ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಕ್ಕಿಂನ ಗ್ಯಾಂಗ್ ಟಾಕ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ 30 ಕ್ಕೂ ಅಧಿಕ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯೊಂದಿಗೆ ಸಿಕ್ಕಿಂನ 50ನೇ ರಾಜ್ಯೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು.
ಪಾಲ್ಜೋರ್ ಕ್ರೀಡಾಂಗಣದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ರಾಜ್ಯದೊಂದಿಗಿನ ತಮ್ಮ ಆಳವಾದ ಸಂಬಂಧವನ್ನು ಹಂಚಿಕೊಂಡರು. ಆರ್ಕಿಡ್ ಉದ್ಯಾನವನಕ್ಕೆ ಭೇಟಿ ನೀಡಿದ ಅನುಭವವನ್ನು ವಿವರಿಸಿದ ಪ್ರಧಾನಮಂತ್ರಿ, ಪ್ರಕೃತಿಯ ರೋಮಾಂಚಕ ಬಣ್ಣಗಳು ಮತ್ತು ಉತ್ಸಾಹದಿಂದ ಆಕರ್ಷಿತನಾದೆ ಎಂದು ಹೇಳಿದರು. ರಾಜ್ಯದ ನೈಸರ್ಗಿಕ ಸಂಪತ್ತನ್ನು ಪ್ರಮುಖವಾಗಿ ಬಿಂಬಿಸುವ ಆರ್ಕಿಡ್ ಉದ್ಯಾನ ಎಂದು ಕರೆಯಲ್ಪಡುವ ಸಿಕ್ಕಿಂನ ಪೂರ್ವ ಸ್ವರ್ಗವು ಅಪ್ರತಿಮ ಸೌಂದರ್ಯ, ಶಾಂತಿ ಮತ್ತು ಆಧ್ಯಾತ್ಮಿಕ ಸಂತೋಷವನ್ನು ನೀಡುತ್ತದೆ ಎಂದು ಅವರು ಉಲ್ಲೇಖಿಸಿದರು. ”ಈ ಅನುಭವವು ದೊಡ್ಡ ಅದೃಷ್ಟದೊಂದಿಗೆ ಮಾತ್ರ ಬರುತ್ತದೆ. ನನ್ನ ಮನಸ್ಸು ಇನ್ನೂ ಆ ಬಣ್ಣಗಳು ಮತ್ತು ಅವುಗಳ ಆಚರಣೆಯಲ್ಲಿ ಮುಳುಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಸಿಕ್ಕಿಂನ 50 ವರ್ಷಗಳ ಪಯಣವನ್ನು ದೈವಿಕ ವಾತಾವರಣದಲ್ಲಿ ಆಚರಿಸುವ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಒಂದು ಸಂದರ್ಭವು ತುಂಬಾ ಐತಿಹಾಸಿಕವಾಗಿದ್ದು, ಇಂತಹ ದೈವಿಕ ಪರಿಸರದಲ್ಲಿ ನಡೆದಾಗ, ಅದರ ಭವ್ಯತೆಯು ಹಲವು ಪಟ್ಟು ಹೆಚ್ಚಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾವಿದರ ಮೋಡಿಮಾಡುವ ಪ್ರದರ್ಶನಗಳು, ಜನರ ಉತ್ಸಾಹ ಮತ್ತು ಪರ್ವತಗಳು ಮತ್ತು ಆಕಾಶದ ಸುಂದರ ದೃಶ್ಯವು ಪಲ್ಜೋರ್ ಕ್ರೀಡಾಂಗಣದಲ್ಲಿ ಮಾಂತ್ರಿಕ ವಾತಾವರಣವನ್ನು ಸೃಷ್ಟಿಸಿತು ಎಂದು ಅವರು ಹೇಳಿದರು. ”ಪ್ರಕೃತಿ ಮತ್ತು ಸಂಸ್ಕೃತಿ ಒಟ್ಟಿಗೆ ಬಂದಂತೆ ಭಾಸವಾಯಿತು. ಈ ನೆನಪುಗಳು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಅಂತಿಮವಾಗಿ ಸಿಕ್ಕಿಂ ತಲುಪಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಪ್ರಧಾನಮಂತ್ರಿಮಂತ್ರಿ, ಪ್ರತಿಕೂಲ ಹವಾಮಾನದಿಂದಾಗಿ ಗ್ಯಾಂಗ್ಟಾಕ್ ತಲುಪಲು ಸಾಧ್ಯವಾಗದಿದ್ದಾಗ ತಮ್ಮ ಹಿಂದಿನ ಭೇಟಿಯನ್ನು ನೆನಪಿಸಿಕೊಂಡರು ಮತ್ತು ಬಾಗ್ಡೋಗ್ರಾದಿಂದ ಆನ್‌ಲೈನ್ ಸಂಪರ್ಕ ಸಾಧಿಸಬೇಕಾಯಿತು. ಜನರನ್ನು ನೇರವಾಗಿ ಭೇಟಿಯಾಗದ ನಿರಾಶೆ ತಮ್ಮ ಮನಸ್ಸಿನಲ್ಲಿ ಉಳಿದಿತ್ತು ಮತ್ತು ನಾನು ಈ ಅವಕಾಶಕ್ಕಾಗಿ ಕಾಯುತ್ತಿದ್ದೆನು. “ಈ ಸಂದರ್ಭದ ಮೂಲಕ ಆ ಕಾಯುವಿಕೆ ಇಂದು ಈಡೇರಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಪ್ರಧಾನಮಂತ್ರಿ ಅವರು ಸಿಕ್ಕಿಂನ ಜನರನ್ನು ಭೇಟಿಯಾಗುವ ವಿಶಿಷ್ಟ ಅನುಭವದ ಬಗ್ಗೆ ಆತ್ಮೀಯವಾಗಿ ಮಾತನಾಡಿದರು, ಅವರ ಸೌಮ್ಯತೆ, ಸರಳತೆ ಮತ್ತು ನಗು ಮುಖಗಳು ಸದಾ ಅವರಿಗೆ ಶಾಂತಿಯನ್ನು ತರುತ್ತವೆ. ಮುಖ್ಯ ಕಾರ್ಯಕ್ರಮಕ್ಕೂ ಮೊದಲು, ಅವರು ಸಿಕ್ಕಿಂನ ಹಲವು ಪ್ರತಿಭಾನ್ವಿತ ಜನರನ್ನು ಭೇಟಿಯಾಗಿದ್ದರು, ಅದರಲ್ಲಿ ಗಣ್ಯ ನಾಗರಿಕರು, ಪದ್ಮ ಪ್ರಶಸ್ತಿ ಪುರಸ್ಕೃತರು, ಕಲಾವಿದರು ಮತ್ತು ಫುಟ್ಬಾಲ್ ಆಟಗಾರರು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. “ಸಿಕ್ಕಿಂನ ಜನರನ್ನು ಭೇಟಿಯಾಗುವುದು ಸದಾ ನನಗೆ ವಿಭಿನ್ನ ರೀತಿಯ ತೃಪ್ತಿಯನ್ನು ನೀಡುತ್ತದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ನಿನ್ನೆ ಸಂಜೆಯ ರೋಡ್‌ಶೋನ ಎಲ್ಲಾ ವಿವರಗಳೊಂದಿಗೆ ನೆನಪಿಸಿಕೊಂಡ ಪ್ರಧಾನಮಂತ್ರಿ ಅವರು, ಅದನ್ನು ಮರೆಯಲಾಗದ ಅನುಭವ ಎಂದು ಬಣ್ಣಿಸಿದರು. ಗಂಜು ಲಾಮಾ ದ್ವಾರದಿಂದ ಲೋಕ ಭವನದವರೆಗೆ, ಸಿಕ್ಕಿಂನ ಜನರು ಅಗಾಧ ಸಂಖ್ಯೆಯಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು, 21 ಜನಾಂಗೀಯ ಸಮುದಾಯಗಳು ಪ್ರತಿಯೊಂದೂ ತಮ್ಮದೇ ಆದ ಉಡುಗೆ, ಸಂಗೀತ ಮತ್ತು ಸಂಪ್ರದಾಯಗಳೊಂದಿಗೆ ಭಾಗವಹಿಸಿದ್ದವು. ಇಡೀ ವಾತಾವರಣವು ಭವ್ಯ ಉತ್ಸವವಾಗಿ ರೂಪಾಂತರಗೊಂಡಿತ್ತು. “ಪ್ರಕೃತಿಯ ಮಡಿಲಲ್ಲಿ ಅರಳಿದ ವಿವಿಧ ಬಣ್ಣಗಳಂತೆ, ಜನರ ಕೈಯಲ್ಲಿ ನಮ್ಮ ಪ್ರೀತಿಯ ತ್ರಿವರ್ಣ ಧ್ವಜ ಮತ್ತು ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂನ ಪ್ರತಿಧ್ವನಿಸುವ ಜಪಗಳಂತೆ; ಇಡೀ ವಾತಾವರಣವು ಏಕ್ ಭಾರತ್ ಶ್ರೇಷ್ಠ ಭಾರತ್ ನ ಸ್ಫೂರ್ತಿಯನ್ನು ಪ್ರತಿಬಿಂಬಿಸಿತು’’ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು.
ಪ್ರಧಾನಮಂತ್ರಿ ಅವರು ಮಹಿಳೆಯರು, ಮಕ್ಕಳು ಮತ್ತು ವೃದ್ಧ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದನ್ನು ಉಲ್ಲೇಖಿಸಿದರು. ಅತ್ಯಂತ ಪ್ರಭಾವಶಾಲಿಯಾಗಿ, ಮಾರ್ಗದುದ್ದಕ್ಕೂ ಅವರನ್ನು ಪ್ರಭಾವಿತಗೊಳಿಸಿದ್ದು ಸಿಕ್ಕಿಂನ ರಸ್ತೆಗಳ ಸ್ವಚ್ಛತೆ, ಎಲ್ಲಿಯೂ ಕೊಳಕು ಕಾಣಿಸಲಿಲ್ಲ ಮತ್ತು ಗಾಳಿ ಮತ್ತು ರಸ್ತೆಗಳೆರಡರಲ್ಲೂ ಶುದ್ಧತೆ ಎದ್ದು ಕಾಣುತ್ತಿತ್ತು. “ನೀವು ಪ್ರಕೃತಿಯ ದೃಢ ರಕ್ಷಕರು ಮತ್ತು ಬ್ರಾಂಡ್ ರಾಯಭಾರಿಗಳು’’ ಎಂದು ಶ್ರೀ ನರೇಂದ್ರ ಮೋದಿ ಶ್ಲಾಘಿಸಿದರು.
