ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಜಸ್ವ ಗ್ಯಾನ್ ಸಂಗಮ್ ನಲ್ಲಿ ತೆರಿಗೆ ಆಡಳಿತಗಾರರನ್ನುದ್ದೇಶಿಸಿ ಭಾಷಣ ಮಾಡಿದರು. ಇದೇ ಮೊದಲ ಬಾರಿಗೆ ಎರಡು ಕಕಂದಾಯ ಮಂಡಳಿಗಳಾದ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಮತ್ತು ಅಬಕಾರಿ ಮತ್ತು ಕಸ್ಟಂಸ್ ನ ಕೇಂದ್ರೀಯ ಮಂಡಳಿ (ಸಿಬಿಇಸಿ) ಏಕಕಲಾದಲ್ಲಿ ಸಮಾವೇಶವನ್ನು ಹಮ್ಮಿಕೊಂಡಿವೆ.
ಪ್ರಧಾನಮಂತ್ರಿಯವರು ಅಧಿಕಾರಿಗಳಿಂದ ಸಲಹೆಗಳನ್ನು ಆಹ್ವಾನಿಸುತ್ತಾ ತಮ್ಮ ಮಾತು ಆರಂಭಿಸಿದರು. ಹಾಜರಿದ್ದ ಕೆಲವು ಅಧಿಕಾರಿಗಳು ಡಿಜಿಟೈಸೇಷನ್, ಸ್ವಯಂಸೇವಾ ತೆರಿಗೆ ಅನುಸರಣೆ, ತೆರಿಗೆದಾರರಿಗೆ ಅನುಕೂಲತೆಗಳು, ತೆರಿಗೆ ನೆಲೆ ವಿಸ್ತರಣೆ, ತೆರಿಗೆ ಆಡಳಿತಗಾರರಿಗಾಗಿ ಡಿಜಿಟಲ್ ಮತ್ತು ಭೌತಿಕ ಮೂಲ ಸೌಕರ್ಯ ಮೇಲ್ದರ್ಜೆಗೇರಿಸುವುದೇ ಮೊದಲಾದ ವಿವಿಧ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ರಾಜಸ್ವ ಗ್ಯಾನ್ ಸಂಗಮದ ವೇಳೆ ಪ್ರಧಾನಿಯವರು ಅಧಿಕಾರಿಗಳು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ತಮ್ಮ ಕಲ್ಪನೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹ ನೀಡಿದರು. ಎಲ್ಲ ಪ್ರಜೆಗಳಿಗೂ ಈ ನೆಲದ ಕಾನೂನಿನ ಬಗ್ಗೆ ಗೌರವ ಇರಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು ಮತ್ತು ತೆರಿಗೆ ವಂಚಿಸುವವರಿಗೆ ಕಾನೂನಿನ ತೋಳ್ತೆಕ್ಕೆಯಲ್ಲಿ ಬೀಳುವ ಭೀತಿಯೂ ಇರಬೇಕು ಆದರೆ ಜನರು ತೆರಿಗೆ ಆಡಳಿತಗಾರ ಬಗ್ಗೆ ಹೆದರಿಕೆ ಹೊಂದಬಾರದು ಎಂದರು.
ಭಾರತವು ಇಂದು ತನ್ನ ಇತಿಹಾಸದಲ್ಲಿ ವಿಶಿಷ್ಠ ಹಂತದಲ್ಲಿದೆ, ಮತ್ತು ಜನರಲ್ಲಿನ ಉನ್ನತ ಆಶಯಗಳನ್ನು ಸರ್ಕಾರ ಪೋಷಿಸುವ ಅಗತ್ಯವಿದೆ, ಆ ಮೂಲಕ ಅದನ್ನು ದೇಶದ ಅಭಿವೃದ್ಧಿಯಾಗಿ ಮಾರ್ಪಡಿಸಬೇಕಾಗಿದೆ ಎಂದರು.
