Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೋಹ್‌ಟಕ್‌ನಲ್ಲಿ ನಡೆದ ರಾಷ್ಟ್ರೀಯ ಯುವ ಉತ್ಸವದ ಉದ್ಘಾಟನ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾಡಿದ ಭಾಷಣ


ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲ ಗಣಮಾನ್ಯ ಅತಿಥಿಗಳೆ, ನನ್ನ ಪ್ರೀತಿಯ ಯುವ ಸ್ನೇಹಿತರೆ, ತಮಗೆಲ್ಲರಿಗೂ 21ನೇ ರಾಷ್ಟ್ರೀಯ ಯುವ ಮಹೋತ್ಸವದ ಹಾರ್ದಿಕ ಶುಭಾಶಯಗಳು. ಸಮಯಾಭಾವದಿಂದ ನಾನು ರೋಹ್‌ಟಕ್‌ನಲ್ಲಿ ಖುದ್ದು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆದರೆ ನಾನು ಸಮಾರಂಭದ ಚಿತ್ರಗಳನ್ನು ನೋಡುತ್ತಿದ್ದೇನೆ. ಈ ಸಮಾರಂಭ ಕೂಡಾ 21 ವರ್ಷದ ಯೌವನದಲ್ಲಿರುವಂತೆ ನನಗೆ ಭಾಸವಾಗುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಆಗಮಿಸಿರುವ ಯುವ ಸ್ನೇಹಿತರ ಮುಖದಲ್ಲಿನ ಹೊಳಪನ್ನು, ಶಕ್ತಿಯನ್ನು ಗಮನಿಸಿದರೆ ರೋಹ್‌ಟಕ್‌ನಲ್ಲಿ ಇಂದು ಯುವ ಮಹೋತ್ಸವದ ಜತೆ ಜತೆಗೆ ಬೆಳಕಿನ ಉತ್ಸವವನ್ನು ಕೂಡಾ ಆಚರಿಸಲಾಗುತ್ತಿದೆ ಎಂದು ಭಾಸವಾಗುತ್ತಿದೆ.

ಇಂದು ರಾಷ್ಟ್ರೀಯ ಯುವ ದಿನ. ಸ್ವಾಮಿ ವಿವೇಕಾನಂದರ ಜಯಂತಿ. ನಾನು ಈ ಮೂಲಕ ದೇಶದ ಎಲ್ಲ ಯುವಜನರಿಗೆ ಶುಭಾಶಯಗಳನ್ನು ಕೋರುತ್ತಿದ್ದೇನೆ. ಅತ್ಯಂತ ಕಡಿಮೆ ಸಮಯದಲ್ಲಿ ಎಷ್ಟು ಮಹತ್ತರವಾದುದನ್ನು ಸಾಧಿಸಬಹುದೆಂಬುದಕ್ಕೆ ಸ್ವಾಮಿ ವಿವೇಕಾನಂದರು ಉತ್ತಮ ಉದಾಹರಣೆ. ಅವರ ಜೀವನ ಅಲ್ಪ ಕಾಲದ್ದಾಗಿತ್ತು. ಸ್ವಾಮಿ ವಿವೆಕಾನಂದರು ಯುವಶಕ್ತಿಯ ಅತ್ಯಂತ ದೊಡ್ಡ ಪ್ರೇರಕ ಶಕ್ತಿ. ನಮ್ಮ ದೇಶಕ್ಕೆ ಇಂದು ಲೋಹಶಕ್ತಿಯಂತಾ ಮಾಂಸಖಂಡಗಳನ್ನು ಒಳಗೊಂಡ, ಬಲಿಷ್ಟ ಸ್ನಾಯುವುಳ್ಳ ಯುವಶಕ್ತಿಯ ಅವಶ್ಯಕತೆ ಇದೆ. ದೃಢ ಇಚ್ಚಾಶಕ್ತಿಯುಳ್ಳ ಯುವಕರ ಅವಶ್ಯಕತೆ ಇದೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು.

ಯಾವುದೇ ಭೇದಭಾವವಿಲ್ಲದ, ಪರಸ್ಪರ ಪ್ರೀತಿ, ವಿಶ್ವಾಸದ ಗುಣವುಳ್ಳ ಯುವ ಸಮುದಾಯವನ್ನು ನಿರ್ಮಾಣ ಮಾಡಬೇಕೆಂದು ಸ್ವಾಮಿ ವಿವೇಕಾನಂದರು ಬಯಸಿದ್ದರು. ಯುವ ಜನತೆ ಎಂದರೆ, ಕಳೆದು ಹೋದುದರ ಬಗ್ಗೆ ಚಿಂತಿಸದೆ, ಭವಿಷ್ಯದ ಗುರಿಯನ್ನು ಸಾಧಿಸುವ ಛಲವುಳ್ಳವರು. ತಾವು ಯುವಕರು ಇಂದು ಮಾಡುವ ಕಾರ್ಯ ನಾಳೆ ದೇಶದ ಭವಿಷ್ಯವನ್ನು ನಿರ್ಣಯಿಸುತ್ತದೆ.

ಸ್ನೇಹಿತರೆ, ಇಂದು ಭಾರತದ ಜನಸಂಖ್ಯೆಯ ಶೇಕಡಾ 80 ರಷ್ಟು ಜನತೆ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು. ಸ್ವಾಮಿ ವಿವೇಕಾನಂದರು ತೋರಿಸಿದ ಹಾದಿಯಲ್ಲಿ ಮುನ್ನಡೆದು ಇಂದು ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಕ್ಷಮತೆ ಈ ಯುವಜನತೆಯಲ್ಲಿದೆ.

ಇಂದು ರೋಹ್‌ಟಕ್‌ನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಯುವಜನತೆಗೆ ಹರಿಯಾಣದ ನೆಲ ಪ್ರೇರಣೆಯನ್ನು ನೀಡಬಲ್ಲದು. ವೇದ, ಉಪನಿಷದ್ ಮತ್ತು ಭಗವದ್ಗೀತೆಯ ಭೂಮಿ ಹರಿಯಾಣ. ಇದು ವೀರರ ನಾಡು, ಜಯ್ ಜವಾನ್, ಜಯ್ ಕಿಸಾನ್ ಎನ್ನುವ ನಾಣ್ಣುಡಿಯ ನಾಡು. ಇದು ಸರಸ್ವತಿಯ ಪಾವನ ಭೂಮಿ. ನಮ್ಮ ಸಂಸ್ಕೃತಿ, ನಮ್ಮ ಮೌಲ್ಯಗಳನ್ನು ಅರ್ಥಮಾಡಿಕೊಂಡು ಮುನ್ನಡೆಯುವ ಸತತ ಪ್ರಯತ್ನವನ್ನು ಈ ಪವಿತ್ರ ಭೂಮಿಯಿಂದ ಕಲಿಯಬಹುದಾಗಿದೆ.

