ 90 ಪ್ರತಿಶತವು ಹಾರ್ಮುಜ್ ಜಲಸಂಧಿಯ ಮೂಲಕ ಗಲ್ಫ್ ದೇಶಗಳಿಂದ ಬರುತ್ತದೆ. ಇದ್ದಕ್ಕಿದ್ದಂತೆ ಯುದ್ಧದ ಪರಿಸ್ಥಿತಿಗಳು ಆ ಪೂರೈಕೆಯನ್ನು ಬಹುತೇಕ ನಿಲ್ಲಿಸಿದವು. ನಮ್ಮ ದೇಶದಲ್ಲಿ ಭುಗಿಲೆದ್ದಿರಬಹುದಾದ ಅವ್ಯವಸ್ಥೆಯನ್ನು ನೀವೇ ಊಹಿಸಬಹುದು. ಆದರೆ ರಾಜಸ್ಥಾನದ ಮಣ್ಣು ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ನಮಗೆ ಪಾಠ ಕಲಿಸಿದೆ. ಅದಕ್ಕಾಗಿಯೇ, ಬಿಕ್ಕಟ್ಟು ಪ್ರಾರಂಭವಾದ ತಕ್ಷಣ, ನಾವು ಸಂಸ್ಕರಣಾಗಾರಗಳ ಸಾಮರ್ಥ್ಯದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಕೈಗಾರಿಕಾ ಬಳಕೆಯ ಅನಿಲ ಉತ್ಪಾದನೆಯನ್ನು ಎಲ್ಪಿಜಿ ಉತ್ಪಾದಿಸಲು ಮರುನಿರ್ದೇಶಿಸಲಾಯಿತು. ಕೇವಲ 7 ದಿನಗಳಲ್ಲಿ ಎಲ್ಪಿಜಿ ಉತ್ಪಾದನೆ ಹೆಚ್ಚಾಯಿತು. ಬಿಕ್ಕಟ್ಟಿನ ಸಮಯದಲ್ಲಿ ಮೊದಲು 35,000 ಮೆಟ್ರಿಕ್ ಟನ್‌ಗಳಿಂದ 54,000 ಮೆಟ್ರಿಕ್ ಟನ್‌ಗಳಿಗೆ ಉತ್ಪಾದನೆ ಹೆಚ್ಚಿಸಲಾಗಿದೆ. ಮೊದಲು ಎಲ್ಪಿಜಿ ಉತ್ಪಾದಿಸದ ಸಂಸ್ಕರಣಾಗಾರಗಳನ್ನು ಎಲ್ಪಿಜಿ ಉತ್ಪಾದಿಸುವಂತೆ ಪರಿವರ್ತಿಸಲಾಗಿದೆ.
ಸ್ನೇಹಿತರೆ,
ಸಂಪೂರ್ಣ ಬೇಡಿಕೆಯ ಹೊರೆ ಎಲ್ಪಿಜಿ ಮೇಲೆ ಮಾತ್ರ ಬೀಳದಂತೆ ನೋಡಿಕೊಳ್ಳಲು ಸರ್ಕಾರವು ಪಿಎನ್ ಜಿ ಸಂಪರ್ಕಗಳನ್ನು ವಿಸ್ತರಿಸಿತು – ಅಡುಗೆ ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಕೆಯಾಗುತ್ತಿದೆ. ಬಹಳ ಕಡಿಮೆ ಸಮಯದಲ್ಲೇ ಭಾರತವು 11 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪಿಎನ್ ಜಿ ಸಂಪರ್ಕ ಕಲ್ಪಿಸಲಾಗಿದೆ.
ಸಹೋದರ ಸಹೋದರಿಯರೆ,
ಒಂದೆಡೆ ನಾವು ಪೂರೈಕೆಯನ್ನು ಖಚಿತಪಡಿಸಿಕೊಂಡಿದ್ದೇವೆ. ಮತ್ತೊಂದೆಡೆ, ದೇಶೀಯ ಗ್ರಾಹಕರು ಹೆಚ್ಚಿನ ಹೊರೆ ಹೊರಲು ನಾವು ಬಿಡಲಿಲ್ಲ. ಆ ಪರಿಸ್ಥಿತಿಗಳಲ್ಲಿ ದೇಶೀಯ ಅನಿಲ ಸಿಲಿಂಡರ್‌ನ ಬೆಲೆ 2,000 ರೂ.ಗೆ ಏರಬಹುದಿತ್ತು, ಅದು ಪ್ರಮುಖ ಮಾರುಕಟ್ಟೆ ತಜ್ಞರ ಅಂದಾಜಾಗಿತ್ತು. ಆದರೆ ಈಗಲೂ ಸಹ ದೇಶೀಯ ಎಲ್ಪಿಜಿ ಸಿಲಿಂಡರ್‌ಗಳನ್ನು 950 ರೂ.ಗಿಂತ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಬಡವರಿಗೆ, ಉಜ್ವಲ ಸಿಲಿಂಡರ್‌ಗಳ ಬೆಲೆ 650 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಕೇವಲ 2 ದಿನಗಳ ಹಿಂದೆ, ಸರ್ಕಾರವು ವಾಣಿಜ್ಯ ಅನಿಲ ಬೆಲೆಗಳಲ್ಲಿ ಪ್ರಮುಖ ಕಡಿತ ಮಾಡಿದೆ. ಇದು ನಮ್ಮ ಸರ್ಕಾರ ಎಷ್ಟು ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ.
