Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಿಯೋ ಒಲಿಂಪಿಕ್ ಸಂಭಾವ್ಯ ಅಥ್ಲೀಟ್ ಗಳನ್ನು ಭೇಟಿ ಮಾಡಿದ ಪ್ರಧಾನಿ

ರಿಯೋ  ಒಲಿಂಪಿಕ್ ಸಂಭಾವ್ಯ ಅಥ್ಲೀಟ್ ಗಳನ್ನು ಭೇಟಿ ಮಾಡಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಭಾಗವಾಗಲಿರುವ 60 ಸಂಭಾವ್ಯ ಅಥ್ಲೀಟ್ ಗಳನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿಯವರು ಪ್ರತಿಯೊಬ್ಬ ಅಥ್ಲೀಟ್ ಅನ್ನೂ ವೈಯಕ್ತಿಕವಾಗಿ ಭೇಟಿದರು, ಅವರೆಲ್ಲರೊಂದಿಗೆ ಅನೌಪಚಾರಿಕವಾಗಿ ಸಂವಾದ ನಡೆಸಿದರು. ವಿಶ್ವದ ಅತಿ ದೊಡ್ಡ ಕ್ರೀಡಾ ಹಬ್ಬದಲ್ಲಿ ತಮ್ಮ ಅತ್ಯುತ್ತಮ ಸಾಮರ್ಥ್ಯ ಪ್ರದರ್ಶಿಸುವಂತೆ ಅವರು ಹುರಿದುಂಬಿಸಿದರು.

ಎಂ.ಸಿ. ಮೇರಿ ಕೋಂ, ಅಂಜು ಬಾಬಿ ಜಾರ್ಜ್ ಮತ್ತು ಪಿ. ಗೋಪಿಚಂದ್ ಸೇರಿದಂತೆ ಹಲವು ಮಾಜಿ ಒಲಿಂಪಿಯನ್ ಗಳೂ ಈ ಸಂದರ್ಭದಲ್ಲಿ ಹಾಜರಿದ್ದರು.

ರಿಯೋ ಒಲಿಂಪಿಕ್ಸ್ ನ 13 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ಭಾರತದ 100 ಮಂದಿ ಅಥ್ಲೀಟ್ ಗಳು ಅರ್ಹತೆ ಪಡೆದಿದ್ದಾರೆ.

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು..