Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

17 ನೇ ಆಗಸ್ಟ್ 2016 ರಂದು ತೆಲಂಗಾಣಾ ರಾಜ್ಯದ ಗಜ್ವೆಲ್‌ ದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳವರು ಮಾಡಿದ ಭಾಷಣದ ಅವತರಣಿಕೆ.

17 ನೇ ಆಗಸ್ಟ್ 2016 ರಂದು ತೆಲಂಗಾಣಾ ರಾಜ್ಯದ ಗಜ್ವೆಲ್‌ ದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳವರು ಮಾಡಿದ ಭಾಷಣದ ಅವತರಣಿಕೆ.

17 ನೇ ಆಗಸ್ಟ್ 2016 ರಂದು ತೆಲಂಗಾಣಾ ರಾಜ್ಯದ ಗಜ್ವೆಲ್‌ ದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳವರು ಮಾಡಿದ ಭಾಷಣದ ಅವತರಣಿಕೆ.

17 ನೇ ಆಗಸ್ಟ್ 2016 ರಂದು ತೆಲಂಗಾಣಾ ರಾಜ್ಯದ ಗಜ್ವೆಲ್‌ ದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳವರು ಮಾಡಿದ ಭಾಷಣದ ಅವತರಣಿಕೆ.


ವಿಶಾಲ ಸಂಖ್ಯೆಯಲ್ಲಿ ಆಗಮಿಸಿರುವ ನನ್ನ ಸಹೋದರ ಸಹೋದರಿಯರೆ, 
 
ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ತೆಲಂಗಾಣಾ ರಾಜ್ಯ ರಚಿತವಾದನಂತರ ಇದು ನನ್ನ ಮೊದಲ ಭೇಟಿಯಾಗಿದೆ. ಅಲ್ಲದೇ ಇದು ಹಿಂದುಸ್ತಾನದ ಅತ್ಯಂತ ಕಡಿಮೆ ವಯಸ್ಸಿನ ರಾಜ್ಯವಾಗಿದೆ. ಕೇವಲ ಎರಡು ವರ್ಷಗಳಾಗಿವೆ. ಎರಡು ವರ್ಷಗಳ ಈ ಅಲ್ಪ ಸಮಯದಲ್ಲಿ ಜನರ ಆಕಾಂಕ್ಷೆಗಳನ್ನು ಪೂರ್ಣಗೊಳಿಸಲು ತೆಲಂಗಾಣಾ ರಾಜ್ಯವು ಜನಸಾಮಾನ್ಯರ ಅವಶ್ಯಕತೆಗಳಿಗನುಗುಣವಾಗಿ ತೆಗೆದುಕೊಂಡ ಹೆಜ್ಜೆಗಳು ಮತ್ತು ನಿರ್ಣಯಗಳು ರಾಜ್ಯ ರಚನೆಯ ಉದ್ದೇಶವನ್ನು ಸಾರಿ ಹೇಳುತ್ತವೆ. ತೆಲಂಗಾಣಾ ರಾಜ್ಯ ಸರ್ಕಾರವು ಜನರ ಎಲ್ಲಾ ಕನಸುಗಳನ್ನು ಪೂರ್ಣಗೊಳಿಸುವುದೆಂಬ ವಿಶ್ವಾಸ ನನಗಿದೆ. 
ಇಂದು ನನಗೆ ಪಂಚಶಕ್ತಿಗಳ ದರ್ಶನವಾಗಿದೆ. ಈ ಐದು ಶಕ್ತಿಗಳ ಜೋತೆಗಿರುವ ಸಮಯ ಅಂದರೆ ಇದರಲ್ಲಿನೀರು ಇದೆ, ಬೆಳಕೂ ಇದೆ, ಸಾರಿಗೆಯೂ ಇದೆ, ಒಟ್ಟಿಗೆ ಇರುವ ಐದೂ ವ್ಯವಸ್ಥೆಗಳು ಮತ್ತು ಅದರಲ್ಲಿಯೂ  ಭಾರತ ಸರ್ಕಾರ ಮತ್ತು ತೆಲಂಗಾಣಾ ಸರ್ಕಾರಗಳು ಒಟ್ಟಿಗೆ ಸೇರಿದ್ದು, ಇದೇ ತಾನೇ ಕೋಆಪರೇಟಿವ್ ಫೆಡರಲಿಸಮ್‌. ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಯಾವಾಗಲೂ ಒತ್ತಡ ಬಿಗುವಿನಿಂದ ಕೂಡಿದ ಮಾತುಕತೆಗಳಾಗುತ್ತಿದ್ದ ಸಮಯವೊಂದಿತ್ತು.ಇಂದುಕೇಂದ್ರ ಮತ್ತು ರಾಜ್ಯ ಸರ್ಕಾರಳೆರಡೂ ಸೇರಿ ಭಾರತವನ್ನು ಹೊಸ ಉನ್ನತಿಯೆಡೆಗೆ ತೆಗೆದುಕೊಂಡು ಹೋಗಲು, ಹೆಗಲಿಗೆ ಹೆಗಲು ಕೊಟ್ಟು ಕಾರ್ಯ ನಿರ್ವಹಿಸುತ್ತಿವೆ. ಈಗ ಪಾರ್ಲಿಮೆಂಟಿನಲ್ಲಿ ಸ್ವತಂತ್ರಾನಂತರದ ಬಹುದೊಡ್ಡ ಆರ್ಥಿಕ ಸುಧಾರಣೆಯ ಕಾರ್ಯವಾಗುತ್ತಿದೆ. ಅದಕ್ಕೆ ಶ್ರೀಯುತ ಚಂದ್ರಶೇಖರ್‌ರಾವ್ ಮತ್ತು ಅವರ ಪಕ್ಷ ಸಂಪೂರ್ಣ ಸಮರ್ಥನೆಯನ್ನು ನೀಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಬಹಳ ಆಭಾರಿಯಾಗಿದ್ದೇನೆ. 
 
