ಪಿಎಂಇಂಡಿಯಾ
ರಾಜ್ಯಸಭೆಯಲ್ಲಿ ಜಿಎಸ್ಟಿ ಮಸೂದೆಗೆ ಅನುಮೋದನೆ ನೀಡಿದ್ದಕ್ಕಾಗಿ ಎಲ್ಲ ಪಕ್ಷದ ನಾಯಕರು ಮತ್ತು ಸದಸ್ಯರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದ್ದಾರೆ. ಸಹಕಾರ ಒಕ್ಕೂಟ ವ್ಯವಸ್ಥೆಗೆ ಜಿಎಸ್ಟಿ ಒಂದು ಉತ್ತಮ ಉದಾಹರಣೆ ಎಂದು ಬಣ್ಣಿಸಿದ್ದಾರೆ. ಈ ಸುಧಾರಣೆಯು ಮೇಕ್ ಇನ್ ಇಂಡಿಯಾ ಉತ್ತೇಜನಕ್ಕೆ, ರಫ್ತಿಗೆ ನೆರವಾಗಲಿದೆ ಮತ್ತು ಹೆಚ್ಚಿನ ಆದಾಯ ತರುವ ಮೂಲಕ ಉದ್ಯೋಗ ಹೆಚ್ಚಿಸಲಿದೆ ಎಂದು ಪ್ರಧಾನಮಂತ್ರಿ ತಮ್ಮ ಸರಣಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ,
“ರಾಜ್ಯಸಭೆಯಲ್ಲಿ ಜಿಎಸ್ಟಿ ಮಸೂದೆಗೆ ಅನುಮೋದನೆ ದೊರೆತ ಈ ನೈಜ ಐತಿಹಾಸಿಕ ಸಂದರ್ಭದಲ್ಲಿ ನಾನು ಎಲ್ಲ ಪಕ್ಷಗಳ ನಾಯಕರು ಮತ್ತು ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ.
ಭಾರತಕ್ಕೆ 21ನೇ ಶತಮಾನದ ಪರೋಕ್ಷ ತೆರಿಗೆ ವ್ಯವಸ್ಥೆ ನೀಡುವುದಕ್ಕಾಗಿ ನಮ್ಮ ಸಂಸತ್ ಸದಸ್ಯರು ಕೈಗೊಂಡ ಮಹತ್ವದ ನಿರ್ಧಾರಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಲೇಬೇಕು.
ಎಲ್ಲ ಭಾರತೀಯರಿಗೂ ಲಾಭ ತರುವ ಮತ್ತು ಒಂದು ರೋಮಾಂಚಕ ಮತ್ತು ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ಉತ್ತೇಜಿಸುವ ವ್ಯವಸ್ಥೆಯನ್ನು ಪರಿಚಯಿಸಲು ನಾವು ಎಲ್ಲ ಪಕ್ಷಗಳು ಮತ್ತು ರಾಜ್ಯಗಳೊಂದಿಗೆ ಕಾರ್ಯವನ್ನು ಮುಂದುವರಿಸುತ್ತೇವೆ.
ಈ ಸುಧಾರಣೆಯು ಮೇಕ್ ಇನ್ ಇಂಡಿಯಾ ಉತ್ತೇಜನಕ್ಕೆ ಹಾಗೂ ರಫ್ತಿಗೆ ನೆರವಾಗಲಿದೆ ಮತ್ತು ಹೆಚ್ಚಿನ ಆದಾಯ ತರುವ ಮೂಲಕ ಉದ್ಯೋಗ ಹೆಚ್ಚಿಸಲಿದೆ
ನಾನು ಮತ್ತೂ ಒಂದು ಹೇಳಲು ಇಚ್ಚಿಸುತ್ತೇನೆ. ಜಿ.ಎಸ್.ಟಿ. ನಮ್ಮ ಸಹಕಾರ ಒಕ್ಕೂಟ ವ್ಯವಸ್ಥೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ನಾವು ಒಟ್ಟಾಗಿ ಭಾರತವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ”, ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
On this truly historic occasion of the passage of the GST Bill in the Rajya Sabha, I thank the leaders and members of all parties.
— Narendra Modi (@narendramodi) August 3, 2016
Our MPs must be congratulated for their path breaking decision to give India an indirect tax system for the 21st century. #TransformingIndia
— Narendra Modi (@narendramodi) August 3, 2016
We continue to work with all parties & states to introduce a system that benefits all Indians & promotes a vibrant & unified national market
— Narendra Modi (@narendramodi) August 3, 2016
This reform will promote @makeinindia, help exports & thus boost employment while providing enhanced revenue. #TransformingIndia
— Narendra Modi (@narendramodi) August 3, 2016
I would like to add that GST will also be the best example of cooperative federalism. Together we will take India to new heights of progress
— Narendra Modi (@narendramodi) August 3, 2016