ಸ್ನೇಹಿತರೆ,
ಯುದ್ಧವು ಡೀಸೆಲ್ ಮತ್ತು ಪೆಟ್ರೋಲ್‌ಗೆ ದೊಡ್ಡ ಬಿಕ್ಕಟ್ಟು ಸೃಷ್ಟಿಸಿತು. ನಮ್ಮ ದೇಶದಲ್ಲಿ ದೊಡ್ಡ ತೈಲ ಬಾವಿಗಳಿಲ್ಲ. ಬಿಕ್ಕಟ್ಟು ತೀವ್ರಗೊಂಡಾಗ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 70 ಡಾಲರ್ ನಿಂದ 120 ಡಾಲರ್ ಗೆ ಏರಿತು. ಆಮದು ಮಾರ್ಗಗಳನ್ನು ನಿರ್ಬಂಧಿಸಲಾಯಿತು. ಅನೇಕ ದೇಶಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಶೇಕಡ 40ರಿಂದ 50ರಷ್ಟು ಹೆಚ್ಚಾದವು. ಕೆಲವು ದೇಶಗಳಲ್ಲಿ ಇಂಧನವನ್ನು ಸಹ ಪಡಿತರದಲ್ಲಿ ನೀಡಲಾಗುತ್ತಿದೆ. ಆದರೆ ಭಾರತದಲ್ಲಿ ಒಂದೇ ಒಂದು ದಿನವೂ ಅಂತಹ ಪರಿಸ್ಥಿತಿಗಳು ಉದ್ಭವಿಸಲಿಲ್ಲ. ವದಂತಿಗಳನ್ನು ಹರಡಲಾಯಿತು, ಜನರು ಭಯಭೀತರಾದರು, ರಾಜಕೀಯ ಮಾಡಲಾಗುತ್ತಿತ್ತು, ಆದರೆ ತಪ್ಪು ಉದ್ದೇಶ ಹೊಂದಿರುವವರು ಯಶಸ್ವಿಯಾಗಲಿಲ್ಲ. ದೂರದ ಪ್ರದೇಶಗಳಲ್ಲೂ ಸಹ, ಸಣ್ಣಪುಟ್ಟ ಅಡೆತಡೆಗಳನ್ನು ಹೊರತುಪಡಿಸಿ, ಯಾವುದೇ ಪ್ರಮುಖ ಪೂರೈಕೆ ಸವಾಲು ಇರಲಿಲ್ಲ. ಏಪ್ರಿಲ್ ಮತ್ತು ಜೂನ್ ನಡುವೆ ಮಾತ್ರ ತೈಲ ಕಂಪನಿಗಳು ಡೀಸೆಲ್ ಮತ್ತು ಪೆಟ್ರೋಲ್‌ನಲ್ಲಿ 75,000 ಕೋಟಿ ರೂ.ಗಿಂತ ಹೆಚ್ಚಿನ ನಷ್ಟ ಅನುಭವಿಸಿದವು. ಅದು ಹೊಸ ಸಂಸ್ಕರಣಾಗಾರವನ್ನು ನಿರ್ಮಿಸುವ ವೆಚ್ಚಕ್ಕೆ ಸಮನಾಗಿರುತ್ತದೆ. ಸರ್ಕಾರದ ಖಜಾನೆ ಈ ಹೊರೆಯನ್ನು ಹೊತ್ತುಕೊಂಡಿತು. ಸಾರ್ವಜನಿಕರು ಅತಿಯಾದ ಒತ್ತಡವನ್ನು ಎದುರಿಸದಂತೆ ನೋಡಿಕೊಳ್ಳಲು ನಾವು ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ. ಕಡಿಮೆ ಮಾಡಿದ್ದೇವೆ.
ಸ್ನೇಹಿತರೆ,
ಯುದ್ಧದ ಈ ಸಮಯದಲ್ಲಿ ಇತರೆ ದೇಶಗಳೊಂದಿಗಿನ ಭಾರತದ ಸ್ನೇಹವು ಅಮೂಲ್ಯವೆಂದು ಸಾಬೀತಾಯಿತು. ಬಿಕ್ಕಟ್ಟಿನ ಮೊದಲು ಭಾರತವು ಸುಮಾರು 25–26 ದೇಶಗಳಿಂದ ಇಂಧನ ಮತ್ತು ತೈಲವನ್ನು ಆಮದು ಮಾಡಿಕೊಂಡಿತು. ಆದರೆ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ರಾಜತಾಂತ್ರಿಕತೆ ಮಿಂಚಿತು. ಇತರೆ ರಾಷ್ಟ್ರಗಳೊಂದಿಗಿನ ನಮ್ಮ ಬಲಿಷ್ಠ ಸಂಬಂಧಗಳು ನಮಗೆ ಬಹಳ ಸಹಾಯ ಮಾಡಿದವು. ಭಾರತ 40ಕ್ಕೂ ಹೆಚ್ಚು ದೇಶಗಳಿಂದ ಇಂಧನ ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು. ಭಾರತವು ಜಗತ್ತಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿತು: ನಮಗೆ ರಾಷ್ಟ್ರೀಯ ಹಿತಾಸಕ್ತಿ ಮತ್ತು ನಮ್ಮ ನಾಗರಿಕರ ಕಲ್ಯಾಣವೇ ಅತ್ಯುನ್ನತವಾಗಿದೆ. ನಾಗರಿಕ ದೇವೋ ಭವ – ಇದು ನಮ್ಮ ಮಂತ್ರವಾಗಿದೆ.