ಇಂದು ಭಾರತ ಮತ್ತು ತೆಲಂಗಾಣಾ ಸರ್ಕಾರಗಳೆರಡೂ ಸೇರಿ ವಿದ್ಯುತ್ತಿನ ಕೆಲಸವಾಗಿರಬಹುದು, ಪರ್ಟಿಲೈಸರ್‌ಗಳ ಕೆಲಸವಾಗಿರಬಹುದು, ರೈಲ್ವೆ ಇಲಾಖೆಯ ಕೆಲಸಗಳಿರಬಹುದು, ನೀರಿನ ಯೋಜನೆಗಳಿರಬಹುದುಎಲ್ಲವನ್ನುಜೊತೆಗೂಡಿ ಮುನ್ನೆಡೆಯುವ ದಿಕ್ಕಿನಲ್ಲಿ ಹೆಜ್ಜೆಯಿಡುತ್ತಿದ್ದೇವೆ.ಇದೇ ಮಾರ್ಗ ದೇಶವನ್ನು ಮುನ್ನೆಡೆಸುತ್ತದೆ. ಹಾಗೆಯೇ ನಾನೊಂದು ಮಾತನ್ನು ನಿಮಗೆ ಹೇಳಬಯಸುತ್ತೇನೆ. ಚಂದ್ರಶೇಖರ್‌ ರಾವ್‌ ಅವರು ಮುಖ್ಯ ಮಂತ್ರಿಯಾದ ಮೇಲೆ ನನ್ನನ್ನು ಎಷ್ಟು ಬಾರಿ ಭೇಟಿಯಾಗಿದ್ದಾರೋ ಅಷ್ಟೂ ಬಾರಿ ನನ್ನೊಂದಿಗೆ ತೆಲಂಗಾಣಾ ರಾಜ್ಯದ ವಿಕಾಸದ ಕುರುತು ಮಾತನಾಡಿದ್ದಾರೆ.ಪ್ರತಿಬಾರಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಅದು ಅವರ ಜೀವನದ ಬಹುದೊಡ್ಡ ಸಾಧನೆಯ ಗುರಿಯಂಬಂತೆ ಬಹಳ ಭಾವನಾತ್ಮಕವಾಗಿ ಅವರು ನನ್ನೊಂದಿಗೆ ಮಾತನಾಡಿದ್ದಾರೆ. ಒಮ್ಮೆ ಅವರು ನನ್ನ ಬಳಿಗೆ ಬಂದುಮೊದಿಯವರೇ, ನಾನು ಗುಜರಾತಿಗೆ ನನ್ನ ಒಂದು ತಂಡವನ್ನು ನೀವು ಕಚ್ಛ್‌ ಪ್ರದೇಶಕ್ಕೆ  ನೀರನ್ನು ಹೇಗೆ ತಲುಪಿಸಿದಿರಿ ಎನ್ನವುದರ ಕುರಿತು ಅಧ್ಯಯನ ಮಾಡಲು ಕಳುಹಿಸಿದ್ದೆ. ಎಲ್ಲೆಲ್ಲಿ ನೀರಿನ ಕುರಿತು ಒಳ್ಳೆಯ ಕೆಲಸವಾಗಿದೆಯೋ ನಾನು ಅದರ ಅಧ್ಯಯನ ಮಾಡುತ್ತಿದ್ದೇನೆ. ನಾನು ಸಂಪೂರ್ಣ ತೆಲಂಗಾಣಾ ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ದೀರ್ಘಕಾಲದ ಯೋಜನೆಯೊಂದನ್ನು ಮಾಡಬಯಸುತ್ತೇನೆ ಮತ್ತು ಮನೆ ಮನೆಗೆ ನೀರನ್ನು ತಲುಪಿಸಬೇಕೆಂದಿದ್ದೇನೆ. ಸಂಪನ್ಮೂಲಗಳಿಂದ ಎಲ್ಲವೂ ಸಫಲವಾಗುತ್ತದೆಂದು ಕೆಲವರ ಯೋಚನೆಯಾಗಿರುತ್ತದೆ. ಸಂಪನ್ಮೂಲಗಳ ಅವಶ್ಯಕತೆಯಿರುವುದಂತೂ ನಿಜ. ಆದರೆ ಸಫಲತೆಸಂಪನ್ಮೂಲಗಳಿಂದ ಮಾತ್ರ ಸಿಗುವುದಿಲ್ಲ,  ಅದಕ್ಕೆ ಸಂಕಲ್ಪಗಳೂ ಇರಬೇಕು ಮತ್ತು ಸಂಕಲ್ಪವಿರುವಾಗ ಶ್ರೀಸಾಮಾನ್ಯನೂ ಅದರೊಂದಿಗೆ ಕೈಜೋಡಿಸುತ್ತಾನೆ, ಆಗ ತನ್ನಿಂದ ತಾನೇ ಸಫಲತೆ ದೊರೆಯುತ್ತದೆ. ಇಂದು ಈ ಕಾರ್ಯದ ಶುಭಾರಂಭವಾಗಿದೆ. ಇದು ಹೀಗೆಯೇ ಮುಂದುವರೆಯುವ ವಿಶ್ವಾಸ ನನಗಿದೆ. ಭಾರತ ಸರ್ಕಾರವೂ ಕೂಡ ಒಂದು ಕನಸನ್ನು ಕಂಡಿದೆ. ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆ. ನಮ್ಮ ದೇಶದ ಕೃಷಿಕನಿಗೆ ನೀರು ದೊರೆತರೆ ಸಾಕು, ಮಣ್ಣಿನಿಂದ ಚಿನ್ನವನ್ನು ಉತ್ಪಾದಿಸುವ ತಾಕತ್ತು ಅವನಲ್ಲಿದೆ. ಅಲ್ಲದೇ ಸಂಪೂರ್ಣ ದೇಶಕ್ಕೆ ನೀರನ್ನೊದಗಿಸುವುದು ಬಹುದೊಡ್ಡ ಕಾರ್ಯವಾಗಿದೆ. ಎಲ್ಲೆಲ್ಲಿ ನೀರಿನ ಸಂಪನ್ಮೂಲಗಳಿವೆಯೋ, ಎಲ್ಲೆಲ್ಲಿ ನೀರಿನ ಸಂಗ್ರಹಣಾ ಪ್ರದೇಶಗಳಿವೆಯೋ, ಎಲ್ಲೆಲ್ಲಿ ನೀರಿನ ಕಮಾಂಡ್ (ಬಾಹುಳ್ಯ) ಪ್ರದೇಶಗಳಿವೆಯೋ ಮತ್ತು ಅನೇಕ ವರ್ಷಗಳಿಂದ ಕುಂಟಿತಗೊಂಡಿರುವ ಯೋಜನೆಗಳಿವೆಯೋ ಅವುಗಳನ್ನು ಪೂರ್ಣಗೊಳಿಸಲು ನಾವು ಕೆಲವು ದಿನಗಳ ಹಿಂದೆ ಕ್ಯಾಬಿನೆಟ್‌ನಲ್ಲಿನಿರ್ಣಯ ಕೈಗೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಈ ನಿರ್ಣಯವು ರೈತರಿಗೆ ನೀರು ಒದಗಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಭೂಮಿಕೆಯನ್ನು ನಿರ್ವಹಿಸುತ್ತದೆ. ಭಾರತದ ಹಳ್ಳಿಗಳು ಮತ್ತು ಭಾರತದ ಕೃಷಿ ಕ್ಷೇತ್ರಗಳು ನಮ್ಮ ಆರ್ಥಿಕ ಶಕ್ತಿಗಳಾಗಿವೆ. ಅವುಗಳಿಗೆ ಬಲ ಕೊಡುವುದನ್ನು ಪ್ರಾಥಮಿಕ ಆದ್ಯತೆಯಾಗಿಟ್ಟುಕೊಂಡು ಅದರೆಡೆಗೆ ಗಮನಹರಿಸುತ್ತಿದ್ದೇವೆ. ಆದರೆ ನಾನು ತೆಲಂಗಾಣಾ ರಾಜ್ಯದ ಜನತೆಗೆ ಹೇಳಬಯಸುವುದೇನೆಂದರೆ, ನಮ್ಮಲ್ಲಿ ನೀರಿರುವಾಗ ನಾವೆಂದೂ ನೀರಿನ ಮೌಲ್ಯದ ಕುರಿತು ಗಮನಹರಿಸುವುದಿಲ್ಲ. ಬಹಳ ನೀರಡಿಕೆಯಾಗಿ ಬಹುದೂರದವರೆಗೆ ಹೋದರೂ ನೀರು ಸಿಗುವುದಿಲ್ಲವೆಂದು ತಿಳಿದಾಗಮನುಷ್ಯನ ಸ್ಥಿತಿ ಹೇಗಾಗುವುದು. ನೀರೇ ಸಿಗದಿರುವಾಗ ಅದರ ಬಗ್ಗೆ ಅರಿವು ಉಂಟಾಗುವುದು. ಆದರೆ ನೀರಿರುವಾಗ ಅದರ ಬಗ್ಗೆ ಅತಿ ಹೆಚ್ಚಿನ ಉದಾಸೀನತೆ ಇರುತ್ತದೆ. ಹೀಗಾಗಿಯೇ ನೀರನ್ನು ಕಾಪಾಡಿಕೊಳ್ಳುವುದು ನಮ್ಮ ನಾಗರೀಕರ ಪ್ರಥಮ ಧರ್ಮ(ಕರ್ತವ್ಯ)ವಾಗಿದೆ. ನೀರು ಸಂಗ್ರಹಿಸಿದರೆ ನೀರು ದೊರೆಯುತ್ತದೆ, ನೀರು ದೊರೆತರೆ ಮತ್ತೆ ನವ ಜೀವನವಿದೆ. ಆದ್ದರಿಂದಲೇ ಮಳೆ ನೀರಿನ ಒಂದೊಂದು ಹನಿಯನ್ನೂ ಹೇಗೆ ರಕ್ಷಿಸಬೇಕೆಂದು ನಾವು  ಯೋಚಿಸಬೇಕಿದೆ.  
 
