Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವದ್ರದ್ ನಲ್ಲಿ ತರಕಾರಿಗಳ ಶ್ರೇಷ್ಠತೆ ಕೇಂದ್ರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ ನೆತನ್ಯಾಹು ಅವರು ಇಂದು ಗುಜರಾತ್ ನ ಸಬರ್ ಕಾಂತಾ ಜಿಲ್ಲೆಯ ವದ್ರಾದ್ ನಲ್ಲಿನ ತರಕಾರಿಗಳ ಶ್ರೇಷ್ಠತೆಯ ಕೇಂದ್ರಕ್ಕೆ ಭೇಟಿ ನೀಡಿದರು.

ಕೇಂದ್ರದ ವಿವಿಧ ಸಾಧನೆಗಳ ಕುರಿತಂತೆ ಅವರಿಗೆ ಸಂಕ್ಷಿಪ್ತವಾಗಿ ವಿವರಿಸಲಾಯಿತು. ಅವರು ವಿಡಿಯೋ ಸಂಪರ್ಕದ ಮೂಲಕ ಕಚ್ ಜಿಲ್ಲೆಯ ಕುಕಮಾದ ಖರ್ಜೂರ ಶ್ರೇಷ್ಠತೆ ಕೇಂದ್ರವನ್ನೂ ಉದ್ಘಾಟಿಸಿದರು. ಕಚ್ ಜಿಲ್ಲೆಯ ರೈತರೊಂದಿಗೆ ಅವರು ಸಂವಾದವನ್ನೂ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ, ಪ್ರಧಾನಮಂತ್ರಿ ಮೋದಿ, ಪ್ರಮುಖವಾಗಿ ಕೃಷಿ ವಲಯದೊಂದಿಗೆ ಹೇಗೆ ದೇಶವನ್ನು ಪರಿವರ್ತಿಸಬಹುದು ಎಂಬುದನ್ನು ಇಸ್ರೇಲ್ ತೋರಿಸಿಕೊಟ್ಟಿದೆ ಎಂದು ಹೇಳಿದರು. ಕೃಷಿ ವಲಯದಲ್ಲಿ ತಂತ್ರಜ್ಞಾನದ ಬಳಕೆ ಮಹತ್ವದ್ದು ಎಂದು ಅವರು ಹೇಳಿದರು. 2022ರ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಭಾರತ ಹೇಗೆ ಶ್ರಮಿಸುತ್ತಿದೆ ಎಂಬುದನ್ನು ಅವರು ಒತ್ತಿ ಹೇಳಿದರು. ನೀರಾವರಿ ಮತ್ತು ಬೇಸಾಯದಲ್ಲಿ ನಾವಿನ್ಯತೆಯ ಪದ್ಧತಿಗಳತ್ತ ಗಮನ ಹರಿಸುವ ಮಹತ್ವವನ್ನು ಅವರು ಪ್ರತಿಪಾದಿಸಿದರು.

*****