ಈ ಬಾರಿಯ ಯುವ ಮಹೋತ್ಸವದ ವಿಷಯ ಯೂಥ್ ಫಾರ್ಡಿಜಿಟಲ್ಇಂಡಿಯಾ – ಡಿಜಿಟಲ್ ಭಾರತಕ್ಕಾಗಿ ಯುವಜನತೆ – ಇದು ನನಗೆ ಸಂತೋಷವನ್ನುಂಟುಮಾಡಿದೆ. ಈ ಮಹೋತ್ಸವದಲ್ಲಿ ಯುವಜನತೆಗೆ ತಮ್ಮ ದೈನಂದಿನ ಜೀವನದಲ್ಲಿ ಹಣಕಾಸು ವ್ಯವಹಾರವನ್ನು ಹೇಗೆ ಡಿಜಿಟಲೀಕರಣ ಮಾಡಿಕೊಳ್ಳಬೇಕೆಂಬ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ಮಹೋತ್ಸವದಲ್ಲಿ ತರಬೇತಿ ಪಡೆದು ಹಿಂದಿರುಗಿದ ಯುವಕರು ತಮ್ಮ ಅಕ್ಕ ಪಕ್ಕದ ಕನಿಷ್ಟ 10 ಕುಟುಂಬಗಳಿಗೆ ಡಿಜಿಟಲ್ ವ್ಯವಹಾರ ನಡೆಸುವುದನ್ನು ಕಲಿಸಿಕೊಡಬೇಕೆಂದು ನಾನು ಮನವಿ ಮಾಡುತ್ತೇನೆ. ನಗದುರಹಿತ ಅರ್ಥವ್ಯವಸ್ಥೆ ರೂಪಿಸುವಲ್ಲಿ ಇಂದಿನ ಯುವಜನತೆಯ ಪಾತ್ರ ಮಹತ್ವದ್ದು. ದೇಶವನ್ನು ಕಪ್ಪುಹಣ ಮತ್ತು ಭ್ರಷ್ಟಾಚಾರದಿಂದ ಮುಕ್ತವನ್ನಾಗಿ ಮಾಡುವ ಹೋರಾಟದಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ.

ಈ ವರ್ಷದ ರಾಷ್ಟ್ರೀಯ ಯುವ ಮಹೋತ್ಸವದ ಚಿಹ್ನೆಯನ್ನಾಗಿ ಹೆಣ್ಣುಮಗುವನ್ನು ಆಯ್ಕೆ ಮಾಡಲಾಗಿದೆ. ಪ್ರೀತಿಯಿಂದ ಇದಕ್ಕೆ “ಮ್ಹಾರಿ ಲಾಡೋ” ಎಂದು ಹೆಸರಿಡಲಾಗಿದೆ. ಈ ಮಹೋತ್ಸವದ ಮೂಲಕ “ಭೇಟಿ ಬಚಾವೋ, ಭೇಟಿ ಪಡಾವೊ” – “ಹೆಣ್ಣುಮಗುವನ್ನು ಉಳಿಸಿ, ಹೆಣ್ಣುಮಗುವಿಗೆ ವಿದ್ಯಾಭ್ಯಾಸ ನೀಡಿ” ಆಂದೋಲನದ ಬಗ್ಗೆ ಜಾಗರೂಕತೆಯನ್ನು ಮೂಡಿಸುವಲ್ಲಿ ಮಾಡುತ್ತಿರುವ ಪ್ರಯತ್ನ ಅತ್ಯಂತ ಪ್ರಶಂಸನೀಯ. ಕೇಂದ್ರ ಸರ್ಕಾರ ಹರಿಯಾಣದಿಂದಲೇ ಈ ಯೋಜನೆಗೆ ಶುಭಾರಂಭ ಮಾಡಿತ್ತು. ಈ ಪ್ರದೇಶದಲ್ಲಿ ಈ ಯೋಜನೆಗೆ ಅತ್ಯಂತ ಹೆಚ್ಚಿನ ಪರಿಣಾಮ ಕಂಡುಬಂದಿದೆ. ಬದಲಾವಣೆಯ ಶಕೆ ಪ್ರಾರಂಭವಾಗಿದೆ. ಲಿಂಗ ಅನುಪಾತದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಸಂಪೂರ್ಣ ದೇಶದಲ್ಲಿ ಬದಲಾವಣೆಯಾಗುತ್ತಿದೆ. ಇದಕ್ಕಾಗಿ ನಾನು ಹರಿಯಾಣದ ಜನತೆಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ಜನತೆ ಮನಸ್ಸು ಮಾಡಿದರೆ ಅಸಾಧ್ಯವಾದದ್ದನ್ನು ಸಾಧ್ಯವನ್ನಾಗಿ ಮಾಡಿ ತೋರಿಸಬಲ್ಲರೆಂದು ಅರಿವಾಗುತ್ತದೆ. ಸಂಪೂರ್ಣ ದೇಶ ಗೌರವಯುಕ್ತ ಸ್ಥಿತಿ ತಲುಪುವಂತೆ ಹರಿಯಾಣ ಮಾಡಿ ತೋರಿಸುತ್ತದೆ ಎಂಬ ವಿಶ್ವಾಸ ನನಗಿದೆ.
ಹರಿಯಾಣದ ಭವಿಷ್ಯವನ್ನು ಬೆಳಗುವಲ್ಲಿ ಇಲ್ಲಿನ ಯುವಜನತೆಯ ಪಾತ್ರ ಮಹತ್ವದ್ದು. ಹರಿಯಾಣದ ಯುವ ಕ್ರೀಡಾಪಟುಗಳು ಅನೇಕ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ದೇಶದ ಗೌರವವನ್ನು ಎತ್ತಿಹಿಡಿದಿದ್ದಾರೆ.

