Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಿಯೋಗೆ ತೆರಳುತ್ತಿರುವ ಭಾರತೀಯ ಕ್ರೀಡಾಪಟುಗಳನ್ನು ಭೇಟಿ ಮಾಡಿದ ಪ್ರಧಾನಿ, ಟ್ವಿಟರ್ ನಲ್ಲಿ ಪ್ರತಿಯೊಬ್ಬರ ಚಿತ್ರ ಮತ್ತು ಉತ್ತೇಜನದ ಮಾತುಗಳ ಹಂಚಿಕೆ

ರಿಯೋಗೆ ತೆರಳುತ್ತಿರುವ ಭಾರತೀಯ ಕ್ರೀಡಾಪಟುಗಳನ್ನು ಭೇಟಿ ಮಾಡಿದ ಪ್ರಧಾನಿ, ಟ್ವಿಟರ್ ನಲ್ಲಿ ಪ್ರತಿಯೊಬ್ಬರ ಚಿತ್ರ ಮತ್ತು ಉತ್ತೇಜನದ ಮಾತುಗಳ ಹಂಚಿಕೆ


ವಿಶಿಷ್ಟ ಮತ್ತು ಅಭೂತಪೂರ್ವ ನಡೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಮುಂಬರುವ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ 60 ಅಥ್ಲೀಟ್ ಗಳೊಂದಿಗೆ ವೈಯಕ್ತಿಕವಾಗಿ ಸಂವಾದ ನಡೆಸಿದರು.

ಪ್ರಧಾನಮಂತ್ರಿಯವರು ಪ್ರತಿಯೊಬ್ಬರಿಗೂ ಉತ್ತೇಜನದ ಮಾತುಗಳನ್ನಾಡಿದರು. ಹಲವು ಅಥ್ಲೀಟ್ ಗಳೊಂದಿಗೆ ಅನೌಪಚಾರಿಕವಾಗಿ ಸಂಭಾಷಣೆ ನಡೆಸಿದರು, ಅವರುಗಳು ತಮ್ಮ ಮೊಬೈಲ್ ತೆಗೆದು ಪ್ರಧಾನಮಂತ್ರಿಯವರೊಂದಿಗೆ ಸೆಲ್ಫಿ ತೆಗೆದುಕೊಂಡರು.

ಬಳಿಕ ಸಾಮಾಜಿಕ ಜಾಲ ತಾಣ ವೇದಿಕೆ ಟ್ವಿಟರ್ ನಲ್ಲಿ ಪ್ರತಿ ಆಟಗಾರನೊಂದಿಗೆ ತಾವಿರುವ ಚಿತ್ರಗಳನ್ನು ಹಾಗೂ ಪ್ರತಿಯೊಬ್ಬರಿಗೂ ಪ್ರೋತ್ಸಾಹದ ಮಾತುಗಳನ್ನು ಹಂಚಿಕೊಂಡರು.

ಹಲವು ಕ್ರೀಡಾಪಟುಗಳು ಪ್ರಧಾನಮಂತ್ರಿಯವರ ಈ ನಡೆಯನ್ನು ಪ್ರಶಂಸಿಸಿದ್ದಾರೆ ಮತ್ತು ಪ್ರಧಾನಮಂತ್ರಿಯವರೊಂದಿಗೆ ತಮ್ಮ ಸೆಲ್ಫಿ ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸ್ಪಂದಿಸಿದ್ದಾರೆ. ಬಾಕ್ಸರ್ ಮನೋಜ್ ಕುಮಾರ್ ಮತ್ತು ಕುಸ್ತಿ ಪಟು ಯೋಗೇಶ್ವರ್ ದತ್ತ ಸೇರಿದಂತೆ ಹಲವರ ಟ್ವೀಟ್ ಗಳಿಗೆ ಪ್ರಧಾನಮಂತ್ರಿಯವರು ಮರು ಟ್ವೀಟ್ ಮಾಡಿದ್ದಾರೆ.

***