Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೇಷ್ಮೆಹುಳು ಮತ್ತು ರೇಷ್ಮೆ ಕೈಗಾರಿಕೆ ಕ್ಷೇತ್ರದಲ್ಲಿನ ಸಹಯೋಗದ ಸಂಶೋಧನೆಗಾಗಿ ಭಾರತ ಮತ್ತು ಜಪಾನ್ ನಡುವೆ ಆಗಿರುವ ಎಂ.ಓ.ಯು. ಬಗ್ಗೆ ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ರೇಷ್ಮೆಹುಳು ಮತ್ತು ರೇಷ್ಮೆ ಕೈಗಾರಿಕೆ ಕ್ಷೇತ್ರದಲ್ಲಿನ ಸಹಯೋಗದ ಸಂಶೋಧನೆಗಾಗಿ ಭಾರತದ ಕೇಂದ್ರೀಯ ರೇಷ್ಮೆ ಮಂಡಳಿ (ಸಿ.ಎಸ್.ಬಿ.) ಮತ್ತು ಜಪಾನ್ ನ ಕೃಷಿಜೈವಿಕ ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆ (ಎನ್.ಐ.ಎ.ಎಸ್.) ನಡುವೆ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ದ ಬಗ್ಗೆ ವಿವರಣೆ ನೀಡಲಾಯಿತು.

ಭಾರತದ ಉಷ್ಣವಲಯಕ್ಕೆ ಸೂಕ್ತವಾದ ಸಮೃದ್ಧ ಬೈವೋಲ್ಟೀನ್ ಮಿಶ್ರತಳಿಯ ರೇಷ್ಮೆ ಹುಳುಗಳ ಅಭಿವೃದ್ಧಿ ಮಾಡಲು ಸಹಯೋಗದ ಸಂಶೋಧನೆ ಆರಂಭಿಸುವ ಸಲುವಾಗಿ ಈ ತಿಳಿವಳಿಕೆ ಒಪ್ಪಂದಕ್ಕೆ 11.11.2016ರಲ್ಲಿ ಸಿ.ಎಸ್.ಬಿ. ಮತ್ತು ಎನ್.ಐ.ಎ.ಎಸ್. ನಡುವೆ ಅಂಕಿತ ಹಾಕಲಾಗಿತ್ತು. ಈ ತಿಳಿವಳಿಕೆ ಒಪ್ಪಂದವು ವೈಜ್ಞಾನಿಕ ಮತ್ತು ತಾಂತ್ರಿಕ ಸ್ವರೂಪದ್ದಾಗಿದೆ. ಇದು ಸಮೃದ್ಧ ಮಿಶ್ರತಳಿಯ ರೇಷ್ಮೆಹುಳುಗಳ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಇದು ಭಾರತೀಯ ರೇಷ್ಮೆ ಕೈಗಾರಿಕೆಯ ಗುಣಮಟ್ಟ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಸುಧಾರಣೆ ಮಾಡಲಿದೆ ಮತ್ತು ಆಮೂಲಕ ರೇಷ್ಮೆ ಮತ್ತು ರೇಷ್ಮೆ ಉತ್ಪನ್ನಗಳ ರಫ್ತು ಹೆಚ್ಚಿಸಲಿದೆ.

ಈ ತಿಳಿವಳಿಕೆ ಒಪ್ಪಂದದ ತರುವಾಯ ಭಾರತೀಯ ಜವಳಿ ಮತ್ತು ಉಡುಪು ಉದ್ಯಮವು ವಿಶ್ವದರ್ಜೆಯ ರೇಷ್ಮೆ ಮತ್ತು ರೇಷ್ಮೆ ಉತ್ಪನ್ನಗಳ ತಯಾರಿಕೆಗೆ ಶಕ್ತವಾಗಲಿದೆ. ಉತ್ಪಾದಕೆ ಮತ್ತು ಗುಣಮಟ್ಟದ ಸುಧಾರಣೆಯು ಅಂತಿಮವಾಗಿ ರೇಷ್ಮೆ ಉತ್ಪನ್ನಗಳ ರಫ್ತು ಹೆಚ್ಚಳಮಾಡಲಿದೆ.

****