ನಿಮಗೆಂದಾದರೂ ಮಹಾತ್ಮಾ ಗಾಂಧಿಯವರ ಜನ್ಮ ಸ್ಥಳ ಪೋರ್‌ಬಂದರಿಗೆ ಹೋಗುವ ಅವಕಾಶ ದೊರೆತರೆ ನನ್ನದೊಂದು ಆಗ್ರಹವಿದೆ- ಅವಕಾಶ ದೊರೆತರೆ ನೀವು ಒಂದು ಬಾರಿ ಮಹಾತ್ಮಾ ಗಾಂಧಿ ಜನಿಸಿದ ಸ್ಥಾನಕ್ಕೆ ಹೋಗಿ ನಮಿಸಿ ಹೂಗಳ ಸಮರ್ಪಿಸುತ್ತೀರಿ. ಆದರೆ ಅದೇ ಸ್ಥಳದಲ್ಲಿ 200 ವರ್ಷಗಳಿಗೂ ಹಿಂದೆಯೇ ಮಳೆನೀರನ್ನು ಸಂಗ್ರಹಿಸಲು ಪ್ರತಿಮನೆಯಲ್ಲಿಯೂ ಸೂಕ್ತ ವ್ಯವಸ್ಥೆಮಾಡಲಾಗಿತ್ತು. ಭೂಮಿಯಲ್ಲಿ ನೀರಿನ ಸಂಗ್ರಹಕ್ಕೆ ಟ್ಯಾಂಕ್ ಇರುತ್ತಿತ್ತು. ವರ್ಷಪೂರ್ತೀ ನೀರು ಹಾಳಾಗದಂತೆ ಸಂಗ್ರಹಿಸುತ್ತಿದ್ದರು. ಅದಕ್ಕಾಗಿ ತನ್ನದೇ ಆದ ತಂತ್ರಜ್ಞಾನವಿರುತ್ತಿತ್ತು, ಮಹಾತ್ಮಾ ಗಾಂಧಿ ಅವರ ಜನ್ಮ ಸ್ಥಾನವನ್ನು ನೋಡಲು ಹೋದವರೆಲ್ಲರೂ ಇಂದೂ ಕೂಡ 200 ವರ್ಷಗಳಷ್ಟು ಹಳೇಯ ಈ ತಂತ್ರಜ್ಞಾನವನ್ನು ನೋಡಬಹುದಾಗಿದೆ. 200 ವರ್ಷಗಳಿಗೂ ಮೊದಲು ನೀರಿಗೆ ಈ ಪ್ರಕಾರದ ಸಂಕಟವಿರಿಲಿಲ್ಲ. ಆಗಲೇ ನಮ್ಮವರು ನೀರಿನ ಮಹತ್ವವನ್ನು ಅರಿತಿದ್ದರು ಮತ್ತು ಇಂದಂತೂ ಪೂರ್ಣ ವಿಶ್ವವೇ ನೀರಿನ ಅಭಾವದ ಸಂಕಟದಲ್ಲಿ ಸಾಗುತ್ತಿದೆ. ಹೀಗಿರುವಾಗ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಿನದಾಗಿರುತ್ತದೆ. ಹೀಗಾಗಿಯೇ ಈ ಯೋಜನೆಯಡಿಯಲ್ಲಿ ಕೇವಲ ನೀರನ್ನು ಪಡೆಯುವ ಆನಂದವಿರಬಾರದು. ನೀರನ್ನು ಪ್ರಸಾದದ ರೂಪದಲ್ಲಿ ರಕ್ಷಿಸಿಡುವ ಜವಾಬ್ದಾರಿಯಿಂದ ಕೂಡಿದ ಭಾವನೆಯು ಹೆಚ್ಚುತ್ತಾ ಹೋಗಬೇಕಿದೆ. ಆಗ ನಮಗೆ ಇದರ ಲಾಭವಾಗುತ್ತದೆ. 
ಇಂದು ಇಲ್ಲಿ ಒಂದು ವಿದ್ಯುತ್‌ ಉತ್ಪಾದನಾ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿದೆ. ಒಂದು  ವಿದ್ಯುತ್‌ ಉತ್ಪಾದನಾ ಕೇಂದ್ರದ ಲೋಕಾರ್ಪಣೆಯಾಗಿದೆ. ಯಾವ ರಾಜ್ಯಗಳು ವಿದ್ಯುತ್‌ನ ಕೊರತೆಯನ್ನು ಅನುಭವಿಸುತ್ತಿದ್ದವೋ, ಅಭಾವವಿತ್ತೋ,  ಕಳೆದ ಎರಡು ವರ್ಷಗಳಲ್ಲಿಯೇ ಭಾರತ ಸರ್ಕಾರ ಮತ್ತು ಪೀಯೂಷ್‌ ಗೊಯಲ್‌ರವರ ಕಾರ್ಯಾಲಯವು ವಿದ್ಯುತ್‌ನ ಕೊರತೆಯನ್ನು ಅನುಭವಿಸುತ್ತಿದ್ದ ರಾಜ್ಯಗಳನ್ನು ಇಂದು ವಿದ್ಯುತ್‌ ಪರಿಪೂರ್ಣ ರಾಜ್ಯಗಳನ್ನಾಗಿ ಮಾಡಿದ್ದಾರೆ ಎಂಬುದನ್ನು ನಾನು ಬಹಳ ಗರ್ವದಿಂದ ಹೇಳುತ್ತೇನೆ.ಪ್ರಾಮಾಣಿಕ ಉದ್ದೇಶವಿದ್ದರೆ, ಶ್ರೀಸಾಮಾನ್ಯರ ಆವಶ್ಯಕತೆಗಳನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದ್ದರೆ, ಸಮಸ್ಯೆಗಳಿಗೆ ಉತ್ತರ ತನ್ನಿಂದ ತಾನೆ ಹೊರಬರುತ್ತವೆ. ಈ ಮೊದಲು ತೆಲಂಗಾಣಾ ರಾಜ್ಯವು ವಿದ್ಯುತ್‌ ಖರೀದಿ ಮಾಡಬೇಕಿತ್ತು ಮತ್ತು ಈಗ ತಾನೆ ನನ್ನ ಬಳಿ ಪೀಯೂಷ್‌ ಗೊಯಲ್‌ ರವರು ಒಂದು ಯುನಿಟ್‌ನ ಬೆಲೆ ಹತ್ತಿರ ಹತ್ತಿರ ಹನ್ನೊಂದು ಅಥವಾ ಹನ್ನೊಂದುವರೆ ರೂಪಾಯಿಗಳಾಗುತ್ತಿತ್ತೆಂದು ಹೇಳುತ್ತಿದ್ದರು. ಪ್ರತಿಯೊಂದು ಯುನಿಟ್‌ನ ಬೆಲೆ ಹತ್ತಿರ ಹತ್ತಿರ ಹನ್ನೊಂದು ಅಥವಾ ಹನ್ನೊಂದುವರೆ ರೂಪಾಯಿ. ಸಹೋದರ ಸಹೋದರಿಯರೆ ಭಾರತ ಸರ್ಕಾರವು ವಿದ್ಯುತ್ ಉತ್ಪಾದನೆಯಲ್ಲಿ ಯಾವ ರೀತಿಯ ಸುಧಾರಣೆ ತಂದಿದೆ ಮತ್ತು ಉತ್ಪಾದನೆಯನ್ನು ಹೆಚ್ಚಿಸಿದೆ ಎಂಬುದನ್ನು ಗಮನಿಸಿ. 
 