ರೋಡ್ ಶೋ ಮತ್ತು ರಾಜ್ಯೋತ್ಸವ ಆಚರಣೆಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ ಅವರು, ಸಿಕ್ಕಿಂನ ಜನರು ಮತ್ತು ಎಲ್ಲಾ ದೇಶವಾಸಿಗಳಿಗೆ ಈ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಎಲ್ಲಾ ನಾಗರಿಕರು ಮತ್ತು ಕಲಾವಿದರಿಗೆ ಧನ್ಯವಾದಗಳನ್ನು ಸಲ್ಲಿಸಿದರು.”ನಿಮ್ಮ ಪ್ರೀತಿ, ವಾತ್ಸಲ್ಯ ಮತ್ತು ಆಶೀರ್ವಾದಗಳ ಈ ಋಣವನ್ನು ಮರುಪಾವತಿಸುವಲ್ಲಿ ನಾನು ಸಿಗುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ’’ ಎಂದು ಶ್ರೀ ನರೇಂದ್ರ ಮೋದಿ ಸಭೆಗೆ ಸಂಕಲ್ಪ ಮಾಡಿದರು.
ಸಿಕ್ಕಿಂನ ಪಯಣವನ್ನು ಪರಂಪರೆಯ ಜೊತೆಗೆ ಮಾನವೀಯ ಮೌಲ್ಯಗಳು ಮತ್ತು ಅಭಿವೃದ್ಧಿಯ ಪಯಣವೆಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು ಈ ಪಯಣಣವನ್ನು ಮುನ್ನಡೆಸುವಲ್ಲಿ ಹಲವು ತಲೆಮಾರುಗಳ ಪ್ರಯತ್ನಗಳನ್ನು ಶ್ಲಾಘಿಸಿದರು. ಸಿಕ್ಕಿಂನ ಪರಂಪರೆಯನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಯನ್ನು ವೇಗಗೊಳಿಸಲು ರಾಜ್ಯ ಸರ್ಕಾರವು ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ಸರ್ಕಾರಕ್ಕೆ, ಸಿಕ್ಕಿಂ ಮತ್ತು ಈಶಾನ್ಯವು ದೇಶದ ಪ್ರಮುಖ ಭಾಗಗಳಲ್ಲ, ಆದರೆ ಭಾರತದ ‘ಅಷ್ಟ ಲಕ್ಷ್ಮಿ’ಯನ್ನು ಪ್ರತಿನಿಧಿಸುತ್ತವೆ. “ಅದಕ್ಕಾಗಿಯೇ “ಪೂರ್ವ ಕ್ರಿಯಾ’ ನೀತಿಯಲ್ಲಿ ಕೆಲಸ ಮಾಡುವಾಗ, ನಾವು ಈಶಾನ್ಯಕ್ಕಾಗಿ ‘ವೇಗವಾಗಿ ಕೆಲಸ ಮಾಡುವ (ಆಕ್ಟ್ ಫಾಸ್ಟ್) ಸಂಕಲ್ಪವನ್ನು ಕೈಗೊಂಡಿದ್ದೇವೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ರಸ್ತೆಗಳು, ವಿದ್ಯುತ್, ಪ್ರವಾಸೋದ್ಯಮ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಒಳಗೊಂಡಂತೆ ಸಾವಿರಾರು ಕೋಟಿ ಮೌಲ್ಯದ 30 ಕ್ಕೂ ಅಧಿಕ ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. 2023ರ ನಂತರ ಉತ್ತರ ಸಿಕ್ಕಿಂ ಪ್ರದೇಶಗಳಲ್ಲಿ ಎದುರಿಸುತ್ತಿರುವ ಸವಾಲುಗಳಿಗೆ, ವಿಶೇಷವಾಗಿ ಹಾನಿಗೊಳಗಾದ ಸಂಪರ್ಕವನ್ನು ಪುನಃಸ್ಥಾಪಿಸುವಲ್ಲಿ ವಿಶೇಷ ಗಮನ ನೀಡಲಾಗಿದೆ. “ಸಂಪರ್ಕವು ಎಲ್ಲೆಲ್ಲಿ ಪರಿಣಾಮ ಬೀರಿದೆಯೋ ಅಲ್ಲೆಲ್ಲಾ ಸಂಪರ್ಕವನ್ನು ಬಲಪಡಿಸುವತ್ತ ನಾವು ಗಮನಹರಿಸಿದ್ದೇವೆ’’ ಎಂದು ಶ್ರೀ ನರೇಂದ್ರ ಮೋದಿ ಪ್ರಮುಖವಾಗಿ ಉಲ್ಲೇಖಿಸಿದರು.
