Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸತ್ತಿನ ಚಳಿಗಾಲದ ಆರಂಭದ ವೇಳೆ ಸಂಸತ್ ಭವನದ ಹೊರಗೆ ಮಾಧ್ಯಮಗಳಿಗೆ ಪ್ರಧಾನಮಂತ್ರಿ ನೀಡಿದ ಹೇಳಿಕೆಯ ಸಾರಾಂಶ ಶುಭೋದಯ ಗೆಳೆಯರೆ,

ಸಂಸತ್ತಿನ ಚಳಿಗಾಲದ ಆರಂಭದ ವೇಳೆ ಸಂಸತ್ ಭವನದ ಹೊರಗೆ ಮಾಧ್ಯಮಗಳಿಗೆ ಪ್ರಧಾನಮಂತ್ರಿ ನೀಡಿದ ಹೇಳಿಕೆಯ ಸಾರಾಂಶ ಶುಭೋದಯ ಗೆಳೆಯರೆ,


ಸಾಮಾನ್ಯವಾಗಿ ಚಳಿಗಾಲ ದೀಪಾವಳಿಯೊಂದಿಗೆ ಆರಂಭವಾಗುತ್ತದೆ. ಆದರೆ ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಇತ್ತೀಚಿನ ದಿನಗಳಲ್ಲಿ ಚಳಿಯ ತೀವ್ರತೆಯ ಅನುಭವ ಅಷ್ಟಾಗಿ ಆಗುತ್ತಿಲ್ಲ.

ನಮ್ಮ ಚಳಿಗಾಲದ ಅಧಿವೇಶನ ಇದೀಗ ಆರಂಭವಾಗುತ್ತಿದೆ. 2017ರಲ್ಲಿ ಆರಂಭವಾಗುವ ಈ ಚಳಿಗಾಲದ ಅಧಿವೇಶನ 2018ರಲ್ಲಿ ಮುಂದುವರೆಯುತ್ತದೆ. ಇದರಲ್ಲಿ ಸರ್ಕಾರದ ಹಲವು ಪ್ರಮುಖ ಹಾಗೂ ದೂರಗಾಮಿ ಪರಿಣಾಮಗಳನ್ನು ಬೀರುವ ವಿಷಯಗಳು ಸಂಸತ್ತಿನ ಮುಂದೆ ಬರಲಿವೆ ಎಂಬ ವಿಶ್ವಾಸ ನನಗಿದೆ.

ಅಧಿವೇಶನದಲ್ಲಿ ಉತ್ತಮ ಚರ್ಚೆ ನಡೆಯಲಿದೆ ಮತ್ತು ಆ ಚರ್ಚೆ ಸಕಾರಾತ್ಮಕವಾಗಿರಲಿದೆ ಹಾಗೂ ಆ ಚರ್ಚೆಗಳ ಮೂಲಕ ರಚನಾತ್ಮಕ ಸಲಹೆಗಳು ದೊರಕಬೇಕು. ಹಾಗಾದಾಗ ಮಾತ್ರ ಸಂಸತ್ತಿನ ಅಮೂಲ್ಯ ಸಮಯವನ್ನು ನಾವು ದೇಶದ ಜನರ ಒಳಿತಿಗೆ ಸಮರ್ಪಕವಾಗಿ ಬಳಸಿಕೊಂಡಂತಾಗುತ್ತದೆ.

ನಿನ್ನೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಸಂಸತ್ತಿನ ಕಲಾಪದ ಸಮಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾಗಿ ಅಧಿವೇಶನ ಅರ್ಥಪೂರ್ವವಾಗಲಿದೆ ಎಂದು ನನಗೆ ವಿಶ್ವಾಸವಿದೆ.

ಅಧಿವೇಶನದ ಕಲಾಪ ಪೂರ್ಣ ಪ್ರಮಾಣದಲ್ಲಿ ರಚನಾತ್ಮಕ ರೀತಿಯಲ್ಲಿ ಕಾರ್ಯನಿರ್ವಹಿಸದರೆ ಅದರಿಂದ ದೇಶಕ್ಕೆ ಒಳಿತಾಗುತ್ತದೆ ಮತ್ತು ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ ಹಾಗೂ ಸಾಮಾನ್ಯಜನರ ನಿರೀಕ್ಷೆ ಮತ್ತು ಭರವಸೆಗಳನ್ನು ಈಡೇರಿಸುವ ಹೊಸ ಆಶಾಭಾವ ಸೃಷ್ಟಿಯಾಗುತ್ತದೆ.

ಧನ್ಯವಾದಗಳು,

***