ಪಿಎಂಇಂಡಿಯಾ
ಜಿಎಸ್ಟಿಯ ಅನುಮೋದನೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ಪ್ರಧಾನಿ ಬಣ್ಣನೆ
ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) “ಟೀಮ್ ಇಂಡಿಯಾದ ಶ್ರೇಷ್ಠ ಹೆಜ್ಜೆ,” “ಪರಿವರ್ತನೆಯ ಕಡೆಗೆ ದಿಟ್ಟ ಹೆಜ್ಜೆ,” ಹಾಗೂ “ಪಾರದರ್ಶಕತೆಗೂ ದೊಡ್ಡ ಹೆಜ್ಜೆ,” ಎಂದು ಪ್ರಧಾನಮಂತ್ರಿ ಬಣ್ಣಿಸಿದ್ದಾರೆ.
ಜಿಎಸ್ಟಿ ಮಸೂದೆಯ ಮೇಲಿನ ಚರ್ಚೆಯ ವೇಳೆ ಅವರು ಮಧ್ಯಪ್ರವೇಶಿಸಿ ಮಾತನಾಡಿದರು.
8ನೇ ಆಗಸ್ಟ್ ಅನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, 1942ರಲ್ಲಿ ಇದೇ ದಿನ ಮಹಾತ್ಮಾ ಗಾಂಧಿ ಅವರು ದೇಶ ಬಿಟ್ಟು ತೊಲಗಿ ಚಳವಳಿಕೆ ಕರೆ ನೀಡಿದ್ದರು ಎಂಬುದನ್ನು ಸ್ಮರಿಸಿದರು. ಇಂದು ದೇಶ ತೆರಿಗೆ ಭಯೋತ್ಪಾದನೆಯಿಂದ ಸ್ವಾತಂತ್ರ್ಯದ ಕಡೆಗೆ ಹೆಜ್ಜೆ ಹಾಕಿದೆ ಎಂದು ಹೇಳಿದರು.
ವಿಧೇಯಕದ ಅನುಮೋದನೆಯು ಯಾವುದೇ ರಾಜಕೀಯ ಪಕ್ಷಕ್ಕೆ ದೊರೆತ ಜಯವಲ್ಲ ಬದಲಿಗೆ ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದರು. ಸರಕು ಮತ್ತು ಸೇವೆಗಳ ಬಗ್ಗೆ ನಡೆದ ಚರ್ಚೆ, ಸಂಧಾನ ಮಾತುಕತೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ತಾವು ಶ್ರೀಮತಿ ಸೋನಿಯಾಗಾಂಧಿ ಮತ್ತು ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್ ಅವರನ್ನು ಚರ್ಚೆಗೆ ಆಹ್ವಾನಿಸಿದ್ದಾಗಿ ಹೇಳಿದರು. ಅವರಲ್ಲಿ ಒಬ್ಬರು ಲೋಕಸಭೆಯ ಸದಸ್ಯರು ಮತ್ತೊಬ್ಬರು ರಾಜ್ಯಸಭೆಯ ಸದಸ್ಯರು ಎಂಬುದನ್ನು ಉಲ್ಲೇಖಿಸಿದರು.
ಜಿಎಸ್ಟಿ ಮೇಲೆ ಮೂಡಿದ ಒಮ್ಮತ ಭಾರತದಲ್ಲಿ ರಾಷ್ಟ್ರನೀತಿಯು ರಾಜನೀತಿಗಿಂತ ಮಿಗಿಲು ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.
ರೈಲ್ವೆ, ಅಖಿಲ ಭಾರತ ಸೇವೆ ಮತ್ತು ಭಾರತ್ ನೆಟ್ ಮತ್ತು ಸಾಗರ ಮಾಲಾ ದೃಷ್ಟಿಯ ಹಿನ್ನೆಲೆಯಲ್ಲಿ ಒಂದೇ ಭಾರತ (ಏಕ್ ಭಾರತ್)ದ ಕಂಠಾಭರಣದಲ್ಲಿ ಜಿಎಸ್ಟಿ ಮತ್ತೊಂದು ಮುತ್ತಾಗಿದೆ ಎಂದು ಅವರು ಬಣ್ಣಿಸಿದರು.