ದೇಶವು ಅಭಿವೃದ್ದಿಯ ಉತ್ತುಂಗವನ್ನು ಮುಟ್ಟಲು ಯುವಶಕ್ತಿಯ ಮತ್ತಷ್ಟು ಕೊಡುಗೆಯನ್ನು ನೀಡಬೇಕಿದೆ. ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡುವ ಸಾಮರ್ಥ್ಯ ಮತ್ತು ಕುಶಲತೆಯನ್ನು ತನ್ನ ಯುವಜನತೆಗೆ ನೀಡುವುದು ದೇಶದ ಗುರಿಯಾಗಿದೆ.

ಸ್ನೇಹಿತರೆ, ರಾಷ್ಟ್ರೀಯ ಯುವ ಮಹೋತ್ಸವ ತಮಗೆ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವ ವೇದಿಕೆಯಾಗಿದೆ. ಬೇರೆ ಬೇರೆ ಸಂಸ್ಕೃತಿಯಿಂದ ಬಂದಿರುವ ತಮಗೆ ಇಲ್ಲಿ ಪರಸ್ಪರ ಅರಿತುಕೊಳ್ಳುವ ಅವಕಾಶ ಲಭಿಸಿದೆ. ವಾಸ್ತವಿಕ ಅರ್ಥದಲ್ಲಿ ಇದೇ “ಒಂದು ಭಾರತ – ಶ್ರೇಷ್ಠ ಭಾರತ”. ಇದೀಗ ಸ್ವಲ್ಪ ಸಮಯದ ಮೊದಲು ದೇಶದ ಎಲ್ಲ ರಾಜ್ಯಗಳಿಂದ ಯುವ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿರುವ ಸಾಂಸ್ಕೃತಿಕ ತಂಡಗಳ ಮೆರವಣಿಗೆ ನಡೆಯಿತು.

ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಒಂದೇ ಸೂತ್ರದಲ್ಲಿ ಬಂಧಿಸುವುದು ಒಂದು ಭಾರತ – ಶ್ರೇಷ್ಠ ಭಾರತದ ಉದ್ದೇಶವಾಗಿದೆ. ನಮ್ಮ ದೇಶದ ಭಾಷೆಗಳು ಬೇರೆ – ಬೇರೆಯದಿರಬಹುದು, ಆಹಾರದಲ್ಲಿ ಬದಲಾವಣೆ ಇರಬಹುದು, ವಾಸಿಸುವ ವಿಧಾನದಲ್ಲಿ ಭಿನ್ನತೆ ಇರಬಹುದು, ಸಂಪ್ರದಾಯಗಳು ಬೇರೆಯಾಗಿರಬಹುದು, ಆದರೆ ಆತ್ಮವೊಂದೆ. ಆ ಆತ್ಮದ ಹೆಸರೇ ಭಾರತೀಯತೆ. ಈ ಭಾರತೀಯತೆಗೆ ನಾನು ಮತ್ತು ತಾವೆಲ್ಲರೂ ಹೆಮ್ಮೆಪಡುತ್ತೇವೆ.

ಒಂದು ರಾಜ್ಯದ ಯುವಜನತೆ ಮತ್ತೊಂದು ರಾಜ್ಯದ ಯುವ ಸ್ನೇಹಿತರೊಂದಿಗೆ ಬೆರೆತಾಗ ಅವರಿಗೆ ಹೊಸ ಅನುಭವವಾಗುತ್ತದೆ, ಪರಸ್ಪರ ವಿಶ್ವಾಸ ಬೆಳೆಯುತ್ತದೆ, ಪರಸ್ಪರ ಅರ್ಥೈಸುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಜನರು ಜತೆಗೂಡಿದಾಗ, ಭೇಟಿಯಾದಾಗ ಆಹಾರ ಪದ್ಧತಿ ಮತ್ತು ಭಾಷೆಯಲ್ಲಿ ಹೆಚ್ಚಿನ ಅಂತರವಿಲ್ಲವೆಂದು ತಿಳಿಯುತ್ತದೆ. ಪರಸ್ಪರ ಒಳಹೊಕ್ಕು ನೋಡಿದಾಗ ನಮ್ಮ ಮೌಲ್ಯಗಳು, ನಮ್ಮ ಮಾನವೀಯ ಗುಣಗಳು ಒಂದೇ ಎಂಬುದು ತಿಳಿಯುತ್ತದೆ.

ಸ್ನೇಹಿತರೆ, ಒಂದು ಭಾರತ – ಶ್ರೇಷ್ಠ ಭಾರತ ಯೋಜನೆಯಡಿ ಬೇರೆ ಬೇರೆ ರಾಜ್ಯಗಳ ಜತೆ ಒಂದು ವರ್ಷಕ್ಕೆ ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ವರ್ಷ ಹರಿಯಾಣವು ತೆಲಂಗಾಣ ರಾಜ್ಯದ ಜತೆ ಪಾಲುದಾರಿಕೆ ಮಾಡಿಕೊಂಡಿದೆ. ಎರಡೂ ರಾಜ್ಯಗಳೂ ಯಾವ ಯಾವ ವಿಷಯಗಳ ಬಗ್ಗೆ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಕಾರ್ಯಸೂಚಿ ಸಿದ್ಧವಾಗಿದೆ. ಇಂದು ತೆಲಂಗಾಣದಿಂದ ಹರಿಯಾಣಕ್ಕೆ ಆಗಮಿಸಿರುವ ಯುವ ಗೆಳೆಯರಿಗೆ ಅನೇಕ ವಿಷಯಗಳನ್ನು ಅರಿತುಕೊಳ್ಳುವ ಅವಕಾಶ ಲಭಿಸುತ್ತದೆ ಎಂಬ ವಿಶ್ವಾಸ ನನಗಿದೆ.

‘ಒಂದು ಭಾರತ – ಶ್ರೇಷ್ಠ ಭಾರತ’ ಕೇವಲ ಒಂದು ಯೋಜನೆಯಲ್ಲ. ಇದನ್ನು ಒಂದು ಜನಾಂದೋಲನವನ್ನಾಗಿ ಮುಂದುವರಿಸಿಕೊಂಡು ಬರಲಾಗಿದೆ. ದೇಶದ ಯುವಜನತೆ ಇದರೊಂದಿಗೆ ಕೈಜೋಡಿಸಿದರೆ ಈ ಯೋಜನೆ ಯಶ ಕಾಣುತ್ತದೆ.

