ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೊಮಿನಿಕಾ ಪ್ರಧಾನಮಂತ್ರಿ ರೂಸ್ ವೆಲ್ಟ್ ಸ್ಕೆರಿಟ್ ಅವರ ಆತ್ಮೀಯ ಶುಭ ಹಾರೈಕೆ ಮತ್ತು ಕಾಳಜಿಯ ನುಡಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ ಹಾಗೂ ಡೊಮಿನಿಕಾ ಜೊತೆಗಿನ ನಿರಂತರ ಮೈತ್ರಿಯನ್ನು ಭಾರತ ಅಪಾರವಾಗಿ ಗೌರವಿಸುತ್ತದೆ ಎಂದು ಪುನರುಚ್ಚರಿಸಿದ್ದಾರೆ.
ಉಭಯ ದೇಶಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಜನರ ಹಂಚಿತ ಪ್ರಗತಿ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕಾರ್ಯನಿರ್ವಹಿಸುವ ಬದ್ಧತೆಯನ್ನೂ ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ.
ಶ್ರೀ ಮೋದಿ ಅವರ ಎಕ್ಸ್ ಪೋಸ್ಟ್ ಹೀಗಿದೆ:
ಪ್ರಧಾನಮಂತ್ರಿ ಸ್ಕೆರಿಟ್ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳು ಮತ್ತು ಚಿಂತನಶೀಲ ಮಾತುಗಳಿಗೆ ವಂದನೆಗಳು. ಭಾರತವು ಡೊಮಿನಿಕಾ ಜೊತೆಗಿನ ತನ್ನ ನಿರಂತರ ಸ್ನೇಹವನ್ನು ಅಪಾರವಾಗಿ ಗೌರವಿಸುತ್ತದೆ. ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ನಮ್ಮ ರಾಷ್ಟ್ರಗಳ ಜನರ ಹಂಚಿತ ಪ್ರಗತಿ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕಾರ್ಯನಿರ್ವಹಿಸಲು ನಾವು ಎದುರು ನೋಡುತ್ತಿದ್ದೇವೆ.
@SkerritR
*****
Thank you, Prime Minister Skerrit, for your warm wishes and thoughtful words. India deeply values its enduring friendship with Dominica. We look forward to further strengthening our partnership and working together for the shared progress and prosperity of the people of our nations. @SkerritR
— Narendra Modi (@narendramodi) October 7, 2026