ಜಿಎಸ್ಟಿಯೊಂದಿಗೆ ನಾವು ತೆರಿಗೆಯಲ್ಲಿ ಸಮಾನತೆ ತರಲು ಉದ್ದೇಶಿಸಿದ್ದೇವೆ ಎಂದು ಪ್ರಧಾನಿ ಹೇಳಿದರು, ಹೊಸ ಹಂಚಿಕೆಯಲ್ಲಿ ಗ್ರಾಹಕನೇ ಸರ್ವೋನ್ನತವಾಗಿರುತ್ತಾನೆ ಎಂದ ಪ್ರಧಾನಿ, ಮಾನವಶಕ್ತಿ, ಹಣ, ಯಂತ್ರ, ಸಾಧನ ಮತ್ತು ಸಮಯ ಎಲ್ಲವನ್ನೂ ನ್ಯಾಯೋಚಿತವಾಗಿ ಬಳಸುವುದು ಬಲಿಷ್ಠ ಆರ್ಥಿಕ ನೀತಿಯ ಮುಖ್ಯ ತತ್ವಗಳಾಗಿವೆ, ಇದನ್ನು ಸಾಧಿಸಲು ಜಿಎಸ್ಟಿ ನೆರವಾಗಲಿದೆ ಎಂದರು.
ಜಿಎಸ್ಪಿ ಸಮಯೋಚಿತ ದತ್ತಾಂಶ ತರಲೂ ನೆರವಾಗಲಿದೆ, ಅದರ ಶಕ್ತಿ ತಂತ್ರಜ್ಞಾನದಲ್ಲಿದೆ ಎಂದ ಪ್ರಧಾನಮಂತ್ರಿಯವರು, ಗ್ರಾಹಕರ ಹಣದುಬ್ಬರದ ಮೇಲೆ ಪರಿಣಾಮಬೀರುತ್ತಿದ್ದ ಹಲವು ಅಂಶಗಳನ್ನು ಜಿಎಸ್ಟಿಯ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ ಎಂದರು. ತೆರಿಗೆ ಸಂಗ್ರಹಣೆಯಲ್ಲಿ ಭ್ರಷ್ಟಾಚಾರವನ್ನು ಜಿಎಸ್ಟಿ ತಗ್ಗಿಸಲಿದೆ ಮತ್ತು ಸಂಗ್ರಹಣೆಯ ವೆಚ್ಚವನ್ನೂ ಕಡಿಮೆ ಮಾಡಲಿದೆ ಎಂದರು.
ಸಣ್ಣ ವ್ಯಾಪಾರ ಕೂಡ ಜಿಎಸ್ಟಿಯಲ್ಲಿ ಹೆಚ್ಚು ಸುರಕ್ಷಿತವಾಗಿರುವ ಅನುಭವ ಪಡೆಯುತ್ತವೆ ಮತ್ತು ಇದರಿಂದ ಅದ್ಭುತ ಲಾಭ ಪಡೆಯುತ್ತವೆ ಎಂದು ಪ್ರದಾನಿ ಹೇಳಿದರು.
ಕೇಂದ್ರ ಸರ್ಕಾರ ಬಡಜನರ ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣದತ್ತ ಗಮನ ಹರಿಸಿದೆ, ಈ ಮೂಲಕ ನಾವು ಬಡತನವನ್ನು ನಿರ್ಮೂಲನೆ ಮಾಡಬಹುದು ಎಂದು ಪ್ರಧಾನಮಂತ್ರಿ ಹೇಳಿದರು
AD/NT
Today is 8th August. Under the leadership of Mahatma Gandhi, the Quit India movement began: PM @narendramodi in the Lok Sabha
— PMO India (@PMOIndia) August 8, 2016
Today, an important move to free the nation from tax terrorism has begun: PM @narendramodi in the Lok Sabha
— PMO India (@PMOIndia) August 8, 2016
Want to thank all parties, state governments. We are taking a decision which RS, LS, States have thought about in great detail: PM in LS
— PMO India (@PMOIndia) August 8, 2016
This can't be seen as a victory of a party or government, it is a win for the democratic ethos of India & a victory for everyone: PM in LS
— PMO India (@PMOIndia) August 8, 2016
Great Step by Team India, Great Step towards Transformation, Great Steps towards Transparency, this is GST: PM @narendramodi in Lok Sabha
— PMO India (@PMOIndia) August 8, 2016
Having been a CM, now it became easier for me to address issues that CMs could have faced with the GST: PM @narendramodi in the Lok Sabha
— PMO India (@PMOIndia) August 8, 2016
Lot of flaws have been overcome as far as the GST is concerned: PM @narendramodi
— PMO India (@PMOIndia) August 8, 2016
Had met both Sonia ji and Manmohan ji. One is a LS MP and other RS MP. Question of treating LS as junior house does not arise: PM in LS
— PMO India (@PMOIndia) August 8, 2016
Rashtraneeti is bigger than Rajneeti: PM @narendramodi in the Lok Sabha #TransformingIndia
— PMO India (@PMOIndia) August 8, 2016
Consumer & small businesses will gain tremendously. Small business will feel more secure with this. Small business is our strength: PM in LS
— PMO India (@PMOIndia) August 8, 2016
Economic and educational empowerment of the poor is what we are focusing on, so that we can mitigate poverty: PM @narendramodi in Lok Sabha
— PMO India (@PMOIndia) August 8, 2016