ನನ್ನ ಪ್ರಿಯ ಯುವಮಿತ್ರರೆ, ಈ ವರ್ಷ ನಮ್ಮ ದೇಶ ಪಂಡಿತ ದೀನ್ ದಯಾಲ್ ಉಪಾಧ್ಯಾಯ ಅವರ ಶತಾಬ್ಧಿ ವರ್ಷವನ್ನು ಆಚರಿಸುತ್ತಿದೆ. ಮುನ್ನಡೆಯುತ್ತಿರಿ, ಮುನ್ನಡೆಯುತ್ತಿರಿ, ನಿಲ್ಲಬಾರದು, ದಣಿಯಬಾರದು, ರಾಷ್ಟ್ರನಿರ್ಮಾಣದ ಹಾದಿಯಲ್ಲಿ ಮುನ್ನಡೆಯುತ್ತಿರಬೇಕು ಎಂಬುದು ದೇಶದ ಯುವಜನರಿಗೆ ಪಂಡಿತ್ ಜೀ ಅವರ ಮಂತ್ರವಾಗಿತ್ತು.

ತಂತ್ರಜ್ಞಾನದ ಈ ಯುಗದಲ್ಲಿ ಇಂದು ಭಾರತೀಯ ಯುವಜನತೆ ಮೂರು “ಸಿ”ಗಳ ಬಗ್ಗೆ ಗಮನ ಕೇಂದ್ರಿಕರಿಸಬೇಕಾಗಿದೆ. ನಾನು ಹೇಳಲಿರುವ ಮೂರು “ಸಿ”ಗಳೆಂದರೆ ಮೊದಲನೆಯದು “ಕಲೆಕ್ಟಿವಿಟಿ” ಎರಡನೆಯದು “ಕನೆಕ್ಟಿವಿಟಿ”, ಮೂರನೆಯದು “ಕ್ರಿಯೆಟಿವಿಟಿ”. ಮೊದಲನೆಯದಾಗಿ “ಕಲೆಕ್ಟಿವಿಟಿ” ನಾವು ಎಲ್ಲಿಯವರೆಗೆ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವುದಿಲ್ಲವೋ, ಭೇದ ಭಾವಗಳನ್ನು ಬದಿಗೊತ್ತಿ ಸಂಪೂರ್ಣ ಭಾರತೀಯರು ಒಂದಾಗುವುದಿಲ್ಲವೋ ಸಾಮೂಹಿಕ ಶಕ್ತಿ ಒಂದು ದೊಡ್ಡ ಶಕ್ತಿಯಾಗಬೇಕಿದೆ. ಎರಡನೆಯದಾಗಿ, “ಕನೆಕ್ಟಿವಿಟಿ” ದೇಶ ಬದಲಾಗಿದೆ. ತಂತ್ರಜ್ಞಾನ ವಿಶ್ವವನ್ನು ಬಹಳ ಪುಟ್ಟದಾಗಿಸಿದೆ. ಸಂಪೂರ್ಣ ವಿಶ್ವ ಇಂದು ತಮ್ಮ ಮುಷ್ಟಿಯಲ್ಲಿದೆ. ““ಕನೆಕ್ಟಿವಿಟಿ” ಸಂಪರ್ಕ ಸಮಯದ ಬೇಡಿಕೆಯಾಗಿದೆ. ನಾವು ಸಂಪರ್ಕದ ದೃಷ್ಟಿಯಿಂದ ತಂತ್ರಜ್ಞಾನದ ಜತೆ ಜತೆಗೆ ನಮ್ಮ ಮಾನವೀಯ ಮೌಲ್ಯಗಳಿಗೂ ಶಕ್ತಿ ತುಂಬುತ್ತಾ ಮುನ್ನಡೆಯಬೇಕಿದೆ. ಮತ್ತೊಂದು “ಸಿ” ಅಂದರೆ “ಕ್ರಿಯೆಟಿವಿಟಿ” – ಸೃಜನಶೀಲತೆ. ಹೊಸ ವಿಚಾರಗಳು, ಹೊಸ ಹೊಸ ಸಂಶೋಧನೆಗಳು, ಹಳೆಯ ಸಮಸ್ಯೆಗಳಿಗೆ ಹೊಸ ಸಮಾಧಾನ ಕಂಡುಕೊಳ್ಳುವ ಹೊಸ ವಿಧಾನ, ಇದನ್ನೆ ನಾವಿಂದು ನಮ್ಮ ಯುವಜನತೆಯಿಂದ ಬಯಸುತ್ತಿರುವುದು. ಎಲ್ಲಿ ಸೃಜನಶೀಲತೆ ಅಂತ್ಯವಾಗುವುದೋ, ಸಂಶೋಧನಾ ಶಕ್ತಿ ನಶಿಸಿಹೋಗುತ್ತದೆ. ಹೊಸತನ ನಿಂತ ನೀರಾಗುತ್ತದೆ. ಒಂದು ರೀತಿಯಲ್ಲಿ ಜೀವನ ಸ್ಥಬ್ಧವಾಗುತ್ತದೆ. ಆದುದರಿಂದ ಸೃಜನಾತ್ಮಕತೆಗೆ ಅವಕಾಶ ದೊರೆತಾಗಲೆಲ್ಲ ಅದನ್ನು ಬಳಸುತ್ತಿರಬೇಕಾಗಿದೆ.

