Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೈಲು ವಲಯದ ತಾಂತ್ರಿಕ ಸಹಕಾರಕ್ಕಾಗಿ ಇಟಲಿಯ ಫೆರೋವಿ ಡೆಲ್ಲೋ ಸ್ಟ್ಯಾಟೋ ಇಟಾಲಿಯಾನೆ ಎಸ್.ಪಿ.ಎ. ಜೊತೆಗಿನ ತಿಳಿವಳಿಕೆ ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ರೈಲು ವಲಯದ ತಾಂತ್ರಿಕ ಸಹಕಾರಕ್ಕಾಗಿ ಇಟಲಿಯ ಫೆರೋವಿ ಡೆಲ್ಲೋ ಸ್ಟ್ಯಾಟೋ ಇಟಾಲಿಯಾನೆ ಎಸ್.ಪಿ.ಎ. ಜೊತೆ 2017ರ ಜನವರಿ 31ರಂದು ಸಹಿ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ(ಎಂ.ಓ.ಯು)ದ ಬಗ್ಗೆ ವಿವರಿಸಲಾಯಿತು.

ಈ ತಿಳಿವಳಿಕೆ ಒಪ್ಪಂದವು ಭಾರತೀಯ ರೈಲ್ವೆಗೆ ಸುರಕ್ಷತೆಯ ಪ್ರೋತ್ಸಾಹ, ಸಾಮರ್ಥ್ಯ ಮತ್ತು ಸುಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ರೈಲ್ವೆ ವಲಯದಲ್ಲಿ ಆಗಿರುವ ಇತ್ತೀಚಿನ ಅಭಿವೃದ್ಧಿಗಳ ಬಗ್ಗೆ ಮಾಹಿತಿಯ ವಿನಿಮಯ ಮತ್ತು ಸಂವಾದಕ್ಕೆ  ಅವಕಾಶ ಕಲ್ಪಿಸುತ್ತದೆ.

ಈ ತಿಳಿವಳಿಕೆ ಒಪ್ಪಂದವು ಮಾಹಿತಿಯ ವಿನಿಮಯ, ತಜ್ಞರ ಸಭೆ, ವಿಚಾರ ಸಂಕಿರಣ, ತಂತ್ರಜ್ಞರ ಭೇಟಿ ಮತ್ತು  ಒಪ್ಪಿಗೆ ಸೂಚಿಸಲಾದ ಜಂಟಿ ಸಹಕಾರದ ಯೋಜನೆಗಳ ಅನುಷ್ಠಾನಕ್ಕೂ ಅವಕಾಶ ಮಾಡಿಕೊಡುತ್ತದೆ.
ಪರಸ್ಪರರ ಅನುಕೂಲಕ್ಕಾಗಿ ರೈಲು ವಲಯದಲ್ಲಿ ಸುರಕ್ಷತೆ, ಸಾಮರ್ಥ್ಯ ಮತ್ತು ಸುಸ್ಥಿರತೆಗಾಗಿ ತಾಂತ್ರಿಕ ಸಹಕಾರ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವುದು ಈ ತಿಳಿವಳಿಕೆ ಒಪ್ಪಂದದ ಉದ್ದೇಶವಾಗಿದೆ.  ಇದು ಈ ಕೆಳಗಿನ ಕ್ಷೇತ್ಗಳಲ್ಲಿ ತಾಂತ್ರಿಕ ಸಹಕಾರವನ್ನು ಒದಗಿಸುತ್ತದೆ:- 

  1. a) ಭಾರತೀಯ ರೈಲ್ವೆಯ ಸುರಕ್ಷತೆಯ ಪರಿಶೋಧನೆ ಮತ್ತು ರೈಲು ಕಾರ್ಯಾಚರಣೆಯಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಅಗತ್ಯ ಕ್ರಮ; 
  2. b) ಸುರಕ್ಷತೆಯ ಏಕತೆಯ ಮಟ್ಟ 4 (ಎಸ್.ಐ.ಎಲ್.4)ಕ್ಕೆ ಮುಂದುವರಿದ ತಂತ್ರಜ್ಞಾನ ಆಧಾರಿತ ಸುರಕ್ಷತೆ ಉತ್ಪನ್ನಗಳು ಮತ್ತು ವ್ಯವಸ್ಥೆ ;
  3. c) ಮುಂದುವರಿದ ಸಿಗ್ನಲ್ ವ್ಯವಸ್ಥೆ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗಳು ಸೇರಿದಂತೆಸುರಕ್ಷತೆಯ ಗಮನದೊಂದಿಗೆ ತರಬೇತಿ ಮತ್ತು ಸಾಮರ್ಥ್ಯ ಅಭಿವೃದ್ಧಿ; 
  4. d) ನಿರ್ವಹಣೆ ಮತ್ತು ಪತ್ತೆಯಲ್ಲಿ ಆದುನಿಕ ಪ್ರವೃತ್ತಿ; 
  5. e) ಜಂಟಿಯಾಗಿ ಗುರುತಿಸಲಾದ ಮತ್ತಾವುದೇ ಕ್ಷೇತ್ರ

ಹಿನ್ನೆಲೆ:

ಫೆರೋವಿ ಡೆಲ್ಲೋ ಸ್ಟ್ಯಾಟೋ ಇಟಾಲಿಯಾನೆ ಸಮೂಹ (ಎಫ್.ಎಸ್.ಗ್ರೂಪ್) ಇಟಲಿಯ ರೈಲ್ವೆ ವಲಯವನ್ನು ರೈಲ್ವೆ ಸಂಬಂಧಿತ ವ್ಯವಹಾರಗಳು, ಅದರಲ್ಲಿ ಪ್ರಮುಖವಾದ ಒಂದೆಂದರೆ-ಟ್ರೆನಿಟಾಲಿಯಾ – ರೈಲ್ ಟ್ರಾನ್ಸ್ ಪೋರ್ಟ್ ರೆಟೆ ಫೆರ್ರೋವಿಯಾರಿಯಾ ಇಟಾಲಿಯಾನ – ರೈಲ್ವೆ ಮೂಲ ಸೌಕರ್ಯ ವ್ಯವಸ್ಥಾಪಕ, ಇಟಾಲ್ ಫೆರ್ – ಎಂಜಿನಿಯರಿಂಗ್ ಕಂಪನಿ, ಇಟಾಲ್ ಸೆರಿಫರ್ – ರೈಲ್ವೆ ವ್ಯವಸ್ಥೆ ಮತ್ತು ಬಿಡಿಭಾಗಗಳ ಪ್ರಮಾಣೀಕರಣ ಕಾಯ ಸೇರಿದಂತೆ ತನ್ನ ಕಂಪನಿಗಳ ಮೂಲಕ ನಿರ್ವಹಣೆ ಮಾಡುತ್ತಿರುವ ಕೈಗಾರಿಕಾ ಸಂಸ್ಥೆ. ಎಫ್.ಎಸ್. ಸಮೂಹ ಇಟಲಿಯ ಖಜಾನೆಯ ಅಡಿಯಲ್ಲಿ ಬರುವ ಸಂಪೂರ್ಣ ಸರ್ಕಾರಿ ಒಡೆತನದ ಸಮೂಹವಾಗಿದೆ.

ರೈಲ್ವೆ ಸಚಿವಾಲಯವು ರೈಲ್ವೆ ವಲಯದ ತಾಂತ್ರಿಕ ಸಹಕಾರಕ್ಕಾಗಿ ವಿವಿಧ ವಿದೇಶೀ ಸರ್ಕಾರಗಳು ಮತ್ತು ರಾಷ್ಟ್ರೀಯ ರೈಲ್ವೆಯೊಂದಿಗೆ ತಿಳಿವಳಿಕೆ ಒಪ್ಪಂದಗಳಿಗೆ ಅಂಕಿತ ಹಾಕಿದೆ.  ಗುರುತಿಸಲಾಗಿರುವ ಸಹಕಾರ ಕ್ಷೇತ್ರಗಳಲ್ಲಿ ಹೈಸ್ಪೀಡ್ ಕಾರಿಡಾರ್ ಗಳು, ಹಾಲಿ ಇರುವ ಮಾರ್ಗದಲ್ಲಿ ವೇಗ ವರ್ಧನೆ, ವಿಶ್ವದರ್ಜೆಯ ನಿಲ್ದಾಣಗಳ ಅಭಿವೃದ್ಧಿ, ಬೃಹತ್ ಶಕ್ತಿಯ ಎಂಜಿನ್ ಕಾರ್ಯಾಚರಣೆ ಮತ್ತು ರೈಲ್ವೆ ಮೂಲಸೌಕರ್ಯ ಆಧುನೀಕರಣ ಇತ್ಯಾದಿಯೂ ಸೇರಿದೆ. ರೈಲ್ವೆ ವಲಯದಲ್ಲಿ ಈಗಿರುವ ಬೆಳವಣಿಗೆ ಕುರಿತ ಮಾಹಿತಿಯ ವಿನಿಮಯ, ತಂತ್ರಜ್ಞಾನ ಮತ್ತು ಕಾರ್ಯಾಚರಣೆ, ಪರಸ್ಪರ ಆಸಕ್ತಿಯ ಕ್ಷೇತ್ರದಲ್ಲಿ ಜ್ಞಾನ ವಿನಿಮಯ, ತಾಂತ್ರಿಕ ಭೇಟಿ, ತರಬೇತಿ ಮತ್ತು ವಿಚಾರಗೋ,ಠಿ ಮತ್ತು ಕಾರ್ಯಾಗಾರಗಳ ಮೂಲಕ ಈ ಸಹಕಾರವನ್ನು ಸಾಧಿಸಲಾಗುತ್ತದೆ.

ಈ ತಿಳಿವಳಿಕೆ ಒಪ್ಪಂದವು, ಭಾರತೀಯ ರೈಲ್ವೆಗೆ ರೈಲ್ವೆ ವಲಯದಲ್ಲಿನ ಇತ್ತೀಚಿನ ಬೆಳವಣಿಗೆ ಮತ್ತು ಜ್ಞಾನದ ಬಗ್ಗೆ ಸಂವಾದ ನಡೆಸಲು ಮತ್ತು ಮಾಹಿತಿ ವಿನಿಮಯಕ್ಕೆ ವೇದಿಕೆ ಕಲ್ಪಿಸುತ್ತದೆ. ಅಲ್ಲದೆ ನಿರ್ದಿಷ್ಟ ತಂತ್ರಜ್ಞಾನ ಕ್ಷೇತ್ರದ ಮೇಲೆ ಗಮನ ಹರಿಸಿ ಕಾರ್ಯಾಗಾರ/ವಿಚಾರ ಸಂಕಿರಣ ಮತ್ತು ತರಬೇತಿ, ತಾಂತ್ರಿಕ ತಜ್ಞರ, ವರದಿಗಳ ಮತ್ತು ತಾಂತ್ರಿಕ ದಸ್ತಾವೇಜುಗಳ ವಿನಿಮಯಕ್ಕೆ ಅವಕಾಶ ಕಲ್ಪಿಸುತ್ತದೆ. . 
                                                                      ******

AKT/VBA/SH