ಸ್ನೇಹಿತರೆ,
ರಾಷ್ಟ್ರವು ಅಂತಹ ಅನಿರೀಕ್ಷಿತ ಸವಾಲನ್ನು ಆಕಸ್ಮಿಕವಾಗಿ ಜಯಿಸಲಿಲ್ಲ. ಇದರ ಹಿಂದೆ ಒಂದು ದಶಕಕ್ಕೂ ಹೆಚ್ಚು ಕಾಲ ಅನುಸರಿಸಲಾದ ದೂರದೃಷ್ಟಿಯ ನೀತಿಗಳ ಯಶಸ್ಸು ಇದೆ. ಇಂದು ನಾವು ರಾಜಸ್ಥಾನ ಸಂಸ್ಕರಣಾಗಾರವನ್ನು ಉದ್ಘಾಟಿಸುತ್ತಿದ್ದೇವೆ. 2017ರಲ್ಲಿ ನಾವು ಇದಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಆದರೆ 2018ರಿಂದ 2023ರ ವರೆಗೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಅವರ ಅಸಹಕಾರದಿಂದಾಗಿ ಇಲ್ಲಿ ಕೆಲಸ ಬಹುತೇಕ ಸ್ಥಗಿತಗೊಂಡಿತು. ಆದರೆ ಡಬಲ್-ಎಂಜಿನ್ ಸರ್ಕಾರ ಬಂದ ನಂತರ ಕೆಲಸ ವೇಗವಾಗಿ ಪ್ರಗತಿ ಸಾಧಿಸಿತು. ಇಂದು ನಾವು ಅದನ್ನು ರಾಷ್ಟ್ರಕ್ಕೆ ಅರ್ಪಿಸುತ್ತಿದ್ದೇವೆ. ನನ್ನ ಕಾರ್ಯಶೈಲಿ ನಿಮಗೆ ತಿಳಿದಿದೆ – ನಾವು ಶಂಕುಸ್ಥಾಪನೆ ನೆರವೇರಿಸುವ ಯೋಜನೆಗಳನ್ನು ನಾವೇ ಉದ್ಘಾಟಿಸುತ್ತೇವೆ. ಈ ರೀತಿ, ಭಾರತವು ತನ್ನ ಸಂಸ್ಕರಣಾಗಾರಗಳ ಸಾಮರ್ಥ್ಯವನ್ನು ನಿರಂತರವಾಗಿ ವಿಸ್ತರಿಸಿದೆ. ಅಮೆರಿಕದಲ್ಲಿ ಕಳೆದ 50 ವರ್ಷಗಳಲ್ಲಿ ಒಂದೇ ಒಂದು ಹೊಸ ಸಂಸ್ಕರಣಾಗಾರವನ್ನು ನಿರ್ಮಿಸಲಾಗಿಲ್ಲ. ಯುರೋಪಿನ ಸಂಸ್ಕರಣಾಗಾರ ಸಾಮರ್ಥ್ಯವು ಸ್ಥಿರವಾಗಿ ಕುಸಿದಿದೆ. ಏತನ್ಮಧ್ಯೆ, ಭಾರತವು ವಿಶ್ವದ 4ನೇ ಅತಿದೊಡ್ಡ ಸಂಸ್ಕರಣಾಗಾರ ಹೊಂದಿರುವ ರಾಷ್ಟ್ರವಾಗಿದೆ. ನಾವು ಇಲ್ಲಿಗೇ ನಿಲ್ಲುವುದಿಲ್ಲ. ಮುಂಬರುವ ವರ್ಷಗಳಲ್ಲಿ ಈ ಸಾಮರ್ಥ್ಯವು ಮತ್ತಷ್ಟು ಹೆಚ್ಚಾಗುತ್ತದೆ. ಈ ಪ್ರಯತ್ನಗಳು ಭಾರತವು ಶತಮಾನದ ಅತ್ಯಂತ ದೊಡ್ಡ ಇಂಧನ ಬಿಕ್ಕಟ್ಟನ್ನು ಎದುರಿಸಲು ಮತ್ತು ಜಯಿಸಲು ಅನುವು ಮಾಡಿಕೊಟ್ಟವು.
