ಪಿಎಂಇಂಡಿಯಾ
ವಿಶ್ವ ಸಂಸ್ಥೆಯಲ್ಲಿನ ಅಮೆರಿಕದ ಕಾಯಂ ಪ್ರತಿನಿಧಿ, ರಾಯಭಾರಿ, ನಿಕ್ಕಿಹಾಲೆ ಅವರು ಇಂದು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ್ದರು.
ರಾಯಭಾರಿ ಹಾಲೆ ಅವರು ಅಧ್ಯಕ್ಷ ಟ್ರಂಪ್ ಅವರ ಪರವಾಗಿ ಶುಭಾಶಯಗಳನ್ನು ಹೇಳಿದರು. ಪ್ರಧಾನಮಂತ್ರಿ ಅವರೂ ಕೂಡ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರಿಗೆ ತಮ್ಮ ಪರವಾಗಿ ಶುಭಾಶಯಗಳನ್ನು ತಿಳಿಸುವಂತೆ ಮನವಿ ಮಾಡಿದರಲ್ಲದೆ, ಅವರು ತಮ್ಮ ಮತ್ತು ಟ್ರಂಪ್ ಅವರ ನಡುವಿನ ಹಿಂದಿನ ಮಾತುಕತೆ ಮತ್ತು ಸಂವಾದಗಳನ್ನು ಸ್ಮರಿಸಿದರು.
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ವಿಶೇಷವಾಗಿ ಕಾರ್ಯತಂತ್ರ ಮತ್ತು ರಕ್ಷಣಾ ವಲಯಗಳಲ್ಲಿನ ಬಲವರ್ಧನೆಯನ್ನು ರಾಯಭಾರಿ ಹಾಲೆ ಉಲ್ಲೇಖಿಸಿದರು. ಉಭಯ ನಾಯಕರು ಭಯೋತ್ಪಾದನೆ ವಿರುದ್ಧ ಹೋರಾಟ ಸೇರಿದಂತೆ ಬಹುವಿಧದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಹಕಾರ ಸಂಬಂಧವನ್ನು ವೃದ್ಧಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರು. ಜಾಗತಿಕ ಶಾಂತಿ ಮತ್ತು ಶ್ರೇಯೋಭಿವೃದ್ಧಿಗೆ ಭಾರತ ಮತ್ತು ಅಮೆರಿಕ ನಡುವಿನ ಸಹಭಾಗಿತ್ವ ಬಲಿಷ್ಠವಾಗಿ ಮುಂದುವರಿಯಬೇಕೆಂಬುದು ಪ್ರಮುಖ ಅಂಶವಾಗಿದೆ ಎಂದು ಉಭಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷ ಟ್ರಂಪ್ ಅವರು, ದಕ್ಷಿಣ ಏಷ್ಯಾ ಮತ್ತು ಭಾರತ-ಫೆಸಿಫಿಕ್ ಕಾರ್ಯತಂತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿಗಳು, ಕೊರಿಯಾ ದ್ವೀಪದಲ್ಲಿ ಅಣ್ವಸ್ತ್ರ ನಿಶಸ್ತ್ರೀಕರಣಗೊಳಿಸುವ ನಿಟ್ಟಿನಲ್ಲಿ ಅವರು ಕೈಗೊಂಡಿರುವ ಕಾರ್ಯವನ್ನು ಶ್ಲಾಘಿಸಿದರು.
Ambassador @nikkihaley, United States Permanent Representative to the United Nations calls on Prime Minister @narendramodi. https://t.co/zz3idyORai
— PMO India (@PMOIndia) June 27, 2018
via NaMo App