ಮೊದಲು ಲೈನ್‌ಗಳ ಪರಿವರ್ತನೆಗೆ ಖರ್ಚು ಮಾಡಲಾಯಿತು. ಸಂಪೂರ್ಣ ಸಮತೋಲನದಲ್ಲಿ ವ್ಯವಹಾರಗಳನ್ನು ನಡೆಸಲಾಯಿತು. ಇದರಿಂದಾದ ಉತ್ತಮ ಪರಿಣಾಮವೆಂದರೆ, ಸ್ವಲ್ಪ ಸಮಯದ ಮೊದಲು ಒಂದು ಯುನಿಟ್‌  ಹನ್ನೊಂದು ಹನ್ನೊಂದುವರೆ ರೂಪಾಯಿಗಳಿಗೆ ಸಿಗುತ್ತಿದ್ದ ಅದೇ ವಿದ್ಯುತ್‌ ಈಗ ಒಂದು ರೂಪಾಯಿ ಹತ್ತು ಪೈಸೆಗಳಿಗೆ ಸಿಗುತ್ತಿದೆ. ರಾಜ್ಯದ ಖಜಾನೆಗೆ ಇಷ್ಟು ಹಣ ಉಳಿಯಿತು. ರಾಜ್ಯ ಖಜಾನೆಗೆ ಹಣ ಬಂದರೆ, ರಾಜ್ಯದ ಜನತೆಯ ಏಳಿಗೆಗೆ ಎಷ್ಟು ಸಹಾಯವಾಗುತ್ತದೆ. ಇದನ್ನು ನಾವು ಯೋಚಿಸಬಹುದಲ್ಲವೇ. ಆದರೆ ಸಹೋದರ ಸಹೋದರಿಯರೆ, ವಿದ್ಯುತ್‌ ಉತ್ಪಾದನೆಯಲ್ಲಿ ನಾವು ಅಣುಶಕ್ತಿಗೆ ಒತ್ತು ನೀಡುತ್ತಿದ್ದೇವೆ. 
ಹೈಡ್ರೋ ವಿದ್ಯುತ್‌ಗೆ ಬಲ ನೀಡುತ್ತಿದ್ದೇವೆ. ಸೋಲಾರ್‌ಗೆ ಬಲ ನೀಡುತ್ತಿದ್ದೇವೆ. ಏಕೆಂದರೆ ನೀರು ಮತ್ತು ಬೆಳಕು ಇವುಗಳು ಜೀವನ ನೆಡೆಸಲು ಬೇಕಾಗುವ ಎಲ್ಲಕ್ಕಿಂತ ದೊಡ್ಡ ಅನಿವಾರ್ಯ ಅಂಶಗಳಾಗಿವೆ. ಮತ್ತು ಇವೆರಡೂ ಪರಮಾತ್ಮನ ದೇಣಿಗೆಯಾಗಿವೆ. ನೀರು ಸಹ ಪರಮಾತ್ಮನ ಕೃಪೆಯಿಂದ ದೊರೆತರೆ ಬೆಳಕು  ಸೂರ್ಯದೇವನ ಕೃಪೆಯಿಂದ ದೊರೆಯುತ್ತದೆ. ಹಾಗಾಗಿಯೇ ಸೋಲಾರ್ ಶಕ್ತಿಗೆ ಒತ್ತು ನೀಡಲಾಗಿದೆ. 
ನಾನು ಮುಖ್ಯಮಂತ್ರಿಗಳೊಡನೆ ಮಾತನಾಡುತ್ತ, ನೀವು ನೀರನ್ನು ತಲುಪಿಸುವ ಪ್ರಯೋಗವನ್ನು ಸೋಲಾರ್ ಎನರ್ಜಿಯೊಂದಿಗೆ ಜೋಡಿಸಿ ಎಂದು ಹೇಳುತ್ತಿದ್ದೆ. ಹಾಗಾದಾಗ ನೀರನ್ನು ತಲುಪಿಸುವ ಪೂರ್ಣ ಕಾರ್ಯಪ್ರಣಾಲಿ ವಿದ್ಯುತ್‌ ಖರ್ಚಿನಿಂದ ಮುಕ್ತವಾಗುತ್ತದೆ. ಅದು ಆರ್ಥಿಕವಾಗಿ ಕೈಗೆಟುಕಲು ಸುಲಭವಾಗುತ್ತದೆ. ದೇಶದಲ್ಲಿ ಒಂದು ಸಾವಿರ ಮೆಗಾವಾಟ್‌ಗಿಂತಲೂ ಕಡಿಮೆ ಸೋಲಾರ್‌ ಎನರ್ಜಿಯಿದ್ದ ಒಂದು ಕಾಲವಿತ್ತು. ಒಂದು ಸಾವಿರಕ್ಕಿಂತಲೂ ಕಡಿಮೆ ಇದ್ದದ್ದು ಇಂದು ಕೇವಲ ಎರಡು ವರ್ಷಗಳಲ್ಲಿ ಮೂರು ಸಾವಿರ ಮೆಗಾವಾಟ್‌ಗಳಿಗಿಂತಲೂ ಹೆಚ್ಚಾಗಿದೆ. ಕೆಲಸದ ವೇಗ ಎಷ್ಟು ಹೆಚ್ಚಿದೆ. ಕೆಲಸದ ಪ್ರಮಾಣ ಎಷ್ಟು ಅಧಿಕವಾಗಿದೆ ಎಂಬುದನ್ನು ನೀವು ಗಮನಿಸಬಹುದಾಗಿದೆ. 
 
ನೀವು ಇಲ್ಲಿಗೆ ಬಹಳ ವರ್ಷಗಳ ಮೊದಲೇ ರೈಲು ಮಾರ್ಗದ ಬೇಡಿಕೆಯನ್ನುಇಟ್ಟಿದ್ದಿರಿ. ಇಂದು ರೈಲ್ವೆ ಲೈನಿನ ಶಿಲಾನ್ಯಾಸ ನೆರವೇರುತ್ತಿದೆ. ಎಷ್ಟೋ ಪ್ರಧಾನ ಮಂತ್ರಿಗಳು ಬಂದು ಹೋದರು. ನಿಮ್ಮವರೂ ಬಂದರು ಹೊರಗಿನವರೂ ಬಂದರು. ಪ್ರತಿ ಬಾರಿ ಪ್ರತಿ ಸಂಸದರು ಈ ರೈಲ್ವೆ ಲೈನಿಗಾಗಿಕೇಂದ್ರದಲ್ಲಿ ಬಂದ ಎಲ್ಲ  ಸರ್ಕಾರಗಳಿಗೆ ತಮ್ಮ ಮನವಿಯನ್ನು ಕೊಟ್ಟರು. ಆದರೆ ರೈಲ್ವೆ ಲೈನ್‌ ಎಲ್ಲಿಯೂ ಕಂಡುಬರಲಿಲ್ಲ. ಇಂದಿನ ಯುಗದಲ್ಲಿ ವಿಕಾಸಕ್ಕೆ ಕನೆಕ್ಟಿವಿಟಿ ಅಂದರೆ ಸಂಪರ್ಕ ಬಹಳ ಆವಶ್ಯಕ. ಇದು ಮೂಲಸೌಕರ್ಯದ ಆರ್ಥಿಕ ರೂಪವಾಗಿದೆ. 
 
