Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲಖನೌನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ 1899 ಚದರ ಮೀಟರ್ ಅಳತೆಯ ಜಮೀನನ್ನು ಎ.ಎ.ಐ.ನಿಂದ ಲಖನೌ ಮೆಟ್ರೋ ರೈಲು ನಿಗಮ (ಎಲ್.ಎಂ.ಆರ್.ಸಿ.)ಕ್ಕೆ ಶಾಶ್ವತವಾಗಿ ಹಸ್ತಾಂತರಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಲಖನೌನಲ್ಲಿನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ 1899 ಚದರ ಮೀಟರ್ ಅಳತೆಯ ಜಮೀನನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಲಖನೌ ಮೆಟ್ರೋ ರೈಲು ನಿಗಮ (ಎನ್.ಎಂ.ಆರ್.ಸಿ.)ಗೆ ಹಸ್ತಾಂತರ ಮಾಡಲು ತನ್ನ ಅನುಮೋದನೆ ನೀಡಿದೆ.

ಟ್ರಾನ್ಸ್ ಪೋರ್ಟ್ ನಗರ್ ಮೆಟ್ರೋ ನಿಲ್ದಾಣದಕ್ಕೆ ಒಳ ಬರಲು ಮತ್ತು ಹೊರ ಹೋಗಲು ಪ್ರವೇಶ ನಿರ್ಮಾಣಕ್ಕಾಗಿ ಎಲ್.ಎಂ.ಆರ್.ಸಿ.ಗೆ ಈ ಜಮೀನು ಅಗತ್ಯವಾಗಿದ್ದು, ಇದು ಎಲ್.ಎಂ.ಆರ್.ಸಿ.ಯ ಕಾರ್ಯಾಚರಣೆಯ ಅಗತ್ಯವಾಗಿದೆ.ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ಬಳಸಬೇಕಾದ ಸಾಮೂಹಿಕ ಸಾರಿಗೆಯ ಸಾರ್ವಜನಿಕ ಬಳಕೆ ಯೋಜನೆ ಇದಾಗಿದೆಮತ್ತು ಸಾರ್ವಜನಿಕರಿಗೆ ಉತ್ತಮ ಸಂಪರ್ಕ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ.