Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ, ಅವರ ಜನ್ಮದಿನದಂದು ಶುಭ ಕೋರಿದ ಪ್ರಧಾನಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ, ಅವರ ಜನ್ಮದಿನದಂದು ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರಿಗೆ, ಅವರ ಜನ್ಮ ದಿನದಂದು ಶುಭ ಕೋರಿದ್ದಾರೆ ಮತ್ತು ಸುದೀರ್ಘ ಮತ್ತು ಆರೋಗ್ಯಪೂರ್ಣ ಜೀವನಕ್ಕೆ ಹಾರೈಸಿದ್ದಾರೆ.

“ರಾಷ್ಟ್ರಪತಿಜೀ ಅವರಿಗೆ ಜನ್ಮ ದಿನದ ಶುಭಾಶಯಗಳು. ಅವರ ಅಪಾರ ಅನುಭವ ಮತ್ತು ಬುದ್ಧಿವಂತಿಕೆ ದೇಶಕ್ಕೆ ದೊಡ್ಡ ಲಾಭ ತಂದಿದೆ. ಅವರು ದೀರ್ಘಕಾಲ ಆರೋಗ್ಯಪೂರ್ಣ ಜೀವನ ಸಾಗಿಸಲಿ ಎಂದು ಪ್ರಾರ್ಥಿಸುತ್ತೇನೆ.

ಪ್ರಣಬ್ ದಾ ಅವರು, ಸದಾಕಾಲ ಎಲ್ಲಕ್ಕಿಂತ ಮಿಗಿಲಾಗಿ ಭಾರತದ ಹಿತವನ್ನು ಪರಿಗಣಿಸಿದ್ದಾರೆ. ನಾವು ಇಂಥ ವಿದ್ಯಾವಂತರೂ ಮತ್ತು ಜ್ಞಾನವಂತರೂ ಆದ ರಾಷ್ಟ್ರಪತಿಯನ್ನು ಹೊಂದಿರುವುದಕ್ಕೆ ಹೆಮ್ಮೆ ಪಡುತ್ತೇವೆ “, ಎಂದು ಪ್ರಧಾನಿ ಹೇಳಿದ್ದಾರೆ.

***

AKT/SH