Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸತ್ತಿನ ಎರಡನೇ ಸುತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಮಂತ್ರಿಯವರು ಮಾಧ್ಯಮಗಳನ್ನುದ್ದೇಶಿಸಿ ಮಾಡಿದ ಭಾಷಣದ ಕನ್ನಡ ಭಾಷಾಂತರ

ಸಂಸತ್ತಿನ ಎರಡನೇ ಸುತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಮಂತ್ರಿಯವರು ಮಾಧ್ಯಮಗಳನ್ನುದ್ದೇಶಿಸಿ ಮಾಡಿದ ಭಾಷಣದ ಕನ್ನಡ ಭಾಷಾಂತರ


ಗೆಳೆಯರೇ ಸ್ವಾಗತ,

ಸಂಸತ್ತಿನ ಬಜೆಟ್ ಅಧಿವೇಶನದ ಅವಧಿಯಲ್ಲಿ ಬಿಡುವಿನ ಬಳಿಕ ಮತ್ತೆ ನಾವೆಲ್ಲರೂ ಒಟ್ಟಿಗೆ ಸೇರಿದ್ದೇವೆ. ಬಜೆಟ್ ಬಗ್ಗೆ ಸವಿಸ್ತಾರವಾಗಿ ಚರ್ಚೆ ಆಗಬೇಕು ಮತ್ತು ಈ ಚರ್ಚೆಯು ಉತ್ತಮ ಗುಣಮಟ್ಟದಲ್ಲಿರುತ್ತದೆ ಎಂದು ಖಚಿತವಾಗಿ ನನಗನಿಸುತ್ತದೆ. ಇದು ಬಡವರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಗಮನ ಹರಿಸಲಿದೆ. ನಾವು ಜಿ.ಎಸ್.ಟಿ.ಯಲ್ಲಿ ಮಹತ್ವದ ತಿರುವು ಕಾಣುತ್ತೇವೆ ಎಂಬ ವಿಶ್ವಾಸ ನನಗಿದೆ. ನಮ್ಮ ಈ ಆಶಾವಾದಕ್ಕೆ ಒಂದು ಕಾರಣ ಎಂದರೆ, ಎಲ್ಲ ರಾಜ್ಯಗಳೂ ಧನಾತ್ಮಕವಾಗಿ ಇದಕ್ಕೆ ಸಹಕಾರ ನೀಡಿವೆ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಸ್ಪಂದನೆಯಲ್ಲಿ ಅತ್ಯಂತ ಧನಾತ್ಮಕವಾಗಿವೆ ಮತ್ತು ಸಹಕಾರಾತ್ಮಕವಾಗಿವೆ. ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಈ ವಿಚಾರದ ಬಗ್ಗೆ ಸವಿಸ್ತಾರವಾಗಿ ಚರ್ಚೆ ಆದ ಬಳಿಕ ಚರ್ಚೆಯ ನಂತರ ಒಮ್ಮತ ಮೂಡಿದ ತರುವಾಯವಷ್ಟೇ ನಾವು ಈ ದಿಕ್ಕಿನಲ್ಲಿ ಮುಂದೆ ಸಾಗಲು ಇಡಲು ಸಾಧ್ಯ. ಈ ಅಧಿವೇಶದಲ್ಲಿ ಜಿ.ಎಸ್.ಟಿ. ಈ ಅಧಿವೇಶನದಲ್ಲೇ ಅನುಷ್ಠಾನಗೊಳಿಸುವುದನ್ನು ಖಾತ್ರಿ ಪಡಿಸಲು ಎಲ್ಲ ಪ್ರಯ್ನಗಳೂ ನಡೆದಿವೆ. ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ಅತೀವ ಧನ್ಯವಾದಗಳನ್ನು ಅರ್ಪಿಸುತ್ತೇನೆ.

*****