Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೈದ್ರಾಬಾದ್ ನಲ್ಲಿ ಸಿ.ಐ.ಆರ್.ಡಿ.ಎ.ಪಿ. ಸ್ಥಾಪನಾ ಕೇಂದ್ರಕ್ಕಾಗಿ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಹೈದ್ರಾಬಾದ್ ನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಷ್ಟ್ರೀಯ ಸಂಸ್ಥೆ (ಎನ್.ಐ.ಆರ್.ಡಿ ಅಂಡ್ ಪಿ.ಆರ್)ನಲ್ಲಿ ಸಿ.ಐ.ಆರ್.ಡಿ.ಎ.ಪಿ ಕೇಂದ್ರ ಸ್ಥಾಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಏಷ್ಯಾ ಮತ್ತು ಪೆಸಿಫಿಕ್ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ (ಸಿ.ಐ.ಆರ್.ಡಿ.ಎ.ಪಿ.) ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಎನ್.ಐ.ಆರ್.ಡಿ ಅಂಡ್ ಪಿ.ಆರ್ ಆವರಣದಲ್ಲಿ ಸಿ.ಐ.ಆರ್.ಡಿ.ಎ.ಪಿ ಕೇಂದ್ರ ಸ್ಥಾಪನೆಯುಎನ್.ಐ.ಆರ್.ಡಿ ಅಂಡ್ ಪಿ.ಆರ್ ಗೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ವಿಶೇಷತೆಯನ್ನು ಪಡೆದ ಸಂಸ್ಥೆಗಳ ನೇರ ಜ್ಞಾನದ ಜಾಲ ಹೊಂದುವ ಅವಕಾಶವನ್ನು ಕಲ್ಪಿಸುತ್ತದೆ ಇದುಎನ್.ಐ.ಆರ್.ಡಿ ಅಂಡ್ ಪಿ.ಆರ್ ಗಾಗಿ ಸಾಂಸ್ಥಿಕ ಜ್ಞಾನದ ಭಂಡಾರ ನಿರ್ಮಾಣಕ್ಕೆ ನೆರವಾಗುತ್ತದೆ.

ಈ ಕೇಂದ್ರವು ಎನ್.ಐ.ಆರ್.ಡಿ ಅಂಡ್ ಪಿ.ಆರ್ ಗೆ ಸಿ.ಐ.ಆರ್.ಡಿ.ಎ.ಪಿ. ಸದಸ್ಯ ರಾಷ್ಟ್ರ (ಸಿ.ಎಂ.ಸಿ.ಗಳು)ಗಳೊಂದಿಗಿನ ಸಂಪರ್ಕದ ಮೂಲಕ ವಲಯದಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲೂ ಸಹಾಯ ಮಾಡುತ್ತದೆ. ಎನ್.ಐ.ಆರ್.ಡಿ ಅಂಡ್ ಪಿ.ಆರ್ ನ ಬೋಧಕರು ಮತ್ತು ಸಚಿವಾಲಯದ ಅಧಿಕಾರಿಗಳು ವಿನಿಮಯ ಭೇಟಿಯ ಮೂಲಕ ಸಿಎಂಸಿಗಳಲ್ಲಿನ ಉತ್ತಮ ಪದ್ಧತಿಗಳ ಪ್ರಯೋಜನ ಪಡೆಯಲಿದ್ದಾರೆ. ಕೇಂದ್ರದ ಕಾರ್ಯ ಸ್ವರೂಪವು ಸಮಗ್ರ ಗ್ರಾಮೀಣ ಅಭಿವೃದ್ಧಿ ಅದರಲ್ಲೂ ಬಡತನ ನಿರ್ಮೂಲನೆ ಕಾರ್ಯಕ್ರಮಗಳನ್ನು ಸಿ.ಎಂ.ಸಿ. ಸದಸ್ಯ ರಾಷ್ಟ್ರಗಳ ಒಳಗೆ ಅನುಷ್ಠಾನಗೊಳಿಸುವುದಕ್ಕೆ ಗಮನ ಹರಿಸಲಿವೆ.