ಪ್ರವಾಸೋದ್ಯಮ ಆರ್ಥಿಕತೆಯನ್ನು ಸಿಕ್ಕಿಂನ ದೊಡ್ಡ ಶಕ್ತಿ ಎಂದು ಗುರುತಿಸಿದ ಪ್ರಧಾನಮಂತ್ರಿ, ಭಾರತದ ಭೌಗೋಳಿಕ ಪ್ರದೇಶದ ಶೇಕಡಾ ಒಂದಕ್ಕಿಂತ ಕಡಿಮೆ ಪ್ರದೇಶವನ್ನು ಹೊಂದಿದ್ದರೂ, ಸಿಕ್ಕಿಂ ದೇಶದ ಶೇಕಡ 25 ಕ್ಕಿಂತ ಅಧಿಕ ಹೂವಿನ ವೈವಿಧ್ಯತೆಯನ್ನು ಹೊಂದಿದೆ ಎಂದು ಉಲ್ಲೇಖಿಸಿದರು. ”ಇಷ್ಟೊಂದು ನೀಡಲು ಮುಂದಾಗಿರುವಾಗ, ಪ್ರತಿಯೊಬ್ಬರೂ ಸಿಕ್ಕಿಂಗೆ ಮತ್ತೆ ಮತ್ತೆ ಭೇಟಿ ನೀಡಲು ಬಯಸುತ್ತಾರೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಸಿಕ್ಕಿಂನಲ್ಲಿ ಪ್ರವಾಸೋದ್ಯಮವು ಹೆಚ್ಚಿನ ಸಂಖ್ಯೆಯ ಜನರಿಗೆ ಆದಾಯವನ್ನು ಒದಗಿಸುತ್ತದೆ ಮತ್ತು ಒಂದು ರಾಜ್ಯವು ಅತ್ಯುತ್ತಮ ಮೂಲಸೌಕರ್ಯವನ್ನು ಹೊಂದಿದ್ದಾಗ ಮಾತ್ರ ಪ್ರವಾಸೋದ್ಯಮವು ಅಭಿವೃದ್ಧಿ ಹೊಂದುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ನೂರಾರು ಕಿಲೋಮೀಟರ್ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಮತ್ತು ಪ್ರತಿ ಹಳ್ಳಿಗೆ ರಸ್ತೆಗಳನ್ನು ವಿಸ್ತರಿಸುವ ಕಾರ್ಯವು ತ್ವರಿತವಾಗಿ ಪ್ರಗತಿಯಲ್ಲಿದೆ. ಒಂದು ಕಾಲದಲ್ಲಿ ಊಹಿಸಲೂ ಸಾಧ್ಯವಾಗದ ಆಧುನಿಕ ಮೂಲಸೌಕರ್ಯವು ಈಗ ವಾಸ್ತವವಾಗುತ್ತಿದೆ. ”ಅದಕ್ಕಾಗಿಯೇ ನಾವು ಸಿಕ್ಕಿಂನ ಸಂಪರ್ಕ ಮತ್ತು ಮೂಲಸೌಕರ್ಯದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದ್ದೇವೆ’’ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು.
ಪ್ರಮುಖ ಸಂಪರ್ಕ ಯೋಜನೆಗಳನ್ನು ಪ್ರಧಾನವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಬಾಗ್ಡೋಗ್ರಾ-ಗ್ಯಾಂಗ್ಟಾಕ್ ಎಕ್ಸ್‌ಪ್ರೆಸ್‌ವೇ ಮತ್ತು ಸೆವೊಕ್-ರಾಂಗ್ಪೋ ರೈಲು ಮಾರ್ಗವು ಸಿಕ್ಕಿಂ ಅನ್ನು ಇಡೀ ದೇಶದೊಂದಿಗೆ ಸಂಪರ್ಕಿಸುವ ನಿರ್ಣಾಯಕ ಕೊಂಡಿಗಳಾಗಿವೆ ಎಂದು ಉಲ್ಲೇಖಿಸಿದರು. ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಗ್ಯಾಂಗ್ಟಾಕ್‌ನಂತಹ ನಗರಗಳಲ್ಲಿ ರಿಂಗ್ ರಸ್ತೆಗಳಂತಹ ಅಗತ್ಯ ಭವಿಷ್ಯದ ಯೋಜನೆಗಳು ಸಹ ಪ್ರಗತಿಯಲ್ಲಿವೆ. “ಆ ನಿಟ್ಟಿನಲ್ಲಿ ಕಾರ್ಯವೂ ಮುಂದುವರೆದಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
2008-09ರಲ್ಲಿ ಅನುಮೋದನೆ ಪಡೆದ ಆದರೆ ಯಾವುದೇ ಮೂಲಸೌಕರ್ಯವಿಲ್ಲದೆ ಕಡತಗಳಲ್ಲಿ ಸಿಲುಕಿಕೊಂಡಿದ್ದ ಸೆವೊಕ್-ರಾಂಗ್ಪೋ ರೈಲು ಮಾರ್ಗದ ಉದಾಹರಣೆಯನ್ನು ತೆಗೆದುಕೊಂಡು, ಹಾಲಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಮತ್ತೆ ವೇಗವನ್ನು ಪಡೆದುಕೊಂಡಿದೆ ಎಂದು ಅವರು ಉಲ್ಲೇಖಿಸಿದರು. ”ಮೊದಲ ಬಾರಿಗೆ ರೈಲ್ವೆಗಳು ಸಿಕ್ಕಿಂ ತಲುಪುತ್ತಿವೆ’’ ಎಂದು ಶ್ರೀ ನರೇಂದ್ರ ಮೋದಿ ಪ್ರಮುಖವಾಗಿ ಪ್ರಸ್ತಾಪಿಸಿದರು.
