Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳ (ಸಿಜಿಟಿಎಂಎಸ್ಇ)ಗಳಿಗೆ ಸಾಲ ಖಾತ್ರಿ ಟ್ರಸ್ಟ್ ನಿಧಿಯ ಸಂಚಯ ವೃದ್ಧಿ- ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ (ಎಂ.ಎಸ್.ಇ.ಗಳು) ಬೆಂಬಲನೀಡುವ ಪ್ಯಾಕೇಜ್ ಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳ (ಸಿಜಿಟಿಎಂಎಸ್ಇ)ಗಳಿಗೆ ಸಾಲ ಖಾತ್ರಿ ಟ್ರಸ್ಟ್ ನಿಧಿಯ ಸಂಚಯ ವೃದ್ಧಿ- ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ (ಎಂ.ಎಸ್.ಇ.ಗಳು) ಬೆಂಬಲನೀಡುವ ಪ್ಯಾಕೇಜ್ ಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಈ ಪ್ರಸ್ತಾಪವು ಈ ಕೆಳಕಂಡ ಅಂಶ ಒಳಗೊಂಡಿದೆ :

(i) ಟ್ರಸ್ಟ್ ನ ಸಂಚಯವನ್ನು 2500 ಕೋಟಿ ರೂಪಾಯಿಗಳಿಂದ 7500 ರೂಪಾಯಿಗಳಿಗೆ ವೃದ್ಧಿಸುವುದು, ಇದಕ್ಕೆ ಭಾರತ ಸರ್ಕಾರ ಪೂರ್ಣ ಆರ್ಥಿಕ ಹೂಡಿಕೆ ಮಾಡುತ್ತದೆ;

(ii) ಸಾಲ ಖಾತ್ರಿ ಯೋಜನೆ ಅಡಿಯಲ್ಲಿ ಸಾಲದ ವ್ಯಾಪ್ತಿಯನ್ನು 1 ಕೋಟಿಯಿಂದ 2 ಕೋಟಿ ರೂಪಾಯಿಗಳಿಗೆ ಹೆಚ್ಚಿಸುವುದು;

(iii) ಎನ್.ಬಿ.ಎಫ್.ಸಿ.ಯಿಂದ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ ನೀಡಲಾಗುವ ಸಾಲ ಖಾತ್ರಿ ಯೋಜನೆಯ ಸಾಲದ ವ್ಯಾಪ್ತಿಯನ್ನೂ ಹೆಚ್ಚಿಸುವುದು. ಇದು ಟ್ರಸ್ಟ್ ಗೆ ಪರಿಮಾಣವನ್ನು ಹೆಚ್ಚಿಸಲು ಅವಕಾಶ ನೀಡುತ್ತದೆ.

ಈ ಕ್ರಮಗಳು ಕೆಳಕಂಡ ಲಾಭಗಳಿಗೆ ಕಾರಣವಾಗಿವೆ:

a. ಸಾಮರ್ಥ್ಯದ ಮಟ್ಟ ಕಡಿಮೆ ಮಾಡುವುದು;

b. ನಿಧಿಯ ಸುಸ್ಥಿರತೆಯನ್ನು ಸುಧಾರಿಸುವುದು;

c. ಎಂ.ಎಸ್.ಇ.ಗಳ ದೊಡ್ಡ ಸದಸ್ಯರಿಗೆ ಸಾಲ ಖಾತ್ರಿಯ ಪರಿಮಾಣವನ್ನು ಹೆಚ್ಚಿಸಲು

ಟ್ರಸ್ಟ್ ಗೆ ಅವಕಾಶ ನೀಡುವುದು;

d. ಆರ್ಥಿಕ ನಿರ್ವಹಣೆಯನ್ನು ಸುಧಾರಿಸುವುದು; ಮತ್ತು

e. ಅನಿಶ್ಚಿತ ಹಣದ ಹೊಣೆಗಾರಿಕೆಗಳನ್ನು ಸೀಮಿತಗೊಳಿಸುವುದು.

ಸಂಚಯದ ವೃದ್ಧಿಯು ಎಂ.ಎಸ್.ಇ.ಗಳಿಗೆ ಸಾಲದ ಹರಿವನ್ನು ಹೆಚ್ಚಿಸಲು ಅವಕಾಶ ಕಲ್ಪಿಸುತ್ತದೆ. ಇದರಿಂದಾಗಿ, ಉದ್ಯೋಗ ಮತ್ತು ಉತ್ಪನ್ನದ ಹೆಚ್ಚಳಕ್ಕೆ ನಾಂದಿ ಆಗುತ್ತದೆ ಮತ್ತು ಇದು ಸಮಾನತೆ ಮತ್ತು ಸಮಗ್ರತೆಯನ್ನು ಉತ್ತೇಜಿಸುತ್ತದೆ.

ಯೋಜನೆಯು ಯಾವುದೇ ಮೇಲಾಧಾರ ಮತ್ತು ಮೂರನೇ ವ್ಯಕ್ತಿಯ ಖಾತ್ರಿ ಇಲ್ಲದೆ ಸಾಲ ಒದಗಿಸುತ್ತದೆ, ನವೋದ್ಯಮಗಳಿಗೆ ಹೊಸ ಕಲ್ಪನೆಗಳು ಮತ್ತು ನಾವಿನ್ಯತೆಯ ಆಧಾರದ ಮೇಲೆ ಉದ್ದಿಮೆ ಸ್ಥಾಪಿಸಲು ಉತ್ತೇಜನ ನೀಡುತ್ತದೆ.

ಪ್ರತಿಯೊಂದು ಕಾರ್ಯವೂ ಆನ್ ಲೈನ್ ಆಗಿರುತ್ತದೆ ಮತ್ತು ಹೀಗಾಗಿ ಇದು ಸಾರ್ವಜನಿಕ ಹೊಣೆಗಾರಿಕೆ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ.

*****

AKT/VBA/SH –