ಆದ್ದರಿಂದ ನಾವು ಇಡಿ ದೇಶದ ಆರ್ಥಿಕ ವಿಕಾಸವನ್ನು ರೈಲು ಸಂಪರ್ಕದೊಂದಿಗೆ ಜೋಡಿಸಿ ಮುನ್ನೆಡೆಸುವ ಯೋಜನೆಯನ್ನು ಮಾಡುತ್ತಿದ್ದೇವೆ. ಈ ಮೊದಲು ರೈಲಿನ ಸ್ಥಿತಿ ಹೇಗಿತ್ತೆಂದರೆ ನಾಲ್ಕು ಎಂಪಿಗಳು ಸೇರಿ ಸ್ವಲ್ಪ ದನಿ ಎತ್ತಿದರೆ ಸಾಕು, ರೈಲ್ವೆ ಮಂತ್ರಿಗಳು ಸರಿ ನಿಮಗೊಂದು ಹೆಚ್ಚುವರಿ ರೈಲು ಡಬ್ಬಿಯನ್ನು ಕೊಡುತ್ತೇವೆಂದು ಹೇಳುತ್ತಿದ್ದರು. ಇನ್ನು ನಾಲ್ಕು ಎಂಪಿಗಳು ಸೇರಿಕೊಂಡರೆ ಸರಿ ಇಲ್ಲಿ ನಿಮಗೆ ಸ್ಟಾಪೇಜ್ ಕೊಡುತ್ತೇವೆಂದು ಹೇಳುತ್ತಿದ್ದರು. ರೈಲು ಹೀಗೆಯೇ ನಡೆಯುತ್ತಿತ್ತು. ನಾವು ದೇಶದ ಆರ್ಥಿಕ ವಿಕಾಸವನ್ನು ಗಮನದಲ್ಲಿಟ್ಟುಕೊಂಡುರೈಲ್ವೆ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ಮಾಡಿದೆವು. ನಾವು ಜನಸಾಮಾನ್ಯರ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ರೈಲನ್ನು ರಾಷ್ಟ್ರೀಕರಣ ಮಾಡುತ್ತ ರೈಲ್ವೆ ಇಲಾಖೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಬಯಸುತ್ತೇವೆ. ಇಂದು ಈ ಯೋಜನೆಯ ಅಡಿಯಲ್ಲಿ ತೆಲಂಗಾಣಾ ರಾಜ್ಯದ ಬಹುದಿನಗಳ ಬೇಡಿಕೆಯಾದ ರೈಲ್ವೆ ಪ್ರೊಜೆಕ್ಟ್‌‌ನ್ನು ನಾವಿಂದು ಪೂರ್ಣಗೊಳಿಸುತ್ತಿದ್ದೇವೆ. ಅಲ್ಲದೇ ಬೇರಾವುದೇ ತೊಂದರೆಗಳು ಬರದಿದ್ದರೆ ನಿಗದಿತ ಸಮಯದೊಳಗೆಯೇ ಈ ರೈಲ್ವೆ ಪ್ರೊಜೆಕ್ಟ್‌ನ್ನು ಪೂರ್ಣಗೋಳಿಸುವ ವಿಶ್ವಾಸ ನನಗಿದೆ. ಹಾಗೆಯೇ ಇಲ್ಲಿ ಇಂದು ಜನಸಾಮಾನ್ಯರ ಅವಶ್ಯಕತೆಗಳಿಗಾಗಿ ಇತಿಹಾಸದಲ್ಲಿ ಮೊದಲಬಾರಿಗೆ ಪ್ರಥಮ ಗೊಬ್ಬರದ ಕಾರ್ಖಾನೆಯ ಶಿಲಾನ್ಯಾಸ ಮಾಡಲಾಗಿದೆ. 
ತೆಲಂಗಾಣಾ ರಾಜ್ಯದಲ್ಲಿ  ರಸಗೊಬ್ಬರಗಳ ಯಾವುದೇ ಕಾರ್ಖಾನೆಗಳಿರಲಿಲ್ಲ. ರೈತನಿಗೆ ಯೂರಿಯಾ ಬೇಕು. ರೈತನಿಗೆ ಗೊಬ್ಬರ ಬೇಕು. ಗೊಬ್ಬರದ ಉತ್ಪಾದನೆ ಮಾಡದಿದ್ದರೆ, ಗೊಬ್ಬರದ ಹೆಚ್ಚುತ್ತಿರುವ ಬೇಡಿಕೆ, ಫರ್ಟಿಲೈಸರ್‌‌ಗಳ ಹೆಚ್ಚುತ್ತಿರುವ ಬೇಡಿಕೆಗಳನ್ನೂ ಪೂರ್ಣಗೊಳಿಸಲು ಸಾಧ್ಯವಿಲ್ಲ. ಮೊದಲು ರೈತರನ್ನು ಸಂತೋಷಪಡಿಸಲು ರಸಗೊಬ್ಬರಗಳಿಗೆ ಒಂದಿಷ್ಟು ಸಬ್ಸಿಡಿಗಳನ್ನು ಘೋಷಣೆ ಮಾಡುತ್ತಿದ್ದರು. ಅದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಚುನಾವಣೆಗಳು ಮುಗಿದು ಹೋಗುತ್ತಿದ್ದವು. ರಾಜಕೀಯ ವ್ಯಕ್ತಿಗಳ ಕೆಲಸವಾಗುತ್ತಿತ್ತು. ಆದರೆ ನಮ್ಮ ರೈತ ಎಲ್ಲಿದ್ದನೋ ಅಲ್ಲಿಯೇ ಇರುತ್ತಿದ್ದ. ಏಕೆಂದರೆ ಸಬ್ಸಿಡಿಯ ಘೋಷಣೆಯಾಗುತ್ತಿತ್ತು, ಆದರೆ ರಸಗೊಬ್ಬರವೇ ಸಿಗದಿದ್ದರೆ ಸಬ್ಸಿಡಿಹೇಗೆ ಸಿಗುತ್ತದೆ. ಇದೇ ಇವರ ವ್ಯವಹಾರವಾಗಿತ್ತು. ಸಹೋದರ ಸಹೋದರಿಯರೇ ನಾವು ರೈತರಿಗೆ ರಸಗೊಬ್ಬರಗಳನ್ನು ತಲುಪಿಸಲು ಒತ್ತು ನೀಡಿದ್ದೇವೆ. ಮೊದಲು ರೈತನಿಗೆಕಳ್ಳ ಸಂತೆಯಲ್ಲಿ ರಸಗೊಬ್ಬರಗಳನ್ನು ಖರೀದಿಸುವುದು ಅನಿವಾರ್ಯವಾಗಿತ್ತು. ಕೆಲವು ಪ್ರದೇಶಗಳಲ್ಲಂತೂ ರಾತ್ರಿಯಿಂದಲೇ ರಸಗೊಬ್ಬರಕ್ಕಾಗಿ ಲೈನುಗಳಲ್ಲಿ ನಿಲ್ಲಬೇಕಾಗಿತ್ತು. ಕೆಲವೊಮ್ಮೆ  ಪೊಲೀಸರು ಲಾಟಿಚಾರ್ಜ್ ಮಾಡುತ್ತಿದ್ದರು, ಆದರೂ ಕೂಡ ಗೊಬ್ಬರ ಸಿಗುತ್ತಿರಲಿಲ್ಲ.ನಾನು ಪ್ರಧಾನ ಮಂತ್ರಿಯಾದ ಮೇಲೆ ಹೆಚ್ಚಿನ ಮುಖ್ಯಮಂತ್ರಿಗಳು ಸೀಜನ್‌ ಬಂದಿದೆ,  ಯೂರಿಯಾ ಕಡಿಮೆ ಇದೆ, ನಮ್ಮ ರಾಜ್ಯಕ್ಕೆ ಇಷ್ಟು ಯೂರಿಯಾ ಬೇಕೆಂದು ಪತ್ರ ಬರೆಯುತ್ತಿದ್ದರು.  ಎಲ್ಲ ರಾಜ್ಯಗಳು ಪ್ರಧಾನ ಮಂತ್ರಿಗಳಿಗೆ ಯೂರಿಯಾ ಗೊಬ್ಬರಕ್ಕಾಗಿ ಪತ್ರ ಬರೆಯುತ್ತಿದ್ದರು. ಇಂದು ನಾನು ಬಹು ಸಂತೋಷದಿಂದ ಹೇಳಬಯಸುತ್ತೇನೆ. ನಾನಿಂದು ನನ್ನ ರೈತ ಸಹೋದರ ಸಹೋದರಿಯರೆದುರು ತಲೆಬಾಗಿಸಿ ಹೇಳಬಯಸುವುದೇನೆಂದರೆ ಕಳೆದ ಎರಡು ವರ್ಷಗಳಲ್ಲಿ ಯಾವ ಮುಖ್ಯಮಂತ್ರಿಗಳಿಗೂ ಕೂಡ ಯೂರಿಯಾಗಾಗಿ ಪತ್ರವನ್ನು ಬರೆಯುವ ಸಂದರ್ಭ ಬಂದಿಲ್ಲ. 
ನಮ್ಮ ಶ್ರೀ ಅನಂತಕುಮಾರ್‌ ಅವರ ನೇತೃತ್ವದಲ್ಲಿ ರಸಗೊಬ್ಬರಗಳ ಕ್ಷೇತ್ರದಲ್ಲಿ ನಾವು ಹೊಸ ಕ್ರಾಂತಿಯನ್ನೇ ತಂದಿದ್ದೇವೆ. ನೀಮ್‌ ಕೋಟಿಂಗ್‌ ಅಂದರೆ ಬೇವು ಸವರಿದ ಯೂರಿಯಾ, ಇದರಿಂದಾಗಿ ಯೂರಿಯಾಗೂ ಕೂಡ ಶಕ್ತಿ ಬಂದಿದೆ. ಅದು ಭೂಮಿಗೆ ಲಾಭವನ್ನು ತರುತ್ತದೆ ಮತ್ತು ಭೂಮಿಗೆ ಒಳ್ಳೆಯದನ್ನು ಮಾಡುತ್ತದೆ. ನೀಮ್‌ ಕೋಟಿಂಗ್ ಕಾರಣದಿಂದಾಗಿ ಯೂರಿಯಾದಲ್ಲಿ ಈ ಶಕ್ತಿ ಬಂದಿದೆ. ಇದರಿಂದಾಗಿ ಯೂರಿಯಾದ ಯಾವ ಕಳ್ಳತನವಾಗುತ್ತಿತ್ತೋ, ಕೆಮಿಕಲ್ ಪ್ಯಾಕ್ಟ್ರಿಗಳಿಗೆ ಹೋಗುತ್ತಿತ್ತೋ,  ಅದೆಲ್ಲವೂ ನಿಂತುಹೋಗಿದೆ. ಸಬ್ಸಿಡಿಯ ಬಿಲ್‌ ಮಾಡಲಾಗುತ್ತಿತ್ತು, ಆ ಸಬ್ಸಿಡಿಯು ರೈತರ ಹೆಸರಿನಲ್ಲಿ ಹಲವರ ಜೇಬಿಗೆ ಹೋಗುತ್ತಿತ್ತು. 
ಅದನ್ನು ಕೆಮಿಕಲ್ ಮಾಡಿ ಇಡೀ ಜಗತ್ತಿನಲ್ಲೆಲ್ಲ ಮಾರುತ್ತಿದ್ದರು. ರೈತ ಮಾತ್ರ ಪಾಪ ಎಲ್ಲಿ ಇದ್ದನೋ ಅಲ್ಲಿಯೇ ಇರುತ್ತಿದ್ದ. ಯೂರಿಯಾವನ್ನು ನೀಮ್‌ಕೋಟಿಂಗ್‌ ಮಾಡಿದ್ದರಿಂದ ಯಾವುದೇ ಪ್ಯಾಕ್ಟ್ರಿಯವರಿಗೆ ಒಂದು ಗ್ರಾಂ ಯೂರಿಯಾವೂ ಕೆಲಸಕ್ಕೆ ಬರುವುದಿಲ್ಲ.ಭ್ರಷ್ಟಾಚಾರವೂ ಹೋಯಿತು, ಕಳ್ಳತನವೂ ನಿಂತಿತು, ಸರ್ಕಾರಿ ಖಜಾನೆಯನ್ನು ಲೂಟಿ ಮಾಡಲಾಗುತ್ತಿತ್ತು, ಅದೂ ಕೂಡ ನಿಂತು ಹೋಯಿತು. ರೈತನಿಗೆ ಯೂರಿಯಾ ಸುಲಭವಾಗಿ ಸಿಗುವಂತಾಯಿತು. ಸ್ವತಂತ್ರದ ಅನಂತರ ಪ್ರಥಮ ಬಾರಿಗೆ ರಸಗೊಬ್ಬರಗಳ ಬೆಲೆ ಕಡಿಮೆಯಾಯಿತು. ಪ್ರಪ್ರಥಮ ಬಾರಿಗೆ ಒಂದೊಂದು ಮೂಟೆಗೆ ಎರಡುನೂರು, ಎರಡುನೂರಾ ಐವತ್ತು ರೂಪಾಯಿಗಳಷ್ಟು ಬೆಲೆ ಕಡಿಮೆಯಾಯಿತು. 
 
