Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾರಾಣಸಿ ಲೋಕಸಭಾ ಕ್ಷೇತ್ರದ ಪ್ರಧಾನರೊಂದಿಗೆ ಪ್ರಧಾನಮಂತ್ರಿ ಸಂವಾದ


ವಾರಾಣಸಿ ಲೋಕಸಭಾ ಕ್ಷೇತ್ರದ ಗ್ರಾಮಗಳ ಪ್ರಧಾನರುಗಳನ್ನಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಸ್ವಾಗತಿಸಿದರು.

ಪ್ರಧಾನರುಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿಯವರು, ತಮ್ಮ ತಮ್ಮ ಗ್ರಾಮಗಳಲ್ಲಿ ಸಂಪೂರ್ಣ ಲಸಿಕೆ ಹಾಕಿಸಲು, ಮಧ್ಯದಲ್ಲಿ ಮಕ್ಕಳು ಶಾಲೆ ಬಿಡುವುದನ್ನು ಸಂಪೂರ್ಣವಾಗಿ ತಡೆಯಲು ಮತ್ತು ಸ್ವಚ್ಛತೆಗಾಗಿ ಶ್ರಮಿಸುವಂತೆ ಉತ್ತೇಜಿಸಿದರು.

ಮಗ ಮತ್ತು ಮಗಳ ನಡುವೆ ಯಾವುದೇ ರೀತಿಯ ತಾರತಮ್ಯ ನಿರ್ಮೂಲನೆ ಮಾಡುವಂತೆ ಆ ಗುಂಪಿಗೆ ಪ್ರಧಾನಿ ತಿಳಿಸಿದರು. ಹೆಣ್ಣು ಮಗು ಹುಟ್ಟಿದರೆ ಸಸಿಯೊಂದನ್ನು ನೆಟ್ಟು ಸಂಭ್ರಮಿಸುವ ಇಂಗಿತವನ್ನು ಈ ಗುಂಪು ವ್ಯಕ್ತಪಡಿಸಿತು.

ಸಂಸತ್ ಭವನ ಮತ್ತು ರಾಷ್ಟ್ರದ ರಾಜಧಾನಿಗೆ ನೀಡಿದ ಭೇಟಿಯ ಅನುಭವಗಳನ್ನು ವಾರಾಣಸಿಯ ನಿವಾಸಿಗಳೊಂದಿಗೆ ಹಂಚಿಕೊಳ್ಳುವಂತೆಯೂ ಪ್ರಧಾನಿ ತಿಳಿಸಿದರು.

***

AD/NT/SH