ಸ್ನೇಹಿತರೆ,
ವಿಶ್ವಾದ್ಯಂತದ ಯುದ್ಧಗಳಿಂದ ಎದುರಾಗಿರುವ ಅಶಾಂತಿ ನಮ್ಮ ರೈತರಿಗೆ ಸವಾಲುಗಳನ್ನು ಸೃಷ್ಟಿಸುತ್ತವೆ. ಪ್ರಸ್ತುತ ಪಶ್ಚಿಮ ಏಷ್ಯಾ ಬಿಕ್ಕಟ್ಟು, ಕೊಲ್ಲಿ ಬಿಕ್ಕಟ್ಟು ಮತ್ತು ಹಿಂದಿನ ಉಕ್ರೇನ್ ಯುದ್ಧ ಎಲ್ಲವೂ ಜಾಗತಿಕವಾಗಿ ರಸಗೊಬ್ಬರ ಕೊರತೆ ಉಂಟುಮಾಡಿತು. ಉಕ್ರೇನ್ ಯುದ್ಧದ ನಂತರ, ಒಂದು ಚೀಲ ಯೂರಿಯಾದ ಬೆಲೆ 3,000 ರೂ.ಗಿಂತ ಹೆಚ್ಚಾಯಿತು. ಆದರೆ ನಾವು ನಮ್ಮ ರೈತರಿಗೆ ಪ್ರತಿ ಚೀಲಕ್ಕೆ 300 ರೂ.ಗೆ ಯೂರಿಯಾ ಒದಗಿಸುವುದನ್ನು ಮುಂದುವರೆಸಿದ್ದೇವೆ. ಇದಕ್ಕಾಗಿ, ಸರ್ಕಾರವು ಖಜಾನೆಯಿಂದ ಲಕ್ಷಾಂತರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ, ಸಬ್ಸಿಡಿಗಳನ್ನು ನೀಡಲಾಗುತ್ತಿದೆ. ಪೂರೈಕೆ ಸರಪಳಿಗಳಿಗೆ ಅಡ್ಡಿ ಉಂಟಾಯಿತು. ಆದರೆ ಅವೆಲ್ಲವುಗಳಿಗೆ ಭಾರತ ಪರಿಹಾರಗಳನ್ನು ಕಂಡುಕೊಂಡಿತು. ಸರ್ಕಾರವು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಿತು. ಅನೇಕ ದೇಶಗಳಲ್ಲಿನ ನಮ್ಮ ರಾಯಭಾರ ಕಚೇರಿಗಳಿಗೆ ರಸಗೊಬ್ಬರಗಳನ್ನು ಸಂಗ್ರಹಿಸಲು ವಿಶೇಷ ಜವಾಬ್ದಾರಿ ನೀಡಲಾಯಿತು. ಆಮದುಗಳ ಜತೆಗೆ, ನಾವು ದೇಶೀಯ ಉತ್ಪಾದನೆ ಹೆಚ್ಚಿಸಿದ್ದೇವೆ. ನೈಸರ್ಗಿಕ ಕೃಷಿಯಂತಹ ಪರ್ಯಾಯಗಳನ್ನು ಸಹ ನಾವು ಉತ್ತೇಜಿಸಿದ್ದೇವೆ. ಖರೀದಿ ಮತ್ತು ಕಪ್ಪು ಮಾರುಕಟ್ಟೆಯ ವಿರುದ್ಧ ನಾವು ಸದೃಢ ಕ್ರಮಗಳನ್ನು ಕೈಗೊಂಡಿದ್ದೇವೆ.
ಸ್ನೇಹಿತರೆ,
ಅದೇ ರೀತಿ, ನಾವು ನಮ್ಮ ಕೈಗಾರಿಕೆಗಳು ಮತ್ತು ಎಂಎಸ್ಎಂಇಗಳನ್ನು ನೋಡಿಕೊಂಡಿದ್ದೇವೆ. ಎಂಎಸ್ಎಂಇಗಳು ಹೆಚ್ಚುತ್ತಿರುವ ವೆಚ್ಚಗಳನ್ನು ಎದುರಿಸುತ್ತಿದ್ದವು. ಆದ್ದರಿಂದ ನಾವು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯ ಹೊಸ ಹಂತ ಪರಿಚಯಿಸಿದ್ದೇವೆ. ಈ ಯೋಜನೆಯಡಿ, ಬ್ಯಾಂಕುಗಳು ಎಂಎಸ್ಎಂಇಗಳಿಗೆ ಶೇಕಡ 20ರಷ್ಟು ಹೆಚ್ಚುವರಿ ಸಾಲಗಳನ್ನು ಒದಗಿಸುತ್ತಿವೆ, ಸರ್ಕಾರವು ಈ ಸಾಲಗಳಿಗೆ 100 ಪ್ರತಿಶತ ಗ್ಯಾರಂಟಿ ನೀಡುತ್ತಿದೆ, ಇದು ಮೋದಿಯವರ ಗ್ಯಾರಂಟಿಯಾಗಿದೆ. ಇದು ಸಣ್ಣ ಕೈಗಾರಿಕೆಗಳು ಮತ್ತು ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಯೋಜನ ನೀಡಿತು. ಅಂತಹ ನಿರ್ಧಾರಗಳ ಪರಿಣಾಮವಾಗಿ, ಇಂದು ನಮ್ಮ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳು ಸುರಕ್ಷಿತವಾಗಿವೆ.
