Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶಾಸನ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಕುರಿತು ತಮ್ಮ ಒಪೆಡ್‌ ಲೇಖನದ ಕೆಲವು ಒಳನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಶಾಸನ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಕುರಿತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬರೆದ ಒಪೆಡ್‌ ಲೇಖನದ ಕೆಲವು ಒಳನೋಟಗಳನ್ನು ಇಂದು ಹಂಚಿಕೊಂಡಿದ್ದಾರೆ. ಇದು ಕೇವಲ ಶಾಸಕಾಂಗ ಕಾರ್ಯವಲ್ಲ, ಬದಲಾಗಿ ಭಾರತದ ನಾರಿ ಶಕ್ತಿಯ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ:

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಾಸನ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಕುರಿತು ಕೆಲವು ಒಳನೋಟಗಳನ್ನು ಬರೆದಿದ್ದಾರೆ. ಇದು ಕೇವಲ ಶಾಸಕಾಂಗ ಕಾರ್ಯವಲ್ಲ, ಬದಲಾಗಿ ಭಾರತದ ನಾರಿ ಶಕ್ತಿಯ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದ್ದಾರೆ’’.

ಈ ಎಳೆ ಲೇಖನದ ಪ್ರಮುಖ ಅಂಶಗಳನ್ನು ಪ್ರಧಾನವಾಗಿ ಪ್ರಸ್ತಾಪಿಸುತ್ತದೆ.

“ಮಹಿಳೆಯರು ಪ್ರಗತಿ ಸಾಧಿಸಿದಾಗ ಸಮಾಜವು ಪ್ರಗತಿ ಸಾಧಿಸುತ್ತದೆ’’.

”ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅಡಿಪಾಯವನ್ನು ಬಲಪಡಿಸುವುದು’’.

“ಮಹಿಳೆಯರು ಆಡಳಿತ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಾಗ ಅವರು ಸಾರ್ವಜನಿಕ ಸಂವಾದವನ್ನು ಉತ್ಕೃಷ್ಟಗೊಳಿಸುವ ಮತ್ತು ಆಡಳಿತದ ಗುಣಮಟ್ಟ ಸುಧಾರಿಸುವ ಅನುಭವಗಳು ಮತ್ತು ಒಳನೋಟಗಳನ್ನು ತಮ್ಮೊಂದಿಗೆ ತರುತ್ತಾರೆ’’.

“2029ರ ಲೋಕಸಭಾ ಚುನಾವಣೆಗಳು ಮತ್ತು ಮುಂಬರುವ ದಿನಗಳಲ್ಲಿ ವಿವಿಧ ರಾಜ್ಯಗಳಿಗೆ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ಮಹಿಳಾ ಮೀಸಲಾತಿಯೊಂದಿಗೆ ನಡೆಸುವುದು ಕಡ್ಡಾಯವಾಗಿದೆ’’.

“2023ರ ಸೆಪ್ಟೆಂಬರ್ ನಲ್ಲಿ ಸಂಸತ್ತು ನಾರಿ ಶಕ್ತಿ ವಂದನ ಅಧಿನಿಯಮವನ್ನು ಸರ್ವಾನುಮತದೊಂದಿಗೆ ಅಂಗೀಕರಿಸಿತು’’.

“ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವಲ್ಲಿನ ಪ್ರತಿಯೊಂದು ವಿಳಂಬವು, ವಾಸ್ತವವಾಗಿ ನಮ್ಮ ಪ್ರಜಾಪ್ರಭುತ್ವದ ಗುಣಮಟ್ಟ ಮತ್ತು ಒಳಗೊಳ್ಳುವಿಕೆಯನ್ನು ಬಲಪಡಿಸುವಲ್ಲಿನ ವಿಳಂಬವಾಗಿದೆ’’.

“ಮಹಿಳಾ ಮೀಸಲಾತಿಗಾಗಿ ಮಸೂದೆಯ ಅಂಗೀಕಾರವು ವಿಸ್ತೃತವಾದ ಸಂಭಾವ್ಯ ಸಹಮತವನ್ನು ಪ್ರತಿಬಿಂಬಿಸಬೇಕು ಮತ್ತು ವಿಶಾಲ ರಾಷ್ಟ್ರೀಯ ಹಿತಾಸಕ್ತಿಯಿಂದ ಮುನ್ನಡೆಸಬೇಕು’’

“ನಾವು ಒಟ್ಟಾಗಿ ಮುಂದುವರಿಯೋಣ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸೋಣ ಮತ್ತು ರಾಷ್ಟ್ರೀಯ ಪ್ರಗತಿಗಾಗಿ ನಮ್ಮ ನಾರಿ ಶಕ್ತಿಯನ್ನು ಸಬಲೀಕರಣಗೊಳಿಸೋಣ’’.

“ಒಪಡ್‌ ಅನ್ನು ಇಲ್ಲಿ ಓದಿ: https://nm-4.com/Tbn4Gs

******