Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2018ರ ಜೂನ್ 23 ಕ್ಕೆ ಪ್ರಧಾನ ಮಂತ್ರಿ ಮಧ್ಯಪ್ರದೇಶಕ್ಕೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018 ರ ಜೂನ್ 23 ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

ಪ್ರಧಾನ ಮಂತ್ರಿಯವರು ಮಧ್ಯಪ್ರದೇಶದ ಇಂದೋರಿನಲ್ಲಿ ಶೆಹರಿ ವಿಕಾಸ್ ಮಹೋತ್ಸವದಲ್ಲಿ ಭಾಗವಹಿಸುವರು. ಅವರು ರಾಜ್ಯದ ವಿವಿಧ ಕಡೆಗಳಲ್ಲಿ ಅನುಷ್ಟಾನಗೊಳ್ಳುವ 4000 ಕೋ.ರೂ. ವೆಚ್ಚದ ನಗರಾಭಿವೃದ್ದಿ ಕಾರ್ಯಕ್ರಮಗಳಿಗೆ ರಿಮೋಟ್ ಮೂಲಕ ಚಾಲನೆ ನೀಡುವರು. ಪ್ರಧಾನ ಮಂತ್ರಿ ಆವಾಸ್ ಯೋಜನಾದಡಿಯಲ್ಲಿ ಮನೆಗಳ ನಿರ್ಮಾಣ, ನಗರ ಕುಡಿಯುವ ನೀರು ಪೂರೈಕೆ ಯೋಜನೆಗಳು, ನಗರ ಘನ ತ್ಯಾಜ್ಯ ನಿರ್ವಹಣೆ, ನಗರ ನೈರ್ಮಲ್ಯೀಕರಣ, ನಗರ ಸಾರಿಗೆ ಮತ್ತು ನಗರ ಭೂದೃಶ್ಯ ಯೋಜನೆಗಳು ಇದರಲ್ಲಿ ಸೇರಿವೆ.

ಅವರು ಸ್ವಚ್ಚ ಸರ್ವೇಕ್ಷಣ್ -2018 ಪ್ರಶಸ್ತಿಗಳನ್ನು ವಿತರಿಸುವರು ಮತ್ತು ಸ್ವಚ್ಚ ಸರ್ವೇಕ್ಷಣ -2018 ರ ಫಲಿತಾಂಶಗಳ ಡ್ಯಾಶ್ ಬೋರ್ಡ್ ಕಾರ್ಯಾರಂಭಗೊಳಿಸುವರು. ಸ್ಚಚ್ಚ ನಗರಗಳು, ಮತ್ತು ಅತ್ಯುತ್ತಮ ಸಾಧಕ ರಾಜ್ಯಗಳು ಪ್ರಧಾನ ಮಂತ್ರಿ ಅವರಿಂದ ಪ್ರಶಸ್ತಿ ಪಡೆಯಲಿವೆ. ಒಂದು ಸ್ವಚ್ಚ ಅನ್ವೇಷಣೆ, ಒಂದು ಸ್ವಚ್ಚ ಅತ್ಯುತ್ತಮ ಪದ್ದತಿ, ಒಂದು ಸ್ವಚ್ಚ ಉದ್ಯಮ ಪ್ರಶಸ್ತಿಗಳನ್ನು ಪ್ರಧಾನ ಮಂತ್ರಿಯವರು ನೀಡುವರು.

ಇದಕ್ಕೆ ಮೊದಲು ಪ್ರಧಾನಿಯವರು ರಾಜ್ ಘರ್ ನಲ್ಲಿ ಮೊಹಾನ್ ಪುರ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವರು. ಈ ಯೋಜನೆ ರಾಜ್ ಘರ್ ಜಿಲ್ಲೆಯ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ ಮತ್ತು ಆ ಪ್ರದೇಶದ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಪ್ರಧಾನ ಮಂತ್ರಿಗಳು ವಿವಿಧ ಕುಡಿಯುವ ನೀರಿನ ಯೋಜನೆಗಳಿಗೂ ಶಿಲಾನ್ಯಾಸ ಮಾಡುವರು.