Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಜಯ್ ದಿವಸ್ ಅಂಗವಾಗಿ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಜಯ ದಿವಸದಂದು ಧೈರ್ಯಶಾಲಿ ಸೈನಿಕರ ಧೈರ್ಯ ಮತ್ತು ತ್ಯಾಗದಿಂದ 1971ರಲ್ಲಿ ಭಾರತಕ್ಕೆ ಐತಿಹಾಸಿಕ ವಿಜಯ ಸಾಧಿಸುವುದನ್ನು ಸ್ಮರಿಸಿದರು. ಅವರ ದೃಢ ಸಂಕಲ್ಪ ಮತ್ತು ನಿಸ್ವಾರ್ಥ ಸೇವೆಯು ರಾಷ್ಟ್ರವನ್ನು ರಕ್ಷಿಸಿದೆ ಮತ್ತು ಭಾರತದ ಇತಿಹಾಸದಲ್ಲಿ ಹೆಮ್ಮೆಯ ಕ್ಷಣವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ವಿಜಯ್ ದಿವಸ್ ಅವರ ಶೌರ್ಯಕ್ಕೆ ಗೌರವ ನಮನ ಮತ್ತು ಅವರ ಸಾಟಿಯಿಲ್ಲದ ಚೈತನ್ಯವನ್ನು ನೆನಪಿಸುತ್ತದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು, ಸೈನಿಕರ ಶೌರ್ಯವು ತಲೆಮಾರುಗಳ ಭಾರತೀಯರಿಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಹೇಳಿದರು.

ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;

“ವಿಜಯ ದಿವಸದಂದು, ಧೈರ್ಯಶಾಲಿ ಸೈನಿಕರನ್ನು ನಾವು ಸ್ಮರಿಸುತ್ತೇವೆ. ಅವರ ಧೈರ್ಯ ಮತ್ತು ತ್ಯಾಗವು 1971ರಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿತು. ಅವರ ದೃಢ ಸಂಕಲ್ಪ ಮತ್ತು ನಿಸ್ವಾರ್ಥ ಸೇವೆಯು ನಮ್ಮ ರಾಷ್ಟ್ರವನ್ನು ರಕ್ಷಿಸಿತು ಮತ್ತು ನಮ್ಮ ಇತಿಹಾಸದಲ್ಲಿ ಹೆಮ್ಮೆಯ ಕ್ಷಣವಾಗಿದೆ. ಈ ದಿನವು ಅವರ ಶೌರ್ಯಕ್ಕೆ ಗೌರವ ಮತ್ತು ಅವರ ಸಾಟಿಯಿಲ್ಲದ ಚೈತನ್ಯವನ್ನು ನೆನಪಿಸುತ್ತದೆ. ಅವರ ವೀರತ್ವವು ತಲೆಮಾರುಗಳ ಭಾರತೀಯರಿಗೆ ಸ್ಫೂರ್ತಿ ನೀಡುತ್ತಲೇ ಇದೆ.”

 

*****