ಆದುದರಿಂದ ಪರಸ್ಪರ ಸಂಪರ್ಕ ಮಾಡಿ, ಸಾಮೂಹಿಕ ಜವಾಬ್ಧಾರಿ ವಹಿಸಿಕೊಳ್ಳುವುದನ್ನು ಕಲಿಯಿರಿ, ಹೊಸ ಹೊಸ ವಿಚಾರಗಳ ಬಗ್ಗೆ ಗಮನ ವಹಿಸಿ. ಇದು ಬಹಳ ಚಿಕ್ಕ ಕೆಲಸ, ಇದನ್ನು ನಾನು ಮಾಡಿದರೆ ಉಳಿದವರು ಏನು ಮಾಡುತ್ತಾರೆ ಎಂದು ಯೋಚಿಸಿ ಯಾವುದೇ ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡದೇ ಇರಬೇಡಿ. ವಿಶ್ವಾದ್ಯಂತ ಹೀಗೆಯೇ ಅನೇಕ ದೊಡ್ಡ ಮತ್ತು ಪುಟ್ಟ ವಿಚಾರಗಳನ್ನು ಮಾಡದೇ ತಿರಸ್ಕರಿಸಲಾಗಿತ್ತು. ಪ್ರಸ್ತುತ ವ್ಯವಸ್ಥೆ, ಹೊಸ ವ್ಯವಸ್ಥೆಯನ್ನು ವಿರೋಧಿಸುತ್ತದೆ. ನಮ್ಮ ದೇಶದ ಯುವಶಕ್ತಿಯ ಎದುರು ಇಂತಹ ವಿರೋಧಗಳು ತಣ್ಣಗಾಗುತ್ತವೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೇ, ಇಂದಿನಿಂದ 50 ವರ್ಷಗಳಿಗೂ ಮೊದಲು ಸಮಗ್ರ ಮಾನವತಾವಾದದ ಬಗ್ಗೆ ಮಾತನಾಡುತ್ತಾ, ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರು ಯುವಜನತೆಗೆ ಒಂದು ಸಂದೇಶ ನೀಡಿದ್ದರು. ದೀನ್ ದಯಾಳ್ ಉಪಾಧ್ಯಾuಯ ಅವರು ರಾಷ್ಟ್ರ ನಿರ್ಮಾಣ ಹಾಗು ದೇಶದಲ್ಲಿ ಇರುವ ಕೆಟ್ಟ ಪದ್ಧತಿಗಳ ವಿರುದ್ಧ ಹೋರಾಡುವಂತೆ ಆಹ್ವಾನ ನೀಡಿದ್ದರು.

“ಹಳೆಯ ಪದ್ಧತಿಗಳಿಗೆ ನಾವು ಅಂತ್ಯ ಹಾಡಬೇಕಿದೆ. ಬಹಳಷ್ಟು ಸುಧಾರಣೆಗಳನ್ನು ತರಬೇಕಿದೆ. ನಮ್ಮ ಮಾನವ ಅಭಿವೃದ್ಧಿ ಮತ್ತು ರಾಷ್ಟ್ರದ ಸಮಗ್ರತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಅದನ್ನು ನಾವು ಮಾಡುತ್ತೇವೆ. ಇದಕ್ಕೆ ಇರುವ ಅಡ್ಡಿಯನ್ನು ನಾವು ನಿವಾರಿಸುತ್ತೇವೆ. ದೇವರು ಶರೀರವನ್ನು ಕೊಟ್ಟಿದ್ದಾನೆ, ಅದರಲ್ಲಿನಕೊರತೆಯನ್ನು ನೀಗಿ ಅಥವಾಆತ್ಮಸಂತೋಷವನ್ನುಬದಿಗಿಟ್ಟುಬಾಳುವಅವಶ್ಯಕತೆಇಲ್ಲ. ಶರೀರದಲ್ಲಿ ಗೆಡ್ಡೆಗಳಾದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಆರೋಗ್ಯವಾದ ಅಂಗಗಳನ್ನು ತೆಗೆಯಬೇಕಾದ ಅವಶ್ಯಕತೆ ಇಲ್ಲ. ಇಂದು ಸಮಾಜದಲ್ಲಿ ಅಸ್ಪೃಶ್ಯತೆ ಅಥವಾ ಮೇಲು ಕೀಳಿನ ಭಾವನೆ ಉಳಿದಿದ್ದು ಅದಕ್ಕೆ ಕಾರಣ ಮನುಷ್ಯ ಮನುಷ್ಯನೆಂದು ತಿಳಿಯದಿದ್ದುದು, ಇದು ಇಂದು ರಾಷ್ಟ್ರದ ಏಕತೆಗೆ ಆತಂಕವನ್ನುಂಟುಮಾಡಿದೆ, ನಾವು ಇದನ್ನು ಅಂತ್ಯಗೊಳಿಸುತ್ತೇವೆ.”

ಪಂಡಿತ್ ಜೀ ಅವರ ಈ ಆಹ್ವಾನ ಇಂದೂ ಕೂಡಾ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ಇಂದೂ ಕೂಡಾ ದೇಶದಲ್ಲಿ ಅಸ್ಪೃಷ್ಯತೆ ಉಳಿದಿದೆ, ಭ್ರಷ್ಟಾಚಾರವಿದೆ, ಕಪ್ಪುಹಣವಿದೆ, ಅನಕ್ಷರತೆಯಿದೆ, aಅಪೌಷ್ಟಿಕತೆಯಿದೆ. ಈ ಎಲ್ಲಾ ಪಿಡುಗುಗಳಿಗೆ ಅಂತ್ಯ ಹಾಡಲು ದೇಶದ ಯುವಜನತೆ ತಮ್ಮ ಶಕ್ತಿಯನ್ನು ಮುಡುಪಾಗಿಡಬೇಕಾಗಿದೆ. idಇದೀಗ ಕೆಲದಿನಗಳ ಮೊದಲು ಸರ್ಕಾರ ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಕ್ಕೆ ದೇಶದ ಯುವಜನರು ತೋರಿಸಿದ ಸಮರ್ಥನೆ, ದೇಶದಲ್ಲಿ ವ್ಯಾಪಿಸಿರುವ ಪಿಡುಗುಗಳನ್ನು ತೊಲಗಿಸಲು ತಮಗಿರುವ ದೃಢ ಇಚ್ಚಾಶಕ್ತಿಯನ್ನು ಬಿಂಬಿಸುತ್ತದೆ.

ಆದುದರಿಂದ ನಾನು ಯಾವಾಗಲಾದರೂ ದೇಶ ಬದಲಾಗುತ್ತಿದೆ ಎಂದು ಹೇಳಿದರೆ, ಅದರ ಹಿಂದೆ ತಮ್ಮ ಶಕ್ತಿ ಇದೆ. ದೇಶದ ಬೇರೆ ಬೇರೆ ಸ್ಥಳಗಳಲ್ಲಿ ಸಾವಿರಾರು, ಲಕ್ಷಗಟ್ಟಲೆ ಯುವಜನ ಬೇರೆ ಬೇರೆ ರೀತಿಯ ಸಾಮಾಜಿಕ ಪಿಡುಗುಗಳ ವಿರುದ್ಧ ಹಾಗು ಸವಾಲುಗಳ ವಿರುದ್ಧ ಹೋರಾಡುತ್ತಿದ್ದಾರೆ. ಇಷ್ಟೆ ಅಲ್ಲ, ಯುವಜನತೆ ಮುಂದಿಡುತ್ತಿರುವ ಹೊಸ ಹೊಸ ವಿಚಾರಗಳಿಗೆ ನಾನು ನಮಿಸದೇ ಇರಲಾರೆ.