ಸಹೋದರ ಸಹೋದರಿಯರೇ ಸಮಾಜದ ಏಳಿಗೆಗಾಗಿ ಕೆಲಸ ಮಾಡಿದರೆ,ಅದನ್ನೇ ರೈತರ ಮತ್ತು ಹಳ್ಳಿಗಳ ಏಳಿಗೆಗಾಗಿ ಕೆಲಸ ಮಾಡಿದರೆ ನಾವು ಎಂತಹ ಪರಿವರ್ತನೆಯನ್ನಾದರೂ ಮಾಡಬಹುದಲ್ಲವೇ. ಯೂರಿಯಾವನ್ನೇ ಅಧ್ಯಯನದ ವಸ್ತುವನ್ನಾಗಿ ಇಟ್ಟುಕೊಂಡು ಅಧ್ಯಯನ ಮಾಡಿದರೆ ಸರ್ಕಾರದಒಳ್ಳೆಯ ಕಾರ್ಯಗಳು ಎಲ್ಲರ ಗಮನಕ್ಕೆ ಬರುತ್ತವೆ. ಇದನ್ನೇ ಗಮನದಲ್ಲಿಟ್ಟುಕೊಂಡು ಚಂದ್ರಶೇಖರ್‌ ರಾವ್‌ ಅವರು ಭಾರತ ಸರ್ಕಾರದ ಪ್ರಾಮಾಣಿಕತೆಯನ್ನು ಬಹುವಿಧವಾಗಿ ಹೊಗಳುತ್ತಿದ್ದಾರೆ. ಅವರು ಸ್ವತಃ ಭಾರತ ಸರ್ಕಾರದಲ್ಲಿದ್ದವರು. ಅವರು ಭಾರತ ಸರ್ಕಾರವನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಅವರು ಭಾರತೀಯ ಜನತಾ ಪಾರ್ಟಿಯವರೇನಲ್ಲ. 
 
ಅನೇಕ ವರ್ಷಗಳ ನಂತರ ದಿಲ್ಲಿಯಲ್ಲಿ ಒಂದು ಪ್ರಾಮಾಣಿಕ ಸರ್ಕಾರವಿದೆ, ಅದಕ್ಕಾಗಿಯೇ ಇಂತಹ ಫಲಿತಾಂಶಗಳು ಕಂಡುಬರುತ್ತಿವೆ. ಆದರೆ ಸಹೋದರ ಸಹೋದರಿಯರೆ, ನಮ್ಮ ಕೃಷಿಯನ್ನು ನಾವು ಆಮೂಲಾಗ್ರವಾಗಿ ಬದಲಾಯಿಸುವ ಆವಶ್ಯಕತೆಯಿದೆ. ಈ ರಸಗೊಬ್ಬರಗಳೂ ಕೂಡ ಬದಲಾವಣೆಗಳಿಗೆ ಒಂದು ದಾರಿ, ಆದರೆ ನಮ್ಮ ಈ ಭೂಮಾತೆಯ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕಾಗಿದೆ. ಒಂದುವೇಳೆ ಈ ಭೂಮಿತಾಯಿಯ ಆರೋಗ್ಯ ಸರಿಯಾಗಿಲ್ಲವೆಂದಾದರೆ, ಎಷ್ಟೇ ಹೊಸ ಸಂಶೋಧನೆಗಳು ನಡೆದರೂ  ಎಂದಾದರೊಮ್ಮೆ ನಮ್ಮ ತಾಯಿ ಮುನಿಸಿಕೊಳ್ಳುತ್ತಾಳೆ. ಅಲ್ಲದೇ ರೈತರಿಗೆ ಭೂಮಿತಾಯಿಗಿಂತ ದೊಡ್ಡ ತಾಯಿ ಯಾರೂ ಇಲ್ಲ. ಹಾಗಾಗಿಯೇ ನಾವು ಸಾಯಿಲ್‌ ಹೆಲ್ತ್ ಕಾರ್ಡ್‌ ಮೂಲಕ ಭೂಮಿತಾಯಿಯ ಚಿಂತೆಯನ್ನು ಮಾಡುತ್ತಿದ್ದೇವೆ. ಅದರ ಕೊರತೆಗಳನ್ನು ನಿವಾರಿಸಬೇಕಾಗಿದೆ. ಅದರ ಶಕ್ತಿಯನ್ನು ಹೇಗೆ ಉಪಯೋಗಿಸಬೇಕು ಎಂಬುದರ ಕುರಿತು ಬಲ ನೀಡುವ ಪ್ರಯತ್ನವನ್ನು ಮಾಡಲಾಗುತ್ತದೆ. 
 
