ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಹಣಕಾಸು ವಂಚನೆ ತಡೆ ಮತ್ತು ದ್ವಿ ತೆರಿಗೆ ತಪ್ಪಿಸುವ ಕುರಿತಂತೆ ಭಾರತ ಮತ್ತು ಚೀನ ನಡುವೆ ಶಿಷ್ಟಾಚಾರ ಒಪ್ಪಂದ ತಿದ್ದುಪಡಿಗೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.
ಇತರ ಬದಲಾವಣೆಗಳ ಜೊತೆಗೆ, ಶಿಷ್ಟಾಚಾರವು ಮಾಹಿತಿ ವಿನಿಮಯಕ್ಕೆ ಹಾಲಿ ಇರುವ ನಿಯಮಾವಳಿಗಳನ್ನು ಇತ್ತೀಚಿನ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅಪ್ ಡೇಟ್ ಮಾಡುತ್ತದೆ. ಜೊತೆಗೆ ಶಿಷ್ಟಾಚಾರವು ಮೂಲ ಸವಕಳಿ ಮತ್ತು ಲಾಭ ಬದಲಾಯಿಸುವ (ಬಿಇಪಿಎಸ್) ಯೋಜನೆಯ ವರದಿಗಳ ಅಡಿಯಲ್ಲಿ ಒಪ್ಪಂದಕ್ಕೆ ಸಂಬಂಧಿಸಿದ ಕನಿಷ್ಠ ಮಾನದಂಡಗಳನ್ನು ಜಾರಿಗೆ ತರಲು ಅಗತ್ಯವಾದ ಬದಲಾವಣೆಯನ್ನು ಅಳವಡಿಸುತ್ತದೆ, ಇದರಲ್ಲಿ ಭಾರತವು ಸಮಾನವಾಗಿ ಹೆಜ್ಜೆ ಇಟ್ಟಿದೆ. ಕನಿಷ್ಠ ಗುಣಮಟ್ಟದ ಜೊತೆಗೆ, ಎರಡೂ ಕಡೆಯವರು ಒಪ್ಪಿದಂತೆ ಶಿಷ್ಟಾಚಾರವು ಬಿಇಪಿಎಸ್. ಕ್ರಿಯಾ ವರದಿಗನುಗುಣವಾಗಿ ಬದಲಾವಣೆಗಳನ್ನು ತರುತ್ತದೆ.
***