ಕೆಲವು ದಿನಗಳ ಹಿಂದೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೆಣ್ಣುಮಗಳೊಬ್ಬಳು ಮದುವೆ ಸಮಾರಂಭಗಳಲ್ಲಿ ಅತಿಥಿಗಳಿಗೆ ಮರುಉಡುಗೊರೆ ರೂಪದಲ್ಲಿ ಮಾವಿನ ಸಸಿಗಳನ್ನು ನೀಡಬೇಕೆಂಬ ವಿಚಾರವನ್ನು ವ್ಯಕ್ತಪಡಿಸಿದ್ದಳು. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಇದೊಂದು ಅದ್ಭುತ ವಿಧಾನವಾಗಿದೆ.

ಇದೇ ರೀತಿ ಒಂದು ಪ್ರದೇಶದಲ್ಲಿನ ಜನತೆ ಕಸದ ಡಬ್ಬಗಳ ಕೊರತೆ ಅನುಭವಿಸುತ್ತಿದ್ದರು. ಅಲ್ಲಿನ ಯುವಜನತೆ ಒಟ್ಟುಗೂಡಿ ಕಸದ ಡಬ್ಬಗಳನ್ನು ಜಾಹೀರಾತುಗಳ ಜೊತೆಗೂಡಿಸಿದರು. ಈಗ ಅಲ್ಲಿನ ಪ್ರತಿಯೊಂದು ರಸ್ತೆಯಲ್ಲಿ ಅಲ್ಲಲ್ಲಿ ಕಸದ ಡಬ್ಬಿಗಳನ್ನು ಕಾಣುತ್ತೀರಿ, ಅದರ ಮೇಲೆ ಜಾಹೀರಾತುಗಳು ಕೂಡಾ ಕಂಡುಬರುತ್ತವೆ. ಈಗ ಅಲ್ಲಿನ ಕಸದ ಡಬ್ಬಿಗಳನ್ನು ಡಸ್ಟ್ ಬಿನ್ ಎನ್ನುವುದಿಲ್ಲ ಆಡ್ ಬಿನ್ ಎನ್ನುತ್ತಾರೆ.

ಇನ್ನೂ ಕೆಲವು ಯುವಕರು ಕಳೆದ ತಿಂಗಳು ರಿಲೇ ಫಾರ್ಮಾಟ್ ನಲ್ಲಿ ಕೇವಲ ಹತ್ತು ದಿನದಲ್ಲಿ ಸರಿಸುಮಾರು 6 ಸಾವಿರ ಕಿಲೋಮೀಟರ್ ದೂರ ಸೈಕಲ್ ಪ್ರವಾಸ ಮಾಡಿ “ಗೋಲ್ಡನ್ ಕ್ವಾಡ್ರಿಲ್ಯಾಟೆರಲ್ ಚಾಲೆಂಜ್” ಅನ್ನು ಪೂರ್ಣಮಾಡಿದ್ದಾರೆ. ಅವರ ಘೋಷವಾಕ್ಯ ಬಹಳ ಸುಂದರವಾಗಿತ್ತು – ಫಾಲೋ ದಿ ರೂಲ್ಸ್ ಅಂಡ್ ಇಂಡಿಯಾ ವಿಲ್ ರೂಲ್”.

ಈ ರೀತಿ ಶಕ್ತಿಯುತ ಯುವಜನತೆ ನಮ್ಮ ದೇಶದ ಮೂಲೆ ಮೂಲೆಗಳಲ್ಲಿ ವಾಸವಾಗಿದ್ದಾರೆ. ಕೆಲವರು ಬೆಟ್ಟಗುಡ್ಡಗಳಿಂದ ಹರಿದು ಬರುವ ನೀರಿನ ಚಿಕ್ಕಪುಟ್ಟ ಝರಿಗಳಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ, ಮತ್ತೆ ಕೆಲವರು ತ್ಯಾಜ್ಯದಿಂದ ಮನೆ ನಿರ್ಮಾಣ ಸಾಮಗ್ರಿಗಳನ್ನು ಉತ್ಪಾದಿಸುತ್ತಿದ್ದಾರೆ, ಮತ್ತೆ ಕೆಲವರು ತಾಂತ್ರಿಕತೆಯ ಸಹಾಯದಿಂದ ದೂರ ದೂರದ ಪ್ರದೇಶಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಇನ್ನೂ ಕೆಲವರು ಬರಗಾಲಪೀಡಿತ ಪ್ರದೇಶಗಳ ರೈತರು ನೀರನ್ನು ಉಳಿಸುವ ಬಗೆಯ ಕುರಿತು ಸಂಪನ್ಮೂಲಗಳನ್ನು ಕ್ರೋಢಿಕರಿಸುತ್ತಿದ್ದಾರೆ. ಹೀಗೆ ಲಕ್ಷಾಂತರ ಯುವಜನರು ರಾಷ್ಟ್ರನಿರ್ಮಾಣಕ್ಕಾಗಿ ಹಗಲಿರುಳು ಶ್ರಮವಹಿಸಿ ದುಡಿಯುತ್ತಿದ್ದಾರೆ.

ಹೀಗೆ ಪ್ರತಿಯೊಬ್ಬ ಶಕ್ತಿಶಾಲಿ ಯುವಕರಿಗಾಗಿ ನಾನು ಮತ್ತೊಮ್ಮೆ ಸ್ವಾಮಿ ವಿವೇಕಾನಂದರ ಸಂದೇಶವನ್ನು ಪುನರುಚ್ಚರಿಸುತ್ತೇನೆ – ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ.

ಏಳಿ ಎಂದರೆ ಶರೀರವನ್ನು ಚೈತನ್ಯವನ್ನಾಗಿಸು, ಶರೀರವನ್ನು ಶಕ್ತಿಶಾಲಿಯನ್ನಾಗಿ ಮಾಡು, ಶರೀರವನ್ನು ಸದೃಢವಾಗಿಡು. ಕೆಲವೊಮ್ಮೆ ಜನರು ಏಳುತ್ತಾರೆ ಆದರೆ ಜಾಗೃತರಾಗುವುದಿಲ್ಲ ಎಂಬುದನ್ನು ನಾವು ನೋಡಿದ್ದೇವೆ. ಈ ಕಾರಣದಿಂದ ಅವರು ಪರಿಸ್ಥಿತಿಯನ್ನು ಅಂದಾಜು ಮಾಡುವಲ್ಲಿ ವಿಫಲರಾಗುತ್ತಾರೆ. ಆದುದರಿಂದ ಏಳುವುದರ ಜತೆಜತೆಗೆ ಜಾಗೃತರಾಗುವುದು ಅತ್ಯಾವಶ್ಯಕ.ಎಲ್ಲಿಯವರೆಗೆ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲವೋ, ನಿಲ್ಲಬೇಡಿ, ಇದು ಕೂಡ ದೊಡ್ಡ ಸಂದೇಶ. ಮೊದಲಿಗೆ ಸ್ಪಷ್ಟ ಗುರಿ ಹೊಂದುವುದು ಅತ್ಯಂತ ಅವಶ್ಯಕ.

ಎಲ್ಲಿಗೆ ಹೋಗಬೇಕೆಂಬುದೇ ನಿಶ್ಚಿತವಾಗಿಲ್ಲವೆಂದಾದರೆ ಹೋಗುವುದಾದರೂ ಎಲ್ಲಿಗೆ, ಯಾವ ದಿಕ್ಕಿನೆಡೆ ಹೋಗುವ ಗಾಡಿಯಲ್ಲಿ ಕುಳಿತುಕೊಳ್ಳುವಿರಿ. ಆದುದರಿಂದ ಗುರಿ ನಿಶ್ಚಯವಾದ ತಕ್ಷಣ ಅದನ್ನು ಗಳಿಸುವುದಕ್ಕಾಗಿ ನಿಲ್ಲದೆ ಮುನ್ನುಗ್ಗಿ, ಪ್ರಯಾಸಪಡದೆ ಪ್ರಯತ್ನ ಮಾಡುತ್ತಿರಿ.

ನನ್ನ ಸ್ನೇಹಿತರೆ, ತಾವೆಲ್ಲ ದೇಶದ ಬೌದ್ಧಿಕ ಶಕ್ತಿಯಾಗಿ ನನ್ನ ಮುಂದೆ ಉಪಸ್ಥಿತರಿದ್ದೀರಿ. ಇಂದು ಯುವಕರೊಳಗಿನ ಕಿಚ್ಚನ್ನು ರಚನಾತ್ಮಕ ಪ್ರಯೋಗಕ್ಕಾಗಿ ಉಪಯೋಗಿಸಬೇಕಿದೆ. ಇಂದು ಯುವಕರನ್ನು ಭ್ರಮೆಯಿಂದ ಹೊರತರಬೇಕಾದ ಅವಶ್ಯಕತೆ ಇದೆ. ಇಂದು ಯುವಕರನ್ನು ಮಾದಕ ವಸ್ತು ಸೇವನೆ ಮತ್ತು ಅಪರಾಧಗಳಿಂದ ದೂರವಿಡಬೇಕಾಗಿದೆ. ತಾವುಗಳು ಚಿಂತನ ಮಂಥನ ಮಾಡಿ ಹೊಸ ಹಾದಿಯನ್ನು ಹುಡುಕಿಕೊಳ್ಳಿ, ಹೊಸ ಗುರಿಯನ್ನು ತಲುಪಿ. ತಮ್ಮ ಮುಂದಿ ಸಾಧ್ಯತೆಗಳ ತೆರೆದ ಆಕಾಶವಿದೆ.

ಇಂದು aಅತ್ಯುನ್ನತ ಯುವ ಸೇವೆಯ ಆವಶ್ಯಕತೆ ಇದೆ. ಅವರ ಚಾರಿತ್ರ್ಯದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತವಿರಬೇಕು. ಎಲ್ಲ ರೀತಿಯ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವಿರಬೇಕು. ಅವರಿಗೆ ತಮ್ಮ ಗೌರವಯುತ ಪರಂಪರೆಯ ಬಗ್ಗೆ ಹೆಮ್ಮೆ ಇರಬೇಕು. ಅವರ ನಡವಳಿಕೆ ಮತ್ತು ಚಾರಿತ್ರ್ಯ ನೈತಿಕ ಮೌಲ್ಯಗಳಿಗೆ ಅನುಗುಣವಾಗಿರಬೇಕು. ಗುರಿ ಮುಟ್ಟುವುದು ಎಷ್ಟು ಕಠಿಣವೋ, ಗುರಿಯಿಂದ ದೂರ ಸರಿಯುವುದು ಅಷ್ಟೇ ಸುಲಭ. ಆದುದರಿಂದ ನಾನು ಈ ಬಗ್ಗೆ ಒತ್ತಿ ಹೇಳುತ್ತಿದ್ದೇನೆ.

ಸುಖೀ, ಸಂಪನ್ನ ಜೀವನದ ಆಸೆ ಇಟ್ಟುಕೊಳ್ಳುವುದು ಸಹಜ. ಆದರೆ ಇದರ ಜತೆ ಜತೆಗೆ ಸಮಾಜ ಮತ್ತು ದೇಶದ ಬಗ್ಗೆ ನಮಗಿರುವ ಜವಾಬ್ಧಾರಿಗಳನ್ನು ಅರಿತುಕೊಳ್ಳುವುದು ಕೂಡಾ ಅಷ್ಟೇ ಅವಶ್ಯಕ. ನಾನು ತಮಗೆ 1,2,3,4,5,6 aMdಅಂದರೆ 6 ಸವಾಲುಗಳ ಬಗ್ಗೆ ತಿಳಿಸುತ್ತೇನೆ, ಅವುಗಳಿಂದ ಹೊರಬರಬೇಕಾದು ಅತ್ಯಂತ ಅವಶ್ಯ.

1. ಸಮಾಜದ ಬಗ್ಗೆ ತಿಳುವಳಿಕೆ ಇಲ್ಲದಿರುವುದು.