ಇತ್ತೀಚಿನ ದಿನಗಳಲ್ಲಿ ಹಸುವಿನ ಹೆಸರಿನಲ್ಲಿ ಬಹಳ ಚರ್ಚೆ ನಡೆಯುತ್ತಿದೆ. ಆದರೆ ನಮ್ಮ ಹಿಮಾಲಯದ ರಾಜ್ಯಪಾಲರು ಸ್ವತಃ ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಿರುವ ವ್ಯಕ್ತಿ. ಅವರು ಒಂದು ದೊಡ್ಡ ಅಭಿಯಾನವನ್ನೇನಡೆಸಿದ್ದಾರೆ. ಹಿಮಾಚಲದಲ್ಲಿ ಯಾರು ಗೋವುಗಳನ್ನು ಬಿಟ್ಟಿದ್ದಾರೋ, ಅಂತಹ ಗೋವುಗಳನ್ನು ಹಿಡಿದು ತಂದುತಮ್ಮ ರೈತರಿಗೆ ಕೊಡುತ್ತಿದ್ದಾರೆ. ಹಾಲು ಕೊಡದಿರುವ ಹಸುವನ್ನು ಸಹ ರೈತರಿಗೆ ಕೊಡುತ್ತಿದ್ದಾರೆ. ಅವರು ರೈತರಿಗೆ –  ನಿಮ್ಮ ಹೊಲಗದ್ದೆಗಳೊಡನೆ ಹಸುವನ್ನು ಸಾಕಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಗೋವಿನ ಮಲಮೂತ್ರವೂ ಕೂಡ ನಿಮ್ಮ ಹೊಲಕ್ಕೆ ಒಂದು ಹೊಸ ಶಕ್ತಿಯನ್ನು ಕೊಡುತ್ತದೆ. ಅವರು ಸ್ವತಃ ಈ ಪ್ರಯೋಗವನ್ನು ಮಾಡಿದ್ದಾರೆ. ಯಶಸ್ವಿ ಪ್ರಯೋಗವನ್ನು ಮಾಡಿದ್ದಾರೆ. ಆದ್ದರಿಂದ ಯಾರು ಗೋವಿನ ಭಕ್ತಿಯಲ್ಲಿ ವಿಶ್ವಾಸವನ್ನಿಟ್ಟಿದ್ದಾರೋ, ಯಾರು ಗೋವಿನ ಸೇವೆಯಲ್ಲಿ ವಿಶ್ವಾಸವನ್ನು ತೋರಿಸುತ್ತಿದ್ದಾರೋ, ಅವರೆಲ್ಲರಿಗೂ ನನ್ನ ಆಗ್ರಹ ಏನೇಂದರೆ ನಾವು ಗೋವನ್ನು ಕೃಷಿಯೊಂದಿಗೆ ಸಾಕಿಕೊಳ್ಳಬೇಕು. ಅಗ್ರಿಕಲ್ಚರ್‌ ಜೊತೆಗೆ ಹಸುವನ್ನು ಸಾಕಿಕೊಳ್ಳಬೇಕು. ಹಸು ಎಂದಿಗೂ ಭಾರವಾಗುವುದಿಲ್ಲ. ಮಹಾತ್ಮಾ ಗಾಂಧಿಯವರು ಗೋವಿನ ಕುರಿತು ಒಂದು ಮಹತ್ವಪೂರ್ಣವಾದ ವಿಷಯವನ್ನು ಹೇಳುತ್ತಿದ್ದರು. ನಮ್ಮ ತಾಯಿ ಬಾಲ್ಯದಲ್ಲಿ ಸ್ವಲ್ಪ ಸಮಯದವರೆಗೆ ಹಾಲನ್ನು ಕುಡಿಸುತ್ತಾಳೆ. ನಮ್ಮನ್ನು ಪೋಷಿಸುತ್ತಾಳೆ. ಆದರೆ ಗೋಮಾತೆ ನಮಗೆ ಜೀವನಪೂರ್ತಿ ಹಾಲು ಕುಡಿಸುತ್ತಾಳೆ ಮತ್ತು ನಮ್ಮ ಪಾಲನೆ ಪೋಷಣೆ ಮಾಡುತ್ತಾಳೆ. ಗೋಮಾತೆ ಮುಂದೆಯೂ ಅಂದರೆ ಮೃತ್ಯುವಿನ ಅನಂತರವೂ ಮನುಷ್ಯನ ಉಪಯೋಗಕ್ಕೆ ಬರುತ್ತಾಳೆ. ಹೇಗೆ ಗಿಡ ಮರಗಳು ಒಂದು ರೀತಿಯ ಸಂಪತ್ತಾಗಿವೆಯೋ, ಹಾಗೆಯೇ ಹಸುಗಳೂ ಸಹ ನಮ್ಮ ಸಂಪತ್ತಾಗಿವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಸಂಯೋಜಿಸಿ ರಾಷ್ಟ್ರದ ಆರ್ಥಿಕ ವಿಕಾಸದೊಂದಿಗೆ ಜೋಡಿಸುವ ಆವಶ್ಯಕತೆಯಿದೆ. ಮತ್ತೆ ಕೆಲವೊಮ್ಮೆ ನನಗೆ ಚಿಂತೆಯೂ ಆಗುತ್ತದೆ. ಕೆಲವೊಂದು ಜನ ಸಮಾಜದ ತಾಳಮೇಳವನ್ನು ಮುರಿಯಲು ಹೊರಟಿದ್ದಾರೋ, ಯಾರು ಸಮಾಜವನ್ನು ಧ್ವಂಸ ಮಾಡಲು ಹೊರಟಿದ್ದಾರೋ, ಯಾರು ಹಿಂದುಸ್ತಾನದ ಏಕತೆಗೆ ಬಾಧಕರಾಗಿದ್ದಾರೋ ಅಂತಹ ಕೆಲವೇ ಕೆಲವು ಬೆರಳೆಣಿಕೆಯ ಜನರು ಗೋರಕ್ಷಣೆಯ ಹೆಸರಿನಲ್ಲಿ ಸಮಾಜದಲ್ಲಿ ಒಡಕನ್ನು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. 
 
ನಾನು ದೇಶದಎಲ್ಲ ನಾಗರೀಕರಿಗೆ ಹೇಳಬಯಸುವುದೇನೆಂದರೆ, ಇಂತಹ ಫೇಕ್‌ ಅಂದರೆ ನಕಲಿ ಗೋರಕ್ಷಕರಿಂದ ಜಾಗೃತರಾಗಿರಿ. ನಮ್ಮ ರಾಜ್ಯ ಸರ್ಕಾರಗಳಿಗೂ ನಾನು ಒಂದು ಮಾತನ್ನು ಹೇಳುತ್ತೇನೆ. ಅದೇನೆಂದರೆ,  ನಮ್ಮ ಕೃಷಿಯನ್ನು ರಕ್ಷಿಸಲು, ನಮ್ಮ ರೈತರನ್ನು ರಕ್ಷಿಸಲು, ನಮ್ಮ ಹಳ್ಳಿಯನ್ನು ರಕ್ಷಿಸಲು ಏಕೆಂದರೆ,  ಈ ಮಾತನ್ನು ವಿನೋಬಾ ಭಾವೆ ಅವರೂ ಹೇಳುತ್ತಿದ್ದರು, ಮಹಾತ್ಮಾ ಗಾಂಧಿಯವರೂ ಕೂಡ ಹೇಳುತ್ತಿದ್ದರು, ಗೋರಕ್ಷಣೆಗಾಗಿ ವಿನೋಬಾ ಭಾವೆ ಆಮರಣ ಉಪವಾಸವನ್ನು ಮಾಡಿದ್ದರು.ಇಂತಹ ಗೋರಕ್ಷಣೆಗೆ ಭಾರತ ಸಂವಿಧಾನದಲ್ಲಿಯೂ ಕೂಡ ಮಾಹಿತಿ ನಿರ್ದೇಶನವಿದೆ. ಗೋರಕ್ಷಣೆಗಾಗಿ ಭಾರತದ ಸಂವಿಧಾನದಲ್ಲಿರುವ ನಿರ್ದೇಶನವನ್ನು ಮಹಾತ್ಮ ಗಾಂಧೀಯವರೂ ಕೂಡ ಒಪ್ಪಿಕೊಂಡಿದ್ದರು. ಅದು ತಪ್ಪಾಗಿರಲು ಸಾಧ್ಯವಿಲ್ಲ. ಆದರೆ ಈ ನಕಲಿ ಗೋರಕ್ಷಕರಿಗೆ ಗೋವಿನ ಕುರಿತು ಯಾವುದೇ ಕಾಳಜಿ ಮತ್ತು ವ್ಯವಹಾರವಿಲ್ಲ. ಆದರೆ ಅವರು ಸಮಾಜದಲ್ಲಿ ಬಿರುಕನ್ನುಂಟುಮಾಡಿವಿಷವನ್ನು ಬಿತ್ತಲು ಪ್ರಯತ್ನಿಸುತ್ತಾರೆ. ಹಾಗಾಗಿ ನೀವೂ ಕೂಡ ಈ ನಕಲಿ ಗೋರಕ್ಷಕರನ್ನು ವಿಚಾರಿಸಿ,ಅವರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲು ಸಹಕರಿಸಿ ಎಂದು ನಾನು ನಮ್ಮ ಸರ್ಕಾರದ ವತಿಯಿಂದ ಹೇಳುತ್ತಿದ್ದೇನೆ. ಅಲ್ಲದೇ ಇದರೊಂದಿಗೆ ನಾನು ನಿಜವಾದ ಗೋವಿನ ಭಕ್ತರಲ್ಲಿ ಪ್ರಾರ್ಥಿಸುವುದೇನೆಂದರೆ, ನೀವು ಕೂಡ ಇವರಿಂದ ಜಾಗೃತರಾಗಿರಬೇಕು. ನಿಮ್ಮ ಒಳ್ಳೆಯ ಕೆಲಸವನ್ನು ಈ ಕೆಲವೇ ಕೆಲವು ಜನ ತಮ್ಮ ಸ್ವಂತದ ಸ್ವಾರ್ಥಕ್ಕಾಗಿ ನಾಶ ಮಾಡಬಾರದು. ಇಂತಹ ಜನರನ್ನು ಹುಡುಕಲು ನೀವು ಕೂಡ ಮುಂದೆ ಬನ್ನಿ. ಇಂತಹ ಕೆಲಸ ಮಾಡುವ ಜನರನ್ನು ಸಮಾಜದೆದುರು ಎಳೆದುಕೊಂಡು ಬನ್ನಿ. ಏಕೆಂದರೆ ಇಂತಹ ಜನರಿಂದ ಈ ದುಷ್ಕಾರ್ಯ ನಡೆಯಬಾರದು. 
 
