ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಿಂದೂಸ್ತಾನ್ ತರಕಾರಿ ತೈಲ ನಿಗಮ ನಿಯಮಿತ (ಎಚ್.ವಿ.ಓ.ಸಿ.) ಹೊಂದಿರುವ ಎಲ್ಲ ಜಮೀನು ಆಸ್ತಿಯನ್ನು ಸೂಕ್ತ ಬಳಕೆ/ವಿಲೇವಾರಿಗಾಗಿ ವಸತಿ ಮತ್ತು ನಗರ ವ್ಯವಹಾರಗಳ (ಎಂ.ಓ. ಎಚ್.ಯು.ಎ.)ಗೆ ಅಥವಾ ಅದರ ಅಧಿಕೃತ ಸಂಸ್ಥೆಗಳಿಗೆ ವರ್ಗಾವಣೆ ಮಾಡಲು ತನ್ನ ಸಮ್ಮತಿ ಸೂಚಿಸಿದೆ.
ಎಚ್.ವಿ.ಓ.ಸಿ.ಯ ಈ ಜಮೀನು ಆಸ್ತಿಗಳ ವರ್ಗಾವಣೆಯ ಬದಲಿಗೆ, ಎಚ್.ವಿ.ಓ.ಸಿ. ಸರ್ಕಾರದಿಂದ ಪಡೆದಿರುವ ಸಾಲದ ಮೇಲಿನ ಬಡ್ಡಿ ಮತ್ತು ಸಂಪೂರ್ಣ ಸಾಲವನ್ನು ಮನ್ನಾ ಮಾಡಲಾಗುತ್ತದೆ. ಅಲ್ಲದೆ ವಿವಿಧ ನ್ಯಾಯಾಲಯಗಳಲ್ಲಿ/ನ್ಯಾಯಾಧಿಕರಣಗಳಲ್ಲಿ/ಪ್ರಾಧಿಕಾರಗಳಲ್ಲಿ ಬಾಕಿ ಇರುವ ಪ್ರಕರಣಗಳಿಂದಾಗಿ ಉದ್ಭವಿಸಬಹುದಾದ ಎಚ್.ವಿ.ಓ.ಸಿ.ಯ ಎಲ್ಲ ಸಂಭವನೀಯ ಹೊಣೆಯನ್ನೂ ಸರ್ಕಾರ ಹೊರುತ್ತದೆ.
ಏಳು ನಗರಗಳಲ್ಲಿ ಇರುವ ಜಮೀನು ಹಲವು ವರ್ಷಗಳಿಂದ ಬಳಕೆಯಾಗದೆ ಬಿದ್ದಿದೆ. ಎಂ.ಓ.ಎಚ್.ಯು.ಎಗೆ ಈ ಆಸ್ತಿಗಳನ್ನು ವರ್ಗಾವಣೆ ಮಾಡುವುದರಿಂದ ಇದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಲು ಅವಕಾಶ ಆಗಲಿದೆ. ದಿವಾಳಿಯ ಅಡಿಯಲ್ಲಿರುವ, ರೋಗಗ್ರಸ್ಥ ಪಿ.ಎಸ್.ಯು ಆದ ಎಚ್.ವಿ.ಓ.ಸಿ.ಯನ್ನು ಮುಂಚಿತವಾಗಿ ಮುಚ್ಚಲೂ ಇದು ಅವಕಾಶ ಮಾಡಿಕೊಡುತ್ತದೆ.
*****