ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶದ ಬಳಕೆಯ ಸಹಕಾರಕ್ಕಾಗಿ ಭಾರತ ಮತ್ತು ಆಫ್ಘಾನಿಸ್ತಾನದ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಪೂರ್ವಾನ್ವಯವಾಗಿ ತನ್ನ ಅನುಮೋದನೆ ನೀಡಿದೆ.
ಕೃಷಿ, ಶಿಕ್ಷಣ, ಹವಾಮಾನ ಮುನ್ನೆಚ್ಚರಿಕೆ, ದೂರಸಂಪರ್ಕ, ಗ್ರಾಮೀಣ ಆರೋಗ್ಯ, ನೈರ್ಮಲ್ಯ, ನಗರಾಭಿವೃದ್ಧಿ, ಸಂಪನ್ಮೂಲ ಪಥದರ್ಶಕ ನಕ್ಷೆ, ದೂರ ಸಂವೇದಿ ಮತ್ತು ಪರಸ್ಪರರು ಒಪ್ಪುವ ಯಾವುದೇ ಇತರ ಕ್ಷೇತ್ರದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಆನ್ವಯಿಕಗಳಿಗಾಗಿ ಎರಡೂ ದೇಶಗಳ ನಡುವೆ ಈ ತಿಳಿವಳಿಕೆ ಒಪ್ಪಂದ ಸಹಕಾರಕ್ಕೆ ಗಮನಹರಿಸುತ್ತದೆ.
ಈ ತಿಳಿವಳಿಕೆ ಒಪ್ಪಂದವು ಎರಡೂ ರಾಷ್ಟ್ರಗಳಿಗೆ ಈ ಕೆಳಕಂಡ ಸ್ವರೂಪದಲ್ಲಿ ಲಾಭ ತರುತ್ತದೆ:
1. ಆಫ್ಘಾನಿಸ್ತಾನದಲ್ಲಿ ಬಾಹ್ಯಾಕಾಶ ವಲಯ ಅಭಿವೃದ್ಧಿ;
2. ಇತರ ರಾಷ್ಟ್ರಗಳಿಗೂ ನೆರವು ನೀಡುವ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂದುವರಿದ ದೇಶ ಎಂದು ಸಾಬೀತುಪಡಿಸಿರುವ ಭಾರತದಿಂದ ಬೆಳಕು ಕಾಣುವುದು;
3. ಬಾಹ್ಯಾಕಾಶ ವಲಯದಲ್ಲಿ ಆಪ್ಘಾನಿಸ್ತಾನ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಡುವುದು;
4. ಭಾರತ ಮತ್ತು ಆಪ್ಘಾನಿಸ್ತಾನದ ನಡುವೆ ದ್ವಿಪಕ್ಷೀಯ ಬಾಂಧವ್ಯ ಮತ್ತು ಪರಸ್ಪರ ತಿಳಿವಳಿಕೆ ಹಾಗೂ ನಂಬಿಕೆಯನ್ನು ಆಳಗೊಳಿಸುವುದು;
5. ಆಪ್ಘಾನಿಸ್ತಾನದ ಸಂವಹನ ಮತ್ತು ಬಾಹ್ಯಾಕಾಶ ವಲಯದಲ್ಲಿ ಕಾರ್ಯತಂತ್ರಕ್ಕೆ ಭಾರತದೊಂದಿಗೆ ಹೆಗ್ಗುರುತು ಮೂಡಿಸುವುದು.
ಅಲ್ಲದೆ ಈ ತಿಳಿವಳಿಕೆ ಒಪ್ಪಂದವು ಎರಡೂ ರಾಷ್ಟ್ರಗಳಲ್ಲಿ ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹಾಗೂ ಅನುಷ್ಠಾನ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಉದ್ಯೋಗಗಳನ್ನು ಹೆಚ್ಚಿಸಲಿದೆ. ಮೊಬೈಲ್ ಮತ್ತು ಅಂತರ್ಜಾಲ ಆಧಾರಿತ ಆನ್ವಯಿಕಗಳ ಮತ್ತು ವಾಣಿಜ್ಯ, ಉತ್ತಮ ಸಂವಹನ ಹಾಗೂ ಅಂತರ್ಜಾಲ ಸಂಪರ್ಕದ ಯುಗದ ಲಾಭ ವೈವಿಧ್ಯಮಯ ಕ್ಷೇತ್ರದಲ್ಲಿ ಉದ್ಯೋಗಳ ಸೃಷ್ಟಿಗೆ ಉತ್ತೇಜನ ನೀಡುತ್ತದೆ.