Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಹಾಗೂ ನಾವಿನ್ಯತೆಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಹಾಗೂ ನಾವಿನ್ಯತೆಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು, ಭಾರತೀಯ ಎಸ್.ಎಂ.ಇ.ಗಳಿಗೆ ಲಾಭದಾಯಕವಾಗುತ್ತದೆ ಮತ್ತು ನ್ಯಾಯಸಮ್ಮತ ಮತ್ತು ಸಮಗ್ರ ಅಭಿವೃದ್ಧಿಗೆ ಅವಕಾಶ ನೀಡುತ್ತದೆ. ವಿದೇಶಗಳಲ್ಲಿನ ಎಸ್.ಎಂ.ಇ. ವಲಯದ ಉತ್ತಮ ಪದ್ಧತಿಗಳಿಗೆ ಮಾನ್ಯತೆ ನೀಡಿ, ಭಾರತೀಯ ಎಸ್.ಎಂ.ಇ.ಗಳು ತಮ್ಮನ್ನು ಸುಧಾರಣೆ ಮಾಡಿಕೊಳ್ಳಲು ಮತ್ತು ಇನ್ನೂ ಹೆಚ್ಚು ನಾವಿನ್ಯಗೊಳಿಸಿಕೊಳ್ಳಲು ಅವಕಾಶ ನೀಡುತ್ತದೆ. ಭಾರತೀಯ ಎಸ್.ಎಂ.ಇ. ವಲಯಕ್ಕೆ ಸಂಯುಕ್ತ ಅರಬ್ ಎಮಿರೇಟ್ಸ್ ನ ಎಸ್.ಎಂ.ಇ. ವಲಯದೊಂದಿಗೆ ಪರಸ್ಪರ ಉಪಯುಕ್ತಕರ ಬಾಂಧವ್ಯ ಹೊಂದುವ ಮತ್ತು ಅವುಗಳ ಮಾರುಕಟ್ಟೆಗಳನ್ನು ಅನ್ವೇಷಿಸಲೂ ಅವಕಾಶ ನೀಡುತ್ತದೆ

*****

AKT/VBA/SH