ಹಿನ್ನೆಲೆ

ಸಿ.ಐ.ಆರ್.ಡಿ.ಎ.ಪಿ. ಪ್ರಾದೇಶಿಕ ಅಂತರ – ಸರ್ಕಾರದ ಮತ್ತು ಸ್ವಾಯತ್ತ ಸಂಸ್ಥೆಯಾಗಿದ್ದು, ಅದು ವಿಶ್ವಸಂಸ್ಥೆಯ ವಿವಿಧ ಕಾಯಗಳು ಮತ್ತು ದಾನಿಗಳ ಬೆಂಬಲದೊಂದಿಗೆ ಏಷ್ಯಾ ಪೆಸಿಪಿಕ್ ವಲಯದ ರಾಷ್ಟ್ರಗಳು ಮತ್ತು ಆಹಾರ ಮತ್ತು ವಿಶ್ವಸಂಸ್ಥೆಯ ಕೃಷಿ ಸಂಸ್ಥೆ (ಎಫ್.ಎ.ಓ.) 1979ರಲ್ಲಿ ಅಸ್ತಿತ್ವಕ್ಕೆ ಬಂದಿತು. ಭಾರತವು ಈ ಪ್ರಮುಖ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಂದಾಗಿದೆ. ಇದರ ಕೇಂದ್ರ ಕಚೇರಿಯು ಬಾಂಗ್ಲಾದೇಶದ ಢಾಕಾದಲ್ಲಿದೆ. ಸಿ.ಐ.ಆರ್.ಡಿ.ಎ.ಪಿ.ಯ ಉದ್ದೇಶ ವಲಯದಲ್ಲಿ ಸಹಕಾರವನ್ನು ಉತ್ತೇಜಿಸುವುದು ಮತ್ತು ಸಂಶೋಧನಾ ಕಾರ್ಯ, ತರಭೇತಿ, ಮಾಹಿತಿಯ ಪ್ರಸಾರ ಇತ್ಯಾದಿಯೊಂದಿಗೆ ತನ್ನ ಸದಸ್ಯ ರಾಷ್ಟ್ರಗಳಿಗೆ ಸಮಗ್ರ ಗ್ರಾಮೀಣಾಭಿವೃದ್ಧಿಗಾಗಿ ಸೇವಾ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವುದಾಗಿದೆ.

ಸಿ.ಐ.ಆರ್.ಡಿ.ಎ.ಪಿ. ಒಂದು ಜಕಾರ್ತಾದಲ್ಲಿ ಒಂದು ಉಪ ಪ್ರಾದೇಶಿಕ ಕಚೇರಿಯನ್ನು ಹೊಂದಿದೆ. ಸಿ.ಐ.ಆರ್.ಡಿ.ಎ.ಪಿ. ಯ ಈ ಉಪ ಪ್ರಾದೇಶಿಕ ಕಚೇರಿಯು ಆಗ್ನೇಯ ಏಷ್ಯಾ(ಎಸ್.ಓ.ಸಿ.ಎಸ್.ಇ.ಎ)ದಲ್ಲಿ 1997ರಲ್ಲಿ ಇಂಡೋನೇಷಿಯಾದ ಜಕಾರ್ತಾದಲ್ಲಿ ಸ್ಥಾಪನೆಯಾಯಿತು. ಸಿ.ಐ.ಆರ್.ಡಿ.ಎ.ಪಿ. ಸದಸ್ಯತ್ವವನ್ನು ಮತ್ತು ಅದರ ಸಂಪನ್ಮೂಲವನ್ನು ವಿಸ್ತರಿಸುವುದು, ಸಂಶೋಧನೆ ತರಬೇತಿ ನಡೆಸಲು ಮತ್ತು ಆಗ್ನೇಯ ಏಷ್ಯಾ ವಲಯಕ್ಕೆ ಸೂಕ್ತವಾದ ಪ್ರಾಯೋಗಿಕ ಯೋಜನೆ ಆರಂಭಿಸುವುದು ಇದರ ಉದ್ದೇಶವಾಗಿದೆ. ಏಷ್ಯಾ ಪೆಸಿಫಿಕ್ ವಲಯದಲ್ಲಿ 46 ರಾಷ್ಟ್ರಗಳಿವೆ, ಹೀಗಾಗಿ ಸಿ.ಐ.ರ್.ಡಿ.ಎ.ಪಿ.ಗೆ ವಿಸ್ತರಣೆಗೆ ವಿಫುಲ ಅವಕಾಶವಿದೆ ಇದಕ್ಕಾಗಿ ಅವರು ಸಿ.ಐ.ಆರ್.ಡಿ.ಎಂ.ಪಿ. ಕೇಂದ್ರಗಳ ನೆರವು ಪಡೆಯುತ್ತಾರೆ.

AKT/VBA/SH