Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜ್ಯಸಭೆಯಲ್ಲಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರನ್ನು ಸ್ವಾಗತಿಸುವ ವೇಳೆ ಪ್ರಧಾನಮಂತ್ರಿಯವರ ಹೇಳಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರನ್ನು ಸದನದ ಸಭಾಪತಿ ಸ್ಥಾನಕ್ಕೆ ಸ್ವಾಗತಿಸಲು ರಾಜ್ಯಸಭೆಯ ಇತರ ಸದಸ್ಯರ ಜೊತೆಗೂಡಿದರು.

ಇಂದು ಆಗಸ್ಟ್ 11, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕ್ರಾಂತಿಕಾರಿ ಶ್ರೀ ಖುದೀರನ್ ಭೋಸ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ ಐತಿಹಾಸಿಕ ದಿನ ಎಂದು ತಮ್ಮ ಸ್ವಾಗತ ನುಡಿಗಳನ್ನು ಪ್ರಧಾನಿ ಆರಂಭಿಸಿದರು.

ಈ ಘಟನೆ ನಮಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನಗೈದವರನ್ನು ಸ್ಮರಿಸುವಂತೆ ಮಾಡುತ್ತದೆ, ಇದು ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದರು. ಶ್ರೀ ವೆಂಕಯ್ಯನಾಯ್ಡು ಅವರು ಸ್ವತಂತ್ರ ಭಾರತದಲ್ಲಿ ಹುಟ್ಟಿ ಉಪ ರಾಷ್ಟ್ರಪತಿಯಾದ ಮೊದಲಿಗರು ಎಂದು ಪ್ರಧಾನಿ ಬಣ್ಣಿಸಿದರು. ಶ್ರೀ ನಾಯ್ದು ಅವರಿಗೆ ಸುದೀರ್ಘ ಅನುಭವವಿದೆ ಮತ್ತು ಅವರಿಗೆ ಸಂಸದೀಯ ಪ್ರಕ್ರಿಯೆಗಳ ಬಗ್ಗೆ ವಿಸ್ತಾರವಾದ ಪರಿಚಯವಿದೆ ಎಂದರು.

ಶ್ರೀ ವೆಂಕಯ್ಯನಾಯ್ಡು ಅವರೊಂದಿಗಿನ ದೀರ್ಘಕಾಲದ ಒಡೆನಾಟವನ್ನು ಮೆಲುಕುಹಾಕಿದ ಪ್ರಧಾನಮಂತ್ರಿಯವರು, ವೆಂಕಯ್ಯ ಅವರು, ಗ್ರಾಮೀಣ ಪ್ರದೇಶಗಳ, ಬಡಜನರ ಮತ್ತು ರೈತರ ಅಗತ್ಯಗಳ ಬಗ್ಗೆ ಸದಾ ಸಂವೇದನೆ ಹೊಂದಿದ್ದರು ಮತ್ತು ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ನೀಡುತ್ತಿದ್ದ ಮಾಹಿತಿ ಅಮೂಲ್ಯವಾಗಿರುತ್ತಿದ್ದವು ಎಂದರು.

ಗ್ರಾಮೀಣ ಹಿನ್ನೆಲೆಯಿಂದ ಬಂದ ಜನರು ಇಂದು ಭಾರತದ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ, ಇದು ಭಾರತೀಯ ಪ್ರಜಾಪ್ರಭುತ್ವದ ಪ್ರೌಢತೆಯನ್ನು ಮತ್ತು ಭಾರತದ ಸಂವಿಧಾನದ ಶಕ್ತಿಯನ್ನು ತೋರುತ್ತದೆ ಎಂದರು.

****