ಪಿಎಂಇಂಡಿಯಾ
“ಸತ್ಯಭಾಮಾಸ್ಯಾಟ್” ಉಪಗ್ರಹ ನಿರ್ಮಾಣದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳ ತಂಡ ನವದೆಹಲಿಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ಅವರೊಂದಿಗೆ ಸತ್ಯಭಾಮಾ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ. ಶೀಲಾ ರಾಣಿ ಅವರೂ ಇದ್ದರು.
ಹಸಿರುಮನೆ ಅನಿಲಗಳ ದತ್ತಾಂಶ ಸಂಗ್ರಹಣೆಗೆ ಉಪಗ್ರಹ ನಿರ್ಮಿಸಿರುವ ತಂಡದ ಪ್ರಯತ್ನವನ್ನು ಪ್ರಧಾನಮಂತ್ರಿಯವರು ಪ್ರಶಂಸಿಸಿದರು.
2016ರ ಜೂನ್ 22ರಂದು ಇಸ್ರೋ ಪಿ.ಎಸ್.ಎಲ್.ವಿ. –ಸಿ 34 ವಾಹಕದ ಮೂಲಕ ಉಡಾವಣೆ ಮಾಡಿದ ಇಪ್ಪತ್ತು ಉಪಗ್ರಹಗಳ ಪೈಕಿ “ಸತ್ಯಭಾಮಾಸ್ಯಾಟ್” ಕೂಡ ಒಂದಾಗಿತ್ತು.
A riveting interaction to remember…with students involved in building satellite Sathyabamasat. pic.twitter.com/vHeQsgZtO0
— Narendra Modi (@narendramodi) July 19, 2016
You will recall that Sathyabamasat was one of the twenty satellites launched by @isro using launch vehicle PSLV-C34 on 22nd June, 2016.
— Narendra Modi (@narendramodi) July 19, 2016