ತೆರಿಗೆ ಆಡಳಿತಗಾರರು ವ್ಯವಸ್ಥೆಯಲ್ಲಿ ನಂಬಿಕೆ ಮೂಡಿಸುವ ಕಾರ್ಯ ಮಾಡುವ ಅಗತ್ಯವನ್ನು ಪ್ರತಿಪಾದಿಸಿದರು. ಅಡುಗೆ ಅನಿಲ ಸಬ್ಸಿಡಿಯನ್ನು ಸ್ವಯಂಪ್ರೇರಿತರಾಗಿ ಬಿಟುಕೊಡುವ “ಬಿಟ್ಟು ಕೊಡಿ” ಉಪಕ್ರಮದ ಉದಾಹರಣೆ ನೀಡಿದ ಅವರು, ತೆರಿಗೆ ಆಡಳಿತಗಾರರು ಬದಲಾವಣೆ ತರಲು ನಾಯಕತ್ವ ವಹಿಸಿದಲ್ಲಿ ತೆರಿಗೆಯ ನೆಲೆಯನ್ನು ಗಣನೀಯವಾಗಿ ಹೆಚ್ಚಿಸಲು ಸಾಧ್ಯ ಎಂದು ಹೇಳಿದರು.
ತೆರಿಗೆ ಆಡಳಿತಗಾರರಿಗೆ ಪ್ರಧಾನಮಂತ್ರಿಯವರು ಐದು ಅಂಶಗಳ ಸನ್ನದನ್ನು ಒತ್ತಿ ಹೇಳಿದರು. – ಅದು ಆರ್.ಎ.ಪಿ.ಐ.ಡಿ.- ಆರ್ ಎಂದರೆ ರೆವಿನ್ಯೂ (ಆದಾಯ) , ಎ ಎಂದರೆ ಅಕೌಂಟಬಲಿಟಿ (ಹೊಣೆಗಾರಿಕೆ), ಪಿ ಎಂದರೆ ಪ್ರಾಬಿಟಿ (ಪ್ರಾಮಾಣಿಕತೆ), ಐ ಎಂದರೆ ಇನ್ಫರ್ಮೇಷನ್ (ಮಾಹಿತಿ) ಹಾಗೂ ಡಿ ಎಂದರೆ ಡಿಜಿಟೈಸೇಷನ್. ಅಧಿಕಾರಿಗಳು ಈ ಗ್ಯಾನ್ ಸಂಗಮನವನ್ನು ಕರ್ಮ ಸಂಗಮವಾಗಿ ಬದಲಾಯಿಸುವಂತೆ ಅವರು ಕರೆ ನೀಡಿದರು, ಹೀಗಾದಾಗ ಈ ಸಮಾವೇಶದಲ್ಲಿ ಹೊರಹೊಮ್ಮಿದ ಕಲ್ಪನೆಗಳು ಸಮಗ್ರ ಕ್ರಿಯೆಯಾಗಿ ಕಾರ್ಯಗತವಾಗುತ್ತವೆ ಎಂದರು.
ಕೇಂದ್ರ ಹಣಕಾಸು ಸಚಿವ ಶ್ರೀ ಅರುಣ್ ಜೈಟ್ಲಿ, ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಶ್ರೀ ಜಯಂತ್ ಸಿನ್ಹ, ಪ್ರಧಾನಮಂತ್ರಿಯವರ ಪ್ರಧಾನಕಾರ್ಯದರ್ಶಿ ಶ್ರೀ ನೃಪೇಂದ್ರ ಮಿಶ್ರಾ, ಕಂದಾಯ ಕಾರ್ಯದರ್ಶಿ ಶ್ರೀ. ಹಸ್ಮುಖ್ ಅಧಿಯಾ ಮತ್ತು ಸಿಬಿಡಿಟಿ ಹಾಗೂ ಸಿಬಿಇಸಿಯ ಅಧ್ಯಕ್ಷರು ಈ ಸಂದರ್ಭದಲ್ಲಿ ಹಾಜರಿದ್ದರು.