ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2016-17ನೇ ಸಾಲಿನಲ್ಲಿ ರೈತರಿಗಾಗಿ ಬಡ್ಡಿ ಸಹಾಯಧನ ಯೋಜನೆಗೆ ತನ್ನ ಅನುಮೋದನೆ ನೀಡಿದೆ. ಈ ಉದ್ದೇಶಕ್ಕಾಗಿ ಸರ್ಕಾರ 18,276 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ. ಇದರಿಂದ ರೈತರಿಗೆ ಒಂದು ವರ್ಷದ ಅವಧಿಯಲ್ಲಿ ಪಾವತಿಸುವ ಶೇಕಡ 4ರ ವಾರ್ಷಿಕ ಬಡ್ಡಿ ದರದ 3 ಲಕ್ಷ ರೂಪಾಯಗಳವರೆಗಿನ ಅಲ್ಪಾವಧಿ ಬೆಳೆ ಸಾಲ ಪಡೆಯಲು ನೆರವಾಗಲಿದೆ.
ಈ ಯೋಜನೆಯ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ:
a) 2016-17ನೇ ಅವಧಿಯಲ್ಲಿ ರೈತರು ಒಂದು ವರ್ಷದವರೆಗೆ ಪಡೆಯುವ 3 ಲಕ್ಷ ರೂಪಾಯಿಗಳವರೆಗಿನ ಬೆಳೆ ಸಾಲದ ಮೇಲಿನ ಬಡ್ಡಿಗೆ ಶೇಕಡ 5ರಷ್ಟು ಸಹಾಯಧನವನ್ನು ಕೇಂದ್ರ ಸರ್ಕಾರ ಒದಗಿಸಲಿದೆ. ಹೀಗಾಗಿ ರೈತರು ಕೇವಲ ಶೇ.4ರಷ್ಟು ಮಾತ್ರವೇ ಬಡ್ಡಿ ಪಾವತಿಸಬೇಕಾಗುತ್ತದೆ.
ಒಂದೊಮ್ಮೆ ರೈತರು ತಮ್ಮ ಅಲ್ಪಾವಧಿ ಬೆಳೆ ಸಾಲವನ್ನು ಅವಧಿಯೊಳಗೆ ಪಾವತಿ ಮಾಡದಿದ್ದಲ್ಲಿ ಅವರು ಬಡ್ಡಿಯ ಸಹಾಯಧನದಲ್ಲಿ ಶೇ.5ರ ಬದಲಿಗೆ ಶೇ.2ಕ್ಕೆ ಮಾತ್ರ ಅರ್ಹರಾಗುತ್ತಾರೆ.
b)ಕೇಂದ್ರ ಸರ್ಕಾರವು 2016-17ನೇ ಸಾಲಿನಲ್ಲಿ ಅಂದಾಜು 18,276 ಕೋಟಿ ರೂಪಾಯಿಗಳ ಬಡ್ಡಿ ಸಹಾಯಧನ ನೀಡಲಿದೆ.
c) ಸುಗ್ಗಿಯ ಬಳಿಕ ತಮ್ಮ ಉತ್ಪನ್ನಗಳ ಸಂಗ್ರಹಣೆಗೆ ಶೇ.9ರ ಬಡ್ಡಿ ದರದಲ್ಲಿ ಸಾಲ ಪಡೆಯುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗಲು ಕೇಂದ್ರ ಸರ್ಕಾರ ಶೇಕಡ 2ರ ಬಡ್ಡಿ ಸಹಾಯಧನ ಅನುಮೋದಿಸಿದ್ದು, ಚಾಲ್ತಿಯ ಬಡ್ಡಿ ದರ 6 ತಿಂಗಳುಗಳವರೆಗೆ ಶೇ.7 ಆಗಲಿದೆ.
d) ಪ್ರಕೃತಿ ವಿಕೋಪಗಳಿಂದ ಬಾಧಿತರಾಗುವ ರೈತರಿಗೆ ಪರಿಹಾರ ಒದಗಿಸಲು ಬ್ಯಾಂಕ್ ಗಳಿಗೆ ಶೇ.2ರಷ್ಟು ಬಡ್ಡಿ ಸಹಾಯಧನವನ್ನು ಪ್ರಥಮ ವರ್ಷಕ್ಕೆ ಪುನರ್ ವಿನ್ಯಾಸಿತ ಮೊತ್ತದಿಂದ ನೀಡಲಾಗುತ್ತದೆ.
e) ಅಲ್ಪಾವಧಿ ಬೆಳೆ ಸಾಲವನ್ನು ನಿಗದಿತ ಸಮಯದೊಳಗೆ ಮರು ಪಾವತಿಸದ ರೈತರು ಶೇ.5ರ ಬಡ್ಡಿ ಸಹಾಯಧನದ ಬದಲಿಗೆ ಶೇ.2ಕ್ಕೆ ಮಾತ್ರವೇ ಅರ್ಹರಾಗುತ್ತಾರೆ.
AKT/NT/VK