ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಿಬ್ಬಂದಿ ನಿರ್ವಹಣೆ ಮತ್ತು ಸಾರ್ವಜನಿಕ ವಲಯದಲ್ಲಿ ಭಾರತ ಮತ್ತು ಸಿಂಗಾಪುರ ನಡುವೆ ಪರಸ್ಪರ ಸಹಕಾರದ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲು ಅನುಮೋದನೆ ನೀಡಲಾಯಿತು.
ಪ್ರಮುಖಾಂಶಗಳು :
ಈ ಒಪ್ಪಂದದಿಂದಾಗಿ ಸರ್ಕಾರಿ ಆಡಳಿತ ವ್ಯವಸ್ಥೆ ಅದರಲ್ಲೂ ವಿಶೇಷವಾಗಿ ಸಿಬ್ಬಂದಿ ಕಾರ್ಯನಿರ್ವಹಣೆ ಸ್ಥಳ ಮತ್ತು ಉದ್ಯೋಗಗಳು, ಸಾರ್ವಜನಿಕ ಸೇವಾ ವಿತರಣಾ ವ್ಯವಸ್ಥೆ, ಮಾನವ ಸಂಪನ್ಮೂಲ ನಿರ್ವಹಣೆ, ಸಾರ್ವಜನಿಕ ವಲಯದ ಸುಧಾರಣೆ, ನಾಯಕತ್ವ/ಪ್ರತಿಭಾನ್ವೇಷಣೆ ಮತ್ತು ಇ-ಆಡಳಿತ/ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ಸುಧಾರಿಸುವ ಗುರಿ ಹೊಂದಲಾಗಿದೆ.
ಪ್ರಯೋಜನಗಳು :
ಈ ಒಪ್ಪಂದದಿಂದಾಗಿ ಭಾರತ ಮತ್ತು ಸಿಂಗಾಪುರ ನಡುವೆ ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣಾ ವಲಯದಲ್ಲಿ ಪರಸ್ಪರ ನೀತಿ-ನಿರೂಪಣೆಗೆ ಅವಕಾಶವಿದೆ.
ಈ ಒಪ್ಪಂದದಿಂದ ಸಾರ್ವಜನಿಕ ಆಡಳಿತ, ಒಳ್ಳೆಯ ಆಡಳಿತ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಸುಧಾರಣೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ಗುರಿ ಹೊಂದಲಾಗಿದೆ.
ಇದರಿಂದಾಗಿ ಹೆಚ್ಚಿನ ಸಾರ್ವಜನಿಕ ಹೊಣೆಗಾರಿಕೆ ಖಾತ್ರಿಪಡಿಸಲು ಮತ್ತು ಉತ್ತೇಜಿಸಲು ಸಾಧ್ಯವಾಗುತ್ತದೆ. ಈ ಒಪ್ಪಂದದಡಿ ವಿನೂತನ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ, ಆ ಮೂಲಕ ಆನ್ ಲೈನ್ ಸಾರ್ವಜನಿಕ ಸೇವೆ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆ ಸಾಧಿಸುವ ಉದ್ದೇಶವಿದೆ.
*****************