ಭಾರತವು ವಿವಿಧತೆಗಳಿಂದ ಕೂಡಿದ ದೇಶವಾಗಿದೆ, ವಿವಿಧ ನಂಬಿಕೆಗಳಿಂದ ಕೂಡಿದ ದೇಶವಾಗಿದೆ. ಅನೇಕ ಸಂಪ್ರದಾಯಗಳಿಗೆ ನಂಬಿಕೆಗಳು ನಡೆಯುವ ದೇಶವಾಗಿದೆ. ದೇಶದ ಏಕತೆ ಮತ್ತು ಅಖಂಡತೆಗಳು ನಮ್ಮ ಪ್ರಾಥಮಿಕ ಜವಾಬ್ದಾರಿಗಳಾಗಿವೆ. ಆದ್ದರಿಂದ ಇವುಗಳನ್ನು ಪರಿಪೂರ್ಣಗೊಳಿಸಲು ದೇಶವಾಸಿಗಳಾದ ನಾವು ಸಕಾರಾತ್ಮಕವಾಗಿ ಗೋವಿನ ಸೇವೆ ಮಾಡಬೇಕು, ಗೋವಿಗೆ ಭಕ್ತಿಯನ್ನು ಸಲ್ಲಿಸಬೇಕು, ಗೋವನ್ನು ಪೂಜಿಸಬೇಕು ಮತ್ತು ಗೋವಿನ ಸಮರ್ಥನೆ ಮಾಡಬೇಕು. ಆಗ ಅದು ರಾಷ್ಟ್ರದ ಸಂಪತ್ತನ್ನು ಹೆಚ್ಚಿಸಿದಂತೆ. ಅದು ರಾಜ್ಯ ರಾಜ್ಯಗಳಿಗೆ ಸಂಕಟವನ್ನೇನು ತರುವುದಿಲ್ಲ.ಆದರೆ ನಕಲಿ ಗೋರಕ್ಷಕರು ದೇಶ ಮತ್ತು ಸಮಾಜಗಳೆರಡನ್ನೂ ನಾಶಪಡಿಸುತ್ತಾರೆ. ಅವರೆದರು ಜಾಗರೂಕರಾಗಿರುವ ಆವಶ್ಯಕತೆಯಿದೆ. ಅಂತಹ ಜನರನ್ನು ನಿರ್ಲಕ್ಷಿಸುವ ಆವಶ್ಯಕತೆಯಿದೆ. ಅಂತಹ ಜನರ ಬಂಡವಾಳವನ್ನುಬಹಿರಂಗವಾಗಿಬಯಲು ಮಾಡುವ ಅವಶ್ಯಕತೆಯಿದೆ. ಅಂತಹ ಜನರಿಗೆ ಶಿಕ್ಷೆ ವಿಧಿಸುವ ಅನಿವಾರ್ಯತೆಯಿದೆ. ಆಗ ಮಾತ್ರ ನಾವು ಗೌರವಪೂರ್ಣವಾಗಿ ದೇಶವನ್ನು ಹೊಸ ಎತ್ತರಗಳಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ. 
ಸಹೋದರ ಸಹೋದರಿಯರೆ, ಪ್ರತಿ ಸಮಸ್ಯೆಗೆ ಸಮಾಧಾನವನ್ನು ಕಂಡುಕೊಳ್ಳಲು ಸಾಧ್ಯ. ನಮ್ಮೆಲ್ಲರ ಆವಶ್ಯಕತೆಗಳು ಕೇವಲ ವಿಕಾಸ ಮಾರ್ಗದಿಂದ ಮಾತ್ರ ಪರಿಪೂರ್ಣಗೊಳ್ಳಲು ಸಾಧ್ಯ. ರಾಜ್ಯ ರಾಜ್ಯಗಳ ನಡುವೆ ಇಂದು ವಿಕಾಸದಲ್ಲಿ ಸ್ಪರ್ಧೆ ಏರ್ಪಟ್ಟಿರುವುದು ನನಗೆ ಬಹಳ ಸಂತೋಷ ತರುವ ವಿಚಾರ. ನಾವು ಆ ರಾಜ್ಯಕ್ಕಿಂತಲೂ ಮುಂದುವೆರೆಯಬೇಕು ಎಂಬುದು ಪ್ರತೀ ರಾಜ್ಯಗಳ ಭಾವನೆಯಾಗಿದೆ. ಈ ಆರೋಗ್ಯಕರ ಸ್ಪರ್ಧೆ ದೇಶವನ್ನು ಹೊಸ ಎತ್ತರಗಳಿಗೆ ತೆಗೆದುಕೊಂಡು ಹೋಗುತ್ತದೆ. ಹಾಗಾಗಿಯೇ ನಾನು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸುತ್ತೇನೆ. ಬನ್ನಿ ರಾಜ್ಯ ರಾಜ್ಯಗಳ ನಡುವೆ ವಿಕಾಸದ ಸ್ಪರ್ಧೆಗಳನ್ನು ನಡೆಸಿ. ರಾಜ್ಯ ಮತ್ತು ಕೇಂದ್ರಗಳ ನಡುವೆ ವಿಕಾಸದ ಸ್ಪರ್ಧೆ ಏರ್ಪಡಬೇಕು. ಮನೆ ಹಳ್ಳಿ ಗಲ್ಲಿಗಳಲ್ಲಿ ವಿಕಾಸದ ಸ್ಪರ್ಧೆ ನಡೆಯಬೇಕು. 
 
ಅವರು ಇಷ್ಟು ಮಾಡಿದ್ದಾರೆ, ನಾನು ಇಷ್ಟು ಮಾಡಿ ತೋರಿಸುತ್ತೇನೆ. ಅವರು ಇಷ್ಟರಲ್ಲಿ ಮಾಡಿದ್ದಾರೆ ನಾವು ಅದಕ್ಕಿಂತ ಕಡಿಮೆಯಲ್ಲಿ ಮಾಡಿ ತೋರಿಸುತ್ತೇವೆ. ಅವರು ಇಷ್ಟು ಚೆನ್ನಾಗಿ ಮಾಡಿದ್ದಾರೆ ನಾವು ಅದಕ್ಕಿಂತ ಚೆನ್ನಾಗಿ ಮಾಡಿ ತೋರಿಸುತ್ತೇವೆ. ಇಂತಹ ವಾತಾವರಣವನ್ನು ರೂಪಿಸುವ ಅಗತ್ಯವಿದೆ. ಆಗ ದೇಶವು ನೋಡ ನೋಡುತ್ತ ಹೊಸ ಎತ್ತರಗಳನ್ನು ಏರುತ್ತ ಹೋಗುತ್ತದೆ. ನಾನು ಮತ್ತೊಮ್ಮೆ ಆದರಣೀಯ ಮುಖ್ಯಮಂತ್ರಿಗಳಿಗೆ ಆಭಾರಿಯಾಗಿದ್ದೇನೆ. ಎಷ್ಟು ವಿಷಯಗಳನ್ನು ಅವರು ನನ್ನೆದುರು ಇಟ್ಟಿದ್ದಾರೋ, ನಾನು ತೆಲಂಗಾಣಾ ರಾಜ್ಯದ ಜನರಿಗೆ ಕೊಡುವ ಭರವಸೆ ಏನೆಂದರೆ, ರಾಜ್ಯದ ಪ್ರತಿಯೊಂದು ಕೆಲಸದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಮ್ಮೊಂದಿಗೆ ನಾವು ನಡೆಯುತ್ತೇವೆ. ನಾವಿಬ್ಬರು ಸೇರಿಕೊಂಡು ವಿಕಾಸದ ಎತ್ತರಗಳನ್ನು ತಲುಪೋಣ. ನಿಮಗೆ ಈಗ ದಿಲ್ಲಿ ದೂರದಲ್ಲಿಲ್ಲ. ನಿಮಗೆ ಹೈದರಾಬಾದ್‌ ಎಷ್ಟು ನಿಮ್ಮದೋ ದಿಲ್ಲಿಯೂ ಕೂಡ ಅದರಷ್ಟೇ ನಿಮ್ಮದಾಗಿದೆ. ಇದೇ ವಿಶ್ವಾಸದೊಂದಿಗೆ ನಾವೆಲ್ಲರೂ ಮುನ್ನೆಡೆಯಬೇಕು. ನಿಮ್ಮೆಲ್ಲರಿಗೂ ಅನೇಕ ಅನೇಕ ಧನ್ಯವಾದಗಳು. 
***