Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೊಸ ವರ್ಷದ ಆರಂಭದ ಸಂದರ್ಭದಲ್ಲಿ ವಿಶ್ವಾದ್ಯಂತ ನೆಲೆಸಿರುವ ಗುಜರಾತೀಯರಿಗೆ ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ವರ್ಷದ ಆರಂಭದ ಸಂದರ್ಭದಲ್ಲಿ ವಿಶ್ವದಾದ್ಯಂತ ನೆಲೆಸಿರುವ ಗುಜರಾತೀಯರಿಗೆ ಶುಭ ಕೋರಿದ್ದಾರೆ. ದೀಪಾವಳಿಯ ಮಾರನೇ ದಿನ ಗುಜರಾತೀಯರು ಹೊಸವರ್ಷದ ಆರಂಭವನ್ನು ಆಚರಿಸುತ್ತಾರೆ.

“ಇಂದು, ದೀಪಾವಳಿಯ ಒಂದು ದಿನದ ತರುವಾಯ, ಗುಜರಾತೀಯರು ಹೊಸ ವರ್ಷದ ಆರಂಭವನ್ನು ಆಚರಿಸುತ್ತಾರೆ. ವಿಶ್ವದಾದ್ಯಂತ ನೆಲೆಸಿರುವ ಗುಜರಾತೀಯರಿಗೆ ಹೊಸ ವರ್ಷದ ಶುಭಾಶಯಗಳು. ಇದು ಸಂತಸಭರಿತ ವರ್ಷವಾಗಲಿ”, ಎಂದು ಪ್ರಧಾನಿ ಹೇಳಿದ್ದಾರೆ.

AKT/AK