ಭಲೇಧುಂಗಾ, ಯೆನ್-ಯೆಂಗ್ ಮತ್ತು ಪೆಲ್ಲಿಂಗ್‌ನಲ್ಲಿ ರೋಪ್‌ವೇಗಳ ನಿರ್ಮಾಣ, ಭಲೇಧುಂಗಾದಲ್ಲಿ ನಿರ್ಮಿಸಲಾಗುತ್ತಿರುವ ಸ್ಕೈವಾಕ್ ಮತ್ತು ಸಿಂಗ್‌ಶೋರ್ ಸೇತುವೆಯಲ್ಲಿ ಗಾಜಿನ ಡೆಕ್ ಸ್ಕೈವಾಕ್‌ಗೆ ಸಿದ್ಧತೆಗಳು ನವೀನ ಚಿಂತನೆಯ ಉದಾಹರಣೆಗಳಾಗಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ನಾಥುಲಾ ಮತ್ತು ನಮ್ಲಿಯಂತಹ ಸ್ಥಳಗಳಲ್ಲಿ ಗಡಿ ಅನುಭವಗಳನ್ನು ಹೆಚ್ಚಿಸುವ ಕೆಲಸವೂ ಪ್ರಗತಿಯಲ್ಲಿದೆ. ”ಈ ಪ್ರಯತ್ನಗಳು ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ, ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುತ್ತದೆ, ನಿಮ್ಮ ಆದಾಯವನ್ನು ವೃದ್ಧಿಸುತ್ತದೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ’’ ಎಂದು ಶ್ರೀ ನರೇಂದ್ರ ಮೋದಿ ಭರವಸೆ ನೀಡಿದರು.
ಸಿಕ್ಕಿಂನಲ್ಲಿ ಪರಿಸರ-ಆರೋಗ್ಯ ಯೋಗಕ್ಷೇಮ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಅದನ್ನು ಸರ್ಕಾರ ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಸ್ಥಳೀಯ ಜನರಿಗೆ ಗರಿಷ್ಠ ಪ್ರವಾಸೋದ್ಯಮ ಆದಾಯವನ್ನು ಖಾತ್ರಿಪಡಿಸಿಕೊಳ್ಳಲು 1,000 ಹೋಂಸ್ಟೇಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಸಾಹಸ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯವನ್ನು ಬೆಂಬಲಿಸಲಾಗುತ್ತಿದೆ. “ಸ್ಥಳೀಯ ಸಮುದಾಯಗಳು ಪ್ರವಾಸೋದ್ಯಮದಿಂದ ನೇರ ಪ್ರಯೋಜನ ಪಡೆಯುವ ಅವಕಾಶಗಳನ್ನು ನಾವು ಸೃಷ್ಟಿಸುತ್ತಿದ್ದೇವೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಸಿಕ್ಕಿಂಗೆ ಕ್ರೀಡೆಗಳು ಮತ್ತೊಂದು ಅಗಾಧ ಸಾಮರ್ಥ್ಯದ ಸಾಧನವಾಗಿದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ಫುಟ್ಬಾಲ್, ಬಾಕ್ಸಿಂಗ್ ಮತ್ತು ಬಿಲ್ಲುಗಾರಿಕೆಯ ಪ್ರಮುಖ ವೇದಿಕೆಗಳಲ್ಲಿ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಸಾಬೀತುಪಡಿಸಿ ರಾಜ್ಯ ಮತ್ತು ರಾಷ್ಟ್ರ ಎರಡಕ್ಕೂ ಕೀರ್ತಿ ತಂದ ಯುವಕರನ್ನು ಶ್ಲಾಘಿಸಿದರು. “ನಿಮ್ಮ ಯುವ ಪ್ರತಿಭೆಗಳು ಸಿಕ್ಕಿಂ ಮತ್ತು ಭಾರತಕ್ಕೆ ಹೆಮ್ಮೆ ತಂದಿವೆ’’ ಎಂದು ಶ್ರೀ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಮತ್ತು ರಾಷ್ಟ್ರಕ್ಕೆ ಈಗಾಗಲೇ ಕೀರ್ತಿ ತಂದಿರುವ ಸಿಕ್ಕಿಂನ ಅಸಾಧಾರಣ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವ ಅಗತ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ‘ಖೇಲೋ ಇಂಡಿಯಾ’ ಮತ್ತು ‘ಫಿಟ್ ಇಂಡಿಯಾ’ ಆಂದೋಲನಗಳ ಮೂಲಕ ಸರ್ಕಾರದ ಬಹುಮುಖಿ ವಿಧಾನವನ್ನು ಪ್ರಸ್ತಾಪಿಸಿದರು. ರಾಜ್ಯ ಕ್ರೀಡಾ ಅಕಾಡೆಮಿಯ ಪುನರುಜ್ಜೀವನ ಮತ್ತು ಸಿಕ್ಕಿಂ ಪ್ರೀಮಿಯರ್ ಲೀಗ್‌ನಂತಹ ಕಾರ್ಯಕ್ರಮಗಳ ಜೊತೆಗೆ ಜಸ್ ಲಾಲ್ ಪ್ರಧಾನ್ ಅವರ ಹೆಸರಿನ ಅತ್ಯಾಧುನಿಕ ಬಾಕ್ಸಿಂಗ್ ಅಕಾಡೆಮಿ ಮತ್ತು ಸಂಯೋಜಿತ ಕ್ರೀಡಾ ಮತ್ತು ಸಾಂಸ್ಕೃತಿಕ ಗ್ರಾಮಗಳು ಸೇರಿದಂತೆ ಮುಂಬರುವ ಯೋಜನೆಗಳೊಂದಿಗೆ ಕ್ರೀಡಗೆ ಉತ್ತೇಜನ ನೀಡಲಾಗುತ್ತಿದೆ. “ಇವು ಸಿಕ್ಕಿಂನ ಯುವಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತವೆ ಮತ್ತು ಅವರ ಕ್ರೀಡೆಗಳಲ್ಲಿ ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯಲು ಸಹಾಯ ಮಾಡುತ್ತದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಇಂದು ಉದ್ಘಾಟನೆಗೊಂಡ ಯೋಜನೆಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪ್ರಮುಖ ಕಾರ್ಯಗಳು ಸೇರಿವೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಪ್ರವಾಸಿಗರು ಭೇಟಿ ನೀಡುವುದನ್ನು ತಡೆಯುವ ಆರೋಗ್ಯ ಸೇವೆಗಳು ಬಹಳ ಸೀಮಿತವಾಗಿದ್ದ ಸಮಯವನ್ನು ನೆನಪಿಸಿಕೊಂಡ ಅವರು, ಸದ್ಯ ಆಗಿರುವ ಪರಿವರ್ತನೆಯನ್ನು ಪ್ರಸ್ತಾಪಿಸಿ, ”ಇಂದು ಆ ಸವಾಲು ಕೂಡ ಕೊನೆಗೊಳ್ಳುತ್ತಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಆರೋಗ್ಯ ಮೂಲಸೌಕರ್ಯವನ್ನು ವಿವರಿಸಿದ ಪ್ರಧಾನಮಂತ್ರಿ, ಸಿಕ್ಕಿಂನಲ್ಲಿ ಸದ್ಯ ಸುಮಾರು 200 ಆಯುಷ್ಮಾನ್ ಆರೋಗ್ಯ ಮಂದಿರಗಳು ಕಾರ್ಯನಿರ್ವಹಿಸುತ್ತಿವೆ, ಜೊತೆಗೆ ನಾಲ್ಕು ಜಿಲ್ಲಾ ಆಸ್ಪತ್ರೆಗಳು, ತೃತೀಯ ಹಂತದ ಆರೈಕೆ ಆಸ್ಪತ್ರೆಗಳು ಮತ್ತು ಯೋಗಕ್ಷೇಮ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಅಲ್ಲಿ ಸಾವಿರಾರು ಜನರು ಆಯುಷ್ ಸೌಲಭ್ಯಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ”ಡ್ರೆಜಾಂಗ್ ನಮ್ಗ್ಯಾಲ್ ಸೋವಾ ರಿಗ್ಪಾ ಆಸ್ಪತ್ರೆಯ ಉದ್ಘಾಟನೆಯೊಂದಿಗೆ, ಸಿಕ್ಕಿಂನ ಆರೋಗ್ಯ ವ್ಯವಸ್ಥೆಯು ಹೆಚ್ಚುವರಿ ಉತ್ತೇಜನವನ್ನು ಪಡೆಯುತ್ತದೆ’’ ಎಂದು ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದರು.
ಆರೋಗ್ಯ ಮೂಲಸೌಕರ್ಯದ ಜೊತೆಗೆ ಕೈಗೆಟುಕುವ ಚಿಕಿತ್ಸೆಯನ್ನು ಒದಗಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ವಿವಿಧ ಉಪಕ್ರಮಗಳನ್ನು ಪ್ರಸ್ತಾಪಿಸಿದರು. ಆರಂಭದಲ್ಲಿ ಬಡವರಿಗೆ ಉಚಿತ ಚಿಕಿತ್ಸೆಗಾಗಿ ಆಯುಷ್ಮಾನ್ ಕಾರ್ಡ್‌ಗಳನ್ನು ಒದಗಿಸಲಾಗಿತ್ತು, ಇದೀಗ ಆ ಸೌಲಭ್ಯವನ್ನು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ವಿಸ್ತರಿಸಲಾಗಿದೆ, ಜತೆಗೆ ಜನೌಷಧಿ ಕೇಂದ್ರಗಳಲ್ಲಿ ಔಷಧಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ. “ಈ ಪ್ರಯತ್ನಗಳು ನಿಮ್ಮ ಜೀವನವನ್ನು ಸುಲಭಗೊಳಿಸಿವೆ ಮಾತ್ರವಲ್ಲದೆ ನಿಮ್ಮ ವೈದ್ಯಕೀಯ ವೆಚ್ಚವನ್ನು ಗಣನೀಯವಾಗಿ ತಗ್ಗಿಸಿವೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಆರ್ಥಿಕ ಪ್ರಗತಿ ಮತ್ತು ಸಂಪನ್ಮೂಲಗಳ ಬಗ್ಗೆ ವಿಶ್ವದ ದೂರದೃಷ್ಟಿಯು ವೇಗವಾಗಿ ಬದಲಾಗುತ್ತಿದೆ ಎಂದ ಪ್ರಧಾನಮಂತ್ರಿ ಅವರು, ಜಾಗತಿಕ ಗಮನವು ಈಗ ಸುಸ್ಥಿರ ಜೀವನಶೈಲಿ, ಶುದ್ಧ ಇಂಧನ ಮತ್ತು ಸಾವಯವ ಆಹಾರಗಳ ಮೇಲೆ ಕೇಂದ್ರೀಕರಿಸದೆ. ಈಶಾನ್ಯ ಮತ್ತು ಸಿಕ್ಕಿಂ ಈ ಭವಿಷ್ಯದ ಬೆಳವಣಿಗೆಯ ಪ್ರಮುಖ ಕೇಂದ್ರಗಳಾಗಿವೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಸಿಕ್ಕಿಂ ಇಡೀ ದೇಶಕ್ಕೆ ದಿಕ್ಕನ್ನು ತೋರಿಸಿದೆ ಎಂದು ಹೇಳಿದರು. “ಸಿಕ್ಕಿಂ 2016 ರಲ್ಲಿ ತನ್ನನ್ನು ತಾನು ಸಂಪೂರ್ಣ ಸಾವಯವ ರಾಜ್ಯವೆಂದು ಘೋಷಿಸಿಕೊಂಡು, ಇಡೀ ರಾಷ್ಟ್ರಕ್ಕೆ ಒಂದು ಮಾದರಿಯಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು.