ಸ್ನೇಹಿತರೆ,
ಭಾರತದ ಬಲದಲ್ಲಿ ನಮಗೆ ನಂಬಿಕೆ ಇರುವುದರಿಂದ ನಮ್ಮ ಸರ್ಕಾರ ನಿರಂತರವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ನಮ್ಮ ನಾಗರಿಕರ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇತ್ತು. ಇಂದು 1.4 ಶತಕೋಟಿ ಭಾರತೀಯರಿಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಕಷ್ಟದ ಸಮಯದಲ್ಲಿ ದೇಶದೊಂದಿಗೆ ಸದೃಢವಾಗಿ ನಿಂತಿದ್ದಕ್ಕಾಗಿ, ವದಂತಿಗಳು, ಭಯ ಮತ್ತು ಗೊಂದಲಗಳನ್ನು ವಿರೋಧಿಸಿದ್ದಕ್ಕಾಗಿ, ಅಸ್ಥಿರತೆಯನ್ನು ಹರಡುವ ಪಿತೂರಿಗಳನ್ನು ಸೋಲಿಸಿದ್ದಕ್ಕಾಗಿ ನಾನು ರಾಷ್ಟ್ರದ ಜನರಿಗೆ ನಮಸ್ಕರಿಸುತ್ತೇನೆ. ಈ ನಂಬಿಕೆಯೇ ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ದಿದೆ. ಭಾರತ ವಿಫಲವಾಗುವುದನ್ನು ನೋಡಲು ಬಯಸಿದ್ದವರು, ವೈಫಲ್ಯದ ಭವಿಷ್ಯ ನುಡಿದಿದ್ದವರು ಇಂದು ಹತಾಶೆಯಲ್ಲಿ ಮುಳುಗಿರಬೇಕು.
ಸ್ನೇಹಿತರೆ,
ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸದೊಂದಿಗೆ ತಾಯಿಯ ಹೆಸರಿನಲ್ಲಿ ಖೇಜ್ರಿ ಸಸಿಯನ್ನು ನೆಡುವ ಸೌಭಾಗ್ಯವೂ ನನಗೆ ಸಿಕ್ಕಿತು. ರಾಜಸ್ಥಾನದಲ್ಲಿ ಖೇಜ್ರಿ ಎಷ್ಟು ಮಹತ್ವದ್ದಾಗಿದೆ ಎಂಬುದು ನನಗೆ ತಿಳಿದಿದೆ. ಮರುಭೂಮಿ ಹೆಚ್ಚಾಗುವುದನ್ನು ತಡೆಯಲು ಇದು ಪ್ರಮುಖ ಪಾತ್ರ ವಹಿಸಿದೆ. ಈ ಸಸಿ ನೆಡುವುದು ನಮ್ಮ ಕೆಲಸ ಸಂಸ್ಕೃತಿಗೆ ಉದಾಹರಣೆಯಾಗಿದೆ. ನಮ್ಮ ಪರಿಸರ ರಕ್ಷಿಸುವುದರ ಜತೆಗೆ ನಾವು ಪ್ರಗತಿಯ ಹೊಸ ಎತ್ತರ ತಲುಪಬೇಕು. ಈ ದೃಷ್ಟಿಕೋನದೊಂದಿಗೆ, ನಮ್ಮ ಸರ್ಕಾರವು ಪರ್ಯಾಯ ಇಂಧನ ಮೂಲಗಳ ಮೇಲೆ ಕೆಲಸ ಮಾಡುತ್ತಿದೆ. ವಿಶೇಷವಾಗಿ ಇಲ್ಲಿ ಸೂರ್ಯ ದೇವರ ಆಶೀರ್ವಾದ ಪಡೆದ ರಾಜಸ್ಥಾನದಲ್ಲಿ, ವಿಶ್ವ ದರ್ಜೆಯ ಸೌರ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ, ರಾಜಸ್ಥಾನದ 1,50,000ಕ್ಕೂ ಹೆಚ್ಚಿನ ಮನೆಗಳನ್ನು ಈಗಾಗಲೇ ಸೌರಶಕ್ತಿಗೆ ಸಂಪರ್ಕಿಸಲಾಗಿದೆ. ಪ್ರಧಾನ ಮಂತ್ರಿ ಕುಸುಮ್ ಯೋಜನೆಯಡಿ, ರಾಜಸ್ಥಾನದ ರೈತರಿಗೆ 65,000ಕ್ಕೂ ಹೆಚ್ಚಿನ ಸೌರ ಪಂಪ್‌ಗಳನ್ನು ಒದಗಿಸಲಾಗಿದೆ.
ಸ್ನೇಹಿತರೆ,
ಅವುಗಳ ಹಿಂದಿನ ಉದ್ದೇಶ ಸ್ಪಷ್ಟವಾಗಿದ್ದರೆ ಕಠಿಣ ನಿರ್ಣಯಗಳನ್ನು ಸಹ ಪೂರೈಸಬಹುದು. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವ ಇರುವ ದೊಡ್ಡ ವ್ಯತ್ಯಾಸವಾಗಿದೆ.
