Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ. ಅನಿಲ್ ಮಾಧವ ದವೆ ನಿಧನಕ್ಕೆ ಪ್ರಧಾನಿ ಸಂತಾಪ


ಪರಿಸರ ಸಚಿವ ಶ್ರೀ. ಅನಿಲ್ ಮಾಧವ ದವೆ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

“ಪರಿಸರ ಸಚಿವ ಅನಿಲ್ ದವೆ ಅವರು ನನ್ನ ಸ್ನೇಹಿತ ಮತ್ತು ಗೌರವಾನ್ವಿತ ಸಹೋದ್ಯೋಗಿ, ಅವರ ಹಠಾತ್ ನಿಧನದಿಂದ ನಿಜಕ್ಕೂ ಆಘಾತಕ್ಕೆ ಒಳಗಾಗಿದ್ದೇನೆ. ನನ್ನ ಸಂತಾಪಗಳು.

ಅನಿಲ್ ಮಾಧವ ದವೆ ಅವರನ್ನು ಸಮರ್ಪಣಾಭಾವದ ಸಾರ್ವಜನಿಕ ಸೇವಕ ಎಂದು ಸ್ಮರಿಸಲಾಗುತ್ತದೆ. ಅವರು ಪರಿಸರವನ್ನು ಸಂರಕ್ಷಿಸುವ ವಿಚಾರದಲ್ಲಿ ಭಾವನಾತ್ಮಕವಾಗಿ ಸ್ಪಂದಿಸುತ್ತಿದ್ದರು.

ನಾನು ನಿನ್ನೆ ಸಂಜೆಯವರೆಗೆ ಅನಿಲ್ ಮಾಧವ ದವೆ ಅವರೊಂದಿಗಿದ್ದೆ, ಹಲವು ಪ್ರಮುಖ ನೀತಿಗಳ ಬಗ್ಗೆ ಚರ್ಚಿಸಿದ್ದೆವು. ಈ ಅಗಲಿಗೆ ನನಗೆ ವೈಯಕ್ತಿಕ ನಷ್ಟವನ್ನೂ ಉಂಟು ಮಾಡಿದೆ”, ಎಂದು ಪ್ರಧಾನಿ ತಿಳಿಸಿದ್ದಾರೆ.

***

AKT/SH