Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2017ರ ನವೆಂಬರ್ ನಲ್ಲಿ ಹೈದ್ರಾಬಾದ್ ನಲ್ಲಿ ಜಾಗತಿಕ ಉದ್ಯಮಶೀಲತೆ ಶೃಂಗಸಭೆಯನ್ನು ಜಂಟಿಯಾಗಿ ಆಯೋಜಿಸಲಿರುವ ಭಾರತ ಮತ್ತು ಅಮೆರಿಕ


ಭಾರತ ಮತ್ತು ಅಮೆರಿಕಾ ಜಂಟಿಯಾಗಿ 2017ರ ನವೆಂಬರ್ 28-30ರವರೆಗೆ ಹೈದ್ರಾಬಾದ್ ನಲ್ಲಿ ಜಾಗತಿಕ ಉದ್ಯಮಶೀಲತೆ ಶೃಂಗಸಭೆ (ಜಿಇಎಸ್)ಯನ್ನು ಆಯೋಜಿಸುತ್ತಿವೆ.

ತಮ್ಮ ಖಾತೆಯಿಂದ ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು,

“ಭಾರತ ಮತ್ತು ಅಮೆರಿಕ ಜಂಟಿಯಾಗಿ 2017ರ ನವೆಂಬರ್ 28-30ರವರೆಗೆ ಹೈದ್ರಾಬಾದ್ ನಲ್ಲಿ ಜಾಗತಿಕ ಉದ್ಯಮಶೀಲತೆ ಶೃಂಗಸಭೆ (ಜಿಇಎಸ್)ಯನ್ನು ಆಯೋಜಿಸುತ್ತಿವೆ.

ಈ ಶೃಂಗಸಭೆಯು ಉದ್ಯಮಿಗಳು ಮತ್ತು ನವೋದ್ಯಮಗಳನ್ನು ಜಾಗತಿಕ ಮುಂಚೂಣಿದಾರರೊಂದಿಗೆ ತರಲು ವಿಶಿಷ್ಠ ಅವಕಾಶವಾಗಿದೆ.

ಜಾಗತಿಕ ಉದ್ಯಮಶೀಲತಾ ಶೃಂಗಸಭೆ 2017 –ಹೈದ್ರಾಬಾದ್ ನಲ್ಲಿ ಅಮೆರಿಕದ ನಿಯೋಗದ ನಾಯಕರಾಗಿ ಶ್ರೀಮತಿ ಇವಾಂಕಾ ಟ್ರಂಪ್ ಅವರ ಉಪಸ್ಥಿತಿಗಾಗಿ ಎದಿರು ನೋಡುತ್ತಿದ್ದೇನೆ.” ಎಂದು ತಿಳಿಸಿದ್ದಾರೆ.

***

AKT/AK