Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲಿಸ್ಬನ್ ನಚಂಪಲಿಮಾಡ್ ಫೌಂಡೇಶನ್ ಗೆ ಭೇಟಿ ನೀಡಿದ ಪ್ರಧಾನಿ

s20170624110111


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಧಾನಿ ಆಂಟೋನಿಯಾ ಕೋಸ್ಟಾ ಅವರಿಂದು ಲಿಸ್ಬನ್ ನ ಚಂಪಲಿಮಾಡ್ ಪ್ರತಿಷ್ಠಾನಕ್ಕೆ ಭೇಟಿ ನೀಡಿದರು.

ಚಂಪಲಿಮಾಡ್ ಪ್ರತಿಷ್ಠಾನವು ಒಂದು ಖಾಸಗಿ ಜೈವಿಕ ವೈದ್ಯಕೀಯ ಸಂಶೋಧನಾ ಪ್ರತಿಷ್ಠಾನವಾಗಿದೆ. ಇದು ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುತ್ತದೆ ಮತ್ತು “ahead of the curve”ಕ್ಯಾನ್ಸರ್ ಸಂಶೋಧನೆಯ ಬೆಂಬಲಿಸುತ್ತದೆ. ಇದು ವೈದ್ಯಕೀಯ ಸೇವೆಗೆ ಒಂದು ಹೊಸ ಸಮಗ್ರ ವಿಧಾನವನ್ನು ನೀಡುತ್ತದೆ, ಅದು ಪ್ರಕೃತಿಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ
ಹಸಿರು ಪರಿಸರದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ದಿನನಿತ್ಯದ ಚಿಕಿತ್ಸೆಯನ್ನು ಒದಗಿಸುತ್ತದೆ.

ಈ ಕೇಂದ್ರದ ವಿನ್ಯಾಸವು, ಉಷ್ಣವಲಯದ ಉದ್ಯಾನ, ನದಿಯ ಮತ್ತು ಸಮುದ್ರದ ನೋಟ ಮತ್ತು ಅಪಾರ ಸೂರ್ಯನ ಬೆಳಕನ್ನು ಒಳಗೊಂಡಿದೆ, ಭಾರತದ ಖ್ಯಾತ ವಾಸ್ತುಶಿಲ್ಪಿ ಚಾರ್ಲ್ಸ್ ಕೊರಿಯಾ ಇದನ್ನು ವಿನ್ಯಾಸಗೊಳಿಸಿದ್ದಾರೆ.

ಈ ಪ್ರತಿಷ್ಠಾನವು ಭಾರತ ಮತ್ತು ಪೋರ್ಚುಗಲ್ ನಡುವಿನ ಬಹುಸಹಕಾರವನ್ನು ಪ್ರತಿನಿಧಿಸುತ್ತದೆ.

ಈ ಸಂಸ್ಥೆಯು ಕ್ಯಾನ್ಸರ್ ಸಂಶೋಧನೆ ಮತ್ತು ಚಿಕಿತ್ಸೆಗೆ ಮುಡಿಪಾಗಿದ್ದು, ಪ್ರಧಾನಮಂತ್ರಿ ಮೋದಿ ಅವರು ಸದಾ ಪ್ರತಿಪಾದಿಸುವ ಸಮಗ್ರ ಆರೋಗ್ಯ ತತ್ವಕ್ಕೆ ಒತ್ತು ನೀಡಿದೆ. ಇಲ್ಲಿ ಕ್ಯಾನ್ಸರ್ ರೋಗಿಗಳು ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಕೆಮೊ ಥೆರಪಿ ಜೊತೆಗೆ ಪ್ರಕೃತಿಯೊಂದಿಗೆ ಸಂಪರ್ಕ ಹೊಂದಿದ ವಿಶಿಷ್ಠ ಪದ್ಧತಿಯಡಿ ಚಿಕಿತ್ಸೆ ಪಡೆಯುತ್ತಾರೆ.

ಕಣ್ಣಿನ ರಕ್ಷಣೆ ಮತ್ತು ದೃಷ್ಟಿಯ ಸಂಶೋಧನೆಗೆ ನೀಡಿದ ಕೊಡುಗೆಯನ್ನು ಗುರುತಿಸಲು ಆಂಟೋನಿಯೋ ಚಂಪಲಿಮಾಡ್ ಮುನ್ನೋಟ ಪ್ರಶಸ್ತಿಯನ್ನು 2007ರಲ್ಲಿ ಸ್ಥಾಪಿಸಲಾಗಿದೆ. ಭಾರತೀಯ ಸಂಘಟನೆ ಅರವಿಂದ್ ನೇತ್ರ ಚಿಕಿತ್ಸಾ ವ್ಯವಸ್ಥೆ ಮೊದಲ ವರ್ಷ ಈ ಪ್ರಶಸ್ತಿಗೆ ಭಾಜನವಾಗಿತ್ತು.

ಪ್ರತಿಷ್ಠಾನದಲ್ಲಿರುವ 42 ರಾಷ್ಟ್ರಗಳ ಸುಮಾರು 300 ಸಂಶೋಧಕರ ಪೈಕಿ ಮೂವರು ಸಂಶೋಧಕರು ಭಾರತವನ್ನು ಪ್ರತಿನಿಧಿಸುತ್ತಾರೆ.

ಚಂಪಲಿಮಾಡ್ ಪ್ರತಿಷ್ಠಾನವು ಹೈದ್ರಾಬಾದ್ ನ ಪ್ರಸಾದ್ ಸಂಸ್ಥೆಯೊಂದಿಗೆ ಸಹಯೋಗ ಹೊಂದಿದೆ. ಚಂಪಲಿಮಾಡ್ ಪ್ರತಿಷ್ಠಾನದಲ್ಲಿ ಚಿಕಿತ್ಸೆಗೆ ಒಳಗಾಗುವ ಅತಿ ಹೆಚ್ಚು ಸಾಗರೋತ್ತರ ಕ್ಯಾನ್ಸರ್ ರೋಗಿಗಳ ಪೈಕಿ ಭಾರತೀಯರ ಸಂಖ್ಯೆಯೇ ಹೆಚ್ಚಾಗಿದೆ.

ಪ್ರಧಾನಮಂತ್ರಿ ಈ ಪ್ರತಿಷ್ಠಾನದ ಸೌಲಭ್ಯಗಳನ್ನು ವೀಕ್ಷಿಸಿದರು ಮತ್ತು ಭಾರತೀಯ ಸಂಶೋಧಕರೊಂದಿಗೆ ಕೆಲ ಕಾಲ ಸಂವಾದ ನಡೆಸಿದರು.

***

VBA/HS