ಸ್ನೇಹಿತರೆ,
ರಾಜಸ್ಥಾನದ ನೀರಿನ ಸಮಸ್ಯೆಗಳನ್ನು ಪರಿಹರಿಸುವುದು ಮತ್ತೊಂದು ಪ್ರಮುಖ ಸವಾಲಾಗಿದೆ. ರಾಜಸ್ಥಾನದ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್ ಸರ್ಕಾರಗಳು ಎಂದಿಗೂ ದೃಢವಾದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಆದರೆ ಬಿಜೆಪಿ ವಿಭಜನೆಯ ರಾಜಕೀಯವನ್ನು ಅನುಸರಿಸುವುದಿಲ್ಲ. ಬಿಜೆಪಿಯು ರಾಷ್ಟ್ರ ಮೊದಲು ಎಂಬ ಮನೋಭಾವದೊಂದಿಗೆ ಕೆಲಸ ಮಾಡುತ್ತಿದೆ. ಗುಜರಾತ್‌ನಲ್ಲಿ ನಾವು ನೀರಿನ ಯೋಜನೆಗಳಲ್ಲಿ ಕೆಲಸ ಮಾಡಿದಾಗ ಮತ್ತು ರಾಜಸ್ಥಾನದೊಂದಿಗೆ ನೀರು ಹಂಚಿಕೊಳ್ಳುವ ಪ್ರಶ್ನೆ ಉದ್ಭವಿಸಿದಾಗ, ನನಗೆ ಸ್ಪಷ್ಟವಾಗಿ ನೆನಪಿದೆ – ಭಾರತದಾದ್ಯಂತ ರಾಜ್ಯಗಳು ದಶಕಗಳಿಂದ ನೀರಿನ ಬಗ್ಗೆ ಹೋರಾಡಿವೆ. ಗುಜರಾತ್ ನರ್ಮದಾ ನೀರನ್ನು ಹಂಚಿಕೊಳ್ಳುತ್ತದೆಯೇ ಎಂದು ರಾಜಸ್ಥಾನದ ಜನರು ಆಶ್ಚರ್ಯಪಟ್ಟರು. ಆದರೆ ರಾಜಸ್ಥಾನ ಮತ್ತು ಗುಜರಾತ್ ಎರಡರಲ್ಲೂ ಬಿಜೆಪಿ ಸರ್ಕಾರವಿದ್ದದ್ದು ನಮ್ಮ ಅದೃಷ್ಟ. ಆ ಸಮಯದಲ್ಲಿ ನಾನು ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದೆ, ಇಲ್ಲಿ ಸಹೋದರಿ ವಸುಂಧರಾ ಜಿ ಮುಖ್ಯಮಂತ್ರಿಯಾಗಿದ್ದರು. ಒಟ್ಟಾಗಿ, ಸಂಘರ್ಷವಿಲ್ಲದೆ, ವಿವಾದಗಳಿಲ್ಲದೆ, ಆಂದೋಲನವಿಲ್ಲದೆ, ಜಗಳಗಳಿಲ್ಲದೆ, ನಾವು ರಾಜಸ್ಥಾನದೊಂದಿಗೆ ನರ್ಮದಾ ನದಿ ನೀರನ್ನು ಹಂಚಿಕೊಂಡಿದ್ದೇವೆ. ಇಂದು ರಾಜಸ್ಥಾನದ ಅನೇಕ ಹಳ್ಳಿಗಳು ತಾಯಿ ನರ್ಮದೆಯ ನೀರನ್ನು ಪಡೆಯುತ್ತಿವೆ. ಇದೀಗ, ಭಜನ್‌ಲಾಲ್ ಜಿ ಈ ಸಾಧನೆಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದರು.
ಸಹೋದರ ಸಹೋದರಿಯರೆ,
ಈಗ ರಾಜಸ್ಥಾನ ಮತ್ತು ಹರಿಯಾಣ ಎರಡರಲ್ಲೂ ಬಿಜೆಪಿ ಸರ್ಕಾರಗಳೊಂದಿಗೆ, ಪರಸ್ಪರ ಒಪ್ಪಂದದ ಮೂಲಕ ಮೊದಲ ಬಾರಿಗೆ ಪರಿಹಾರಗಳನ್ನು ನೀಡಲಾಗಿದೆ. ರಾಜಸ್ಥಾನ ಮತ್ತು ಹರಿಯಾಣ ಒಟ್ಟಾಗಿ ಶೇಖಾವತಿ ನೀರು ತರುತ್ತಿವೆ. ಇತ್ತೀಚೆಗೆ ಒಂದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರ ಅಡಿ, ಹತ್ನಿಕುಂಡ್ ಬ್ಯಾರೇಜ್‌ನಿಂದ ರಾಜಸ್ಥಾನಕ್ಕೆ ಭೂಗತ ಪೈಪ್‌ಲೈನ್‌ಗಳ ಮೂಲಕ ನೀರನ್ನು ತರಲಾಗುವುದು. ಇದು ಸಿಕಾರ್, ಚುರು, ಜುಂಜುನು ಮತ್ತು ಇಡೀ ಶೇಖಾವತಿ ಪ್ರದೇಶದ ಲಕ್ಷಾಂತರ ಜನರಿಗೆ ಪ್ರಯೋಜನ ನೀಡುತ್ತದೆ. ಈ ಯೋಜನೆಗೆ ಸುಮಾರು 34,000 ಕೋಟಿ ರೂ. ಖರ್ಚು ಮಾಡಲಾಗುವುದು.
ಸ್ನೇಹಿತರೆ,
ಭವಿಷ್ಯದಲ್ಲಿ ಯಮುನಾ ಮೇಲ್ದಂಡೆ ಜಲಾನಯನ ಪ್ರದೇಶದಲ್ಲಿ ರೇಣುಕಾ, ಲಖ್ವಾರ್ ಮತ್ತು ಕಿಶೌ ಅಣೆಕಟ್ಟುಗಳು ಪೂರ್ಣಗೊಂಡ ನಂತರ, ರಾಜಸ್ಥಾನವು ಮತ್ತಷ್ಟು ಪ್ರಯೋಜನ ಪಡೆಯುತ್ತದೆ. ಹಳ್ಳಿಗಳಿಗೆ ನಲ್ಲಿ ನೀರು ಒದಗಿಸುವ ಕೆಲಸವೂ ವೇಗವಾಗಿ ಮುಂದುವರೆದಿದೆ. ರಾಮಜಲ್ ಸೇತು ಯೋಜನೆಯು ಈ ದೃಷ್ಟಿಕೋನದ ಪರಿಣಾಮವಾಗಿದೆ. ಇದರ ಜತೆಗೆ, ರಾಜಸ್ಥಾನವು “ಜಲ್ ಸಂಚಯ್, ಜನ್ ಭಾಗೀದಾರಿ” ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದರ ಅಡಿ, ದೇಶಾದ್ಯಂತ ಸುಮಾರು 2.5 ದಶಲಕ್ಷ ಸೋಕ್ ಪಿಟ್‌ಗಳನ್ನು ನಿರ್ಮಿಸಲಾಗಿದೆ. ರಾಜಸ್ಥಾನದಲ್ಲೇ 125,000ಕ್ಕೂ ಹೆಚ್ಚಿನ ಸೋಕ್ ಪಿಟ್‌ಗಳನ್ನು ನಿರ್ಮಿಸಲಾಗಿದೆ. ಇವು ನೀರನ್ನು ಸಂರಕ್ಷಿಸುತ್ತಿವೆ ಮತ್ತು ಅಂತರ್ಜಲ ಮಟ್ಟವನ್ನು ಸುಧಾರಿಸುತ್ತಿವೆ. ಈ ಪ್ರಯತ್ನಗಳಿಗಾಗಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಮತ್ತು ಶೇಖಾವತಿಯ ಜನರನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಇಂದು ದೇಶವು ಒಂದು ನಿರ್ಣಯ ತೆಗೆದುಕೊಂಡಾಗ ಅಥವಾ ಗುರಿ ಹೊಂದಿಸಿದಾಗ, ರಾಜಸ್ಥಾನವು ಅದರ ಕೇಂದ್ರದಲ್ಲಿದೆ. ಇಲ್ಲಿ ಆಧುನಿಕ ಮೂಲಸೌಕರ್ಯವನ್ನು ಹೆಚ್ಚಿನ ವೇಗದಲ್ಲಿ ನಿರ್ಮಿಸಲಾಗುತ್ತಿದೆ. ಹೊಸ ದಾಖಲೆಗಳನ್ನು ಸ್ಥಾಪಿಸಲಾಗುತ್ತಿದೆ. ಇಂದು, ಜೈಪುರ ಮೆಟ್ರೋ ಹಂತ–2ರ ಶಂಕುಸ್ಥಾಪನೆ ಮತ್ತು ಜೋಧಪುರ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆಯು ರಾಜಸ್ಥಾನದ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುತ್ತದೆ, ಅದಕ್ಕೆ ಹೊಸ ರೆಕ್ಕೆಪುಕ್ಕಗಳನ್ನು ನೀಡುತ್ತದೆ. ಜೈಪುರ ಮೆಟ್ರೋ ಹಂತ–2 ಪೂರ್ಣಗೊಂಡ ನಂತರ ಜೈಪುರದ ಒಟ್ಟು ಮೆಟ್ರೋ ಜಾಲವು 50 ಕಿಲೋಮೀಟರ್‌ಗಳನ್ನು ದಾಟುತ್ತದೆ. ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಮೆಟ್ರೋ ಜಾಲಗಳು ಪರಸ್ಪರ ಸಂಪರ್ಕ ಹೊಂದುತ್ತವೆ. ಇದು ಸ್ಥಳೀಯ ನಿವಾಸಿಗಳಿಗೆ ಜೀವನ ಸುಲಭಗೊಳಿಸುವುದಲ್ಲದೆ, ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತದೆ.
ಸ್ನೇಹಿತರೆ,
ಮುಂಬರುವ ಕಾಲದಲ್ಲಿ ನಾವು ಅಭಿವೃದ್ಧಿಯ ಹೊಸ ಆಯಾಮಗಳನ್ನು ತಲುಪಬೇಕು. ನೀವು ಈ ರೀತಿಯಲ್ಲಿ ಡಬಲ್-ಎಂಜಿನ್ ಸರ್ಕಾರವನ್ನು ಆಶೀರ್ವದಿಸುವುದನ್ನು ಮುಂದುವರಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ಒಟ್ಟಾಗಿ ನಾವು ರಾಜಸ್ಥಾನಕ್ಕೆ ಹೊಸ ಭವಿಷ್ಯ ನಿರ್ಮಿಸುತ್ತೇವೆ. ಈ ನಂಬಿಕೆಯೊಂದಿಗೆ, ಸಂಸ್ಕರಣಾಗಾರ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳಿಗಾಗಿ ರಾಜಸ್ಥಾನದ ಜನರು ಮತ್ತು ರಾಷ್ಟ್ರವನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ನನ್ನೊಂದಿಗೆ ಹೇಳಿ –
ಭಾರತ್ ಮಾತಾ ಕಿ ಜೈ.
ರಾಜಸ್ಥಾನದ ಶಕ್ತಿಯನ್ನು ತೋರಿಸಲು ಎರಡೂ ಮುಷ್ಟಿಗಳನ್ನು ಮೇಲಕ್ಕೆತ್ತಿ –
ಭಾರತ್ ಮಾತಾ ಕಿ ಜೈ.
