Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲಿಚ್ಟೆನ್‌ಸ್ಟೈನ್‌ನ ಅನುವಂಶಿಕ ರಾಜಕುಮಾರ ಅಲೋಯಿಸ್ ಅವರನ್ನು ಭೇಟಿಯಾದ ಪ್ರಧಾನಮಂತ್ರಿ

ಲಿಚ್ಟೆನ್‌ಸ್ಟೈನ್‌ನ ಅನುವಂಶಿಕ ರಾಜಕುಮಾರ ಅಲೋಯಿಸ್ ಅವರನ್ನು ಭೇಟಿಯಾದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಿಚ್ಟೆನ್‌ಸ್ಟೈನ್‌ನ ಘನತೆವೆತ್ತ ಅನುವಂಶಿಕ ರಾಜಕುಮಾರ ಅಲೋಯಿಸ್ ಅವರನ್ನು ಭೇಟಿ ಮಾಡಿದರು.

ಭಾರತ-ಲಿಚ್ಟೆನ್‌ಸ್ಟೈನ್ ಸಂಬಂಧಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಹಲವು ವಲಯಗಳನ್ನು ಒಳಗೊಂಡಂತೆ ವಿಸ್ತೃತ ಚರ್ಚೆಗಳನ್ನು ನಡೆಸಲಾಯಿತು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಭಾರತ-ಇಎಫ್‌ಟಿಎ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (ಟಿಇಪಿಎ) ಒಂದು ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅದರಡಿ ಸಾಧಿಸಿರುವ ಪ್ರಗತಿಯನ್ನು ಇಬ್ಬರು ನಾಯಕರು ಪರಾಮರ್ಶಿಸಿದರು ಮತ್ತು ಹೂಡಿಕೆ ಹರಿವನ್ನು ಹೆಚ್ಚಿಸಲು ಮತ್ತು ಆರ್ಥಿಕ ಸಹಕಾರವನ್ನು ಮತ್ತಷ್ಟು ತೀವ್ರಗೊಳಿಸಲು ಅವಕಾಶಗಳ ಬಗ್ಗೆಯೂ ಚರ್ಚಿಸಿದರು.

ಪ್ರಧಾನಮಂತ್ರಿ ತಮ್ಮ ಎಕ್ಸ್‌ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;

ಲಿಚ್ಟೆನ್‌ಸ್ಟೈನ್‌ನ ಘನತೆವೆತ್ತ ಅನುವಂಶಿಕ ರಾಜಕುಮಾರ ಅಲೋಯಿಸ್ ಅವರೊಂದಿನ ಭೇಟಿ ಅದ್ಭುತವಾಗಿತ್ತು.

ಹಲವು ವಲಯಗಳಲ್ಲಿ ಭಾರತ-ಲಿಚ್ಟೆನ್‌ಸ್ಟೈನ್ ಸಂಬಂಧಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ನಮ್ಮ ಚರ್ಚೆಗಳು ವಿಸ್ತೃತವಾಗಿ ನಡೆದವು.

ಒಂದು ವರ್ಷವನ್ನು ಪೂರ್ಣಗೊಳಿಸಿರುವ ಭಾರತ-ಇಎಫ್‌ಟಿಎ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (ಟಿಇಪಿಎ) ದಡಿ ಸಾಧಿಸಿರುವ ಪ್ರಗತಿಯನ್ನು ನಾವು ಪರಾಮರ್ಶಿಸಿದೆವು ಮತ್ತು ಹೂಡಿಕೆ ಹರಿವನ್ನು ಹೆಚ್ಚಿಸಲು ಮತ್ತು ಆರ್ಥಿಕ ಸಹಕಾರವನ್ನು ಮತ್ತಷ್ಟು ತೀವ್ರಗೊಳಿಸಲು ಅವಕಾಶಗಳ ಬಗ್ಗೆಯೂ ಚರ್ಚಿಸಿದೆವು.

 

*****