2. ಸಮಾಜದ ಬಗ್ಗೆ asaಅಸಮಾಧಾನ

3. ಸಮಾಜದ ಬಗ್ಗೆ tappತಪ್ಪು ತಿಳುವಳಿಕೆ

4. ಜಾತಿ, ಸಮುದಾಯಗಳ ವಿಚಾರಗಳನ್ನು ಮೀರಿ ಬೆಳೆಯುವಲ್ಲಿ ಅಸಮರ್ಥತೆ

5. ತಾಯಂದಿರ, ಅಕ್ಕ ತಂಗಿಯರ ಮತ್ತು ಮಗಳ ಜತೆ ದುರ್ವ್ಯವಹಾರ

6. ಪರಿಸರದ ಬಗ್ಗೆ ಅಲಕ್ಷ್ಯ, ಬೇಜವಾಬ್ಧಾರಿ ದೃಷ್ಟಿಕೋನ

ಈ ಆರು ಸವಾಲುಗಳ ಬಗ್ಗೆ ಇಂದಿನ ಯುವಜನತೆ ಗಮನಹರಿಸಬೇಕು. ಅವುಗಳನ್ನು ಸೋಲಿಸುವ ಪ್ರಯತ್ನ ಮಾಡಬೇಕು. ತಾವು ಎಲ್ಲೇ ಇದ್ದರೂ, ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಸವಾಲುಗಳ ಬಗ್ಗೆ ಅವಶ್ಯಕವಾಗಿ ಚಿಂತಿಸಿ, ಅವುಗಳನ್ನು ದೂರ ಮಾಡುವ ಬಗ್ಗೆ ಪ್ರಯತ್ನಿಸಿ.

ತಾವು ಯುವಕರೆಲ್ಲರೂ ತಾಂತ್ರಿಕ ತಿಳುವಳಿಕೆಯುಳ್ಳವರು. ಸಮಾಜದಲ್ಲಿ ಯಾವ ರೀತಿ ಪರಿವರ್ತನೆಯನ್ನು ತರಬಹುದೆಂಬ ಸಂದೇಶವನ್ನು ಎಲ್ಲ ಯುವಕರು ಜನಮಾನಸದ ಬಳಿ ತಲುಪಿಸಬೇಕಿದೆ.

ಸಮಾಜದಲ್ಲಿ ವಂಚಿತ ಸಮುದಾಯದ, ಶೋಷಿತ ಸಮುದಾಯದ ಜನರ ಜೀವನವನ್ನು ತಲುಪಬೇಕಾದ ಅವಶ್ಯಕತೆ ಇಂದಿನ ಯುವಕರದಾಗಿದೆ. ಮತ್ತೊಬ್ಬರ ಜೀವನವನ್ನು ಬೆಳಗಿಸಲು ತಮ್ಮೆಲ್ಲ ಸಮಯ ಮತ್ತು ಶಕ್ತಿಯನ್ನು ವ್ಯಯಿಸಬೇಕಾಗಿದೆ. ಯುವಕರಲ್ಲಿರುವ ಶಕ್ತಿ, ಸಾಮರ್ಥ್ಯ, ಏನನ್ನಾದರೂ ಮಾಡಿ ಸಾಧಿವುವೆವೆಂಬ ಛಲ ಸಮಾಜದಲ್ಲಿ ಬದಲಾವಣೆಯನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈಗ ಕೋಟ್ಯಾಂತರ ಯುವಕರ ಧ್ವನಿ ಈ ದೇಶದ ಧ್ವನಿಯಾಗಿ ಅಭಿವೃದ್ಧಿ ಕಾರ್ಯವನ್ನು ಮುಂದುವರೆಯಲು ಸಹಾಯ ಮಾಡಬೇಕಾಗಿದೆ.

ನನ್ನ ಪ್ರಿಯ ಮಿತ್ರರೆ, ತಾವೆಲ್ಲರೂ ಗಗನದೆತ್ತರಕ್ಕೆ ಏರಿ ಹೊಸ ಗುರಿಯನ್ನು ಮುಟ್ಟಬೇಕಿದೆ. ಅಭಿವೃದ್ಧಿಯ ಹೊಸ ದೃಷ್ಟಿಕೋನವನ್ನು ಸಿದ್ಧಪಡಿಸಬೇಕಾಗಿದೆ. ಹೊಸ ಸಾಧನೆಗಳನ್ನು ತಲುಪಬೇಕಾಗಿದೆ. ಈ ಶುಭಾಶಯಗಳೊಂದಿಗೆ ತಮ್ಮೆಲ್ಲರಿಗೂ ರಾಷ್ಟ್ರೀಯ ಯುವ ದಿವಸ ಮತ್ತು ಮಹೋತ್ಸವಕ್ಕೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸ್ವಾಮಿ ವಿವೇಕಾನಂದರ ಸವಿನೆನಪುಗಳೊಂದಿಗೆ ನಮ್ಮೊಳಗಿನ ಶಕ್ತಿಯನ್ನು ದೇಶದ ಹಳ್ಳಿಗಳ ಬಡ ರೈತರ ಕಲ್ಯಾಣಕ್ಕಾಗಿ ನಮ್ಮ ಜೀವನದ ಕೆಲ ಸಮಯವನ್ನು ಕಳೆಯುವ ಸಂಕಲ್ಪವನ್ನು ಮಾಡೋಣ. ಜೀವನದಲ್ಲಿ ಇಂತಹ ಕಾರ್ಯಗಳು ನೀಡುವ ಸಂತೋಷಕ್ಕೆ ಅಧಿಕ ಶಕ್ತಿ ಇರುತ್ತದೆ. ಈ ಸಂತೋಷ ನಮ್ಮೊಳಗೊಂದು ಜ್ವಾಲೆಯನ್ನು ಬೆಳಗುತ್ತದೆ. ತಮಗೆಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು. ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಆಗಮಿಸಿರುವ ಯುವಕರಲ್ಲಿ ನನಗೊಂದು ಮಿನಿ ಭಾರತದ ದರ್ಶನವಾಗುತ್ತಿದೆ. ಈ ಮಿನಿ ಭಾರತ ಹೊಸ ಉತ್ಸಾಹ, ಹೊಸ ಪ್ರೇರಣೆಯೊಂದಿಗೆ ಕರ್ಮದ ಸಂದೇಶ ನೀಡಿದ ಭಗವದ್ಗೀತೆಯ ಭೂಮಿಯಿಂದ ಹೊಸತನವೊಂದನ್ನು ನೀಡಲಿದೆ.

ಅದರೊಂದಿಗೆ ತಾವೆಲ್ಲರೂ ಮುನ್ನಡೆಯಿರಿ. ತಮಗೆಲ್ಲರಿಗೂ ಯುವ ಮಹೋತ್ಸವದ ಹಾರ್ದಿಕ ಶುಭಾಶಯಗಳು.