ಭಾರತ್ ಮಾತಾ ಕಿ ಜೈ.
ಭಾರತ್ ಮಾತಾ ಕಿ ಜೈ.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲ ಭಾಷಣವನ್ನು ಹಿಂದಿ ಭಾಷೆಯಲ್ಲಿ ಮಾಡಿದ್ದಾರೆ.
*****
A very special day for Rajasthan! Development initiatives across aviation, energy and connectivity will strengthen infrastructure, accelerate growth and improve ease of living.
— Narendra Modi (@narendramodi) July 4, 2026
https://t.co/gYw1RXYzLq
चुनौती चाहे कितनी भी बड़ी और अप्रत्याशित क्यों न हो... नया भारत अपने संकल्पों से न पीछे हटता है... न अपनी रफ्तार कम करता है: PM @narendramodi
— PMO India (@PMOIndia) July 4, 2026
आज ही, जोधपुर में नए एयरपोर्ट टर्मिनल का उद्घाटन किया गया है।
— PMO India (@PMOIndia) July 4, 2026
ये मारवाड़ में पर्यटन, व्यापार और रोजगार को नई गति देगा: PM @narendramodi
21वीं सदी के सबसे बड़े ऊर्जा संकट पर... 21वीं सदी के नए भारत की इच्छा-शक्ति और भारत के प्रयास भारी पड़े हैं।
— PMO India (@PMOIndia) July 4, 2026
भारत ने हर स्तर पर सही फैसले लिए... संकट का समय रहते सटीक आंकलन किया... प्रभावी रणनीति बनाई... भारत के संसाधनों का संतुलित प्रयोग किया।
भारत की diplomatic power का…
आज, मैं 140 करोड़ देशवासियों का आभार प्रकट करता हूँ... उन्हें धन्यवाद कहता हूँ...
— PMO India (@PMOIndia) July 4, 2026
जिस तरह, वो इस मुश्किल समय में देश के साथ मजबूती से खड़े रहे...
जिस तरह, देशवासियों ने अफवाह, डर और भ्रम फैलाने वालों का सामना किया...
देश में अस्थिरता फैलाने की साज़िशों को नाकाम किया... देश…
अब राजस्थान और हरियाणा सरकार मिलकर शेखावटी तक पानी पहुंचाएंगे।
— PMO India (@PMOIndia) July 4, 2026
हाल ही में दोनों राज्यों के बीच समझौते पर मुहर भी लग चुकी है।
इस समझौते के तहत हथिनीकुंड बैराज से पानी राजस्थान लाया जाएगा।
इसके लिए अंडरग्राउंड पाइपलाइन बिछाई जाएगी।
इसका लाभ सीकर, चूरू, झुंझुनूं और आसपास के पूरे…
बीते एक दशक में हमने देश की ऊर्जा क्षमता को बढ़ाने के अभूतपूर्व प्रयास किए हैं। इन्हीं प्रयासों का नतीजा है कि आज 21वीं सदी के सबसे बड़े ऊर्जा संकट पर नए भारत की इच्छाशक्ति भारी पड़ी है। pic.twitter.com/25Hdg2t7X2
— Narendra Modi (@narendramodi) July 4, 2026
पश्चिम एशिया में युद्ध की वजह से डीजल-पेट्रोल पर आए संकट को देखते हुए कई तरह की अफवाहें फैलाने और डराने-भड़काने के राजनीतिक खेल खेले गए। लेकिन भारत ने अपनी डिप्लोमेसी और दोस्ती से हर संकट पर काबू पाकर सभी गलत इरादों को नाकाम कर दिया। pic.twitter.com/QOE86SANed
— Narendra Modi (@narendramodi) July 4, 2026
युद्ध के हालात में किसानों के लिए फर्टिलाइजर की समस्या हो या MSMEs से जुड़ी चुनौतियां, हमने इनसे निपटने के लिए सही समय पर सटीक कदम उठाए। इससे वे आज खुद को सुरक्षित महसूस कर रहे हैं। pic.twitter.com/ms5xjAdpDs
— Narendra Modi (@narendramodi) July 4, 2026
हाल के वैश्विक संकट के दौरान जो लोग भारत को असफल होते देखना चाह रहे थे, वे आज इसलिए निराशा की गर्त में पडे़ होंगे… pic.twitter.com/CNcOmimtEI
— Narendra Modi (@narendramodi) July 4, 2026
कांग्रेस की सरकारों ने राजस्थान के जल-संकट को दूर करने के लिए कभी कोई ठोस काम नहीं किया। भाजपा सरकारों का यही फायदा है कि पहले गुजरात से मां नर्मदा का पानी यहां पहुंचा और अब राजस्थान और हरियाणा मिलकर शेखावटी तक पानी पहुंचाएंगे। pic.twitter.com/8PMPdN9CDa
— Narendra Modi (@narendramodi) July 4, 2026
हमारी सरकार ऊर्जा के दूसरे स्रोतों पर भी काम कर रही है। राजस्थान पर सूर्यदेव की कृपा को देखते हुए यहां विश्वस्तरीय सोलर पार्क बनाने के साथ-साथ सौर ऊर्जा से जुड़े कई प्रयास किए जा रहे हैं। pic.twitter.com/J7VIszvXUG
— Narendra Modi (@narendramodi) July 4, 2026