ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಜಸ್ಪಾಲ್ ರಾಣಾ ಅವರ ನಿಧನಕ್ಕೆ ಇಂದು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯಿಂದ ಭಾರತೀಯ ಕ್ರೀಡಾ ರಂಗಕ್ಕೆ ಅಪಾರ ನಷ್ಟವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಶೂಟಿಂಗ್ ನಲ್ಲಿ ಅನನ್ಯ ಸಾಧನೆಗಳ ಮೂಲಕ ಅವರು ರಾಷ್ಟ್ರಕ್ಕೆ ಅಪಾರ ಕೀರ್ತಿ ತಂದಿದ್ದಾರೆ ಎಂದು ಹೇಳಿರುವ ಶ್ರೀ ಮೋದಿ ಅವರು, ಮಾರ್ಗದರ್ಶಕರಾಗಿ ಯುವ ಕ್ರೀಡಾಪಟುಗಳನ್ನು ರೂಪಿಸುವಲ್ಲಿ, ಮಾರ್ಗದರ್ಶನ ನೀಡುವಲ್ಲಿ ಅವರ ಕೊಡುಗೆ ಅಷ್ಟೇ ಗಮನಾರ್ಹವಾಗಿದೆ ಎಂದು ಹೇಳಿದ್ದಾರೆ. ಶ್ರೇಷ್ಠತೆ, ಶಿಸ್ತು ಮತ್ತು ಕ್ರೀಡಾ ಜಗತ್ತಿಗೆ ಅವರ ಅಚಲ ಬದ್ಧತೆಯಿಂದಾಗಿ ಅವರು ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ.
ಈ ದುಃಖದ ಸಮಯದಲ್ಲಿ ಅವರ ಕುಟುಂಬವರ್ಗ, ಸ್ನೇಹಿತರು ಮತ್ತು ಇಡೀ ಕ್ರೀಡಾ ಸಮುದಾಯಕ್ಕೆ ಪ್ರಧಾನಮಂತ್ರಿ ತಮ್ಮ ಸಂತಾಪ ಸೂಚಿಸಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಶ್ರೀ ಜಸ್ಪಾಲ್ ರಾಣಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ನಿಧನದಿಂದ ಭಾರತೀಯ ಕ್ರೀಡಾ ಜಗತ್ತಿಗೆ ಅಪಾರ ನಷ್ಟವಾಗಿದೆ.
ಶೂಟಿಂಗ್ ನಲ್ಲಿ ಅಸಾಧಾರಣ ಸಾಧನೆಗಳ ಮೂಲಕ ಅವರು ರಾಷ್ಟ್ರಕ್ಕೆ ಅಪಾರ ಕೀರ್ತಿ ತಂದರು. ಯುವ ಕ್ರೀಡಾಪಟುಗಳನ್ನು ರೂಪಿಸುವ ಮತ್ತು ಮಾರ್ಗದರ್ಶನ ಮಾಡುವ ಮಾರ್ಗದರ್ಶಕರಾಗಿ ಅವರ ಕೊಡುಗೆಯೂ ಅಷ್ಟೇ ಗಮನಾರ್ಹವಾಗಿದೆ. ಶ್ರೇಷ್ಠತೆ, ಶಿಸ್ತು ಮತ್ತು ಕ್ರೀಡಾ ಜಗತ್ತಿಗೆ ಅವರ ಅಚಲ ಬದ್ಧತೆಯು ಅವರಿಗೆ ಅಪಾರ ಮೆಚ್ಚುಗೆಯನ್ನು ತಂದುಕೊಟ್ಟಿದೆ.
ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಇಡೀ ಕ್ರೀಡಾ ಸಮೂಹಕ್ಕೆ ನನ್ನ ಸಂತಾಪಗಳು. ಓಂ ಶಾಂತಿ.”
*****
Deeply saddened by the passing of Shri Jaspal Rana Ji. His passing is a profound loss to the world of Indian sports.
— Narendra Modi (@narendramodi) June 12, 2026
He brought immense glory to the nation through his extraordinary achievements in shooting. Equally remarkable was his contribution as a mentor, shaping and…