ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಟಾರ್ಗೆಟ್ ಪ್ಲಸ್ ಯೋಜನೆ (ಟಿಪಿಎಸ್) 2004-09ಕ್ಕೆ ಸಂಬಂಧಿಸಿದಂತೆಸುಪ್ರೀಂಕೋರ್ಟ್ ದಿನಾಂಕ 27ನೇ ಅಕ್ಟೋಬರ್ 2015ರಂದು ಸಿವಿಲ್ ಅರ್ಜಿ ಸಂಖ್ಯೆ 554/2006 ರಲ್ಲಿ ನೀಡಿರುವ ತೀರ್ಪಿನ ಅನುಷ್ಠಾನಕ್ಕೆ ತನ್ನ ಅನುಮೋದನೆ ನೀಡಿದೆ.
ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಟಿಪಿಎಸ್ ಅಡಿಯಲ್ಲಿ ಉದ್ಭವಿಸುವ ಆದಾಯದ ಪರಿಣಾಮ ಸುಮಾರು 2700 ಕೋಟಿ ರೂಪಾಯಿಗಳಾಗಿವೆ.
ಇದರ ಲಾಭವನ್ನು 2005-06ನೇ ಸಾಲಿನ ಎಫ್.ಟಿ.ಪಿ. ಮತ್ತು ವಿದೇಶೀ ವಾಣಿಜ್ಯ ನೀತಿ 2004-09ರ ನಿಯಮಗಳ ಅಡಿಯ ಟಿಪಿಎಸ್ ಯೋಜನೆಯ ನಿಬಂಧನೆಗಳ ಅನ್ವಯ ಪ್ರಾಥಮಿಕವಾಗಿ ಹೊರಡಿಸಲಾದ ಅಧಿಸೂಚನೆಯಂತೆ ದೇಶಾದ್ಯಂತ ಎಲ್ಲ ಅರ್ಹ ರಫ್ತು ಅರ್ಜಿದಾರರಿಗೆ ವಿಸ್ತರಿಸಲಾಗುವುದು.
ಟಾರ್ಗೆಟ್ ಪ್ಲಸ್ ಯೋಜನೆ (ಟಿಪಿಎಸ್)2005-06 ಅನ್ನು ಈಗಾಗಲೇ ಭಾಗಶಃ ಜಾರಿ ಮಾಡಲಾಗಿದೆ. ಆದಾಗ್ಯೂ ಪೂರ್ವಾನ್ವಯವಾದ ಅಧಿಸೂಚನೆಯ ಕಾರಣದಿಂದ ಕ್ಲೇಮ್ ನಿರಾಕರಿಸಲಾಗಿದ್ದವರಿಗೂ ಈಗ ಸುಪ್ರೀಂಕೋರ್ಟ್ ಸಿ.ಎ.ನಂ. 554/2006ಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಅನ್ವಯ ಕ್ಲೇಮ್ ಇತ್ಯರ್ಥ ಮಾಡಲಾಗುತ್ತಿದೆ. ಈ ಯೋಜನೆಯನ್ನು 1.4.2006ರಿಂದ ಜಾರಿಗೆ ಬರುವಂತೆ ನಿಲ್ಲಿಸಲಾಗಿದೆ.
ಕ್ಲೇಮ್ ಗಳನ್ನು ಮೂಲ ಅಧಿಸೂಚನೆಗಳಂತೆ 20.02.2006ನೇ ದಿನಾಂಕದ ಅಧಿಸೂಚನೆ ಸಂಖ್ಯೆ 48 ಮತ್ತು ದಿನಾಂಕ 12.08.2006ರ ಅಧಿಸೂಚನೆ ಸಂಖ್ಯೆ 8ರ ದಿನಾಂಕದವರೆಗೆ ಪರಿಗಣಿಸಲಾಗುವುದು. ಕ್ಲೇಮುಗಳ ಪ್ರಕ್ರಿಯೆಯ ಮಾರ್ಗಸೂಚಿಗಳು ಮತ್ತು ವಿಧಾನಗಳನ್ನು ಡಿಜಿಎಫ್.ಟಿ ಎಚ್.ಕ್ಯು. ಕಂದಾಯ ಇಲಾಖೆಯೊಂದಿಗೆ ಸಮಾಲೋಚಿಸಿ ರೂಪಿಸಲಿದೆ ಮತ್ತು ಇದು ಸಂಪುಟದ ಅನುಮೋದನೆ ದೊರೆತ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ.
ಈ ಸರಿಪಡಿಸಲಾದ ಕ್ರಮವು ಸರ್ಕಾರದೊಂದಿಗಿನ ಬಹು ವಿವಾದಗಳಿಗೆ ಅಂತ್ಯ ಹಾಡಲಿದೆ ಮತ್ತು ಟಿಪಿಎಸ್ ಅಡಿಯಲ್ಲಿನ ಕ್ಲೇಮ್ ಗಳನ್ನು ಮಾನ್ಯ ಸುಪ್ರೀಂಕೋರ್ಟ್ ತೀರ್ಪಿನ ಅನುಸರಣೆಯಂತೆ ವಿದೇಶೀ ವಾಣಿಜ್ಯ ನೀತಿಯ ಮೂಲ ನಿಬಂಧನೆಗಳಂತೆ ನೀಡಲಾಗುವುದು. .
ಹಿನ್ನೆಲೆ
ಡಿಜಿಎಫ್.ಟಿv/s ಕನಕ್ ಎಕ್ಸ್ ಪೋರ್ಟ್ಸ್ ಮತ್ತು ಇತರರು ಎಂಬ ಶೀರ್ಷಿಕೆಯ ಸಿವಿಲ್ ಮನವಿ ಸಂಖ್ಯೆ 554/2006ರಲ್ಲಿ, ಸರ್ವೋನ್ನತ ನ್ಯಾಯಾಲಯವು ದಿನಾಂಕ 17.10.2015ರಂದು ರಫ್ತು ಉತ್ತೇಜನದ ಟಾರ್ಗೆಟ್ ಪ್ಲಸ್ ಯೋಜನೆ ಕುರಿತಂತೆ ತೀರ್ಪು ನೀಡಿತ್ತು. ಟಾರ್ಗೆಟ್ ಪ್ಲಸ್ ಯೋಜನೆ (ಟಿಪಿಎಸ್)ಗೆ ಸಂಬಂಧಿಸಿದಂತೆ ದಿನಾಂಕ 20.2.2006ರ ಅಧಿಸೂಚನೆ ಸಂಖ್ಯೆ 48/2005 (ಕೆಲವು ಉತ್ಪನ್ನಗಳನ್ನು ಅನರ್ಹ ಗೊಳಿಸಿತ್ತು) ಮತ್ತು ದಿನಾಂಕ 12, ಜೂನ್ 2006ರ ಅಧಿಸೂಚನೆ ಸಂಖ್ಯೆ 8/2006 (ಆ ಮೊದಲಿನ ಶೇ.5, 10 ಮತ್ತು 15ರ ಬದಲಾಗಿ ದರವನ್ನು ಶೇ.5ಕ್ಕೆ ಇಳಿಕೆ) ಪೂರ್ವಾನ್ವಯವಾಗಿ ಅನ್ವಯವಾಗುವುದಿಲ್ಲ ಮತ್ತು ಅವು ಹೊರಡಿಸಲಾದ ದಿನದಿಂದ ಮಾತ್ರ ಅನ್ವಯವಾಗುತ್ತದೆ ಎಂದು ಹೇಳಿತ್ತು.
AKT/VBA/SH