Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ವಸತಿ ನೀತಿ ಅಭಿವೃದ್ಧಿ ಮತ್ತು ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕೆನ್ಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ವಸತಿ ನೀತಿ ಅಭಿವೃದ್ಧಿ ಮತ್ತು ನಿರ್ವಹಣೆ (ಎನ್.ಎಚ್.ಪಿ.ಡಿ.ಎಂ.) ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕೆನ್ಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಪೂರ್ವಾನ್ವಯವಾಗಿ ತನ್ನ ಅನುಮೋದನೆ ನೀಡಿದೆ. ಪ್ರಧಾನಮಂತ್ರಿಯವರು ನೈರೋಬಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ 2016ರ ಜುಲೈ 11ರಂದು ಈ ಎಂ.ಓ.ಯು.ಗೆ ಅಂಕಿತ ಹಾಕಲಾಗಿತ್ತು.

ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಎರಡೂ ಕಡೆಯವರು ವಸತಿ ಮತ್ತು ಮಾನವ ವಸತಿ ಪ್ರದೇಶಗಳ ಕುರಿತ ಎಲ್ಲ ವಿಚಾರಗಳಲ್ಲಿ ಸಿಬ್ಬಂದಿಯ ತರಬೇತಿ, ವಿನಿಮಯ ಭೇಟಿ, ಎಕ್ಸ್ಪೋ/ವಸ್ತುಪ್ರದರ್ಶನ, ವಿಚಾರಗೋಷ್ಠಿ ಮತ್ತು ಕಾರ್ಯಾಕಾರ ಆಯೋಜನೆ ಸೇರಿದಂತೆ ವಿವಿಧ ಕಾರ್ಯತಂತ್ರಗಳೊಂದಿಗೆ ಸಹಯೋಗ ನೀಡಲಿವೆ.

ಎರಡೂ ರಾಷ್ಟ್ರಗಳ ನಡುವಿನ ಸಹಕಾರವು ಆಯಾ ದೇಶಗಳ ಅನುಭವದ ಮತ್ತು ಅನುಷ್ಠಾನ ಪ್ರಕ್ರಿಯೆಯ ಆಧಾರದ ಕ್ರಮಗಳ ಮೇಲೆ ಕೊಳಗೇರಿಗಳು ಹೆಚ್ಚಾಗದಂತೆ ತಡೆಯುವುದು ಮತ್ತು ಅವುಗಳನ್ನು ಮೇಲ್ದರ್ಜೆಗೇರಿಸುವತ್ತ ಈ ಸಹಕಾರ ಗಮನ ಹರಿಸಲಿದೆ. ರಿಯಲ್ ಎಸ್ಟೇಟ್ ದತ್ತಾಂಶ ಆಧಾರಿತ ಮಾರುಕಟ್ಟೆಯ ಪ್ರವೃತ್ತಿ, ಉತ್ತಮ ಪದ್ಧತಿಗಳು ಮತ್ತು ಹೂಡಿಕೆ ಅವಕಾಶಗಳ ಕುರಿತಂತೆ ವಸತಿ ಮಾಹಿತಿಯ ವಿನಿಮಯ ಮತ್ತು ಅಭಿವೃದ್ಧಿಗೆ ಅವು ಸಹಯೋಗ ನೀಡಲಿವೆ.

ಸ್ಥಳೀಯವಾಗಿ ಲಭ್ಯವಾಗುವ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬಳಕೆಯೊಂದಿಗೆ ಕೈಗೆಟಕುವ ದರದಲ್ಲಿ ಮನೆಗಳು ದೊರಕುವಂತೆ ಮಾಡುವ ತಾಂತ್ರಿಕ ಸಹಕಾರವನ್ನೂ ಇದು ಉತ್ತೇಜಿಸಲಿದೆ. ಸರ್ಕಾರ/ಸಾರ್ವಜನಿಕ ಸಿಬ್ಬಂದಿ ನಿವಾಸಗಳ ಅಭಿವೃದ್ಧಿಯ ತಾಂತ್ರಿಕ ಸಹಕಾರಕ್ಕೂ ಉತ್ತೇಜನ ನೀಡಲಿದೆ. ಈ ಉದ್ದೇಶಿತ ಯೋಜನೆಯ ವಿತರಣೆಯಲ್ಲಿ ಖಾಸಗಿ ವಲಯದವರು ಭಾಗವಹಿಸಲು ಅವಕಾಶ ನೀಡುವ ಪರಿಸರ ಸೃಷ್ಟಿಸುವುದೂ ಸೇರಿದಂತೆ ಸರ್ಕಾರಿ ನೌಕರರ ವಸತಿ ಯೋಜನೆಗಳ ಹಂಚಿಕೆ ಮಾದರಿಯೆಡೆಗೆ ಇದು ಉಪಯುಕ್ತ ಮಾರ್ಗವಾಗಿದೆ.