ಸಾವಯವ ಕೃಷಿಯಲ್ಲಿ ಸಿಕ್ಕಿಂನ ಮುಂಚೂಣಿ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಡೆಮಾಜಾಂಗ್ ಈಗ ಅಕ್ಕಿ ಉತ್ಪಾದನೆಗೆ ಮಾತ್ರವಲ್ಲದೆ ಸಾವಯವ ಅಕ್ಕಿಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು. ದೊಡ್ಡ ಏಲಕ್ಕಿ, ಶುಂಠಿ, ಅರಿಶಿನ, ಆವಕಾಡೊ ಮತ್ತು ಕಿವಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುತ್ತಿವೆ. ಜತೆಗೆ ನೂರಾರು ಜಾತಿಯ ಔಷಧೀಯ ಸಸ್ಯಗಳು ಸ್ಥಳೀಯ ಜನರಿಗೆ ಆದಾಯದ ಮೂಲಗಳಾಗಿವೆ. ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಸಾವಯವ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದರು. ಇದು ರೈತರಿಗೆ ನೇರ ಮಾರುಕಟ್ಟೆ ಪ್ರವೇಶವನ್ನು ಒದಗಿಸುತ್ತದೆ ಎಂದರು. ”ಸಿಕ್ಕಿಂನ ಸಾವಯವ ಮತ್ತು ನೈಸರ್ಗಿಕ ಕೃಷಿ ಮಾದರಿ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ನಿಮ್ಮ ಜೀವನಶೈಲಿ ಮತ್ತು ಸಂಕಲ್ಪವು ರಾಷ್ಟ್ರದ ದೂರದೃಷ್ಟಿಯ ಭಾಗವಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಸಿಕ್ಕಿಂನ ಆರ್ಥಿಕ ಪ್ರಗತಿಯಲ್ಲಿ ಸ್ವಸಹಾಯ ಗುಂಪುಗಳು ಮತ್ತು ಮಹಿಳೆಯರ ಮಹತ್ವದ ಪಾತ್ರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಡಿಜಿಟಲ್ ಇಂಡಿಯಾ ತಮ್ಮ ಉತ್ಪನ್ನಗಳು ದೊಡ್ಡ ಮಾರುಕಟ್ಟೆಗಳನ್ನು ತಲುಪಲು ಸಹಾಯ ಮಾಡುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದನ್ನು ಪ್ರಸ್ತಾಪಿಸಿದರು. ”ಸ್ವಯಂ ಸಿಕ್ಕಿಂ’’ ನಂತಹ ವೇದಿಕೆಗಳು ಇಂದು ಈ ಮಹಿಳೆಯರನ್ನು ಸಬಲೀಕರಣಗೊಳಿಸತ್ತಿವೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಪರಿಸರವನ್ನು ಸಂರಕ್ಷಿಸುವಾಗ ಶುದ್ಧ ಇಂಧನದಲ್ಲಿ ಸಿಕ್ಕಿಂನ ಅಪಾರ ಸಾಮರ್ಥ್ಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ನಾವು ಆ ಪರಿಸರವನ್ನು ಸಂರಕ್ಷಿಸಿ ಬಳಸಿಕೊಳ್ಳಬೇಕು ಎಂದರು. ಪರಿಸರ ಸಂರಕ್ಷಣೆ ಸಿಕ್ಕಿಂ ಜನರ ಸ್ವಭಾವ ಎಂದು ಒಪ್ಪಿಕೊಂಡ ಅವರು, “ತಾಯಿ ಹೆಸರಿನಲ್ಲಿ ಒಂದು ಗಿಡ ನೆಡಿ (ಏಕ್ ಪೆಡ್ ಮಾ ಕೆ ನಾಮ್) ಉಪಕ್ರಮ ಮತ್ತು ಪ್ರತಿ ಮಗುವಿನ ಜನನದ ಸಮಯದಲ್ಲಿ 108 ಮರಗಳನ್ನು ನೆಡುವ ಸ್ಥಳೀಯವಾಗಿ ನಡೆಸಲಾಗುವ ‘ಮೇರೋ ರುಖ್ ಮೇರೋ ಸಂತತಿ’ ಉಪಕ್ರಮವನ್ನು ಅವರು ಶ್ಲಾಘಿಸಿದರು. ”ಈ ಉಪಕ್ರಮವು ಇಡೀ ಜಗತ್ತಿಗೆ ಸ್ಫೂರ್ತಿ ಎಂದು ನಾನು ನಂಬುತ್ತೇನೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಪ್ರತಿಯೊಬ್ಬರೂ ಅದೇ ಬದ್ಧತೆಯೊಂದಿಗೆ ಪರಿಸರ ಪ್ರಯತ್ನಗಳನ್ನು ಮುಂದುವರಿಸಲು ಕರೆ ನೀಡಿದ ಪ್ರಧಾನಮಂತ್ರಿ, ಇದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಾದ ಪರಂಪರೆ ಎಂದು ಬಣ್ಣಿಸಿದರು. ”ಇದು ಭವಿಷ್ಯದ ಪೀಳಿಗೆಗೆ ನಾವು ರಕ್ಷಿಸಬೇಕಾದ ನಮ್ಮ ಪರಂಪರೆ’’ ಎಂದು ಶ್ರೀ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದರು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಪ್ರಧಾನಮಂತ್ರಿ ಅವರು, ಸಿಕ್ಕಿಂನ ಅಭಿವೃದ್ಧಿಯನ್ನು ವೇಗಗೊಳಿಸಲು ಮತ್ತು ವಿಕಸಿತ ಭಾರತದ ಕನಸಿಗೆ ಕೊಡುಗೆ ನೀಡಲು ಸಾಮೂಹಿಕ ಪ್ರಯತ್ನಕ್ಕೆ ಕರೆ ನೀಡಿದರು. ಆ ಸಂಕಲ್ಪದೊಂದಿಗೆ ಸಿಕ್ಕಿಂ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಬದ್ಧತೆಯನ್ನು ವ್ಯಕ್ತಪಡಿಸಿದ ಅವರು, ಈ ಸಂದರ್ಭದಲ್ಲಿ ಮತ್ತೊಮ್ಮೆ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. “ನಿಮ್ಮೆಲ್ಲರಿಗೂ ಉಜ್ವಲ ಭವಿಷ್ಯ ಮತ್ತು ನಿರಂತರ ಸಮೃದ್ಧಿಯನ್ನು ನಾನು ಬಯಸುತ್ತೇನೆ” ಎಂದು ಹೇಳಿ ಶ್ರೀ ನರೇಂದ್ರ ಮೋದಿ ತಮ್ಮ ಮಾತುಗಳನ್ನು ಸಮಾಪನಗೊಳಿಸಿದರು.
ಸಿಕ್ಕಿಂನ 50 ನೇ ರಾಜ್ಯೋತ್ಸವದ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಶಾಂತತೆ ಮತ್ತು ಉದ್ಯಮಶೀಲತೆಗೆ ಹೆಸರುವಾಸಿಯಾದ ರಾಜ್ಯವು ತ್ವರಿತ ಪ್ರಗತಿಯನ್ನು ಕಂಡಿದೆ. https://t.co/hFUftLcfk7
— ನರೇಂದ್ರ ಮೋದಿ (@narendramodi) ಏಪ್ರಿಲ್ 28, 2026
*****
Speaking during the closing ceremony of Sikkim’s 50th Year of Statehood celebrations. Known for its serenity and enterprise, the state has seen rapid progress. https://t.co/hFUftLcfk7
— Narendra Modi (@narendramodi) April 28, 2026
एक सबसे अच्छी बात मुझे पूरे रास्ते भर दिखी... वो थी सिक्किम की सड़कों की स्वच्छता।
— PMO India (@PMOIndia) April 28, 2026
दूर-दूर तक कोई गंदगी नहीं... वायु में भी स्वच्छता...सड़कों पर भी स्वच्छता... सिक्किम के आप लोग प्रकृति के पक्के वाले संरक्षक हैं... brand ambassador हैं: PM @narendramodi
हम सिक्किम की connectivity और यहां infrastructure पर सबसे ज्यादा focus कर रहे हैं।
— PMO India (@PMOIndia) April 28, 2026
बीते वर्षों में यहाँ सैकड़ों किलोमीटर highways का निर्माण हुआ है।
गाँव-गाँव तक सड़कों को पहुंचाने के लिए तेजी से काम चल रहा है: PM @narendramodi
सिक्किम के लिए संभावनाओं का एक और आसमान sports में भी है।
— PMO India (@PMOIndia) April 28, 2026
यहाँ के युवाओं ने sports में अपनी क्षमता और प्रतिभा को बड़े-बड़े मंचों पर साबित किया है: PM @narendramodi
Health infrastructure के साथ-साथ लोगों को सस्ता इलाज भी मिले... हमारी सरकार इसके लिए भी committed है।
— PMO India (@PMOIndia) April 28, 2026
पहले हमने गरीबों को मुफ्त इलाज के लिए आयुष्मान कार्ड दिये थे। अब ये सुविधा 70 वर्ष और उससे अधिक उम्र के सभी बुजुर्गों को भी दी जा रही है।
साथ ही, जन औषधि केन्द्रों पर दवाएं भी…
Organic और प्राकृतिक खेती का सिक्किम का model... ये पूरे देश के लिए एक प्रेरणा है।
— PMO India (@PMOIndia) April 28, 2026
सिक्किम की lifestyle, सिक्किम के संकल्प... आज ये देश के vision का हिस्सा बन चुके हैं: PM @narendramodi